»   » ಕಿರುತೆರೆಯಲ್ಲಿ ಪ್ರಪ್ರಥಮ ಬ್ಲಾಕ್ ಬಸ್ಟರ್ ಮಿ ಎಂಡ್ ಮಿಸಸ್ ರಾಮಾಚಾರಿ

ಕಿರುತೆರೆಯಲ್ಲಿ ಪ್ರಪ್ರಥಮ ಬ್ಲಾಕ್ ಬಸ್ಟರ್ ಮಿ ಎಂಡ್ ಮಿಸಸ್ ರಾಮಾಚಾರಿ

Posted By:
Subscribe to Filmibeat Kannada

ಯಶಸ್ಸಿನ ಉತ್ತುಂಗದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ವೃತ್ತಿ ಜೀವನಕ್ಕೆ ಬಹುದೊಡ್ಡ ಹಿಟ್ ನೀಡಿದ ಚಿತ್ರ ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ.

ಕನ್ನಡ ಚಿತ್ರೋದ್ಯಮದಲ್ಲಿ ಹಲವಾರು ನೂತನ ದಾಖಲೆ ನಿರ್ಮಿಸಿದ್ದ ರಾಮಾಚಾರಿ ಚಿತ್ರ ಈಗ ಕಿರುತೆರೆಯಲ್ಲಿ ಬರಲು ಸಜ್ಜಾಗಿದೆ.


ಇದೇ ಗುರುವಾರ ಅಂದರೆ (ಸೆ 17) ಗೌರಿಗಣೇಶ ಹಬ್ಬದ ಪ್ರಯುಕ್ತ ಉದಯ ವಾಹಿನಿಯಲ್ಲಿ ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ ಚಿತ್ರ ರಾತ್ರಿ ಏಳು ಗಂಟೆಗೆ ಪ್ರಸಾರವಾಗಲಿದೆ.


ಯಶ್, ರಾಧಿಕಾ ಪಂಡಿತ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ಶ್ರೀನಾಥ್, ಮಾಳವಿಕ ಮುಂತಾದವರು ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ಸಂತೋಶ್ ಆನಂದರಾಮ್ ನಿರ್ದೇಶಿಸಿದ್ದರು.


ದೊಡ್ದ ಪರದೆಯಲ್ಲಿ ಈ ಚಿತ್ರ ನೋಡಲು ಮಿಸ್ ಮಾಡಿಕೊಂಡವರು ಗಣೇಶ ಹಬ್ಬದಂದು ರಾಮಾಚಾರಿ ಚಿತ್ರವನ್ನು ಟಿವಿಯಲ್ಲಿ ವೀಕ್ಷಿಸಬಹುದಾಗಿದೆ.


ರಾಮಾಚಾರಿ ಹುಟ್ಟುಹಾಕಿದ ದಾಖಲೆ ಒಂದಾ ಎರಡಾ, ಕೆಲವೊಂದು ಸ್ಲೈಡಿನಲ್ಲಿ...


ಚಿತ್ರದ ಡಿವಿಡಿಗಳು/ ಟಿವಿ ರೈಟ್ಸ್

ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ ಚಿತ್ರದ ಆಡಿಯೋ ಡಿವಿಡಿಗಳು ದಾಖಲೆ ಹದಿನೆಂಟು ಲಕ್ಷ ಬಿಕರಿಯಾಗಿತ್ತು. ಜೊತೆಗೆ ಚಿತ್ರದ ಟಿವಿ ರೈಟ್ಸ್ ಕೂಡಾ ದಾಖಲೆ ಮೊತ್ತಕ್ಕೆ ಉದಯ ಟಿವಿ ಪಾಲಾಗಿತ್ತು. ಮೊತ್ತ ಎಷ್ಟು ಅನ್ನೋದು ಬಹಿರಂಗವಾಗದೇ ಇದ್ದರೂ, ಯಶ್ ವೃತ್ತಿ ಬದುಕಿನಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಸೇಲಾದ ಟಿವಿ ರೈಟ್ಸ್ ಇದಾಗಿದೆ.


