Don't Miss!
- News
Bengaluru traffic police: ನೆಟ್ಟಿಗರ ಮನಗೆದ್ದ ಬೆಂಗಳೂರು ಟ್ರಾಫಿಕ್ ಪೊಲೀಸರ ನೃತ್ಯ
- Finance
Adani Stocks: ಅದಾನಿ ಸಂಸ್ಥೆ ಮೌಲ್ಯ ಅರ್ಧದಷ್ಟು ಇಳಿಕೆ, 108 ಬಿಲಿಯನ್ ಡಾಲರ್ ನಷ್ಟ
- Technology
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9:ಬಿಗ್ ಬಾಸ್ ಮನೆಯೊಳಗೆ ಹುಲಿ ಕುಣಿತ.. ರೂಪೇಶ್ ಶೆಟ್ಟಿಗೆ ಫುಲ್ ಸರ್ಪ್ರೈಸ್!
ಬಿಗ್ ಬಾಸ್ ಇನ್ನು ಕೆಲವೇ ದಿನಗಳು ಬಾಕಿ. ನೂರು ದಿನಗಳ ಆಟದಲ್ಲಿ ಇನ್ನೂ ಮೂರು ದಿನಗಳ ಕಾಲ ಆಟ ಮುಗಿಸಿ, ಫೈನಲ್ ಫಿನಾಲೆಯಲ್ಲಿ ನಿಂತು, ವಿನ್ನರ್ ಆಗಿ, ರನ್ನರ್ ಆಗಿ ಖುಷಿಯಲ್ಲಿ ಮನೆಗೆ ತೆರಳುತ್ತಾರೆ. ಇದರ ನಡುವೆ ಇಷ್ಟು ದಿನ ಇದ್ದವರು ತಮ್ಮ ತಮ್ಮ ಆಸೆಯನ್ನು ಬಿಗ್ ಬಾಸ್ ಬಳಿ ಹೇಳಿಕೊಂಡಿದ್ದಾರೆ. ಅದರಂತೆ ಇರುವ ಮೂರು ದಿನದಲ್ಲಿ ಸಾಧ್ಯವಾದಷ್ಟು ಮನೆ ಮಂದಿ ಆಸೆ ಈಡೇರಿಸಲಿ ಬಿಗ್ ಬಾಸ್ ನಿರ್ಧರಿಸಿದೆ.
ಬಿಗ್ ಬಾಸ್ ಫೈನಲ್ ರೌಂಡ್‌ಗೆ ಸದ್ಯ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರಾಜಣ್ಣ, ದಿವ್ಯಾ, ದೀಪಿಕಾ ದಾಸ್ ನಿಂತಿದ್ದಾರೆ. ಫಿನಾಲೆ ತನಕ ಐದು ಜನ ಇದ್ದು, ಬಳಿಕ ಮೂವರು ಮಾತ್ರ ವೇದಿಕೆಯಲ್ಲಿ ಇರಲಿದ್ದಾರೆ. ಅದಕ್ಕೂ ಮುನ್ನ ಇವತ್ತು ಬಿಗ್ ಬಾಸ್ ಮನೆಯಲ್ಲಿ ಫುಲ್ ಖುಷಿಯಾಗುವಂತ ವಿಚಾರಗಳೇ ನಡೆದಿವೆ.
BBK9:
ರೂಪೇಶ್
ಶೆಟ್ಟಿಯ
ಪ್ರಾರ್ಥನೆ
ದೇವರಿಗೆ
ಕೇಳಿಸಲಿಲ್ಲ..
ಆರ್ಯವರ್ಧನ್
ಗುರೂಜಿ
ಔಟ್..!

ರೂಪೇಶ್ ಶೆಟ್ಟಿಗಾಗಿ ಮನೆಯಲ್ಲಿ ಹುಲಿ ಕುಣಿತ
ಬಿಗ್ ಬಾಸ್ ತಮ್ಮ ಕಂಟೆಸ್ಟೆಂಟ್‌ಗಳನ್ನು ಕೇವಲ ಕಂಟೆಸ್ಟೆಂಟ್ ಅಂತ ಮಾತ್ರ ನೋಡುವುದಿಲ್ಲ. ಬದಲಿಗೆ ಅವರ ಇಷ್ಟ ಕಷ್ಟಕ್ಕೂ ಸ್ಪಂದಿಸುತ್ತದೆ. ಅದರಂತೆ ಇವತ್ತು ಬಿಗ್ ಬಾಸ್ ಮನೆಯಲ್ಲಿ ಮನೆ ಮಂದಿಯ ಆಸೆ ಈಡೇರಿಸಿದ್ದಾರೆ. ರೂಪೇಶ್ ಶೆಟ್ಟಿಗಾಗಿ ಹುಲಿ ಕುಣಿತದವರನ್ನು ಕರೆಸಿದ್ದಾರೆ. ಮನೆಗೆ ಒಬ್ಬೊಬ್ಬರಾಗಿಯೇ ಒಳಗೆ ಬಂದು ಕುಣಿದಿದ್ದಾರೆ.
BBK9:ಬಿಗ್
ಬಾಸ್
ಗೆಲ್ಲೋ
ಆಟದಲ್ಲಿ
ಯಾರ
ಮಧ್ಯೆ
ಹೇಗಿದೆ
ಫೈಟ್?

