»   » ಬಿಗ್ ಬಾಸ್ ಮನೆಗೆ ಲುಂಗಿ ಅಂಗಿ ಹೈದ ರಾಜೇಶ್

ಬಿಗ್ ಬಾಸ್ ಮನೆಗೆ ಲುಂಗಿ ಅಂಗಿ ಹೈದ ರಾಜೇಶ್

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಹೊಸ ಅತಿಥಿ ರಾಜೇಶ್ ಆಗಮನವಾಗಿದೆ. ಇಷ್ಟು ದಿನ 'ಭರ್ಜರಿ ಮತ್ತು ಸರ್ಜರಿ ನರ್ಸಿಂಗ್ ಹೋಂ' ಟಾಸ್ಕ್ ನ್ನು ಮನೆಯ ಸದಸ್ಯರು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದರು. ಇದಕ್ಕೆ 'ಬಿಗ್ ಬಾಸ್' ಎಲ್ಲರ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.

ಟಾಸ್ಕನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕೆ ವಾರ್ಷಿಕೋತ್ಸವ ಕಾರ್ಯಕ್ರಮ ಮಾಡಬೇಕೆಂದು ಆಜ್ಞಾಪಿಸಿದರು 'ಬಿಗ್ ಬಾಸ್'. ಇದಕ್ಕಾಗಿ ಎಲ್ಲರೂ ಸಿದ್ಧತೆಗಳನ್ನು ಮಾಡಿಕೊಂಡರು. ಸ್ವಾಗತ ಹಾಗೂ ವಂದನಾರ್ಪಣೆ ಅರುಣ್ ಸಾಗರ್ ಅವರದು. ಪ್ರಾರ್ಥನೆ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ.

ಇನ್ನೇನು ಭರ್ಜರಿ ಮತ್ತು ಸರ್ಜರಿ ನರ್ಸಿಂಗ್ ಹೋಂ ವಾರ್ಷಿಕೋತ್ಸವ ಕಾರ್ಯಕ್ರಮ ಆರಂಭವಾಗಬೇಕು ಮನೆಗೆ ವಿಶೇಷ ಅತಿಥಿ ಆಗಮನದ ಸೂಚನೆಯನ್ನು ಬಿಗ್ ಬಾಸ್ ಕೊಟ್ಟರು. ಎಲ್ಲರೂ ಹಳ್ಳಿ ಹೈದ ರಾಜೇಶ್ ಅವರನ್ನು ಹೂವಿನ ಮಾಲೆ ಹಾಕಿ ಸ್ವಾಗತಿಸಿದರು. ಹಿನ್ನೆಲೆ ಸಂಗೀತದಲ್ಲಿ "ಅಡವಿ ದೇವಿಯ ಕಾಡು ಜನಗಳ ಈ ಹಾಡೂ..." ಕೇಳಿಬರುತ್ತಿತ್ತು.

ರಾಜೇಶ್ ಗೆ ರತ್ನಗಂಬಳಿ ಸ್ವಾಗತ

ಜೊತೆಗೆ ರತ್ನಗಂಬಳಿಯೂ ಹಾಕಲಾಗಿತ್ತು. ಆದರೆ ಹುಚ್ಚಾಸ್ಪತ್ರೆ ಟಾಸ್ಕ್ ನಲ್ಲಿದ್ದ ಸದಸ್ಯರು ಇನ್ನೂ ಹುಚ್ಚರಂತೆಯೇ ವರ್ತಿಸುತ್ತಿದ್ದರು. ಇದನ್ನು ನೋಡಿದ ರಾಜೇಶ್ ಮತ್ತೆ ತಾನೇನಾದರೂ ಅಪ್ಪಿತಪ್ಪಿ ಹುಚ್ಚಾಸ್ಪತ್ರೆಗೆ ಬಂದೆನಾ ಎಂಬಂತೆ ಕಾಣಿಸುತ್ತಿದ್ದ.