ಸೈಮಾ ಪ್ರಶಸ್ತಿ

ದುಬೈನಲ್ಲಿ ನಡೆದ 2015ರ ಸೈಮಾ ಆವಾರ್ಡ್ ನಲ್ಲಿ ಯಶ್ ಅಭಿನಯದ 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ವಿವಿಧ ವಿಭಾಗದಲ್ಲಿ ಹತ್ತು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದು ಜಸ್ಟ್ ಬಿಗಿನಿಂಗ್ ಮಾತ್ರ , ಕನ್ನಡ ಸಿನೆಮಾ ನೋಡ್ತಾ ಇರಿ, ಕನ್ನಡ ಚಿತ್ರರಂಗ ಇನ್ನೂ ಎತ್ತರಕ್ಕೇರುತ್ತೆ ಎಂದು ಕನ್ನಡ ಪ್ರೇಕ್ಷಕರನ್ನು ಯಶ್ ಹುರಿದುಂಬಿಸಿದ್ದರು.


ಫಿಲಂಫೇರ್ ಪ್ರಶಸ್ತಿ

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ ಎರಡು ಫಿಲಂಫೇರ್ ಅವಾರ್ಡ್ ಗಳನ್ನ ಪಡೆದುಕೊಂಡಿತ್ತು. ಅತ್ಯುತ್ತಮ ಚಿತ್ರ ಮತ್ತು ಯಶ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದರು. ಇದಲ್ಲದೇ ಜೀಕನ್ನಡ ಮ್ಯೂಸಿಕ್ ಅವಾರ್ಡಿನಲ್ಲೂ ಜನಪ್ರಿಯ ಚಿತ್ರ ಪ್ರಶಸ್ತಿ ಪಡೆದಿತ್ತು.


25 ವಾರ

ಬೆಂಗಳೂರಿನ ಸಂತೋಷ್ ಮತ್ತು ವಿರೇಶ್ ಚಿತ್ರಮಂದಿರ ಸೇರಿದಂತೆ ರಾಜ್ಯದ ಹಲವಾರು ಚಿತ್ರಮಂದಿರಗಳಲ್ಲಿ ರಾಮಾಚಾರಿ ಚಿತ್ರ ಹಂಡ್ರೆಸ್ ಡೇಸ್ ಪೂರೈಸಿತ್ತು. ಜೊತೆಗೆ ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ ಮುಂದುವರಿದ ಪ್ರದರ್ಶನದಲ್ಲಿ 25 ವಾರ ಪ್ರದರ್ಶನ ಕಂಡಿತ್ತು.


ಹತ್ತು ಭಾಷೆಯಲ್ಲಿ ಡಬ್

ಮರಾಠಿ, ಪಂಜಾಬಿ, ಹಿಂದಿ, ಮಲೆಯಾಳಂ, ಭೋಜ್ ಪುರಿ ಸೇರಿದಂತೆ ಹತ್ತು ಭಾಷೆಗಳಿಗೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಡಬ್ ಆಗುತ್ತಿದೆ. ಇದರೊಂದಿಗೆ ತೆಲುಗು ಮತ್ತು ತಮಿಳು ಭಾಷೆಗೂ ರಾಮಾಚಾರಿ ರಿಮೇಕ್ ಆಗುತ್ತಿದ್ದಾನೆ. 'ಮೈತ್ರಿ' ಚಿತ್ರದ ನಿರ್ಮಾಪಕ ರಾಜ್ ಕುಮಾರ್, ತೆಲುಗಿನಲ್ಲಿ ರೀಮೇಕ್ ಮಾಡುವುದಕ್ಕೆ ಮುಂದೆ ಬಂದಿದ್ದಾರೆ.


ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿದ ರಾಮಾಚಾರಿ

ಚಿತ್ರದ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅವರ ಜೋಳಿಗೆ ಭರ್ಜರಿ ತುಂಬಿಸಿದ ಚಿತ್ರ. ಒಂದು ಅಂದಾಜಿನ ಪ್ರಕಾರ ಚಿತ್ರ ಐವತ್ತು ಕೋಟಿಗೂ ಹೆಚ್ಚು ವ್ಯಾಪಾರ ಮಾಡಿದೆ.


English summary
Blockbuster Mr and Mrs Ramachari movie screening first time in small screen in Udaya TV.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada