Just In
Don't Miss!
- News
ನಾಸಾ ಗಗನಯಾನ ತರಬೇತಿಗೆ ಆಯ್ಕೆಯಾದ ಮೊದಲ ಅರಬ್ ಮಹಿಳೆ
- Sports
ಮೊದಲ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಕಣಕ್ಕಿಳಿಯದ ಬಗ್ಗೆ ಕಾರಣ ಹೇಳಿದ ಕೋಚ್
- Automobiles
ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ
- Finance
ಏಪ್ರಿಲ್ 12ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Lifestyle
ಇಂದು ಸೋಮಾವತಿ ಅಮಾವಾಸ್ಯೆ: ಇದರ ಮಹತ್ವ ಹಾಗೂ ಪ್ರಯೋಜನಗಳು
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್‌ಬಾಸ್: 2ನೇ ದಿನವೇ ನಾಮಿನೇಟ್ ಆದರು 5 ಮಂದಿ, ಹೊರಗೆ ಹೋಗುವವರು ಯಾರು?
ಬಿಗ್‌ಬಾಸ್ ಆರಂಭವಾದ ಎರಡನೇ ದಿನ ಮೊದಲ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು. ಬಿಗ್‌ಬಾಸ್ ಮನೆ ಪ್ರವೇಶಿಸಿ ಉತ್ಸಾಹದಿಂದ ಕುಣಿಯುತ್ತಿದ್ದ ಸ್ಪರ್ಧಿಗಳನ್ನು ನೆಲಕ್ಕಿಳಿಯುವಂತೆ ಮಾಡಿತು.
ಎಲ್ಲರ ಎದುರೇ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡುವಂತೆ ಬಿಗ್‌ಬಾಸ್ ಹೇಳಿದರು. ಅಂತೆಯೇ ಪ್ರತಿಯೊಬ್ಬ ಸದಸ್ಯರು ಎಲ್ಲ ಸ್ಪರ್ಧಿಗಳ ಎದುರು ಇಬ್ಬರ ಹೆಸರನ್ನು ಮನೆಯಿಂದ ಹೊರಹೋಗಲು ನಾಮಿನೇಟ್ ಮಾಡಿ ಕಾರಣ ಹೇಳುವಂತೆ ಸೂಚಿಸಲಾಯಿತು.
ನಾಮಿನೇಟ್ ಮಾಡಿದ ಬಹುತೇಕರು ಶಂಕರ್ ಅಶ್ವತ್ಥ್ ಅವರ ಹೆಸರು ಹೇಳಿದರು. ಅದರ ನಂತರ ಹೆಚ್ಚು ಮಂದಿ ನಾಮಿನೇಟ್ ಮಾಡಿದ್ದು ನಟಿ ನಿಧಿ ಸುಬ್ಬಯ್ಯ, ಪಾವಗಡ ಮಂಜು, ಪ್ರಶಾಂತ್ ಸಂಬರ್ಗಿ, ಟಿಕ್‌ಟಾಕ್ ಸ್ಟಾರ್ ಧನುಶ್ರಿ ಹೆಸರನ್ನು ಹೆಚ್ಚು ಮಂದಿ ನಾಮಿನೇಟ್ ಮಾಡಿದರು.
ಆದರೆ ಮನೆಯ ನಾಯಕನಾಗಿ ಆಯ್ಕೆ ಆದ ಬ್ರೋ ಗೌಡ ಅವರಿಗೆ ವಿಶೇಷ ಅಧಿಕಾರ ನೀಡಿದ ಬಿಗ್‌ಬಾಸ್, ನಾಮಿನೇಟ್ ಆದ ಒಬ್ಬರನ್ನು ಉಳಿಸುವ ಅಧಿಕಾರ ಕೊಟ್ಟರು. ಅಧಿಕಾರ ಬಳಸಿಕೊಂಡ ನಾಯಕ ಬ್ರೋ ಗೌಡ ಶಂಕರ್ ಅಶ್ವತ್ಥ ಅವರನ್ನು ಉಳಿಸಿದರು.
ಅಂತಿಮವಾಗಿ ನಿಧಿ ಸುಬ್ಬಯ್ಯ, ಪಾವಗಡ ಮಂಜು, ಪ್ರಶಾಂತ್ ಸಂಬರ್ಗಿ, ಟಿಕ್‌ಟಾಕ್ ಸ್ಟಾರ್ ಧನುಶ್ರಿ, ನಿರ್ಮಲಾ ಈ 5 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇದರ ಜೊತೆಗೆ ಸ್ಪರ್ಧಿ ನಿರ್ಮಲಾ ಅವರು ಆಟದಲ್ಲಿ ಸೋತ ಕಾರಣ ಮನೆಯಿಂದ ಹೊರಗೆ ಹೋಗಲು ನೇರವಾಗಿ ನಾಮಿನೇಟ್ ಆದರು. ಅಲ್ಲಿಗೆ ಒಟ್ಟು ನಾಲ್ಕು ಮಂದಿ ಸ್ಪರ್ಧಿಗಳು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದಾರೆ.