For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷಕ್ಕೆ ಬಿಗ್‌ಬಾಸ್ ಮ್ಯಾರಥಾನ್ ಫಿನಾಲೆ! ಹೊಸ ವರ್ಷದ ಸಿಹಿ ಯಾರಿಗೆ

  |

  ಬಿಗ್‌ಬಾಸ್‌ ಕನ್ನಡ ಸೀಸನ್ ಒಂಬತ್ತು ಅಂತ್ಯವಾಗುವ ಸಮಯ ಬಂದೊದಗಿದೆ. ಇನ್ನಾರು ದಿನಗಳಲ್ಲಿ ಅದ್ಧೂರಿಯಾಗಿ ಬಿಗ್‌ಬಾಸ್‌ ಫಿನಾಲೆ ನಡೆಯುತ್ತದೆ ಎನ್ನಲಾಗಿದೆ.

  ಹೌದು, ಬಿಗ್‌ಬಾಸ್ ಕನ್ನಡ ಸೀಸನ್‌ ಒಂಬತ್ತು ಮುಂದಿನ ವಾರ ಮುಗಿಯಲಿದೆ ಎನ್ನಲಾಗುತ್ತಿದೆ. ಅದೂ ಅದ್ಧೂರಿಯಾಗಿಯೇ ಫಿನಾಲೆಯನ್ನು ನಡೆಸಲು ಆಯೋಜಕರು ಯೋಜಿಸಿದ್ದಾರೆ.

  ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿ ಎಂಟು ಮಂದಿ ಸ್ಪರ್ಧಿಗಳಿದ್ದಾರೆ. ಆ ಎಂಟರಲ್ಲಿ ಇಬ್ಬರು ಈ ವಾರ ಡಬಲ್ ಎಲಿನಿಮಿನೇಶನ್‌ನಲ್ಲಿ ಮನೆಯಿಂದ ಹೊರಗೆ ಹೋಗಲಿದ್ದಾರೆ. ಇನ್ನುಳಿದ ಐವರಲ್ಲಿ ಕೊನೆಯ ವಾರ ಇಬ್ಬರು ಎಲಿಮಿನೇಶನ್‌ ಆಗಿ ಒಟ್ಟು ಮೂವರ ನಡುವೆ ಮೊದಲ ಸ್ಥಾನಕ್ಕೆ ಸ್ಪರ್ಧೆ ನಡೆಯಲಿದೆ.

  ಡಿಸೆಂಬರ್ 31 ರಂದು ರಾತ್ರಿ ಈ ಬಾರಿಯ ಬಿಗ್‌ಬಾಸ್ ಫಿನಾಲೆ ನಡೆಯಲಿದ್ದು, ಹೊಸ ವರ್ಷದ ಆರಂಭದ ಸಮಯಕ್ಕೆ ಸರಿಯಾಗಿ ಬಿಗ್‌ಬಾಸ್‌ ಒಂಬತ್ತರ ವಿನ್ನರ್ ಘೋಷಣೆ ಆಗಲಿದೆ.

  ಈ ಬಾರಿಯ ಫಿನಾಲೆಯ ವಿಶೇಷವೆಂದರೆ ಈ ಬಾರಿಯ ಬಿಗ್‌ಬಾಸ್ ಭಾರಿ ಅದ್ಧೂರಿಯಾಗಿ ಬರೋಬ್ಬರಿ ಆರು ಗಂಟೆ ನಡೆಯಲಿದೆ. ಡಿಸೆಂಬರ್ 31 ರಂದು ಸಂಜೆಯೇ ಬಿಗ್‌ಬಾಸ್ ಫಿನಾಲೆ ಆರಂಭವಾಗಲಿದೆ. ಆಗಿನಿಂದ ಸತತವಾಗಿ ಆರು ಗಂಟೆ ಅಂದರೆ ಮಧ್ಯ ರಾತ್ರಿ 12 ರವರೆಗೆ ನಡೆಯಲಿದೆ. ಸರಿಯಾಗಿ ರಾತ್ರಿ 12 ಗಂಟೆಗೆ ವಿನ್ನರ್ ಘೋಷಣೆ ಆಗಲಿದೆ.

  ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿ ಅಮೂಲ್ಯ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ಆರ್ಯವರ್ಧನ್, ದಿವ್ಯಾ ಉರುಡುಗ, ದೀಪಿಕಾ ದಾಸ್, ಅರುಣ್ ಸಾಗರ್ ಅವರುಗಳಿದ್ದಾರೆ. ಅವರಲ್ಲಿ ಇಬ್ಬರು ನಾಳೆ ಅಂದರೆ ಭಾನುವಾರ ಮನೆಯಿಂದ ಹೊರಗೆ ಹೋಗಲಿದ್ದಾರೆ. ಈ ವರೆಗೆ ಹತ್ತು ಸದಸ್ಯರು ಮನೆಯಿಂದ ಹೊರಗೆ ಹೋಗಿದ್ದಾರೆ.

  English summary
  Bigg Boss Kannada season 09 grand finale on December 31. Sudeep will host the finale show.
  Saturday, December 24, 2022, 17:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X