»   » ಚಂದ್ರಿಕಾ ರಿಟರ್ನ್ಸ್, ಇದೇನು ಫಿಕ್ಸಿಂಗಾ ಸ್ವಾಮಿ!

ಚಂದ್ರಿಕಾ ರಿಟರ್ನ್ಸ್, ಇದೇನು ಫಿಕ್ಸಿಂಗಾ ಸ್ವಾಮಿ!

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ಜನಪ್ರಿಯ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಇದೇ ಮೊದಲ ಬಾರಿಗೆ ನಾಮಿನೇಟ್ ಆಗಿ ಎಲಿಮಿನೇಟ್ ಆಗಿದ್ದ ಸ್ಪರ್ಧಿಯೊಬ್ಬರನ್ನು ಮತ್ತೊಮ್ಮೆ ಮನೆಯೊಳಗೆ ಕಳಿಸಲಾಗಿದೆ. ಈ ಮುಂಚೆ ನರ್ಸ್ ಜಯಲಕ್ಷ್ಮಿ ಅವರನ್ನು ಮೊದಲ ವಾರ ಮನೆಯಿಂದ ಹೊರದಬ್ಬಿದ ಮೇಲೆ ಮತ್ತ್ತೊಮ್ಮೆ ಸ್ಪರ್ಧಿಯಾಗಿ ಒಳಗೆ ಹೋಗಲು ಅವಕಾಶ ನೀಡಲಾಗಿತ್ತು. ಇದನ್ನು ಹಾಗೂ ಹೀಗೂ ಒಪ್ಪಿಕೊಂಡಿದ್ದ ಪ್ರೇಕ್ಷಕರು ಈಗ ಚಂದ್ರಿಕಾ ರೀ-ಎಂಟ್ರಿಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ಚಂದ್ರಿಕಾ, ಅರುಣ್ ಸಾಗರ್ ಹಾಗೂ ವಿಜಯ್ ರಾಘವೇಂದ್ರ. ಮೂವರಲ್ಲಿ ಯಾರು ಮನೆಗೆ ಹೋಗಲಿದ್ದಾರೆ ಎಂಬ ಬಗ್ಗೆ ತೀವ್ರ ಕುತೂಹಲಕ್ಕೆ ತೆರೆ ಬಿದ್ದಿದ್ದು, ಶುಕ್ರವಾರ ಕಡೆಗೂ ಚಂದ್ರಿಕಾ ಅವರು ಆಟದಿಂದ ಔಟ್ ಆಗಿದ್ದರು. ಆದರೆ, ಶನಿವಾರ ಆದದ್ದೇ ಬೇರೆ...

ನಟ ಸುದೀಪ್ ನಡೆಸಿಕೊಡುತ್ತಿರುವ ಈ ರಿಯಾಲಿಟಿ ಶೋ ಕೊನೆ ಹಂತದ ತನಕ ಸಾಕಷ್ಟು ಕುತೂಹಲವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಕತ್ ಟ್ವಿಸ್ಟ್ ನೀಡಲಾಗುತ್ತಿದೆ. ಸೋಮವಾರದಿಂದ ಗುರುವಾರದವರೆಗೆ ಏನಾದರೂ ಟಾಸ್ಕ್ ಗಳನ್ನು ಸ್ಪರ್ಧಿಗಳು ಮಾಡಿಕೊಂಡಿರಲಿ, ಶುಕ್ರವಾರದಂದು ಸುದೀಪ್ ನಡೆಸಿಕೊಡುವ 'ವಾರದ ಕಥೆ ಈ ನಿಮ್ಮ ಕಿಚ್ಚನ ಜೊತೆ' ಅಪಾರವಾಗಿ ಜನರನ್ನು ಸೆಳೆಯುತ್ತಿದೆ.

ಶನಿವಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಡೆದಿದ್ದು ಸರಿಯೇ? ತಪ್ಪೇ? ಎಂಬ ಚರ್ಚೆಯನ್ನು ಮುಂದುವರೆಸುತ್ತಾ, ಮತ್ತೊಮ್ಮೆ ಘೋಷಣೆ ಮಾಡಬೇಕಿದೆ. ಹೌದು, ಚಂದ್ರಿಕಾ ಮತ್ತೊಮ್ಮೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ. ಇನ್ನುಳಿದಿರುವುದು ಮೂರು ವಾರವಾದರೂ ಚಂದ್ರಿಕಾ ಪ್ರೇಕ್ಷಕರ ಮನ ಗೆಲ್ಲಲು ಇರುವುದು ಮುರ್ನಾಲ್ಕು ದಿನಗಳು ಮಾತ್ರ ಏನಾಗುತ್ತೋ ಕಾದು ನೋಡೋಣ..

ನಿಕಿತಾಗೆ ಸ್ಪರ್ಧಿ ಅಗತ್ಯವಿತ್ತೆ?

ಮನೆಯಲ್ಲಿ ಉಳಿದಿರುವ ಏಕೈಕ ಮಹಿಳಾ ಸ್ಪರ್ಧಿ ನಿಕಿತಾಗೆ ಸಕತ್ ಫೈಟ್ ನೀಡಬಲ್ಲ ಸ್ಪರ್ಧಿ ಎಂದರೆ ಅದು ಚಂದ್ರಿಕಾ ಮಾತ್ರ. ನಿಕಿತಾ ಫೈನಲ್ ತಲುಪುವ ಮೂವರು ಸ್ಪರ್ಧಿಗಳಲ್ಲಿ ಒಬ್ಬರಾಗುವುದನ್ನು ತಡೆಗಟ್ಟಲು ಚಂದ್ರಿಕಾ ಪುನರ್ ಪ್ರವೇಶವಾಗಿದೆ ಎಂಬ ಸುದ್ದಿ ಇದೆ.

ಅರುಣ್ ಫೈನಲ್ ತಲುಪಿರುವುದ್ದರಿಂದ ಇನ್ನು ನರೇಂದ್ರ ಬಾಬು ಶರ್ಮಾ ಹಾಗೂ ವಿಜಯ್ ರಾಘವೇಂದ್ರ ಅವರು ಫೈನಲ್ ತಲುಪುವ ಕನಸು ಕಾಣಬಹುದು.

ಅರುಣ್ ಕಥೆ ಏನು?

ಮನೆಯಲ್ಲಿ ನಡೆದ ನಾಮಿನೇಷನ್ ಎಲ್ಲಾ ಸುಳ್ಳು. ಸುದೀಪ್ ಮನೆಗೆ ಬಂದಾಗ ನಡೆದ ನಾಮಿನೇಷನ್ ಪ್ರಕ್ರಿಯೆ ಫುಲ್ ರಿವರ್ಸ್ ಎಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಚಂದ್ರಿಕಾ ಎಲಿಮಿನೇಷನ್ ಹಿಂಪಡೆಯಲಾಗಿದೆ.

ಇದು ನಿಜವಾದರೆ, ಆಕೆ ಮನೆಯಿಂದ ಹೊರ ಬಿದ್ದ ಸಮಯದಲ್ಲಿ ಸಿಕ್ಕ ಸೂಪರ್ ಪವರ್ ಕಥೆ ಏನು? ಅರುಣ್ ಫೈನಲ್ ಗೆ ತಲುಪಿಸಲು ಮಾಡಿದ ತಂತ್ರವೇ? ಅಥವಾ ಅರುಣ್ ಮತ್ತೊಮ್ಮೆ ಫೈನಲ್ ಗೆ ಸ್ಪರ್ಧಿಸಬೇಕೇ ಎಂಬ ಪ್ರಶ್ನೆ ವೀಕ್ಷಕರ ಮನಸ್ಸಿನಲ್ಲಿ ಎದ್ದಿದೆ. ಅರುಣ್ ಸೇಫ್ ಮಾಡುವುದು ಚಂದ್ರಿಕಾ ರೀ ಎಂಟ್ರಿ ನಾಟಕದ ಉದ್ದೇಶವಾಗಿತ್ತೆ?

ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ

ಚಂದ್ರಿಕಾ ಅವರನ್ನು ವೀಕ್ಷಕರು ವೋಟ್ ಔಟ್ ಮಾಡಿದ್ದರು ಆದರೆ, ಪಬ್ಲಿಕ್ ವೋಟಿಂಗ್ ವ್ಯವಸ್ಥೆಯನ್ನು ಧಿಕ್ಕರಿಸಿ ಮತ್ತೊಮ್ಮೆ ಮನೆಗೆ ಕಳಿಸಿರುವುದಕ್ಕೆ ಶೇ 80 ರಷ್ಟು ಓದುಗರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಬಗ್ಗೆ ಇದ್ದ ಗೌರವ, ಕುತೂಹಲ ಎಲ್ಲವೂ ಇಲ್ಲಿಗೆ ಮುಗಿಯಿತು.

ರಿಯಾಲಿಟಿ ಶೋ ಎಂದರೆ ಫಿಕ್ಸಿಂಗ್ ಎಂಬುದು ಈಗ ಮನದಟ್ಟಾಯಿತು ಎಂದು ಹಲವಾರು ಓದುಗರು ಪ್ರತಿಕ್ರಿಯಿಸಿದ್ದಾರೆ.

ಆದರೆ, ಕೆಲವರು ಸುದೀಪ್/ ಬಿಗ್ ಬಾಸ್ ತಂಡ ತೆಗೆದುಕೊಂಡ ನಿರ್ಣಯ ಸೂಕ್ತವಾಗಿದೆ. ಚಂದ್ರಿಕಾ ಮತ್ತೊಮ್ಮೆ ಮನೆಗೆ ಹೋಗಲು ಅರ್ಹರಾಗಿದ್ದಾರೆ ಎಂದಿದ್ದಾರೆ.

ಇದೇನು ಟಿಆರ್ ಪಿ ತಂತ್ರವೇ?

ಚಂದ್ರಿಕಾ ಮನೆಗೆ ಮರು ಪ್ರವೇಶ ಸಂಪೂರ್ಣವಾಗಿ ಟಿಆರ್ ಪಿ ಹೆಚ್ಚಿಸಲು ಮಾಡಿದ ತಂತ್ರವೇ? ನಿಕಿತಾ ಅವರನ್ನು ಫೈನಲ್ ಗೇರಲು ತಡೆಯುವ ಹುನ್ನಾರವೇ? ಅರುಣ್ ಜೊತೆಗೆ ನರೇಂದ್ರ ಶರ್ಮ ಅಥವಾ ವಿಜಯ್ ರಾಘವೇಂದ್ರ ಮಾತ್ರ ಫೈನಲ್ ಪ್ರವೇಶಿಸುವಂತೆ ಮಾಡಲು ಮಾಡಿದ ಹುನ್ನಾರವೇ?

ರಿವರ್ಸ್ ನಾಮಿನೇಷನ್ ಬಗ್ಗೆ ಗೊತ್ತಿದ್ದರೂ ವೋಟಿಂಗ್ ಲೈನ್ಸ್ ಓಪನ್ ಮಾಡಿದ್ದು ಏಕೆ? ವೀಕ್ಷಕರನ್ನು ಮಂಗ ಮಾಡುವುದು ಬಿಗ್ ಬಾಸ್ ಉದ್ದೇಶವೇ? ಯಾರಿಗೆ ಬೇಕಿತ್ತು ಈ ಟ್ವಿಸ್ಟ್

ಫೈನಲ್ ಗೆ ಯಾರು?

ವಿಪರೀತವಾದ ಜಗಳಗಳಿಂದ ಎಲ್ಲರಿಂದ ತೆಗಳಿಕೆಗೆ, ತಿರಸ್ಕಾರಕ್ಕೆ ಗುರಿಯಾಗಿದ್ದ ಚಂದ್ರಿಕಾ ಅವರು ಮನೆಗೆ ಮತು ಪ್ರವೇಶಿಸಿದರೂ ಹೆಚ್ಚು ವಾರ ಉಳಿಯುವುದಿಲ್ಲ.

ಈ ವಾರ ನಿಕಿತಾರನ್ನು ವೋಟ್ ಔಟ್ ಮಾಡುವಂಥ ಸನ್ನಿವೇಶ ಸೃಷ್ಟಿಸಲು ಚಂದ್ರಿಕಾ ಎಂಟ್ರಿ ಪಡೆದಿದ್ದಾರೆ. ನಿಕಿತಾ ನಾಮೇನೇಟ್ ಆಗಿ ವೋಟ್ ಔಟ್ ಆದ ಮೇಲೆ ಚಂದ್ರಿಕಾ ಮನೆಯಿಂದ ಹೊರ ಬೀಳಲಿದ್ದಾರೆ.

ಮುಂದೆ ಗ್ರ್ಯಾಂಡ್ ಫಿನಾಲೆಯಲ್ಲಿ ಉಳಿಯುವುದು ಅರುಣ್ ಸಾಗರ್, ವಿಜಯ್ ರಾಘವೇಂದ್ರ ಹಾಗೂ ನರೇಂದ್ರ ಬಾಬು ಶರ್ಮ ಮಾತ್ರ ಇದು ