Don't Miss!
- Sports
ಆ ಒಂದು ಸ್ಥಾನಕ್ಕೆ ಮುಂದುವರಿದ ಭಾರೀ ಚರ್ಚೆ: ಮತ್ತೆ ಅಡಕತ್ತರಿಯಲ್ಲಿ ಸಿಲುಕಿಕೊಂಡ ಕನ್ನಡಿಗ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
ಹಳೆಯ ಕಾರನ್ನು ಮಾರಾಟ ಮಾಡುತ್ತಿದ್ದೀರಾ?: ಟಾಟಾದಿಂದ ದೊಡ್ಡ ಘೋಷಣೆ
- News
Vande Metro Rail; ಬೆಂಗಳೂರಿಗೆ ಬರಲಿದೆ ದೇಶದ ಮೊದಲ ರೈಲು
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ಬಿಗ್ ಬಾಸ್ ಮೇಲೆ ಗರಂ ಆದ ಸಾನ್ಯಾಗೆ ವೇದಿಕೆ ಮೇಲೆಯೇ ಖಡಕ್ ಉತ್ತರ ಕೊಟ್ಟ ಕಿಚ್ಚ ಸುದೀಪ್
ಬಿಗ್ ಬಾಸ್ ಮನೆಯಲ್ಲಿ ಇದ್ದವರಿಗೆ ಅದರೊಳಗಿನ ನೀತಿ ನಿಯಮಗಳು ಒಂದಿಷ್ಟಾದರೂ ಗೊತ್ತಿರುತ್ತೆ. ಅದರಲ್ಲೂ ಸಾನ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಮೇಲೆಯೇ ಕಳೆದಿದ್ದರು. ಒಟಿಟಿಯಿಂದ ಟಿವಿ ಸೀಸನ್ ತನಕವೂ ಬಿಗ್ ಬಾಸ್ ಜರ್ನಿ ನೋಡಿದ್ದಾರೆ. ನೋಡಿಯೂ ಅದನ್ನು ಅರಿತುಕೊಳ್ಳದೇ ಬಿಗ್ ಬಾಸ್ ಬಗ್ಗೆಯೇ ಕಿಡಿಕಾರಿದ್ದರು.
ಸಾನ್ಯಾ ಮತ್ತು ರೂಪೇಶ್ ಟಿವಿ ಸೀಸನ್‌ನಲ್ಲಿ ಬರೀ ಫ್ರೆಂಡ್ಸ್ ರೀತಿ ಇರಲಿಲ್ಲ. ಪಕ್ಕಾ ಪ್ರೇಮಿಗಳಂತೆ ವರ್ತಿಸುತ್ತಿದ್ದರು. ಅವರ ಪ್ರಾಮೀಸ್‌ಗಳು, ಅವರ ನಡವಳಿಕೆಗಳು, ಅವರ ಮುಖದ ಭಾವಗಳೆಲ್ಲವೂ ಬೇರೆಯದ್ದೆ ಭಾವವನ್ನು ತಿಳಿಸುತ್ತಿತ್ತು. ಸಾನ್ಯಾ ಮನೆಯಿಂದ ಹೋಗುವಾಗಂತೂ ರೂಪೇಶ್ ಶೆಟ್ಟಿ ಮಗುವಿನಂತೆ ಕಣ್ಣೀರು ಹಾಕಿದ್ದರು.
BBK9:
ರಾಜಣ್ಣನ
ನಡವಳಿಕೆ
ಮನೆಯ
ಹೆಣ್ಣು
ಮಕ್ಕಳಿಗೆ
ಕಿರಿಕಿರಿ
ಆಗ್ತಾ
ಇರೋದ್ಯಾಕೆ?