ಕುಣಿದು ಕುಪ್ಪಳಿಸಿದ ರೂಪೇಶ್ ಶೆಟ್ಟಿ
ಹುಲಿ ಕುಣಿತ ಅಂದ್ರೆ ರೂಪೇಶ್ ಶೆಟ್ಟಿಗೆ ಮೊದಲೇ ಪ್ರಾಣ. ಟಿವಿಯಲ್ಲಿ ಬಂದರೇನೆ ಎದ್ದು ಕುಣಿಯುವವರು. ಇನ್ನು ಮನೆಯೊಳಗೆ ಬಂದರೆ ಕೇಳಬೇಕಾ? ಮನೆಯೊಳಗೆ ಆ ಸೌಂಡ್, ಆ ಕುಣಿತ ಅಬ್ಬಬ್ಬಾ ಅವರ ಸಮಾನವಾಗಿಯೇ ರೂಪೇಶ್ ಶೆಟ್ಟಿ ಕುಣಿದು ಕುಪ್ಪಳಿಸಿದರು. ಮನೆ ಮಂದಿಯೆಲ್ಲಾ ಇದನ್ನು ಕಂಡು ಶಾಕ್ ಆಗಿದ್ದಾರೆ. ಜೊತೆಗೆ ಮನೆಯವರೆಲ್ಲಾ ಸೇರಿ ಕುಣಿದಿದ್ದಾರೆ.

ದೀಪಿಕಾಗೂ ಶಾಕ್ ಆಯ್ತು ಹುಲಿ ಕುಣಿತ
ಬಿಗ್ ಬಾಸ್‌ನಲ್ಲಿ ಇಷ್ಟು ದಿನ ಸ್ಪರ್ಧಿಗಳಾಗಿದ್ದರು. ಆಗಾಗ ಸಣ್ಣಪುಟ್ಟ ಆಸೆಯನ್ನು ಈಡೇರಿಸಿದ್ದಾರೆ. ಆದರೆ ಇಷ್ಟು ದೊಡ್ಡ ಆಸೆಯನ್ನು ಈಡೇರಿಸಿದ್ದು ಕಂಡು ದೀಪಿಕಾಗೆ ಶಾಕ್ ಆಗಿದೆ. ನೆಲದ ಮೇಲೆ ಮಲಗಿಕೊಂಡು ಅದನ್ನೇ ಮಾತನಾಡುತ್ತಾ ಇದ್ದರು. "ಪಾಪ ಇವರು ಇಷ್ಟ ಪಟ್ರು ಅಂತಾನೇ ಹುಲಿ ಕುಣಿತದವರನ್ನು ಕರೆಸಿದ್ದಾರೆ. ಅಮೆಜಿಂಗ್ ಬಿಗ್ ಬಾಸ್. ಥ್ಯಾಂಕ್ಯೂ ಸೋ ಮಚ್. ಹುಲಿ ಬಾಲ ಸಖತ್ತಾಗಿತ್ತು. ಹೋಗಿ ಕಚ್ಚಿ ಬಿಡೋಣಾ ಅನ್ನಿಸ್ತಾ ಇತ್ತು" ಎಂದು ಹುಲಿಯ ಜೊತೆ ಕುಣಿದ ಫೀಲ್‌ನಲ್ಲಿಯೇ ಇದ್ದರು ದೀಪಿಕಾ ದಾಸ್.
BBK9:
ಆಸೆ
ಹೇಳಪ್ಪ
ಅಂದ್ರೆ
"ನಾನೇ
ಬಿಗ್
ಬಾಸ್
ಗೆಲ್ಲಬೇಕು"
ಎಂದ
ಆರ್ಯವರ್ಧನ್!

ಹುಲಿ ಕಂಡು ಹೆದರಿದ್ದ ರಾಕೇಶ್
ಇನ್ನು ಮನೆಯೊಳಗೆ ಹುಲಿ ಬಂದಿದ್ದದ್ದನ್ನು ಮೊದಲು ನೋಡಿದ್ದು ರಾಕೇಶ್. ಅದನ್ನ ರೂಪೇಶ್ ಶೆಟ್ಟಿ ಬಳಿ ಹೇಳುತ್ತಿದ್ದರು. "ನಾನು ಸುಮ್ಮನೆ ಕೂತಿದ್ನಾ. ಮೇನ್ ಡೋರ್‌ನಿಂದ ಒಬ್ಬರು ಹುಲಿ ವೇಷ ಹಾಕಿದ್ದವರು ಬಂದ್ರು. ನೋಡಿ ನಾನು ಹುಲಿನೇ ಬಂತೇನೋ ಅಂತ ಶಾಕ್ ಆಗಿದ್ದೆ. ಎರಡು ಹೆಜ್ಜೆ ಬಂದು ಹಿಂಗೆ ಹಿಂಗೆ ಅಂತಾ ಇದೆ. ಆಮೇಲೆ ಸೌಂಡ್ ಮಾಡುವುದಕ್ಕೆ ಶುರುವಾಯ್ತು. ಆಮೇಲೆ ಅದು ನಿಂದೆ ಅಂತ ಗೊತ್ತಾಯ್ತು. ಆಯಾ ಸ್ಥಳದ ಕಲ್ಚರ್ ಆಗೇನೆ. ಅವರೆಲ್ಲಾ ನಿನ್ನ ನೋಡಿ ಖುಷಿ ಆದ್ರೂ ಗೊತ್ತಾ" ಎಂದಿದ್ದಾರೆ.