»   » ಎಲ್ಲರೂ ಅಂದುಕೊಂಡ್ಹಾಗೆ ಆಗಿಲ್ಲ: ಡೌಟ್ ಕ್ಲಿಯರ್ ಮಾಡಿದ 'ಬಿಗ್ ಬಾಸ್'!

ಎಲ್ಲರೂ ಅಂದುಕೊಂಡ್ಹಾಗೆ ಆಗಿಲ್ಲ: ಡೌಟ್ ಕ್ಲಿಯರ್ ಮಾಡಿದ 'ಬಿಗ್ ಬಾಸ್'!

Posted By:
Subscribe to Filmibeat Kannada

''ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಗಳು ಕದ್ದು-ಮುಚ್ಚಿ ಮೊಬೈಲ್ ಬಳಸುತ್ತಿರಬಹುದು. ಯಾರಿಗೂ ಗೊತ್ತಾಗದ ಹಾಗೆ ತಮ್ಮ-ತಮ್ಮ ಮನೆಯವರ ಜೊತೆ ಮಾತುಕತೆ ನಡೆಸುತ್ತಿರಬಹುದು'' ಎಂಬ ಅನುಮಾನ ಕಳೆದ ವಾರ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಸಕಲ ವೀಕ್ಷಕರಿಗೆ ಕಾಡಿತ್ತು.

ಅದಕ್ಕೆ ಕಾರಣ, 'ಏಯ್ ಕಾರುಣ್ಯ, ಮೊಬೈಲ್ ತಗೊಂಡು ಬಾ ಬೇಗ' ಅಂತ ನಿರಂಜನ್ ದೇಶಪಾಂಡೆ ಆಡಿದ ಮಾತು.

ಇದೇ ವಿಚಾರದ ಕುರಿತು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೂಡ ವರದಿ ಮಾಡಿ, ''ಡೌಟ್ ಕ್ಲಿಯರ್ ಮಾಡಿ ಬಿಗ್ ಬಾಸ್'' ಎಂಬ ಲೇಖನ ಪ್ರಕಟ ಮಾಡಿತ್ತು. ಪರಿಣಾಮ, ಕಿಚ್ಚ ಸುದೀಪ್ ನಡೆಸಿಕೊಡುವ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ''ಬಿಗ್ ಬಾಸ್' ಮನೆಯಲ್ಲಿ ಮೊಬೈಲ್ ಬಳಕೆ'' ಕುರಿತು ಕ್ಲಾರಿಟಿ ನೀಡಲಾಗಿದೆ.

'ಕಾಲರ್ ಆಫ್ ದಿ ವೀಕ್' ಮುಖಾಂತರ ಡೌಟ್ ಕ್ಲಿಯರ್

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಮೂಡಬಿದಿರೆಯ ಪುನೀತ್ ಎಂಬುವರು ಕರೆ ಮಾಡಿ, ನಿರಂಜನ್ ದೇಶಪಾಂಡೆ ರವರಿಗೆ ಮೊಬೈಲ್ ಕುರಿತು ಪ್ರಶ್ನೆ ಕೇಳಿದರು.

'ಕಾಲರ್ ಆಫ್ ದಿ ವೀಕ್' ಕೇಳಿದ ಪ್ರಶ್ನೆ ಏನು?

''ದೀಪಾವಳಿಯ ಸಂಭ್ರಮವನ್ನ 'ಬಿಗ್ ಬಾಸ್'ನಲ್ಲಿ ತೋರಿಸುತ್ತಿದ್ದಾಗ, ಎಲ್ಲರೂ ಸಂಭ್ರಮದಿಂದ ಗಾರ್ಡನ್ ಏರಿಯಾಗೆ ಬರುವಾಗ, ನೀವು ಮಾತ್ರ ಕಾರುಣ್ಯ ರವರನ್ನ ಕರೆದು 'ಮೊಬೈಲ್ ತಗೊಂಡು ಬನ್ನಿ, ಸೆಲ್ಫಿ ತೆಗೆದುಕೊಳ್ಳೋಣ' ಅಂತ ಹೇಳ್ತೀರಾ. ನಮಗೆಲ್ಲ ಕುತೂಹಲ ಶುರು ಆಗಿದೆ. ನಮಗೆ ಗೊತ್ತಿಲ್ಲದೇ ನಿಮಗೆ ಒಳಗೆ ಮೊಬೈಲ್ ಆಕ್ಸೆಸ್ ಇದ್ಯಾ? ಮನೆಯವರ ಜೊತೆಗೆ, ಹೊರಗಿನ ಜಗತ್ತಿನ ಜೊತೆ ಸಂಪರ್ಕದಲ್ಲಿ ಇದ್ದೀರಾ? ಅಂತ ನಮಗೆ ಅರ್ಥ ಆಗಲಿಲ್ಲ'' ಅಂತ ನಿರಂಜನ್ ದೇಶಪಾಂಡೆ ರವರಿಗೆ ಮೂಡಬಿದಿರೆಯ ಪುನೀತ್ ಪ್ರಶ್ನೆ ಕೇಳಿದರು.

ನಿರಂಜನ್ ಕೊಟ್ಟ ಉತ್ತರವೇನು?

