»   »  ಚಂದನದಲ್ಲಿ ಅಂಧರಿಂದ ವಾರ್ತಾವಾಚನ

ಚಂದನದಲ್ಲಿ ಅಂಧರಿಂದ ವಾರ್ತಾವಾಚನ

Subscribe to Filmibeat Kannada
Disables to read news in DD Chandana
ಬೆಂಗಳೂರು, ಜ. 4 : ತಮಗೆ ಅಕ್ಷರದ ಬೆಳಕು ತೋರಿಸಿದ ಚೇತನಕ್ಕೆ ವಾರ್ತೆ ಓದುವ ಮೂಲಕ ದೃಷ್ಟಿ ವಿಕಲಚೇತನರು ಭಾನುವಾರ ಗೌರವ ಸಲ್ಲಿಸಲಿದ್ದಾರೆ.

ವಾರ್ತೆ ಓದಿ ಇತಿಹಾಸ ಸೃಷ್ಟಿಸಲಿದ್ದು, ದೂರದರ್ಶನದ ಚಂದನ ವಾಹಿನಿ ಇಂಥ ಕಾರ್ಯಕ್ರಮ ರೂಪಿಸಿದ ಮೊದಲ ವಾಹಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬ್ರೈಲ್ ಲಿಪಿ ಕಂಡು ಹಿಡಿದ ಲೂಯಿ ಬ್ರೈಲ್ ಜನ್ಮದಿನದ ಅಂಗವಾಗಿ ಜನವರಿ 4 ರಂದು ಚಂದನ ವಾಹಿನಿಯಲ್ಲಿ ಬೆಳಗ್ಗೆ 7.45 ರಿಂದ ರಾತ್ರಿ 9ರ ವರೆಗೆ ಪ್ರಸಾರವಾಗುವ ಪ್ರತಿ ವಾರ್ತೆಯಲ್ಲಿ ಒಂದು ಸುದ್ದಿಯನ್ನು ದೃಷ್ಟಿ ವಿಕಲಚೇತನರು ಓದಲಿದ್ದಾರೆ.

ದೇವನಹಳ್ಳಿಯ ಮಂಜುನಾಥ್, ಚಾಮರಾಜನಗರದ ಶ್ರೀನಿವಾಸಮೂರ್ತಿ ಹಾಗೂ ಅಶೋಕ್ ಬೆಳಗ್ಗೆ 7.45, 11, ಮಧ್ಯಾಹ್ನ 3 ಸಂಜೆ ಮತ್ತು 7 ಗಂಟೆ ಹಾಗೂ ರಾತ್ರಿ 9 ರ ವಾರ್ತೆಯಲ್ಲಿ ಸುದ್ದಿ ಓದಲಿದ್ದಾರೆ.

ಮಿತ್ರ ಜ್ಯೋತಿ ಸ್ವಯಂ ಸೇವಾ ಸಂಘಟನೆಯ ಮುಖ್ಯಸ್ಥ ಮಧು ಸಿಂಘಾಲ್ ಅವರ ಕಾರ್ಯದಿಂದ ಉತ್ತೇಜಿತರಾಗಿ ದೂರದರ್ಶನ ನಿರ್ದೇಶಕ ಮಹೇಶ್ ಜೋಶಿ, ವಿಕಲಚೇತರ ಪ್ರತಿಭೆ ಹೊರಬರಲು ವೇದಿಕೆ ಅಗತ್ಯ ಎಂಬುದನ್ನು ಮನಗಾಣಿಸಲು ಮುಂದಾಗಿದ್ದಾರೆ. ವಿಕಲಚೇತನರು ಹೆಚ್ಚು ಬುದ್ಧಿಮತ್ತೆ ಹೊಂದಿರುತ್ತಾರೆ. ಸಮಾಜ ಅವರೊಟ್ಟಿಗಿದೆ ಎನ್ನುವ ಸಂದೇಶ ನೀಡುವುದು ಇದರ ಉದ್ದೇಶ. ವಿಶ್ವದ ಯಾವುದೇ ವಾಹಿನಿ ದೃಷ್ಟಿ ವಿಕಲಚೇತನರಿಂದ ಸುದ್ದಿ ಓದಿಸಿಲ್ಲ. ಲೂಯಿ ಬ್ರೈಲ್ ರ 200ನೇ ವರ್ಷಾಚರಣೆಗೆ ಇದಕ್ಕಿಂತ ಉತ್ತಮ ಕೊಡುಗೆ ಏನಿದೆ ಎನ್ನುತ್ತಾರೆ ಜೋಶಿ.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada