Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK 9: ಕಳಪೆ ತೆಗೆದುಕೊಳ್ಳಲು ಕಷ್ಟ ಪಟ್ಟ ಅಮೂಲ್ಯ - ಅರುಣ್ ಸಾಗರ್; ಮನೆಯವರಿಗೆಲ್ಲಾ ಆತಂಕ!
ವಾರಪೂರ್ತಿ ಮನೆಯೊಳಗೆ ಹೇಗೆ ಆಟವಾಡುತ್ತಾರೆ, ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ವಾರದ ಕೊನೆಯಲ್ಲಿ ಸಿಗುವ ಪೋಸ್ಟ್ ಗೆ ಸಹಾಯವಾಗುತ್ತದೆ. ಶುಕ್ರವಾರ ಬಂತು ಎಂದರೆ ಬಿಗ್ ಬಾಸ್ ಮನೆಯಲ್ಲಿ ಕಳಪೆ ಹಾಗೂ ಉತ್ತಮದ ಪ್ರದರ್ಶನವಿರುತ್ತದೆ. ಹಾಗೇ ಹೊಸ ಕ್ಯಾಪ್ಟನ್ ಆಯ್ಕೆ ಕೂಡ ಇರಲಿದೆ.
ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಮತ್ತು ಕಳಪೆ ಎಂದು ಬಂದಾಗ ಥಟ್ ಅಂತ ಎಲ್ಲರಿಗೂ ಯಾರಾದರೊಬ್ಬರು ಕಳಪೆ ಪಟ್ಟಕ್ಕೆ ರೆಡಿಯಾಗಿ ಕುಳಿತು ಬಿಡುತ್ತಾ ಇದ್ದರು. ಆದರೆ ಈ ವಾರ ಅದು ಹಾಗೇ ಆಗಲೇ ಇಲ್ಲ. ಬದಲಿಗೆ ಅಮೂಲ್ಯ ಮತ್ತು ಅರುಣ್ ಸಾಗರ್ ಅವರಿಗೆ ಕಳಪೆ ಯಾರೆಂದು ಗೊತ್ತಾಗಲೇ ಇಲ್ಲ.

ಉತ್ತಮ ಸ್ಥಾನಕ್ಕೆ ಹೆಚ್ಚು ಬಾರಿ ನಾಮಿನೇಟ್ ಆದ ರೂಪೇಶ್ ಶೆಟ್ಟಿ
ರೂಪೇಶ್ ಶೆಟ್ಟಿ ಒಂಥರ ಸಿಕ್ಕಾಪಟ್ಟೆ ತಾಳ್ಮೆ ಇರುವಂತ ವ್ಯಕ್ತಿ. ಟಾಸ್ಕ್ ವಿಚಾರದಲ್ಲೂ ಅದ್ಭುತವಾಗಿ ಆಡುತ್ತಾರೆ. ಈ ವಾರದ ಕ್ಯಾಪ್ಟನ್ ಕೂಡ ಅವರೇ ಆಗಿದ್ದರು. ಕ್ಯಾಪ್ಟನ್ ಆದರೂ ಕೂಡ ಎಲ್ಲಿಯೂ ರೇಗಾಡಲಿಲ್ಲ, ಅಧಿಕಾರ ಚಲಾಯಿಸಲಿಲ್ಲ. ತುಂಬಾ ತಾಳ್ಮೆಯಿಂದ ಎಲ್ಲರನ್ನು ತನ್ನೊಟ್ಟಿಗೆ ಕರೆದುಕೊಂಡು ಹೋದವರು ರೂಪೇಶ್ ಶೆಟ್ಟಿ. ಈ ಕ್ಯಾಪ್ಟೆನ್ಸಿ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಿದೆ. ಹೀಗಾಗಿ ಹಲವರು ಇದೇ ವಿಚಾರಕ್ಕೆ ರೂಪೇಶ್ ಶೆಟ್ಟಿಗೆ ಉತ್ತಮ ಕೊಟ್ಟಿದ್ದಾರೆ. ಇನ್ನು ದಿವ್ಯಾ ಅವರ ಎಫರ್ಟ್ ಕೂಡ ಎಲ್ಲರಿಗೂ ಹಿಡಿಸಿದ್ದು, ಅವರಿಗೂ ಉತ್ತಮ ಸಿಕ್ಕಿದೆ.

