For Quick Alerts
  ALLOW NOTIFICATIONS  
  For Daily Alerts

  ಪ್ರೀತಿಸುತ್ತಿದ್ದ ವಿಷಯ ಮುಚ್ಚಿಟ್ಟು ಬಿಗ್ ಬಾಸ್ ವೇದಿಕೆ ಮೇಲೆ ತಗ್ಲಾಕೊಂಡ ಅಮೂಲ್ಯ ಗೌಡ!

  |

  ನಿನ್ನೆಯಿಂದ ( ಸೆಪ್ಟೆಂಬರ್ 24 ) ಒಂಬತ್ತನೇ ಆವೃತ್ತಿಯ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭವಾಗಿದ್ದು ಓಟಿಟಿಯಿಂದ ಅರ್ಹತೆ ಗಿಟ್ಟಿಸಿಕೊಂಡ ನಾಲ್ವರು ಸೇರಿದಂತೆ ಒಟ್ಟು ಹದಿನೆಂಟು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಅನುಭವ ಹೊಂದಿರುವ ಒಂಬತ್ತು ಸ್ಪರ್ಧಿಗಳು ಹಾಗೂ ಬಿಗ್ ಬಾಸ್ ಮನೆಯ ಅನುಭವ ಇಲ್ಲದ ಒಂಬತ್ತು ಸ್ಪರ್ಧಿಗಳು ಒಂಬತ್ತನೇ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸಿರುವುದು ವಿಶೇಷವಾಗಿದೆ.

  ಹೀಗೆ ಬಿಗ್ ಬಾಸ್ ಅನುಭವ ಇರುವ ಸ್ಪರ್ಧಿಗಳನ್ನು ಪ್ರವೀಣರು ಹಾಗೂ ಅನುಭವ ಇಲ್ಲದ ಸ್ಪರ್ಧಿಗಳಿಗೆ ನವೀನರು ಎಂದು ಹೆಸರನ್ನು ಇಡಲಾಗಿದ್ದು, ಈ ಬಾರಿ ಸೀನಿಯರ್ ಹಾಗೂ ಜೂನಿಯರ್ ನಡುವೆ ಸ್ಪರ್ಧೆ ಏರ್ಪಡಲಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಿರುತೆರೆ ಹಿನ್ನೆಲೆ ಇರುವ ಕಲಾವಿದರಿಗೆ ಹೆಚ್ಚಾಗಿ ಅವಕಾಶ ನೀಡಲಾಗಿದ್ದು, ಕಮಲಿ ಧಾರವಾಹಿ ಮೂಲಕ ಮನೆ ಮನೆಗೆ ಪರಿಚಿತಳಾಗಿರುವ ಅಮೂಲ್ಯ ಗೌಡ ಎಂಟನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದಾರೆ.

  ಹೀಗೆ ವೇದಿಕೆ ಏರಿದ ಅಮೂಲ್ಯ ಗೌಡ ಮದುವೆ ಕುರಿತಾಗಿ ವಿಶೇಷವಾಗಿ ಮಾತನಾಡಿ ಹಳೆಯ ಕಾಲದಲ್ಲಿದ್ದ ರೀತಿಯ ಸಂಬಂಧವೆಂದರೆ ತನಗೆ ಇಷ್ಟ 'ನಾನು ಓಲ್ಡ್ ಸ್ಕೂಲ್ ಸ್ಟೂಡೆಂಟ್' ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಕುರಿತಾಗಿ ಚರ್ಚಿಸಲು ಆರಂಭಿಸಿದ ಕಿಚ್ಚ ಸುದೀಪ್ ಓಲ್ಡ್ ಸ್ಕೂಲ್ ಸಂಬಂಧ ಎಂದರೆ ಹಳೆ ಶಾಲೆಯಲ್ಲಿನ ಪ್ರಿಯಕರನ ಬಗ್ಗೆ ಹೇಳಿದ್ರಾ ಎಂದು ಪ್ರಶ್ನೆಯನ್ನು ಹಾಕಿದ್ರು.

  ಇದಕ್ಕೆ ಉತ್ತರಿಸಿದ ಅಮೂಲ್ಯ ಗೌಡ ನನಗೆ ಶಾಲೆಯಲ್ಲಿ ಯಾರೂ ಸಹ ಪ್ರಿಯಕರ ಇರಲಿಲ್ಲ ಎಂದು ಮರು ಉತ್ತರಿಸಿದರು. ಈ ಉತ್ತರಕ್ಕೆ ಥಟ್ಟನೆ ಮತ್ತೊಂದು ಪ್ರಶ್ನೆ ಎಸೆದ ಕಿಚ್ಚ ಸುದೀಪ್ ಹಾಗಾದರೆ ಕಾಲೇಜಿನಲ್ಲಿ ಲವರ್ ಇದ್ರಾ ಎಂದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಇರಲಿಲ್ಲ ಆದರೆ ಕಾಲೇಜಿನಲ್ಲಿ ಪ್ರಿಯಕರ ಇದ್ದ ಎಂಬ ಗುಟ್ಟನ್ನು ಅಮೂಲ್ಯ ಗೌಡ ಉತ್ತರ ನೀಡುವ ಭರದಲ್ಲಿ ಹೇಳಿಬಿಟ್ಟರು. ಹಾಗೂ ಕಾಲೇಜಿನಲ್ಲಿ ಪ್ರಿಯಕರ ಇದ್ದ ವಿಷಯ ನಿಮ್ಮ ತಂದೆಗೆ ತಿಳಿದಿತ್ತಾ ಎಂದು ಕಿಚ್ಚ ಸುದೀಪ್ ಕೇಳಿದಾಗ ಇಲ್ಲ ಈಗಲೇ ಗೊತ್ತಾಗಿದ್ದು ಎಂದು ಇಕ್ಕಟ್ಟಿಗೆ ಸಿಲುಕಿದರು. ಹಾಗೂ ಇದೆಲ್ಲ ನಟನೆ ಅಷ್ಟೇ ಎಂದು ತಮ್ಮ ತಂದೆಯನ್ನು ಹಾಸ್ಯದ ರೂಪದಲ್ಲಿ ಸಂಭಾಳಿಸುವ ಯತ್ನವನ್ನು ಕೂಡ ಅಮೂಲ್ಯ ಗೌಡ ಮಾಡಿದರು.

  English summary
  Bigg Boss Kannada 9: Amulya Gowda revealed about her boyfriend on Bigg Boss stage
  Sunday, September 25, 2022, 19:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X