ದಿವಾಕರ್ ಮನೆಗೆ ಹೋಗಿ ಸರ್ಪ್ರೈಸ್ ನೀಡಿದ ಗೆಳೆಯ ಚಂದನ್ ಶೆಟ್ಟಿ
ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಗಮನ ಸೆಳೆದ ಆಪ್ತಮಿತ್ರ ಚಂದನ್ ಶೆಟ್ಟಿ ಮತ್ತು ದಿವಾಕರ್, ಬಿಗ್ ಮನೆಯಿಂದ ಹೊರ ಬಂದಮೇಲೆ ಭೇಟಿ ಮಾಡಿದ್ರಾ ಎಂಬ ಕುತೂಹಲ ಕಾಡುತ್ತಿತ್ತು. ಈ ಕುತೂಹಲದ ಮಧ್ಯೆ ದಿವಾಕರ್ ಗೆ ಸರ್ಪ್ರೈಸ್ ನೀಡಿದ್ದಾರೆ Rap ಗಾಯಕ ಚಂದನ್.
ಹೌದು, ಬಿಗ್ ಬಾಸ್ 5ನೇ ಆವೃತ್ತಿಯ ರನ್ನರ್ ಅಪ್ ಸ್ಪರ್ಧಿ ದಿವಾಕರ್ ಮತ್ತು ಅವರ ಪತ್ನಿ ಮಮತಾ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮಕ್ಕೆ ಚಂದನ್ ಸರ್ಪ್ರೈಸ್ ಭೇಟಿ ನೀಡಿದ್ದರು.
ವಿದ್ಯಾರಣ್ಯಪುರದಲ್ಲಿರುವ ದಿವಾಕರ್ ಮನೆಗೆ ಚಂದನ್ ಶೆಟ್ಟಿ ಆಗಮಿಸಿ ದಿವಾಕರ್ ದಂಪತಿಗೆ ಶುಭಹಾರೈಸಿದರು. ಈ ವೇಳೆ ದಿವಾಕರ್ ದಂಪತಿ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಅಂದ್ಹಾಗೆ, ಚಂದನ್ ಶೆಟ್ಟಿ ಮತ್ತು ದಿವಾಕರ್ ಇಬ್ಬರು ಆತ್ಮೀಯ ಸ್ನೇಹಿತರು. ಚಂದನ್ ಶೆಟ್ಟಿ ಒಂದು ಸಿನಿಮಾ ನಿರ್ದೇಶನ ಮಾಡಲಿದ್ದು, ಈ ಚಿತ್ರದಲ್ಲಿ ದಿವಾಕರ್ ಗೆ ಅವಕಾಶ ಮಾಡಿಕೊಡುವುದಾಗಿ ಹೇಳಿಕೊಂಡಿದ್ದರು. ಆದ್ರೆ, ಅದು ಅಂತಿಮವಾಗಿಲ್ಲ.
ಮತ್ತೊಂದೆಡೆ ಚಂದನ್ ಶೆಟ್ಟಿಗೆ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಅವಕಾಶಗಳು ಸಿಗುತ್ತಿದ್ದು, ದೊಡ್ಡ ನಟರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರದ ತೀರ್ಪುಗಾರರಾಗಿ ಚಂದನ್ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











