ಕಿರುತೆರೆಯಲ್ಲಿ ಮೊದಲಬಾರಿಗೆ ದರ್ಶನ್ ಅಭಿನಯದ 'ಸಾರಥಿ'

ಉದಯ ವಾಹಿನಿ ಬುಧವಾರ ಸಂಜೆ ಆರು ಗಂಟೆಗೆ ದಸರಾ ಹಬ್ಬದ ಪ್ರಯುಕ್ತ ಸಾರಥಿ ಚಿತ್ರವನ್ನು ಪ್ರಸಾರ ಮಾಡಲಿದೆ. ದಿನಕರ್ ತೂಗುದೀಪ್ ನಿರ್ದೇಶನದ ಈ ಚಿತ್ರ ಸೆಪ್ಟಂಬರ್ 30, 2011 ರಲ್ಲಿ ಬಿಡುಗಡೆಯಾಗಿತ್ತು.
ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗಲೇ ಬಿಡುಗಡೆಯಾಗಿದ್ದ ಈ ಚಿತ್ರ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಾರಥಿ ಚಿತ್ರ 70 ಕೋಟಿಗೂ ಅಧಿಕ ವಹಿವಾಟು ನಡೆಸಿತ್ತು.
ದೀಪಾ ಸನ್ನಿಧಿ, ಶರತ್ ಕುಮಾರ್, ಶರತ್ ಲೋಹಿತಾಶ್ವ, ರಂಗಾಯಣ ರಘು, ಬುಲೆಟ್ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದರು.
ಬಿಗಿಯಾದ ನಿರೂಪಣೆ, ಡೈಲಾಗ್, ಫೋಟೋಗ್ರಫಿ ಮತ್ತು ಎಲ್ಲದಕ್ಕಿಂತ ಮಿಗಿಲಾಗಿ ರವಿ ವರ್ಮಾ ಅವರ ಸಾಹಸ ಸನ್ನಿವೇಶಗಳು ಚಿತ್ರದ ಪ್ರಮುಖ ಹೈಲೈಟ್ಸ್.
30 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲೊಂದು. ಚಿತ್ರ 28 ಚಿತ್ರಮಂದಿರಗಳಲ್ಲಿ 100 ದಿನ, 93 ಚಿತ್ರಮಂದಿರದಲ್ಲಿ 50 ದಿನ ಪೂರೈಸಿತ್ತು.
ವಿಜಯದಶಮಿಯ ದಿನದಂದು ಮಧ್ಯಾಹ್ನ 2 ಗಂಟೆಗೆ ಮತ್ತೊಂದು ಹಿಟ್ ಚಿತ್ರ ಕಿರಾತಕ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಯಶ್, ತಾರಾ, ನಾಗಾಭರಣ ಮುಖ್ಯ ಭೂಮಿಕೆಯಲ್ಲಿರುವ ಈ ಈ ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದರು.
ಸಾರಥಿ ಚಿತ್ರ ನೋಡಲು ಮರೆಯದಿರಿ..


Click it and Unblock the Notifications











