»   » ಉದಯ ಟಿವಿ ಗೇಮ್ ಶೋ ಬಿಂದಾಸ್ ಚಾಲೆಂಜ್ಗೆ ನೂರರ ಸಂಭ್ರಮ

ಉದಯ ಟಿವಿ ಗೇಮ್ ಶೋ ಬಿಂದಾಸ್ ಚಾಲೆಂಜ್ಗೆ ನೂರರ ಸಂಭ್ರಮ

Posted By:
Subscribe to Filmibeat Kannada

ಕನ್ನಡ ಚಾನಲ್‌ನಲ್ಲೇ ವಿನೂತನ ನಾಲೆಡ್ಜ್ ಟೀವಿ ಗೇಮ್‌ಶೋ. ಬಿಂದಾಸ್ ಚಾಲೆಂಜ್, ಬಿಂದಾಸ್ ಮಂದಿಯ ಬಿಂದಾಸ್ ಗೇಮ್. ಮನರಂಜನೆ ಜತೆಗೆ ಬಹುಮಾನವೂ ಗ್ಯಾರಂಟಿ! ಗೆಲ್ಲೋದು ಗ್ಯಾರಂಟಿ ಘೋಷವಾಕ್ಯದೊಂದಿಗೆ ಉದಯ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ರಿಂದ 11ರವರೆಗೆ ಪ್ರಸಾರವಾಗುತ್ತಿರುವ ಬಿಂದಾಸ್ ಚಾಲೆಂಜ್ ಗೇಮ್ ಶೋಗೆ ಈಗ ನೂರನೇ ಎಪಿಸೋಡ್ ಸಂಭ್ರಮ.

ಬೇರೆ ಗೇಮ್‌ಶೋಗಳಂತೆ ಇಲ್ಲಿ ಟೀವಿ ಸ್ಟುಡಿಯೋಕ್ಕೆ ಹೋಗಬೇಕಿಲ್ಲ. ಮನೇಲಿ ಕೂತು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಬಹುದು. ಬಿಂದಾಸ್ ಆಗಿ ಮನೆಯಿಂದಲೇ ಪಾಯಿಂಟ್‌ಗಳನ್ನು ಗಳಿಸುತ್ತಾ ಬಂಪರ್ ಬಹುಮಾನವನ್ನೂ ನಿಮ್ಮದಾಗಿಸಿಕೊಳ್ಳಬಹುದು.

Bindaas Challenge - Reality show on Udaya TV scores century

ಆಡೋದು ಹೇಗೆ?
ತುಂಬಾ ಸಿಂಪಲ್ ಗೇಮ್. ಪ್ರತಿಯೊಂದು ಶೋನಲ್ಲೂ ಆಂಕರ್ ಪ್ರಶ್ನೆ ಕೇಳುತ್ತಾರೆ. ಕನ್ನಡ ಸರಿಯಾಗಿ ಓದೋಕೆ ಬರದಿರೋರಿಗೆ ಅರ್ಥವಾಗಲಿ ಎಂದು ಇಂಗ್ಲಿಷ್‌ನಲ್ಲೂ ಪ್ರಶ್ನೆ ಕೇಳ್ತಾರೆ. ಪ್ರತಿಯೊಂದು ಪ್ರಶ್ನೆ ಮುಂದೆ ಮೂರು ಆಯ್ಕೆಗಳಿರುತ್ತವೆ. [ಪ್ಯಾಟೆ ಹುಡ್ಗೀರ್ ಲಿಮ್ಕಾ ದಾಖಲೆ]

ಗೆಲ್ಲೋದು ಗ್ಯಾರಂಟಿ
ಸರಿ ಉತ್ತರ ಕೊಟ್ಟ ಮೊದಲಿಗರಿಗೆ ಸ್ಪಾಟ್‌ನಲ್ಲೇ ಕೊಡುಗೆ ಇರುತ್ತದೆ. ಹಾಗಂತ ಬೇರೆಯವರು ಬೇಸರ ಪಡಬೇಕಿಲ್ಲ. ಸರಿ ಉತ್ತರ ಕೊಟ್ಟ ಪ್ರತಿಯೊಬ್ಬರಿಗೂ ಅವರ ಖಾತೆಗೆ ಹತ್ತು ಸಾವಿರ ಬಿಂದಾಸ್ ಪಾಯಿಂಟ್ ಸಿಗುತ್ತದೆ. ಅತಿ ಹೆಚ್ಚು ಬಿಂದಾಸ್ ಪಾಯಿಂಟ್ ಪಡೆದವರಿಗೆ ಟಾಟಾ ನ್ಯಾನೋ ಕಾರು ಗೆಲ್ಲುವ ಅವಕಾಶವೂ ಇದೆ.

ಬಿಂದಾಸ್ ಬಂಪರ್ ಬಹುಮಾನ ನೀಡಿಕೆಗೂ ಕಾಲಮಿತಿ ಇದೆ. ಒಂದು ವಾರ, ಒಂದು ತಿಂಗಳು, ಮೂರು ತಿಂಗಳಲ್ಲಿ ನೀವು ಎಷ್ಟು ಪಾಯಿಂಟ್ ಗಳಿಸಿದ್ದೀರಿ ಎನ್ನುವುದರ ಮೇಲೂ ಚಿನ್ನ, ಬೆಳ್ಳಿ, ರೇಷ್ಮೆಸೀರೆ ಮತ್ತಿತರೆ ಬಹುಮಾನಗಳನ್ನು ಗೆಲ್ಲಬಹುದು. ಮೂರು ತಿಂಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ನ್ಯಾನೋ ಕಾರು! ಗೇಮ್‌ಶೋನಲ್ಲಿ ಭಾಗವಹಿಸಿ ಸರಿ ಉತ್ತರ ಕಳುಹಿಸಿದವರಿಗೆ ಸಮಾಧಾನಕರ ಬಹುಮಾನವಾಗಿ ಶಾಪಿಂಗ್ ಗಿಫ್ಟ್ ವೋಚರ್. ಅಂದಮೇಲೆ ಗೆಲ್ಲೋದು ಗ್ಯಾರಂಟಿ!

Bindaas Challenge - Reality show on Udaya TV scores century

ನೂರರ ಸಂಭ್ರಮ

ನಗರದ ಉಲ್ಲಾಳದ ಶಿವಧ್ವಜ್ ಸ್ಟುಡಿಯೋ ಆವರಣದಲ್ಲಿ ಇತ್ತೀಚೆಗೆ ಉದಯ ಟಿವಿಯ ಬಿಂದಾಸ್ ಚಾಲೆಂಜ್ ನೂರನೇ ಸಂಚಿಕೆಯ ಸಂಭ್ರಮ. ಕಾರ್ಯಕ್ರಮಕ್ಕೆ ಚಾಲನೆ ನೀಡಿದವರು ಹಿರಿಯ ಗಾಂಧೀವಾದಿ ಡಾ.ಹೊ.ಶ್ರೀನಿವಾಸಯ್ಯ. ಸಮಾರಂಭದಲ್ಲಿ ಕಣ್ವ ಸಂಸ್ಥೆಯ ಮುಖ್ಯಸ್ಥ ಎನ್.ನಂಜುಂಡಯ್ಯ, ವೇದಿಕ್ ಟ್ರೀಟ್ ಸಂಸ್ಥಾಪಕರಾದ ಡಾ.ಸಂಜೀವ್, ನಟ ಅನಿರುದ್ಧ್, ಸೀತಾರಾಮ ಕಾರಂತ್, ನಟಿ ಸಿಂಧು ಲೋಕನಾಥ್, ಸುರೇಶ್ ರೈ, ಭವ್ಯಶ್ರೀ ರೈ, ನವೀನ್ ಕೃಷ್ಣ, ಕಾರ್ಯಕಾರೀ ನಿರ್ಮಾಪಕ ಚಂದ್ರಶೇಖರ್ ಆರ್ ಪದ್ಮಶಾಲಿ ಸೇರಿದಂತೆ ಹಿರಿತೆರೆ ಹಾಗೂ ಕಿರುತೆರೆ ಕಲಾವಿದರೂ ಭಾಗವಹಿಸಿದ್ದರು.

Bindaas Challenge - Reality show on Udaya TV scores century

60 ಲಕ್ಷ ಜನರ ವೀಕ್ಷಣೆ
ಬ್ರೈನ್ ಶೇರ್ ಕ್ರಿಯೇಶನ್ ನಿರ್ದೇಶಕ ಜಿಕೆ ಮಧುಸೂದನ್, ಹೇಳುವಂತೆ ಟ್ಯಾಮ್ ವರದಿಯಂತೆ 60 ಲಕ್ಷ ಜನ ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಇದೊಂದು ನಾಲೆಜ್ಡ್ ಗೇಮ್ ಶೋ ಆಗಿದ್ದು, ವೀಕ್ಷಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿವೆ. ನಗರ, ಗ್ರಾಮೀಣ ಹೀಗೆ ಯಾವುದೇ ಭೇದವಿಲ್ಲದೆ, ಮಹಿಳೆಯರು, ಪುರುಷರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಯುವಜನರನ್ನು ಗುರಿಯಾಗಿರಿಸಿಕೊಂಡು ಈ ಕಾರ್ಯಕ್ರಮ ನಡೆಸುತ್ತಿದ್ದೇವೆ.

ಸರಿಯುತ್ತರ ಕಳುಹಿಸಿದ ಒಬ್ಬ ಅದೃಷ್ಟ ಶಾಲಿಗೆ ಬಹುಮಾನ ಹಾಗೂ ಉತ್ತರಿಸಿದ ಪ್ರತಿಯೊಬ್ಬರಿಗೂ ಬಿಂದಾಸ್ ಪಾಯಿಂಟ್ ನೀಡಲಾಗುತ್ತದೆ. ಯಾರು ಅತಿ ಹೆಚ್ಚು ಪಾಯಿಂಟ್ ಗಳಿಸುತ್ತಾರೋ ಚಿನ್ನ, ಕಾರೂ ಸೇರಿದಂತೆ ವಿವಿಧ ಬಹುಮಾನಗಳನ್ನು ಗೆಲ್ಲೋ ಅವಕಾಶ ನೀಡಲಾಗಿದೆ. ಈಗಾಗಲೇ ಲಕ್ಷಾಂತರ ವೀಕ್ಷಕರು ಬಹುಮಾನಗಳನ್ನು ಪಡೆದಿದ್ದು, ವಿಶೇಷ ಸಂಚಿಕೆ ಜನವರಿ 2 ರಂದು ರಾತ್ರಿ 10.30ಕ್ಕೆ ಪ್ರಸಾರ ಕಾಣಲಿದೆ ಎನ್ನುತ್ತಾರೆ.

Bindaas Challenge - Reality show on Udaya TV scores century

ಬಿಂದಾಸ್ ನಾಲೆಡ್ಜ್
ಬಿಂದಾಸ್ ಗೇಮ್‌ಶೋ ಜಸ್ಟ್ ಮನರಂಜನೆಗಾಗಿ ಅಲ್ಲ. ನಿಮ್ಮ ಮನೆಯವರೊಂದಿಗೆ ಕೂತು ಎಂಜಾಯ್ ಮಾಡ್ತಾನೇ ಜ್ಞಾನವನ್ನೂ ಸಂಪಾದಿಸಬಹುದು. ಪ್ರಶ್ನೆಗೆ ಸರಿಯಾದ ಉತ್ತರ ಡಿಸ್‌ಪ್ಲೇ ಮಾಡುವ ಮುನ್ನ, ಪ್ರಶ್ನೆಗೆ ಸಂಬಂಧಿಸಿದ ವಿಡಿಯೋ ಕ್ಲಿಪ್ ತೋರಿಸಲಾಗುವುದು. ಅದರಲ್ಲಿ ಪ್ರಶ್ನೆಗೆ ಸಂಬಂಧ ಪಟ್ಟ ಮಾಹಿತಿಯೂ ಲಭ್ಯ. ಉದಾಹರಣೆಗೆ 1906ರಿಂದ 1947ರವರೆಗೆ ರಾಷ್ಟ್ರಧ್ವಜ ಬೆಳೆದು ಬಂದ ಬಗೆ. ಸಂಕ್ಷಿಪ್ತವಾಗಿ ಮನ ನಾಟುವಂತೆ ಬಿಡಿಸಿ ಹೇಳಲಾಗುವುದು. ಸಾಮಾನ್ಯ ಜ್ಞಾನ ಹೆಚ್ಚಳದೊಂದಿಗೆ ಬಿಂದಾಸ್ ನಗೆ ನಿಮ್ಮದೇ ತಾನೇ?
English summary
Bindaas Challenge - Kannada reality show on Udaya TV has crossed 100 episodes successfully. This entertaining knowledge game show is not only imparting knowledge to the viewers but also making them win fabulous prizes, including Tata Nano car.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada