For Quick Alerts
  ALLOW NOTIFICATIONS  
  For Daily Alerts

  Bigg Boss Kannada 9: ಸಾನ್ಯಾ-ರೂಪೇಶ್ ನಡುವೆ ಅಂತರ ಜಾಸ್ತಿ ಮಾಡಲು ಐಡಿಯಾ ಕೊಟ್ರಾ ಆರ್ಯವರ್ಧನ್?

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ಈಗ ತಾವಿಷ್ಟ ಜೋಡಿಗಳ ಜೊತೆಯಲ್ಲಿ ಓಡಾಟವಿಲ್ಲ. ಬದಲಿಗೆ ಬಿಗ್ ಮಾಡಿದ ಜೋಡಿಯ ಜೊತೆಯಲ್ಲೇ ಮಾತು ಕತೆ, ಆಟ - ಓಡಾಟ, ಹಾಡು- ಹರಟೆ ಇರುವುದು. ಯಾಕೆಂದರೆ ಪ್ರತಿ ಬಿಗ್ ಬಾಸ್ ಸೀಸನ್ ನಲ್ಲಿಯೂ ಅದೊಂದು ಆರೋಪ ಯಾವಾಗಲೂ ಎದುರಾಗುತ್ತಿತ್ತು. ಅವರು ಅವರ ಜೊತೆಗೆ ಇರುತ್ತಾರೆ. ನಮ್ಮ ಜೊತೆಗೆ ಬರುವುದೇ ಇಲ್ಲ ಅಂತ. ಅದಕ್ಕೆ ಈ ಬಾರಿ ಬಿಗ್ ಬಾಸ್ ಸಖತ್ ಫ್ಲ್ಯಾನ್ ಮಾಡಿ, ಮೊದಲೇ ಸೊಂಟದ ಬೆಲ್ಟ್ ಹಾಕಿ ಇಬ್ಬಿಬ್ಬರನ್ನು ಒಂದು ಮಾಡಿಟ್ಟಿದೆ.

  ಅದರಲ್ಲೂ ಈ ಸಲ ರೂಪೇಶ್ ಮತ್ತು ಸಾನ್ಯಾಳನ್ನು ಬೇರೆ ಬೇರೆ ಮಾಡಿಬಿಟ್ಟಿದೆ. ಬಿಗ್ ಬಾಸ್ ಓಟಿಟಿ ಸೀಸನ್‌ನಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಗೆಳೆತನ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಸೋಮಣ್ಣ ಮತ್ತು ರೂಪೇಶ್, ಸಾನ್ಯಾ ನಡುವೆ ದೊಡ್ಡ ಸ್ಪರ್ಧೆಯನ್ನೇ ಏರ್ಪಡಿಸಿದಂತಹ ಕಾನ್ಸೆಪ್ಟ್ ಅಂದ್ರೆ ಅದು ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ಜೋಡಿಯಾಗಿರುವುದು.

  ಆರ್ಯವರ್ಧನ್ ಫುಲ್ ಆ್ಯಕ್ಟಿವ್

  ಆರ್ಯವರ್ಧನ್ ಫುಲ್ ಆ್ಯಕ್ಟಿವ್

  ಆರ್ಯವರ್ಧನ್ ತುಂಬಾ ಮುಗ್ಧರು ಎಂದು ಎಲ್ಲಾ ಅಭ್ಯರ್ಥಿಗಳು ಓಟಿಟಿ ಸೀಸನ್‌ನಲ್ಲಿ ಅಂದುಕೊಂಡಿದ್ದರು. ಆದರೆ ದಿನ ಕಳೆದಂತೆ ಅದು ನಿಜವಲ್ಲ ಎಂಬ ವಿಚಾರವೂ ಎಲ್ಲರಿಗೂ ತಿಳಿಯಿತು. ಅವರು ಅಮಾಯಕರ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಆದರೆ ಸಖತ್ ಗೇಮ್ ಫ್ಲ್ಯಾನ್ ಇರುವವರು ಎಂಬುದು ಕೊನೆ ಕೊನೆಯಲ್ಲಿ ಅರ್ಥವಾಗಿತ್ತು. ಆದರೆ ಆರ್ಯವರ್ಧನ್ ರಿಯಲ್ ಕ್ಯಾರೆಕ್ಟರ್ ಟಿವಿ ಶೋನಲ್ಲಿ ಚೆನ್ನಾಗಿಯೇ ಕಾಣಿಸುತ್ತಿದೆ. ಮುಗ್ಧತೆ ಬಿಟ್ಟು ಮೆಚ್ಯೂರಿಟಿ ತೋರಿಸುತ್ತಿರುವ ಆರ್ಯವರ್ಧನ್, ಎಲ್ಲರೊಳಗೂ ಬೆರೆಯುತ್ತಿದ್ದಾರೆ.

  ದರ್ಶ್‌ಗೆ ಆರ್ಯವರ್ಧನ್ ಹಿಂಗ್ಯಾಕಂದ್ರು?

  ದರ್ಶ್‌ಗೆ ಆರ್ಯವರ್ಧನ್ ಹಿಂಗ್ಯಾಕಂದ್ರು?

  ಆರ್ಯವರ್ಧನ್ ಈಗ ಎಲ್ಲಿಯೇ ಹೋದರೂ, ಎಲ್ಲಿಗೆ ಬಂದರೂ ದರ್ಶ್ ಜೊತೆಗೆ ಇರಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಬಿಗ್ ಕೊಟ್ಟಿರುವ ಪಟ್ಟಿಯನ್ನು ಆರ್ಯವರ್ಧನ್, ದರ್ಶ್ ಜೊತೆಗೆ ಕಟ್ಟಿಕೊಂಡಿದ್ದಾರೆ. ಹೀಗಾಗಿ ಮಾತನಾಡುವಾಗ ದರ್ಶ್ ಜೊತೆಗೆ ಮಾತನಾಡಬೇಕು. ದರ್ಶ್ ನೋಡಿ ಒಂದೊಳ್ಳೆ ಭವಿಷ್ಯ ನುಡಿದಿದ್ದಾರೆ. ನಿನಗೆ ಹುಡುಗಿಯರೇ ಬೀಳುತ್ತಾರೆ. ಫ್ಲರ್ಟ್ ಮಾಡು ಅಂತ ಹೇಳಿಕೊಟ್ಟಿದ್ದಾರೆ.

  ಆರ್ಯವರ್ಧನ್ ಹೇಳಿದಂತೆ ಕೇಳುತ್ತಾರಾ ಕಾವ್ಯಶ್ರೀ

  ಆರ್ಯವರ್ಧನ್ ಹೇಳಿದಂತೆ ಕೇಳುತ್ತಾರಾ ಕಾವ್ಯಶ್ರೀ

  ಆರ್ಯವರ್ಧ‌ನ್ ಆಗಾಗ ಸಿಕ್ಕ ಸಿಕ್ಕವರಿಗೆ ಬುದ್ಧಿ ಹೇಳುತ್ತಾರೆ. ಇದೀಗ ಕಾವ್ಯಶ್ರೀಗೆ ಬುದ್ದಿ ಹೇಳುವುದಕ್ಕೆ ಶುರು ಮಾಡಿದ್ದಾರೆ. ಅದು ಅಂತಿಂಥ ಬುದ್ದಿ ಅಲ್ಲ. ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಂತರವನ್ನು ಹೆಚ್ಚು ಮಾಡುವ ಬುದ್ಧಿ ಮಾತು. ಇದನ್ನು ಕೇಳಿ ರೂಪೇಶ್ ಹಾಗೂ ಸಾನ್ಯಾ ಶಾಕ್ ಆಗಿದ್ದಾರೆ.

  ವಾರದ ಕತೆ ಕಿಚ್ಚನ ಜೊತೆ ಹೇಳಿದ್ದೇನು ಕಾವ್ಯಾ?

  ವಾರದ ಕತೆ ಕಿಚ್ಚನ ಜೊತೆ ಹೇಳಿದ್ದೇನು ಕಾವ್ಯಾ?

  ಇವತ್ತು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮ ಇದೆ. ಟಿವಿ ಶೋ ಶುರುವಾದ ಮೊದಲ ವಾರದ ಪಂಚಾಯತಿ ಇದಾಗಿದೆ. ಇದರಲ್ಲಿಯೂ ಮತ್ತೆ ಆರ್ಯವರ್ಧನ್ ಹೈಲೈಟ್ ಆಗಿದ್ದಾರೆ. ರೂಪೇಶ್ ಮತ್ತು ಸಾನ್ಯಾ ಬಗ್ಗೆ ಆರ್ಯವರ್ಧನ್ ಹೇಳಿದ್ದನ್ನು ಸುದೀಪ್, ಕಾವ್ಯಶ್ರೀಯನ್ನು ಕೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಕಾವ್ಯಶ್ರೀ, ರೂಪೇಶ್ ಜೊತೆ ಕ್ಲೋಸ್ ಆಗಿರು. ಸಾನ್ಯಾಗೆ ಉರಿಸು ಅಂತ ಹೇಳಿಕೊಟ್ಟಿದ್ದರು ಎಂದು ಸುದೀಪ್ ಬಳಿ ಹೇಳಿದ್ದಾರೆ. ಇದನ್ನು ಕೇಳಿದ ಸುದೀಪ್ ನಕ್ಕಿದ್ದಾರೆ. ಇನ್ನು ರೂಪೇಶ್ ಮತ್ತು ಕಾವ್ಯಶ್ರೀ ಕ್ಲೋಸ್ ಆಗಿರುವುದನ್ನು ಸಾನ್ಯಾ ಸಹಿಸಿಕೊಳ್ಳುತ್ತಿಲ್ಲ. ಆಗಾಗ ಆ ಕೋಪವನ್ನು ಹುಸಿ ನಗುವಿನ ಮೂಲಕವೇ ಹೊರ ಹಾಕುತ್ತಿದ್ದಾರೆ.

  English summary
  Bigg Boss Kannada 9 October 1st Episode Written Update. Here is the details.
  Saturday, October 1, 2022, 22:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X