ಬಿಗ್ ಬಾಸ್ ಮನೆಗೆ ಲುಂಗಿ ಅಂಗಿ ಹೈದ ರಾಜೇಶ್

ಆದರೂ ಸಮಾಧಾನ ಚಿತ್ತದಿಂದ ಎಲ್ಲವನ್ನೂ ಗಮನಿಸುತ್ತಿದ್ದ. ಸರಳವಾಗಿ ಲುಂಗಿ ಹಾಗೂ ಅಂಗಿಯಲ್ಲೇ ರಾಜೇಶ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ವಾಗತ ಭಾಷಣವನ್ನು ಹುಚ್ಚುಚ್ಚಾಗಿ, ಹಾಸ್ಯಭರಿತವಾಗಿ ಅರುಣ್ ಸಾಗರ್ ಅಚ್ಚುಕಟ್ಟಾಗಿ ನಿರ್ವಹಿಸಿದರು.

ಗಲಿಬಿಲಿಯಾದಂತೆ ಕಂಡುಬಂದ ಹಳ್ಳಿಹೈದ

ಇವರ ಐಲುಪೈಲುಗಳು, ಹುಚ್ಚಾಟಗಳನ್ನು ನೋಡಿದ ರಾಜೇಶ್ ಕೊಂಚ ಗಲಿಬಿಲಿಯಾದಂತೆ ಕಂಡುಬಂದ. ಮಾನಸಿಕ ಅಸ್ವಸ್ಥನಾಗಿದ್ದ ರಾಜೇಶ್ ಈಗಾಗಲೆ ಚಿಕಿತ್ಸೆ ಪಡೆದು ಗುಣಮುಖನಾಗಿದ್ದಾನೆ. ಈಗ ಮತ್ತೆ ತಾನು ಹುಚ್ಚಾಸ್ಪತ್ರೆಗೆ ಬಂದೆನೇ ಎಂಬ ಅನುಮಾನ ಆತನನ್ನು ಕಾಡುವಂತಿತ್ತು.

ಒಂದು ಸ್ಟೆಪ್ ಹಾಕಿದ ಬ್ರಹ್ಮಾಂಡ ಶರ್ಮಾ

ಇದೇ ಸಂದರ್ಭದಲ್ಲಿ ಬ್ರಹ್ಮಾಂಡ ಶರ್ಮಾ ಅವರು ಒಂದು ಸ್ಟೆಪ್ ಹಾಕಿದರು. "ಎವ್ವರಿ ಬಡಿ ರಾಕ್ಸ್..." ಎಂಬ ಗೀತೆಗೆ ಕುಳಿತಲ್ಲೇ ಪರ್ವತದಂತಹ ತಮ್ಮ ಮೈ ಕುಲುಕಿಸಿದರು. ಆಗಾಗ ಆಂಗಿಕ ಅಭಿನಯ ಮಾಡುತ್ತಾ ತಮ್ಮಲ್ಲಿನ ಕಲಾವಿದನನ್ನು ಹೊರಹಾಕಿದರು. ಕೊನೆಗೆ ಪುಟಗೋಸಿ ಎಂದು ಹೇಳಿ ಹಾಡಿಗೆ ಅಂತ್ಯ ಹಾಡಿದರು.

ಬಿಗ್ ಬಾಸ್ ಮನೆಯಲ್ಲಿ ಸಂತಸ ವ್ಯಕ್ತಪಡಿಸಿದ ರಾಜೇಶ್

ಇನ್ನೊಮ್ಮೆ "ಕುಚಿಕು ಕುಚಿಕು" ಹಾಡಿಗೆ ಎಲ್ಲರೂ ಕುಣಿದು ಕುಪ್ಪಳಿಸಿದರು. ಹುಚ್ಚಾಸ್ಪತ್ರೆ ಟಾಸ್ಕ್ ಮುಂದುವರೆದಿದೆ. ಇವೆಲ್ಲಾ 32ನೇ ದಿನದ ಹೈಲೈಟ್ಸ್. ಕೊನೆಗೆ ರಾಜೇಶ್ ಎಲ್ಲರೊಡನೆ ಮಾತನಾಡುತ್ತಾ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ. ತಾವೆಲ್ಲರೂ ಹುಚ್ಚರಂತೆ ಅಭಿನಯಿಸುತ್ತಿರುವುದು ಖುಷಿ ಕೊಡ್ತು ಎಂದ.

English summary
Etv Kannada reality show Bigg Boss day 32nd highlights. 'Jungle Jackie' fame Kannada actor Rajesh entered the house. All members wecomes him with garland. Bigg Boss welcomes him with red carpet.
Please Wait while comments are loading...