ಕಾರಣವೇ ಇಲ್ಲದೆ ಕಳಪೆ ಹೊತ್ತುಕೊಂಡರಾ ಗುರೂಜಿ?
ಇಂದು ಕಳಪೆ ಪಟ್ಟವನ್ನು ಕೊಡುವ ಸರದಿ ಬಂದಾಗ ಅನುಪಮಾ, ರೂಪೇಶ್ ಶೆಟ್ಟಿ, ರಾಕೇಶ್, ಅಮೂಲ್ಯ, ಅರುಣ್ ಸಾಗರ್ ಕಳಪೆ ಪಟ್ಟವನ್ನು ಗುರೂಜಿಗೆ ನೀಡಿದ್ದಾರೆ. ಆದರೆ ಈ ಕಳಪೆಯನ್ನು ರಾಕೇಶ್, ರೂಪೇಶ್ ಮತ್ತು ಅನುಪಮಾ ಒಂದು ಕಾರಣ ಕೊಟ್ಟು ಕಳಪೆಯನ್ನು ನೀಡಿದರು. ಆದರೆ ಅಮೂಲ್ಯ ಮತ್ತು ಅರುಣ್ ಸಾಗರ್ ಒತ್ತಡಕ್ಕೆ ಸಿಲುಕಿ, ನಿಯಮಕ್ಕಾಗಿ ಕಾರಣವೇ ಇಲ್ಲದೆಯೇ ಆಯ್ಕೆ ಮಾಡಿಕೊಂಡ ಹೆಸರು ಅದುವೇ ಆರ್ಯವರ್ದನ್ ಅವರ ಹೆಸರಾಗಿತ್ತು.

ರಾಜಣ್ಣನ ನಡವಳಿಕೆಗೆ ಕಳಪೆ
ಈ ವಾರವೂ ರಾಜಣ್ಣನ ನಡವಳಿಕೆಗೆ ಮೈನಸ್ ಪಾಯಿಂಟ್ ಆಗಿದೆ. ಆರ್ಯವರ್ಧನ್ ವಿರುದ್ಧ ನಡೆದುಕೊಂಡ ರೀತಿ, ಅವರು ಸರಿಯಾಗಿಯೇ ಆಟವಾಡಿದರೂ ಕೂಡ ಇಲ್ಲ ಎಂದು ವಾದಿಸಿ, ಅವರ ಮೇಲೆಯೇ ತಪ್ಪಾಕಿದ ರೀತಿ. ಏರು ಧ್ವನಿಯೇ ಈ ಕಳಪೆ ಕೊಡುವುದಕ್ಕೆ ಕಾರಣವಾಗಿತ್ತು.

ಕಳಪೆ ಕೊಡದೆ ಸತಾಯಿಸಿದ ಅಮೂಲ್ಯ
ಕಳಪೆ ಎಂದು ಬಂದಾಗ ಯಾವುದಾದರೂ ಸಣ್ಣ ಪಾಯಿಂಟ್ ಆದರೂ ನೆಗೆಟಿವ್ ಕಾಣಬೇಕಾಗುತ್ತದೆ. ಆ ಪಾಯಿಂಟ್ ಇಲ್ಲದೆ ಕಳಪೆಯನ್ನು ಕೊಡುವುದಕ್ಕೆ ಕಷ್ಟ. ಇವತ್ತು ಅಮೂಲ್ಯ ಮತ್ತು ಅರುಣ್ ಸಾಗರ್ ವಿಚಾರದಲ್ಲಿ ಅದೇ ಆಯಿತು. ನಾವೂ ಕಳಪೆ ಕೊಡುವುದಿಲ್ಲ. ನಮಗೆ ನಾವೇ ಕೊಟ್ಟುಕೊಳ್ಳುತ್ತೇವೆ ಎಂದು ಇಬ್ಬರು ಹೇಳಿಕೊಂಡರು. ಆದರೆ ಮನೆಯವರೆಲ್ಲರ ವಿರೋಧ ಎದುರಿಸಬೇಕಾಯಿತು. ಬಿಗ್ ಬಾಸ್ ಮನೆಯಲ್ಲಿ ಅದರದ್ದೇ ಆದಂತ ನಿಯಮವಿದೆ. ನಮಗೂ ಕಳಪೆ ಕೊಡುವುದಕ್ಕೆ ಇಷ್ಟವಿಲ್ಲ. ಆದರೂ ಕೊಡುತ್ತಿದ್ದೀವಿ ಅಲ್ವಾ. ಸೋಮವಾರ ಈ ವಿಚಾರವಾಗಿ ಚರ್ಚೆಯಾಗುವುದು ಬೇಡ. ಸಣ್ಣ ಮಿಸ್ಟೇಕ್ ಸಿಕ್ಕಿದರೂ ಅದನ್ನೇ ಆಧಾರವಾಗಿಟ್ಟುಕೊಂಡು ಕಳಪೆ ಕೊಡಬಹುದು ಎಂದು ಮನವರಿಕೆ ಮಾಡಿದಾಗ, ದಾರಿ ಕಾಣದೆ ಅರುಣ್ ಸಾಗರ್ ಕಳಫೆಯನ್ನು ಗುರೂಜಿಗೆ ನೀಡಿದ್ದಾರೆ. ಅಮೂಲ್ಯ ಕೂಡ ತಮ್ಮ ಕಳಪೆಯನ್ನು ಗುರೂಜಿಗೆ ನೀಡಿದ್ದಾರೆ.