''ದೇವ್ರಾಣೆಗೂ, ನಮ್ಮ ತಾಯಾಣೆಗೂ ಇಲ್ಲಿ ಯಾರಿಗೂ ಮೊಬೈಲ್ ಕೊಟ್ಟಿಲ್ಲ. ನಮ್ಮ-ನಮ್ಮ ಸಂತೋಷಕ್ಕೆ ಒಂದೊಂದು ಬಾರಿ ಹಾಗೆ ಮಾತನಾಡಿಕೊಳ್ಳುತ್ತೇವೆ. ಎಷ್ಟೋ ಬಾರಿ ಅಡುಗೆ ಇರಲ್ಲ. ಪಾಯಸ ತಗೊಂಡು ಬಾ ಅಂತಿರ್ತೀವಿ. ಹಾಗೇ ಇದೂ ಕೂಡ'' ಅಂತ ಕ್ಲಾರಿಟಿ ಕೊಟ್ಟರು ನಿರಂಜನ್ ದೇಶಪಾಂಡೆ

ಮೊಬೈಲ್ ಮಾಡೆಲ್ ಮರೆತು ಹೋಗಿದೆ

''ಮೊಬೈಲ್ ಹೇಗಿದೆ ಅನ್ನೋದು ಮರೆತು ಹೋಗಿದೆ. ನಮ್ಮ ಮೊಬೈಲ್ ಮಾಡೆಲ್ ಯಾವುದು ಅನ್ನೋದೇ ಮರೆತು ಹೋಗಿದೆ ನನಗೆ. ಸುಮ್ನೆ ಅವಾಗವಾಗ 'ಚಾರ್ಜ್ ಗೆ ಹಾಕಿದ್ದೀವಿ ನೋಡು, ಮೆಸೇಜ್ ಬಂತಾ ನೋಡು' ಅಂತ ಮಾತನಾಡಿಕೊಳ್ತಿರ್ತೀವಿ. ಅಷ್ಟು ಬಿಟ್ಟರೆ, ಹೊರಗಿನ ಜಗತ್ತಿಗೆ ಇಲ್ಲಿ ಯಾರಿಗೂ ಸಂಪರ್ಕ ಇಲ್ಲ'' - ನಿರಂಜನ್ ದೇಶಪಾಂಡೆ

ಸುದೀಪ್ ಕೂಡ ಸ್ಪಷ್ಟನೆ ನೀಡಿದರು

''ದೀಪಾವಳಿ ಹಬ್ಬದ ದಿನ ಎಲ್ಲರಿಗೂ ಗಿಫ್ಟ್ ಸಿಕ್ಕಿತು. ಕೆಲವರು ಖುಷಿ ಪಟ್ಟರು. ಪತ್ರಗಳನ್ನು ಓದಿ ಅತ್ತರು. ಪತ್ರ ಬರಲಿಲ್ಲ ಅಂತ ಕೆಲವರು ಅತ್ತರು. ಮೊಬೈಲ್ ಫೋನ್ ಅನ್ನೋದು ಇದ್ದಿದ್ದರೆ, ಇಷ್ಟೂ ನಾಟಕ ಆಗ್ಹೋಯ್ತಲ್ಲಾ? ಹೌ ಈಸ್ ದಟ್ ಪಾಸಿಬಲ್.?'' ಅಂತ ಕಿಚ್ಚ ಸುದೀಪ್ ಕೂಡ ಸ್ಪಷ್ಟನೆ ನೀಡಿದರು.

ಡೌಟ್ ಪಡಬೇಡಿ

''ನಾವು ಬಹಳ ಗಂಭೀರವಾಗಿ ನಡೆಸುವ 'ಬಿಗ್ ಬಾಸ್' ಕಾರ್ಯಕ್ರಮವನ್ನು, ಒಳಗಡೆ ಸ್ಪರ್ಧಿಗಳು ಕೂಡ ಅಷ್ಟೇ ಶ್ರಮ ಪಟ್ಟು ಭಾಗವಹಿಸುತ್ತಿರುವ ಈ ಕಾರ್ಯಕ್ರಮವನ್ನು ಡೌಟ್ ಪಡಬೇಡಿ'' ಅಂತ ಸುದೀಪ್ ಕೇಳಿಕೊಂಡರು.

ಏನಿದು 'ಮೊಬೈಲ್' ವಿವಾದ.?

ಅಷ್ಟಕ್ಕೂ ಏನಿದು 'ಮೊಬೈಲ್ ವಿವಾದ', ಯಾವಾಗ ನಡೆದಿದ್ದು ಎಂಬುದು ನಿಮಗೆ ಗೊತ್ತಿಲ್ಲ ಅಂದ್ರೆ, ಈ ವರದಿ ಓದಿರಿ....[ಇದು ನಿಜವೋ...ಸುಳ್ಳೋ...'ಬಿಗ್ ಬಾಸ್' ನೀವೇ ಹೇಳಿ, ಡೌಟ್ ಕ್ಲಿಯರ್ ಮಾಡಿ.!]

English summary
Bigg Boss Kannada 4: Niranjan Deshpande has clarified that there are no Mobile Phones in Bigg Boss House. Kiccha Sudeep has also given clarity over same issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada