»   » 'ಕಳಪೆ' ಜಗಳ: ಶ್ರುತಿ-ದಿವಾಕರ್ ಇಬ್ಬರಿಗೂ ಸಂಕಷ್ಟ ತಂದಿಟ್ಟ ಬಿಗ್ ಬಾಸ್ ಶಿಕ್ಷೆ.!

'ಕಳಪೆ' ಜಗಳ: ಶ್ರುತಿ-ದಿವಾಕರ್ ಇಬ್ಬರಿಗೂ ಸಂಕಷ್ಟ ತಂದಿಟ್ಟ ಬಿಗ್ ಬಾಸ್ ಶಿಕ್ಷೆ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ದಿವಾಕರ್ ಹಾಗು ಶ್ರುತಿ ಪ್ರಕಾಶ್ ಇಬ್ಬರಿಗೂ ಶಿಕ್ಷೆ | Filmibeat Kannada

ಬಿಗ್ ಬಾಸ್ ನಿಯಮವನ್ನ ಉಲ್ಲಂಘಿಸಿದ ಕಾರಣಕ್ಕೆ ಮನೆಯ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಮತ್ತು ಸ್ಪರ್ಧಿ ದಿವಾಕರ್ ಗೆ ಬಿಗ್ ಬಾಸ್ ಶಿಕ್ಷೆ ನೀಡಿದ್ದು, ಇದು ಈ ಇಬ್ಬರಿಗೂ ಅಪಾಯ ತಂದಿದೆ.

ಈ ವಾರ ದಿವಾಕರ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಕ್ಯಾಪ್ಟನ್ ಶ್ರುತಿ, ದಿವಾಕರ್ ಗೆ 'ಕಳಪೆ' ಬೋರ್ಡ್ ನೀಡಿದರು. ಆದ್ರೆ, ಕ್ಯಾಪ್ಟನ್ ನೀಡಿದ ಬೋರ್ಡ್ ನ್ನ ದಿವಾಕರ್ ತಿರಸ್ಕರಿಸಿದ್ದು, ಬೋರ್ಡ್ ಹಾಕಿಕೊಳ್ಳದೆ ಬಿಗ್ ಬಾಸ್ ನಿಮಯ ಉಲ್ಲಂಘಿಸಿದರು.

ಅದಕ್ಕಾಗಿ ಕ್ಯಾಪ್ಟನ್ ಮತ್ತು ಸ್ಪರ್ಧಿ ಇಬ್ಬರನ್ನ ಶಿಕ್ಷಿಸಲಾಗಿದ್ದು, ಇವರಿಬ್ಬರ ಹಾದಿಗೂ ಈ ಶಿಕ್ಷೆ ಅಪಾಯವಾಗಿದೆ. ಅಷ್ಟಕ್ಕೂ, ಬಿಗ್ ಬಾಸ್ ಕೊಟ್ಟ ಶಿಕ್ಷೆ ಏನು?

ಶಿಕ್ಷೆಯ ಸೂಚನೆ ಕೊಟ್ಟಿದ್ದ ಬಿಗ್ ಬಾಸ್

ದಿವಾಕರ್ ಅವರು ಕ್ಯಾಪ್ಟನ್ ನೀಡಿದ ಕಳಪೆ ಬೋರ್ಡ್ ಹಾಕಿಕೊಳ್ಳುವಂತೆ ಮನೆಯ ಕ್ಯಾಪ್ಟನ್ ಶ್ರುತಿ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಶಿಕ್ಷೆ ನೀಡಲಾಗುವುದು ಎಂದು ಸೂಚನೆ ಕೊಟ್ಟಿದ್ದರು.

ದಿವಾಕರ್ ಗೆ 'ಕಳಪೆ ಬೋರ್ಡ್' ಕೊಟ್ಟಿದ್ದಕ್ಕೆ ಮನೆಯಲ್ಲಿ ಅಲ್ಲೋಲ-ಕಲ್ಲೋಲ.!

ದಿವಾಕರ್ ಬೋರ್ಡ್ ಹಾಕಿಕೊಳ್ಳಲಿಲ್ಲ

ಕ್ಯಾಪ್ಟನ್ ಶ್ರುತಿ ಹಾಗೂ ಮನೆಯ ಹಲವು ಸದಸ್ಯರು ಸೇರಿ, ದಿವಾಕರ್ ಅವರಿಗೆ ಬೋರ್ಡ್ ಹಾಕಿಕೊಳ್ಳುವಂತೆ ಮನವಿ ಮಾಡಿದರು ದಿವಾಕರ್ ಮಾತ್ರ, ''ನಾನು ಕೆಟ್ಟ ಪ್ರದರ್ಶನ ನೀಡಲಿಲ್ಲ'' ಎಂದು ಬೋರ್ಡ್ ಹಾಕಿಕೊಳ್ಳಲೇ ಇಲ್ಲ.

ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ನಾಮಿನೇಷನ್ ಶಿಕ್ಷೆ

ಕ್ಯಾಪ್ಟನ್ ಶ್ರುತಿ ಅವರು ದಿವಾಕರ್ ಅವರು 'ಕಳಪೆ' ಬೋರ್ಡ್ ಹಾಕಿಕೊಳ್ಳುವಂತೆ ನೋಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಶ್ರುತಿ ಅವರು ಮುಂದಿನ ವಾರ ಮನೆಯಿಂದ ಹೊರಹೋಗಲು ನೇರವಾಗಿ ನಾಮಿನೇಟ್ ಮಾಡಲಾಯಿತು.

ನಿಯಮ ಉಲ್ಲಂಘಸಿದ್ದಕ್ಕೆ ದಿವಾಕರ್ ಗೂ ದಂಡ

ಇನ್ನು ಬಿಗ್ ಬಾಸ್ ನಿಯಮವನ್ನ ಪರೋಕ್ಷವಾಗಿ ಉಲ್ಲಂಘಸಿದ್ದಕ್ಕೆ ದಿವಾಕರ್ ಅವರನ್ನ ಕೂಡ ನೇರವಾಗಿ ನಾಮಿನೇಟ್ ಮಾಡಲಾಯಿತು.

ವೀಕ್ಷಕರು ಎಷ್ಟು ಸೂಕ್ಷ್ಮವಾಗಿ 'ಬಿಗ್ ಬಾಸ್' ನೋಡ್ತಾರೆ ಅನ್ನೋಕೆ ಈ ಕಾಮೆಂಟ್ ಸಾಕ್ಷಿ.!

ಇಬ್ಬರು ನೇರ ನಾಮಿನೇಟ್

ಪ್ರತಿವಾರ ಸೋಮವಾರ ನಾಮಿನೇಷನ್ ಪ್ರಕ್ರಿಯೆ ನಡಯಿತ್ತೆ. ಆದ್ರೆ, ಈ ವಾರದಲ್ಲೇ ಶ್ರುತಿ ಮತ್ತು ದಿವಾಕರ್ ಇಬ್ಬರು ಬಿಗ್ ಬಾಸ್ ಯಿಂದ ನೇರವಾಗಿ ನಾಮಿನೇಟ್ ಆಗಿದ್ದಾರೆ.

English summary
Bigg Boss Kannada 5: Bigg Boss Punished Diwakar and Captain Shruti Prakash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada