»   » ಬಿಗ್ ಬಾಸ್ 2 ಆರಂಭ: ಶೋನಲ್ಲಿರುವ 14 ಸ್ಪರ್ಧಿಗಳು

ಬಿಗ್ ಬಾಸ್ 2 ಆರಂಭ: ಶೋನಲ್ಲಿರುವ 14 ಸ್ಪರ್ಧಿಗಳು

Posted By:
Subscribe to Filmibeat Kannada

ಬಹು ನಿರೀಕ್ಷೆಯ ಬಿಗ್ ಬಾಸ್ ಸೀಸಸ್ 2 ರಿಯಾಲಿಟಿ ಶೋಗೆ ಭಾನುವಾರ (ಜೂ 29) ಚಾಲನೆ ದೊರಕಿದೆ. ಕಿಚ್ಚ ಸುದೀಪ್ ನಿರೂಪಿಸುತ್ತಿರುವ ಬಿಗ್ ಬಾಸ್ 2 ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಬಿಗ್ ಬಾಸ್ 2, 'ತಮಾಷೆನೇ ಅಲ್ಲ' ಎನ್ನುವ ಟ್ಯಾಗ್ ಲೈನ್ ನಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋನಲ್ಲಿ ಒಟ್ಟು 14 ಸ್ಪರ್ಧಿಗಳು ಕಣದಲ್ಲಿದ್ದು, ವಿಜೇತರಿಗೆ ಸಿಗುವ ಬಹುಮಾನದ ಮೊತ್ತ ಐವತ್ತು ಲಕ್ಷ.

ಮಾಣಿಕ್ಯ ಚಿತ್ರದ ಹಾಡಿನೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖವಾಡ ಧರಿಸಿ ಐದು ಸಹ ಕಲಾವಿದರೊಂದಿಗೆ ವೇದಿಕೆಗೆ ಆಗಮಿಸಿದ ಕಿಚ್ಚ ಸುದೀಪ್ 'ನಾನು ಬಂದಿರುವುದು ನಿಮಗೋಸ್ಕರ' ಎಂದು ರಿಯಾಲಿಟಿ ಶೋಗೆ ಅದ್ದೂರಿ ಚಾಲನೆ ನೀಡಿದರು.

ನಂತರ ವೀಕ್ಷಕರಿಗೆ ಬಿಗ್ ಬಾಸ್ ಮನೆಯ ಬಗ್ಗೆ ಸುದೀಪ್ ಪರಿಚಯಿಸಿದರು. ಸೀಸನ್ 1ರಲ್ಲಿನ ಬಿಗ್ ಬಾಸ್ ಮನೆ ಸೆಟ್ ಗಿಂತ ಹೆಚ್ಚೇನೂ ವಿಭಿನ್ನತೆ ಸೀಸನ್ 2ನಲ್ಲಿ ಇಲ್ಲ. ಕನ್ಫೆಷನ್ ರೂಂನಲ್ಲಿ (confession room) ಮಾತ್ರ ಬದಲಾವಣೆಯಾಗಿದೆ.

ಬಿಗ್ ಬಾಸ್ 2 ನಲ್ಲಿರುವ ಸ್ಪರ್ಧಿಗಳ ಪಟ್ಟಿ ಸ್ಲೈಡಿನಲ್ಲಿ..

ಬಿಗ್ ಬಾಸ್ 2 ಸ್ಪರ್ಧಿಗಳ ಪಟ್ಟಿ

ಹೆಸರಾಂತ ಟಿವಿ ನಿರೂಪಕ, ನಟ 'ಅಕುಲ್ ಬಾಲಾಜಿ' ಹದಿನಾಲ್ಕು ಸ್ಪರ್ಧಿಗಳಲ್ಲೊಬ್ಬರು.

ಖ್ಯಾತ ನಟಿ, ರೂಪದರ್ಶಿ 'ದೀಪಿಕಾ ಕಾಮಯ್ಯ' ಶೋನಲ್ಲಿರುವ ಮತ್ತೊಬ್ಬರು ಸ್ಪರ್ಧಿ. ದರ್ಶನ್ ಜೊತೆ ಚಿಂಗಾರಿ ಚಿತ್ರದಲ್ಲಿ ಈಕೆ ನಾಯಕಿಯಾಗಿ ನಟಿಸಿದ್ದರು.

ನಟ, ಸಂಗೀತಗಾರ 'ಲಯೇಂದ್ರ' ಶೋನಲ್ಲಿ ಮೂರನೇ ಅಭ್ಯರ್ಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರು ಸಾಧು ಕೋಕಿಲ ಅವರ ಸಹೋದರ.

ಬಿಗ್ ಬಾಸ್ ಸ್ಪರ್ಧಿಗಳು ಯಾರು?

ನಟಿ, ಕೊಡಗಿನ ಬೆಡಗಿ 'ಹರ್ಷಿಕಾ ಪೂಣಚ್ಚ'ರಿಯಾಲಿಟಿ ಶೋನಲ್ಲಿನ ಮತ್ತೊಬ್ಬ ಸ್ಪರ್ಧಿ.

ನಟ ಮತ್ತು ಈ ಹಿಂದೆ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ 'ಸಂತೋಷ್' ಶೋನ ಮತ್ತೊಬ್ಬರು ಸ್ಪರ್ಧಿ. ನೂರು ಜನ್ಮಕು ಚಿತ್ರದ ಇವರು ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು.

ನಟಿ, ಮಂಗಳೂರು ಮೂಲದ 'ನೀತೂ' ಶೋಗೆ ಎಂಟ್ರಿ ಕೊಟ್ಟ ಆರನೇ ಸ್ಪರ್ಧಿ. ಜೋಕ್ ಫಾಲ್ಸ್ ಚಿತ್ರದ ಮೂಲಕ ಇವರು ಬಣ್ಣದಲೋಕಕ್ಕೆ ಅಡಿಯಿಟ್ಟರು.

ಬಿಗ್ ಬಾಸ್ ಮುಂದಿನ ಸ್ಪರ್ಧಿಗಳ ಪಟ್ಟಿ

ನಟಿ, ಟಿವಿ ನಿರೂಪಕಿ 'ಅನಿತಾ ಭಟ್ ' ಏಳನೇ ಸ್ಪರ್ಧೆಯಾಗಿ ಎಂಟ್ರಿ ಕೊಟ್ಟಿದ್ದಾರೆ. ಶಿವಮೊಗ್ಗ ಮೂಲದ ಅನಿತಾ ನಟಿಸಿದ ಇತ್ತೀಚಿನ ಚಿತ್ರವೆಂದರೆ ಯೋಗರಾಜ್ ಭಟ್ ನಿರ್ದೇಶನದ ಪರಪಂಚ.

ಖ್ಯಾತ ರೆಡಿಯೋ ನಿರೂಪಕ ಆರ್ ಜೆ 'ರೋಹಿತ್' ಶೋನಲ್ಲಿರುವ ಮತ್ತೊಬ್ಬ ಸ್ಪರ್ಧಿ.

ಖ್ಯಾತ ನಟಿ, ಧಾರವಾಹಿಯಲ್ಲಿ ಜನಪ್ರಿಯತೆ ಪಡೆದ 'ಶ್ವೇತಾ ಚೆಂಗಪ್ಪ' ಶೋನಲ್ಲಿರುವ ಮತ್ತೊಬ್ಬರು ಸ್ಪರ್ಧಿ.

ಬಿಗ್ ಬಾಸಿನ ಮುಂದಿನ ಮೂರು ಸ್ಪರ್ಧಿಗಳು

ನಟ, ಖ್ಯಾತ ಟಿವಿ ನಿರೂಪಕ 'ಸೃಜನ್ ಲೋಕೇಶ್' ರಿಯಾಲಿಟಿ ಶೋನ ಮತ್ತೊಬ್ಬ ಸ್ಪರ್ಧಿ.

ಲವ್ ಸ್ಟೋರಿ ಖ್ಯಾತಿಯ 'ಮಯೂರ್ ಪಟೇಲ್' ಶೋನ ಮತ್ತೊಬ್ಬ ಸ್ಪರ್ಧಿ. ಇವರು ಮದನ್ ಪಟೇಲ್ ಅವರ ಪುತ್ರ.

ನಟಿ ಮತ್ತು ಟಿವಿ ನರೂಪಕಿ 'ಅನುಪಮ' ಶೋನ ಮತ್ತೊಬ್ಬ ಸ್ಪರ್ಧಿ.

ಬಿಗ್ ಬಾಸಿನ ಕೊನೆಯ ಎರಡು ಸ್ಪರ್ಧಿಗಳು

ಖ್ಯಾತ ನಟ ಬಿಡ್ಡ ಖ್ಯಾತಿಯ 'ಆದಿ ಲೋಕೇಶ್'ಶೋನಲ್ಲಿರುವ ಮತ್ತೊಬ್ಬ ಸ್ಪರ್ಧಿ. ಇವರ ಸಹೋದರಿ ಪವಿತ್ರಾ ಲೋಕೇಶ್.

ಕೇರಳ ಮೂಲದ 'ಶಕೀಲಾ' ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿರುವ ಕೊನೆಯ ಸ್ಪರ್ಧಿ.

ಅಸಲಿ ಆಟ ಈಗ ಶುರುವಾಗಿದೆ.

English summary
Bigg Boss Season 2 reality show started in Suvarna TV. Here is the final 14 contestants list.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada