Don't Miss!
- Sports
ಭಾರತ vs ನ್ಯೂಜಿಲೆಂಡ್: ನಿರ್ಣಾಯಕ ಪಂದ್ಯಕ್ಕಾಗಿ ಲಕ್ನೋಗೆ ಬಂದಿಳಿದ ಹಾರ್ದಿಕ್ ಪಡೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್ ಬಾಸ್ ಮನೆಯಲ್ಲಿ ಏನು ನಡೀತಾ ಇದೆ? ಹುಡುಗಿಯರ ಮೌನ ಕಂಡು ಮನೆಯ ಬಾಯ್ಸ್ ಶಾಕ್!
ಮನೆಯಲ್ಲಿ ಆಗಾಗ ಫನ್ನಿಯಾದಂತ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಪ್ಲ್ಯಾನ್ ಮಾಡಿ ಆದರೆ, ಇನ್ನು ಕೆಲವೊಂದು ಘಟನೆ ಪ್ಲ್ಯಾನ್ ಇಲ್ಲದೆನೆ ನಡೆಯುತ್ತವೆ. ಅಂತ ವಿಚಾರದಲ್ಲಿ ಇವತ್ತು ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಹೆಣ್ಣು ಮಕ್ಕಳು ಮಾಡಿದ ಪ್ಲ್ಯಾನ್ ಗೆ ಗಂಡೈಕ್ಳು ಸುಸ್ತಾಗಿ ಬಿಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅಡುಗೆ, ತಿಂಡಿ, ಕ್ಲೀನಿಂಗ್, ಟಾಸ್ಕ್ ಅಂತ ಓಡುವ ಮನೆ ಮಂದಿಗೆ ಆಗಾಗ ಮನರಂಜನೆಯ ಅವಶ್ಯಕತೆ ಇದ್ದೇ ಇರುತ್ತದೆ. ಆ ಮನರಂಜನೆಯನ್ನು ಅವರೇ ನೀಡಬೇಕಾಗಿದೆ. ಆ ಮನರಂಜನೆ ಅವರಿಗೆ ಮಾತ್ರವಲ್ಲ, ನೋಡುಗರಾದ ನಮಗೂ ಮನರಂಜನೆ ಎನಿಸಬೇಕು.

ರಾಜಣ್ಣ ಎಷ್ಟೇ ಮಾತನಡಿದರೂ ಮಾತನಾಡಲಿಲ್ಲ
ಅನುಪಮಾ, ಅಮೂಲ್ಯ, ದೀಪಿಕಾ ದಾಸ್ ಅಡುಗೆ ಮನೆಯಲ್ಲಿ ಅಡುಗೆ ಕೆಲಸದಲ್ಲಿ ನಿರತರಾಗಿದ್ದರು. ಆಗ ರಾಜಣ್ಣ ಅಲ್ಲಿಗೆ ಬರುತ್ತಾರೆ. ಎಲ್ಲರನ್ನು ಮಾತನಾಡಿಸಲು ಪ್ರಯತ್ನಿಸುತ್ತಾರೆ. ಯಾವುದೇ ಪ್ರಯೋಜನವಾಗುವುದಿಲ್ಲ. ದೀಪಿಕಾ ಬಳಿ ಹೋಗಿ "ನಾನಿದನ್ನು ತೆಗೆದುಕೊಳ್ಳಲಾ, ನೀವೂ ಹೂ ಎಂದರೆ ನಾನಿದನ್ನು ತಿನ್ನುತ್ತೇನೆ" ಎಂದಿದ್ದಾರೆ. ಆದರೂ ಆ ಕಡೆಯಿಂದ ನೋ ರಿಯಾಕ್ಷನ್. ರಾಜಣ್ಣನಿಗೆ ಅನುಮಾನ ಬಂದು, "ಸರಿ ನೀವೆಲ್ಲಾ ಬಾಯಿ ಬಿಟ್ಟು ಹೇಳುವ ತನಕ ನಾನು ತಿನ್ನುವುದಿಲ್ಲ" ಅಂತ ಹೇಳಿ ಸೀದಾ ಬೆಡ್ ರೂಮಿಗೆ ಹೋಗಿದ್ದಾರೆ.

ಇದನ್ನೇ ಮುಂದುವರೆಸೋಣಾ ಎಂದ ಗರ್ಲ್ಸ್ ಗ್ಯಾಂಗ್
ರಾಜಣ್ಣನಿಗೆ ದಿವ್ಯಾ ಉರುಡುಗ ಆ ಸಮಯದಲ್ಲಿ ಕ್ಲೂ ಕೊಟ್ಟಿದ್ದರು. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ರಾಜಣ್ಣ ಬೆಡ್ ರೂಮಿಗೆ ಹೋಗಿದ್ದರು. ಆದರೆ ಇದನ್ನೆ ಗರ್ಲ್ಸ್ ಗ್ಯಾಂಗ್ ಬಂಡವಾಳ ಮಾಡಿಕೊಂಡಿದ್ದಾರೆ. ನಾವೆಲ್ಲಾ ಯಾಕೆ ಗಂಡು ಮಕ್ಕಳ ಜೊತೆಗೆ ಮಾತು ಬಿಡಬಾರದು ಎಂದು ಅಮೂಲ್ಯ ಐಡಿಯಾ ಕೊಟ್ಟಿದ್ದಾರೆ. ಆಗ ಉಳಿದವರೆಲ್ಲಾ ಹೌದು ಹೌದು ಈ ರೀತಿ ಮಾಡೋಣಾ, ಬಿಗ್ ಬಾಸ್ ಏನೋ ಸೀಕ್ರೇಟ್ ಆಗಿ ಟಾಸ್ಕ್ ನೀಡಿದ್ದಾರೆ ಎಂದುಕೊಳ್ಳಲಿ ಎಂದು ಪ್ಲ್ಯಾನ್ ಮಾಡಿ ಮಾತನಾಡದಂತೆ ಡಿಸೈಡ್ ಮಾಡಿದ್ದಾರೆ.

ಯಾರನ್ನು ಮಾತನಾಡಿಸಿದರೂ ನೋ ರೆಸ್ಪಾನ್ಸ್!
ರಾಜಣ್ಣ ಮತ್ತು ಆರ್ಯವರ್ಧನ್ ಅದಾಗಲೇ ಬಂದು ಮಾತನಾಡಿಸಿಕೊಂಡು ಹೋಗಿದ್ದರು. ಇಬ್ಬರಿಗೂ ರೆಸ್ಪಾನ್ಸ್ ನೀಡಿರಲಿಲ್ಲ. ಅದೇ ಕೋಪ, ಅದೇ ಮುನಿಸು ಎದ್ದು ಕಾಣುತ್ತಾ ಇತ್ತು. ಆದರೆ ಈ ಕೋಪ, ಮುನಿಸು ಯಾಕೆ ಎಂಬುದು ಇಬ್ಬರಿಗೂ ಅರ್ಥವಾಗಿರಲಿಲ್ಲ. ಹೀಗಾಗಿ ಸೈಲೆಂಟ್ ಆಗಿದ್ದರು. ಹೆಣ್ಣು ಮಕ್ಕಳೇ ಮಾತನಾಡಿಕೊಳ್ಳುತ್ತಿದ್ದನ್ನು ನೋಡಿದ ರಾಜಣ್ಣ "ಅವರವರು ಮಾತಾಡ್ತಾ ಇದ್ದಾರೆ. ನಮ್ಮ ಜೊತೆ ಮಾತ್ರ ಯಾಕೆ ಮಾತನಾಡುತ್ತಿಲ್ಲ" ಅಂತ ಮತ್ತೆ ಗೊಂದಲಕ್ಕೆ ಸಿಲುಕಿದರು. ರಾಕೇಶ್ ಬಂದು ಎಲ್ಲರನ್ನು ಮಾತನಾಡಿಸಿದರು, ಅನುಪಮಾ ಅಂತ ಕರೆದರೂ ದಿವ್ಯಾ ಅಂತ ಕರೆದರು, ದೀಪ್ಸ್ ನನ್ನು ಮಾತನಾಡಿಸಲು ಯತ್ನಿಸಿದರೂ ಆದರೆ ಹೆಣ್ಣು ಮಕ್ಕಳದ್ದು ಒಂದೇ ಹಠವಾಗಿದ್ದರಿಂದ, ಬಂದ ದಾರಿಗೆ ಸುಂಕವಿಲ್ಲದಂತೆ ರಾಕಿ ಕೂಡ ಹೋದರು.

ರೂಪೇಶ್ ಶೆಟ್ಟಿಗೆ ಹೆದರಿಬಿಟ್ಟರಾ ಹೆಣ್ಣು ಮಕ್ಕಳು
ಇದನ್ನೆಲ್ಲಾ ಗಮನಿಸಿದ್ದ ರೂಪೇಶ್ ಶೆಟ್ಟಿಗೂ ಸ್ವಲ್ಪ ಗೊಂದಲವಾಯ್ತು. ಬಂದು ಎಲ್ಲರನ್ನು ಮಾತನಾಡಿಸಿದರೂ ಮಾತನಾಡಲಿಲ್ಲ. ಆಮೇಲೆ "ನಾನು ಹತ್ತುವರೆಗೂ ನಂಬರ್ಸ್ ಹೇಳುತ್ತೀನಿ ಮಾತನಾಡಿದರೆ ಸರಿ. ಈಗ ನಾನು ರೂಪೇಶ್ ಶೆಟ್ಟಿಯಾಗಿಯೂ ಹೇಳುತ್ತಿದ್ದೀನಿ, ಒಬ್ಬ ಕ್ಯಾಪ್ಟನ್ ಆಗಿಯೂ ಹೇಳುತ್ತಿದ್ದೀನಿ. ಮಾತನಾಡದೆ ಹೋದರೆ ನಾಳೆ ತನಕ ನಾನು ಯಾರನ್ನು ಮಾತನಾಡಿಸಲ್ಲ. ಒಂದು..ಎರಡೋ" ಅಂತ ಐದರ ತನಕ ಎಣಿಸುತ್ತಾ ಇದ್ದರು. ಅಷ್ಟರಲ್ಲಿ ಅರುಣ್ ಸಾಗರ್ ಕೂಡ ಜೊತೆಯಾದರು. ಒಂಭತ್ತು ಅಂತ ಎಣಿಸುತ್ತಿದ್ದಂತೆ ಅಮೂಲ್ಯ ಮಾತನಾಡಿ ಬಿಟ್ಟರು. ಆಮೇಲೆ ಅನುಪಮಾ ಕೂಡ ಮಾತಾನಾಡಿ, ಇದು ತಮಾಷೆಗೆ ನಾವೆಲ್ಲಾ ಮಾಡಿದ್ದು ಎಂದಿದ್ದಾರೆ.