ಟೀ ಶರ್ಟ್ ಬಗ್ಗೆ ಪೋಸ್ಟ್ ಹಾಕಿದ್ದ ಸಾನ್ಯಾ
ಸಾನ್ಯಾ ಕಳುಹಿಸಿದ ಟೀ ಶರ್ಟ್ ಗಳನ್ನು ರೂಪೇಶ್‌ಗೆ ಕಳುಹಿಸಿಲ್ಲ ಎಂಬ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಎಸ್ ಅಂದ್ರೆ ಸ್ಟ್ರಾಂಗ್. ರೂಪಿ ನೀನು ಸ್ಟ್ರಾಂಗ್ ಆಗಿರು ಆಯ್ತಾ. ನಾನು ಕಳುಹಿಸುತ್ತಿರುವ ಶರ್ಟ್‌ಗಳು ನಿನಗೆ ತಲುಪಿಸುತ್ತಿಲ್ಲ. ನನ್ನ ಪಾಸಿಟಿವಿಟಿ ಮತ್ತು ಸಪೋರ್ಟ್ ಕಳುಹಿಸುತ್ತಿರುವೆ. ಇದನ್ನು ಯಾರಿಂದನು ಸ್ಟಾಪ್ ಮಾಡಲು ಆಗುವುದಿಲ್ಲ. ನನ್ನ ಬೆಸ್ಟಿ ಸದಾ ಶೈನ್ ಆಗುತ್ತಿರಬೇಕು ಎಂದು ಬರೆದು ಬಿಗ್ ಬಾಸ್ ಟೀ ಶರ್ಟ್ ನೀಡುತ್ತಿಲ್ಲವೆಂದು ಆಕ್ರೋಶ ಹೊರ ಹಾಕಿದ್ದರು.

ಸಾನ್ಯಾಗೆ ಕಿಚ್ಚನ ಪಾಠ
ಬಿಗ್ ಬಾಸ್ ಮನೆಯಲ್ಲಿನ ನೀತಿ ನಿಯಮಗಳನ್ನು ತಿಳಿದಿದ್ದ ಸಾನ್ಯಾ ಈ ರೀತಿ ಮಾಡಿದ್ದಕ್ಕೆ ಕಿಚ್ಚ ಸುದೀಪ್ ಸಹಜವಾಗಿಯೇ ಬೇಸರ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎಲ್ಲರೂ ವೇದಿಕೆ ಮೇಲಿದ್ದಾಗಲೇ ಸಾನ್ಯಾ ಮಾಡಿರುವ ತಪ್ಪಿನ ಬಗ್ಗೆ ಹೇಳಿದ್ದಾರೆ. "ರೂಪೇಶ್ ಅವರೇ ನಿಮಗೆ ನಿಮ್ಮ ಮನೆಯವರು ಹಾಗೂ ನಿಮ್ಮ ಗೆಳತಿ ಸಾನ್ಯಾ ಇಬ್ಬರು ಬಟ್ಟೆ ಕಳುಹಿಸುತ್ತಾರೆ. ಆದರೆ ನಾವೂ ನಿಮ್ಮ ಮನೆಯವರಿಗೆ ಮೊದಲ ಆದ್ಯತೆ ನೀಡಿ, ಅವರು ಕೊಟ್ಟ ಬಟ್ಟೆ ಕಳುಹಿಸುತ್ತೇವೆ. ಆದ್ರೆ ಸಾನ್ಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕುತ್ತಾರೆ. ಬಿಗ್ ಬಾಸ್ ನಾನು ಕಳುಹಿಸಿದ ಬಟ್ಟೆಯನ್ನು ಕೊಡಲ್ಲ ಅಂತ. ಅವರು ಈ ಮನೆಯಲ್ಲಿ ಇದ್ದು ಹೋದವರು, ಅವರಿಗೂ ಇಲ್ಲಿನ ರೂಲ್ಸ್ ಗೊತ್ತಿರುತ್ತೆ ಆದರೂ ಬಿಗ್ ಬಾಸ್ ಬಗ್ಗೆ ಆ ರೀತಿಯಾದ ಪೋಸ್ಟ್ ಹಾಕುತ್ತಾರೆ" ಎಂದಿದ್ದಾರೆ

ಸಾನ್ಯಾ ಬಗ್ಗೆ ಬೇಸರ ಮಾಡಿಕೊಂಡ ರೂಪೇಶ್
ರೂಪೇಶ್ ತುಂಬಾ ಒಳ್ಳೆಯ ಗುಣ ಹೊಂದಿರುವ ವ್ಯಕ್ತಿ ಎಂಬುದು ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಪ್ರೂವ್ ಆಗಿದೆ. ಯಾರಿಗೂ ನೋವು ಮಾಡುವುದಕ್ಕೆ ಇಷ್ಟಪಡದ ವ್ಯಕ್ತಿ ಎಂಬುದು ಕಂಡಿದೆ. ಸಾನ್ಯಾ ಇದ್ದಾಗ ಬರೀ ಸಾನ್ಯಾ ಹಿಂದೆಯೇ ತಿರುಗಾಡಿ ಇಷ್ಟೊಂದು ಎಂಟರ್ ಟೈನ್ ಮಾಡುತ್ತಾ ಇರಲಿಲ್ಲ. ಈಗ ಮನೆಯವರನ್ನೆಲಾ ನಗಿಸುತ್ತಾ ಇರುತ್ತಾರೆ. ಸಾನ್ಯಾ ಎಲಿಮಿನೇಟ್ ಆದಾಗ "ವಾರಕ್ಕೊಮ್ಮೆ ನನಗೆ ಒಂದು ಟೀ ಶರ್ಟ್ ಕಳುಹಿಸಿಕೊಡು" ಎಂದು ಮನವಿ ಮಾಡಿದ್ದರು. ಈಗ ಅದೇ ತಪ್ಪಾಗಿ ಹೋಯ್ತಾ ಎಂದು ಚಿಂತೆ ಮಾಡುವಂತೆ ಆಗಿದೆ. ಆ ಬಗ್ಗೆ ಸುದೀಪ್ ಹೇಳಿದ ಕೂಡಲೇ, "ಬಿಗ್ ಬಾಸ್ ದಯವಿಟ್ಟು ಕ್ಷಮಿಸಿ, ಸಾನ್ಯಾ ನಾನು ಹೊರಗೆ ಬಂದ ಮೇಲೆ ನಿನ್ನ ಬಳಿ ಮಾತನಾಡುತ್ತೇನೆ. ಆದರೆ ಇಲ್ಲಿ ನಾನು ಮನೆಯವರು ಕೊಟ್ಟ ಬಟ್ಟೆ ಹಾಕಲೇಬೇಕು. ನನ್ನ ಮೊದಲ ಆದ್ಯತೆ ಅದು. ತಪ್ಪಾಗಿರುವುದಕ್ಕೆ ಬಿಗ್ ಬಾಸ್ ಬಳಿ ಕ್ಷಮೆ ಕೇಳುತ್ತೇನೆ" ಎಂದಿದ್ದಾರೆ.

ಪ್ರೂವ್ ಮಾಡಿಕೊಳ್ಳಲು ಹೀಗೆ ಮಾಡಿದರಾ ಸಾನ್ಯಾ..?
ಸಾನ್ಯಾ ಈ ಬಗ್ಗೆ ಬರೀ ಸೋಷಿಯಲ್ ಮೀಡಿಯಾದಲ್ಲಿ ಮಾತ್ರವಲ್ಲ ಟಿವಿ ಚಾನೆಲ್ ಗಳಿಗೂ ಈ ಬಗ್ಗೆ ಉತ್ತರ ನೀಡಿದ್ದಾರೆ. ಸಾನ್ಯಾ ಒಂದೇ ವಾರ ಬಟ್ಟೆ ಕಳುಹಿಸಿ ಸುಮ್ಮನೆ ಆಗಿ ಬಿಟ್ಟರಾ ಅಂತ ಜನ ತಪ್ಪಾಗಿ ತಿಳಿದುಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ನೀವೂ ಟೀ ಶರ್ಟ್ ಪೋಸ್ಟ್ ಹಾಕಿರುವುದಾ ಎಂಬ ಪತ್ರಕರ್ತೆಯ ಪ್ರಶ್ನೆಗೆ ಹೌದು ಎಂದಿದ್ದಾರೆ. "ನಾನು ಪ್ರತಿವಾರವೂ ಬಟ್ಟೆ ಕಳುಹಿಸುತ್ತೇನೆ. ಆದರೆ ಅದು ರೂಪೇಶ್‌ಗೆ ಅದ್ಯಾಕೆ ತಲುಪುವುದಿಲ್ಲವೋ ಗೊತ್ತಿಲ್ಲ" ಎಂದಿದ್ದಾರೆ.