For Quick Alerts
  ALLOW NOTIFICATIONS  
  For Daily Alerts

  ಶ್ರೀಮುರಳಿ ಎಪಿಸೋಡ್ ಗೆ ಮುಂಚೆಯೇ ಸದ್ದು ಮಾಡ್ತಿರುವ ಈ ಹುಡುಗಿ ಯಾರು?

  |

  ಸ್ಯಾಂಡಲ್ ವುಡ್ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರಾಗಿ ಭಾಗವಹಿಸಿದ್ದಾರೆ. ಶ್ರೀಮುರಳಿ ಅವರ ಎಪಿಸೋಡ್ ಈ ವಾರ ಪ್ರಸಾರವಾಗಲಿದೆ. ಉಗ್ರಂ ವೀರನ ಜರ್ನಿಯಲ್ಲಿ ಅವರಿಗೆ ಸಾಥ್ ನೀಡಿದ ಸ್ನೇಹಿತರು, ಕುಟುಂಬದವರು, ಸಿನಿಮಾದವರು ಈ ಶೋಗೆ ಬಂದಿದ್ದಾರೆ.

  ಶನಿವಾರ ಪ್ರಸಾರವಾಗಲಿರುವ ಸಂಚಿಕೆಯ ಕೆಲವು ಫೋಟೋಗಳು ಮತ್ತು ಪ್ರೋಮೋಗಳು ಬಿಡುಗಡೆಯಾಗಿದೆ. ಇದರಲ್ಲಿ ಒಬ್ಬ ಯುವತಿ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದಾರೆ.

  ಈ ವಾರ ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟಿನಲ್ಲಿ ಉಗ್ರಂ ವೀರ

  ಹೌದು, ಬಿಳಿ ಮತ್ತು ನೀಲಿ ಬಣ್ಣದ ಡ್ರೆಸ್ ನಲ್ಲಿ ಎಂಟ್ರಿ ಕೊಟ್ಟು ಶ್ರೀಮುರಳಿಗೆ ಸರ್ಪ್ರೈಸ್ ನೀಡುವ ಈ ಹುಡುಗಿ ಯಾರು ಎಂಬುದು ವೀಕ್ಷಕರನ್ನ ಕಾಡುತ್ತಿದೆ. ಓಹ್, ಈಕೆ ಆ ಸಿನಿಮಾದ ನಟಿ, ಈ ಸಿನಿಮಾ ನಟಿ, ಅವರಿರಬಹುದು, ಇವರಿರಬಹುದು ಎಂಬ ಅಂತೆ-ಕಂತೆಗಳು ಚರ್ಚೆಯಾಗುತ್ತಿದೆ. ಹಾಗಿದ್ರೆ, ನಿಜಕ್ಕೂ ಆ ಯುವತಿ ಯಾರು? ಮುಂದೆ ಓದಿ.....

  ಈಕೆಯೆ ಹೆಸರು ಪ್ರೀಯಾ ಪೇರಿರಾ

  ಈಕೆಯೆ ಹೆಸರು ಪ್ರೀಯಾ ಪೇರಿರಾ

  ಶ್ರೀಮುರಳಿ ಅವರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿರುವ ಈ ಯುವತಿ ಕನ್ನಡ ಚಿತ್ರರಂಗದ ನಟಿ. ಶ್ರೀಮುರಳಿ ಜೊತೆ ಒಂದು ಸಿನಿಮಾ ಕೂಡ ಮಾಡಿದ್ದಾರೆ. ಅದಾದ ಬಳಿಕ ಮತ್ತೆ ಎಲ್ಲೂ ಕಾಣಿಸಿರಲಿಲ್ಲ. ಇದೀಗ, ಬಹಳ ವರ್ಷದ ನಂತರ ಕ್ಯಾಮೆರಾ ಮುಂದೆ ಬಂದಿರುವುದು ಅಚ್ಚರಿ ತಂದಿದೆ.

  ಚಂದ್ರ ಚಕೋರಿ ನಾಯಕಿಯೇ ಈಕೆ.!

  ಚಂದ್ರ ಚಕೋರಿ ನಾಯಕಿಯೇ ಈಕೆ.!

  ಶ್ರೀಮುರಳಿ ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ಚಂದ್ರ ಚಕೋರಿ. ಆಗಸ್ಟ್ 15, 2003ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾದಲ್ಲಿ ಪ್ರಿಯಾ ಪೇರಿರಾ ನಾಯಕಿಯಾಗಿ ನಟಿಸಿದ್ದರು. ಇದು ಇವರ ಮೊದಲ ಸಿನಿಮಾ ಹಾಗೂ ಕೊನೆಯ ಚಿತ್ರವೂ ಎಂದು ಹೇಳಲಾಗ್ತಿದೆ.

  ತುಮಕೂರಿನಲ್ಲಿ 'ಯಜಮಾನ'ನ ಬಗ್ಗೆ ಹಾಡಿ ಹೊಗಳಿದ ಶ್ರೀಮುರಳಿ

  ನೆನಪಿನ ಕಾಣಿಕೆ ನೀಡಿದ ಶ್ರೀಮುರಳಿ

  ನೆನಪಿನ ಕಾಣಿಕೆ ನೀಡಿದ ಶ್ರೀಮುರಳಿ

  ಶ್ರೀಮುರಳಿ ಜೀವನದಲ್ಲಿ ಚಂದ್ರ ಚಕೋರಿ ಸಿನಿಮಾ ಬಹಳ ದೊಡ್ಡ ಯಶಸ್ಸು. ಸುಮಾರು ಎರಡು ವರ್ಷಗಳು ಯಶಸ್ವಿಯಾಗಿ ಪ್ರದರ್ಶನವಾಗಿತ್ತು. ಬಹುಶಃ ಅಂದಿನ ಸಂಭ್ರಮದಲ್ಲಿ ಪ್ರಿಯಾ ಭಾಗಿಯಾಗದಿದ್ದ ಕಾರಣ ಆಗ ಕೊಡಬೇಕಿದ್ದ ನೆನಪಿನ ಕಾಣಿಕೆಯನ್ನ ವೀಕೆಂಡ್ ವಿತ್ ರಮೇಶ್ ವೇದಿಕೆಯಲ್ಲಿ ಶ್ರೀಮುರಳಿ ನೀಡಿದರು.

  ಎಚ್ ಡಿ ಕುಮಾರಸ್ವಾಮಿ ನಿರ್ಮಾಣ

  ಎಚ್ ಡಿ ಕುಮಾರಸ್ವಾಮಿ ನಿರ್ಮಾಣ

  ಈಗ ಮುಖ್ಯಮಂತ್ರಿ ಸ್ಥಾನದಲ್ಲಿರುವ ಎಚ್ ಡಿ ಕುಮಾರಸ್ವಾಮಿ ಅವರು ಚಂದ್ರಚಕೋರಿ ಚಿತ್ರವನ್ನ ನಿರ್ಮಾಣ ಮಾಡಿದ್ದರು. ಪ್ರಿಯಾ ಪೇರಿರಾ ಮತ್ತು ನಾಜ್ ಎಂಬ ಇಬ್ಬರು ನಾಯಕಿಯರಿದ್ದರು. ಎಸ್ ನಾರಾಯಣ ಈ ಚಿತ್ರ ನಿರ್ದೇಶನ ಮಾಡಿದ್ದರು.

  English summary
  Roaring star Srimurali's first movie Chandra chakori heroine Priya Pereira came to weekend with ramesh 4 for his hero. Programme will telicast in this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X