»   » ವೀಕ್ಷಕರಿಗೆ ಮೋಡಿ ಮಾಡಲು ಕಿರುತೆರೆಗೆ ಕಾಲಿಟ್ಟ ನಟಿ ಶ್ರುತಿ

ವೀಕ್ಷಕರಿಗೆ ಮೋಡಿ ಮಾಡಲು ಕಿರುತೆರೆಗೆ ಕಾಲಿಟ್ಟ ನಟಿ ಶ್ರುತಿ

Posted By:
Subscribe to Filmibeat Kannada

ಬಿಗ್ ಬಾಸ್ ಸೀಸನ್ 3 ರಲ್ಲಿ ವಿನ್ನರ್ ಆಗಿ ಕಪ್ ಎತ್ತಿಕೊಂಡ ನಟಿ ಶ್ರುತಿ ಅವರು ಎಲ್ಲಿ ಹೋಗಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ದೊರೆತಿದೆ. ಹೌದು 'ಅಳುಮುಂಜಿ' ಅಂತಾನೇ ಖ್ಯಾತಿ ಪಡೆದಿದ್ದ ನಟಿ ಶ್ರುತಿ ಅವರು ಇದೀಗ ಕನ್ನಡ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಹಾಗಿದ್ರೆ ಅವರು ಧಾರಾವಾಹಿಯಲ್ಲಿ ಪಾತ್ರ ಮಾಡುತ್ತಿದ್ದಾರಾ? ಅಂತ ನೀವು ಪ್ರಶ್ನೆ ಮಾಡಬಹುದು. ಆದರೆ ಅವರು ನಟಿಸುತ್ತಿಲ್ಲ, ಬದ್ಲಾಗಿ ಉದಯ ಟಿವಿಯಲ್ಲಿ ಆರಂಭವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಮಹಾಸತಿ'ಯಲ್ಲಿ ನಿರೂಪಣೆ ಮಾಡಲಿದ್ದಾರೆ.[ನಟಿ ಶ್ರುತಿ ಮುಡಿಗೆ 'ಬಿಗ್ ಬಾಸ್' ಗೆಲುವಿನ ಕಿರೀಟ]

'Bigg Boss' Winner Actress Shruthi will be seen as Anchor in 'Mahasati' serial

ಈ ಮೊದಲು ಲಕ್ಕಿ ಸ್ಟಾರ್ ನಟಿ ರಮ್ಯಾ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಪಾತ್ರಗಳನ್ನು ಪರಿಚಯ ಮಾಡಿ ಕೊಟ್ಟಿದ್ದರು. ಸುಮಾರು 5-6 ಕಂತುಗಳಲ್ಲಿ ನಾಯಕ ಜೆ.ಕೆ ಮತ್ತು ನಾಯಕಿ ಅಶ್ವಿನಿ ಸೇರಿದಂತೆ ಹಲವು ಪಾತ್ರವರ್ಗದ ಪರಿಚಯ ಮಾಡಿಕೊಟ್ಟಿದ್ದರು.

ಇದೀಗ ಆ ಸಾಲಿಗೆ ಬಿಗ್ ಬಾಸ್ ಖ್ಯಾತಿಯ ನಟಿ ಶ್ರುತಿ ಅವರು ಸೇರ್ಪಡೆಗೊಳ್ಳುತ್ತಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಧಾರವಾಡದಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು 'ಮಹಾಸತಿ' ಧಾರಾವಾಹಿಗೆ ನಿರ್ದೇಶಕ ಸುನೀಲ್ ಪುರಾಣಿಕ್ ಅವರು ಕಥೆ ಹೆಣೆದಿದ್ದಾರೆ.[ಉತ್ತರ ಕರ್ನಾಟಕದ ಸೊಗಡಿನ ಹೊಸ ಧಾರಾವಾಹಿ ನಿಮ್ಮ 'ಉದಯ'ದಲ್ಲಿ]

'Bigg Boss' Winner Actress Shruthi will be seen as Anchor in 'Mahasati' serial

ಜೂನ್ 27 ರಿಂದ 'ಮಹಾಸತಿ' ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗಲಿದ್ದು, ಮೊದಲ 5 ದಿನದಲ್ಲಿ ಪ್ರತೀ ಕಂತುಗಳಲ್ಲಿ ನಟಿ ಶ್ರುತಿ ಅವರು ಧಾರಾವಾಹಿಯ ವಿವಿಧ ಪಾತ್ರಗಳ ಪರಿಚಯ ಮಾಡಿಕೊಡಲಿದ್ದಾರೆ. ಒಟ್ನಲ್ಲಿ ನಟಿ ಶ್ರುತಿ ಅವರು ಸ್ವಲ್ಪ ದಿನಗಳ ಮಟ್ಟಿಗೆ ನಿರೂಪಕಿ ಅಂದ್ರೂ ತಪ್ಪಾಗ್ಲಿಕ್ಕಿಲ್ಲ.['ಬಿಗ್ ಬಾಸ್' ನಿಂದ ನಟಿ ಶ್ರುತಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ?]

'Bigg Boss' Winner Actress Shruthi will be seen as Anchor in 'Mahasati' serial

ಒಟ್ನಲ್ಲಿ ಕಳೆದು ಹೋಗಿದ್ದ ನಟಿ ಶ್ರುತಿ ಅವರು ತೆರೆಯ ಮೇಲೆ ಬರುತ್ತಾರೋ ಅಥವಾ ತೆರೆಯ ಹಿಂದೆ ನಿಂತು ವೀಕ್ಷಕರಿಗೆ ಬರೀ ತಮ್ಮ ಧ್ವನಿಯಿಂದ ಮನರಂಜನೆ ನೀಡುತ್ತಾರ ಅಂತ ಕಾದು ನೋಡಬೇಕಿದೆ.

    English summary
    'Bigg Boss Kannada 3' Winner Kannada Actress Shruthi will be seen as Anchor in 'Mahasati' serial. Kannada Entertainment Channel Uday TV has come up with a new serial called 'Mahasati' which will go on air from June 27th.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada