Don't Miss!
- News
ಜನವರಿ 28ರಂದು 300 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
SA Vs Eng 1st ODI: ಚೇಸಿಂಗ್ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್ಗಳ ಜಯ
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ತಪ್ಪು ತನ್ನದೇ ಆದರೂ ಆರ್ಯವರ್ಧನ್ ಮೇಲೆ ಹಾಕಿದ ರಾಜಣ್ಣ!
ಸಂಬರ್ಗಿಯ ರೀತಿಯೇ ರಾಜಣ್ಣ ಈಗ ಬದಲಾಗಿದ್ದಾರೆ. ಪ್ರಶಾಂತ್ ಸಂಬರ್ಗಿ ಎಲಿಮಿನೇಟ್ ಆದ ಮೇಲೆ ಸುದೀಪ್ ಅವರ ವೇದಿಕೆಯಲ್ಲಿಯೂ ರಾಜಣ್ಣನ ಬಗ್ಗೆ ಪ್ರಶ್ನೆಯೊಂದು ಎದುರಾಗಿತ್ತು. ಅದುವೆ ನಿಮ್ಮ ಸ್ಥಾನವನ್ನು ರೂಪೇಶ್ ರಾಜಣ್ಣ ಅಲಂಕರಿಸಿದ್ದಾರೆ ಹೌದಾ ಎಂದು ಸುದೀಪ್ ಕೇಳಿದಾಗ ರಾಜಣ್ಣ ಕೂಡ ಹೌದು ಎಂದೇ ಒಪ್ಪಿಕೊಂಡಿದ್ದರು.
ಬಿಗ್ ಬಾಸ್ ಮನೆಯಲ್ಲಿ ರಾಜಣ್ಣ ನವೀನರಾಗಿಯೇ ಎಂಟ್ರಿ ಕೊಟ್ಟಿದ್ದರು. ದಿನಕಳೆದಂತೆ ಪ್ರವೀಣರಾಗಿದ್ದಾರೆ. ಬಿಗ್ ಬಾಸ್ ಆಟವನ್ನು ಹೇಗೆಲ್ಲಾ ಆಡಬಹುದು ಎಂಬುದನ್ನು ಚೆನ್ನಾಗಿಯೇ ಅರಿತಿದ್ದಾರೆ. ಅದಕ್ಕೆ ಈಗ ಜೋರು ಧ್ವನಿಯಲ್ಲಿಯೇ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಪಾಯಿಂಟ್ ಉಳಿಸಿಕೊಳ್ಳಲು ಮನೆ ಮಂದಿ ಹರಸಾಹಸ
ಬಿಗ್ ಬಾಸ್ ಈ ವಾರವೆಲ್ಲ ಮನರಂಜಿತವಾದ ಆಟವನ್ನೇ ನೀಡುತ್ತಿದೆ. ಕೊಟ್ಟಿರುವ ಪಾಯಿಂಟ್ ಗಳನ್ನು ಉಳಿಸಿಕೊಳ್ಳುವುದೇ ಮನೆ ಮಂದಿಗೆ ಕಷ್ಟದ ಕೆಲಸವಾಗಿದೆ. ಅದರಂತೆ ಬಿಗ್ ಬಾಸ್ ಇಂದು ಕೂಡ ಒಂದು ಟಾಸ್ಕ್ ನೀಡಿದೆ. ಅದುವೆ ಬಾಲ್ ಅನ್ನು ಬಾಕ್ಸ್ ನೊಳಗೆ ಹಾಕುವುದು. ಇದೇನು ಬಹಳ ಸುಲಭ ಎನಿಸಬಹುದು. ಆದರೆ ಟ್ರಿಕ್ಸ್ ಬೇರೆಯದ್ದೆ ಆಗಿದೆ. ಅದುವೆ ಮುಂದೆ ಒಬ್ಬರು ಹಿಂದೆ ಒಬ್ಬರು ಚೇರ್ ಮೇಲೆ ಬಾಲ್ ಹಾಕಿ, ಅದನ್ನು ಎತ್ತಿಕೊಂಡು ಹೋಗಿ ಬಾಕ್ಸ್ ನೊಳಗೆ ಹಾಕುವುದು. ಒಬ್ಬರು ಮಾಡುವ ಬ್ಯಾಲೆನ್ಸ್ ಮಿಸ್ ಆದರೂ ಬಾಲ್ ಕೆಳಗೆ ಇರುತ್ತದೆ.

ರಾಜಣ್ಣ - ರೂಪೇಶ್ ಪರ್ಫೆಕ್ಟ್
ಈ ಆಟವನ್ನು ಎರಡೆರಡು ಟೀಂ ಮಾಡಿ ಆಟವಾಡಲು ಬಿಟ್ಟಿದ್ದಾರೆ. ಅದರಲ್ಲಿ ಮೊದಲಿಗೆ ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿಯನ್ನು ಟೀಂ ಮಾಡಲಾಗಿತ್ತು. ಇಬ್ಬರು ಚೆಂದವಾಗಿಯೇ ಆಟ ಆಡಿದ್ದಾರೆ. ಬ್ಯಾಲೆನ್ಸ್ ಮಾಡುವುದರಲ್ಲಿ ಇಬ್ಬರು ಮಾತನಾಡಿಕೊಂಡೆ ಮಾಡಿದ್ದಾರೆ. ಹೆಚ್ಚು ಬಾಲ್ ಗಳನ್ನು ಹಾಕದೆ ಇದ್ದರು, ಕೋಆರ್ಡಿನೇಷನ್ ಅದ್ಭುತವಾಗಿತ್ತು.

ರಾಜಣ್ಣ ತಪ್ಪು ಮಾಡಿದರೂ ಉಲ್ಟಾ ಆಯ್ತಾ..?
ರಾಜಣ್ಣ ಜೊತೆಗೆ ರೂಪೇಶ್ ಶೆಟ್ಟಿ ಸರದಿ ಮುಗಿದ ಮೇಲೆ ಆರ್ಯವರ್ಧನ್ ಅವರ ಜೊತೆಗೆ ಶುರುವಾಯ್ತು. ಆಗ ಶುರಿವಾಗಿದ್ದೆ ರಿಯಲ್ ಆಟ. ರಾಜಣ್ಣ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಆರ್ಯವರ್ಧನ್ ಮುಂದಿನ ಚೇರ್ ಹೊತ್ತುಕೊಂಡಿದ್ದರು, ರಾಜಣ್ಣ ಹಿಂದಿನ ಚೇರ್ ಬ್ಯಾಲೆನ್ಸ್ ಮಾಡುತ್ತಾ ಇದ್ದರು. ಈ ವೇಳೆ ಬಾಲ್ ಚೇರ್ ಮೇಲೆ ಇತ್ತು. ಆರ್ಯವರ್ಧನ್ ಸರಿಯಾದ ರೀತಿಯಲ್ಲಿಯೇ ಸಾಗುತ್ತಿದ್ದರು. ಆದರೆ ನಾಲ್ಕು ಬಾರಿ ಇನ್ನೇನು ಬಾಲ್ ಬಾಕ್ಸ್ ಒಳಗೆ ಹಾಕಬೇಕು ಎನ್ನುವಷ್ಟರಲ್ಲಿ ರಾಜಣ್ಣ ಹಿಂದಿನಿಂದ ಚೇರ್ ಮೇಲೆತ್ತಾ ಇದ್ದರು. ಇದು ಸ್ಪಷ್ಟವಾಗಿ ಕಾಣಿಸುತ್ತಾ ಇತ್ತು. ಆದರೂ ತಪ್ಪನ್ನೆಲ್ಲಾ ಆರ್ಯವರ್ಧನ್ ಮೇಲೆಯೇ ಹಾಕಿದ್ದಾರೆ.

ಆರ್ಯವರ್ಧನ್ ತಪ್ಪೇ ಇರಲಿಲ್ಲ
ರಾಜಣ್ಣ ಮಾಡಿದ ತಪ್ಪು ನೋಡುಗರಿಗೆ ಎದ್ದು ಕಾಣುತ್ತಾ ಇತ್ತು. ಆದರೂ ರಾಜಣ್ಣನ ಧ್ವನಿ ಏರಿಕೆಯಿಂದ ಆರ್ಯವರ್ಧನ್ ಮುಂದಿನ ಮಾತು ಆಡಲೇ ಇಲ್ಲ. ಸರಿಯಾಗಿ ಮಾಡಿ ಗುರೂಜಿ ಎಂದು ರಾಜಣ್ಣ ಧ್ವನಿ ಏರಿಸಿದ್ದರು. ಆದರೆ ಇದನ್ನೆಲ್ಲಾ ಗಮನಿಸಿದ್ದ ಅರುಣ್ ಸಾಗರ್ ಸೇರಿದಂತೆ ಮನೆ ಮಂದಿಯೆಲ್ಲಾ ಆರ್ಯವರ್ಧನ್ ಪರವಾಗಿಯೇ ನಿಂತರು. ರಾಜಣ್ಣ ನೀವೇ ತಪ್ಪು ಮಾಡಿದ್ದು, ಅವರ ಮೇಲೆ ಯಾಕೆ ಹಾಕ್ತಾ ಇದ್ದೀರಾ ಅಂತ. ಆಗ ಆರ್ಯವರ್ಧನ್ ಕೂಡ ರಾಜಣ್ಣನ ವಿರುದ್ಧ ಎಗರಾಡಿದ್ದಾರೆ. ಆದರೆ ರಾಜಣ್ಣ ಮಾಡಿದ ತಪ್ಪು ಸಲೀಸಾಗಿ ಕಾಣಿಸುತ್ತಾ ಇತ್ತು.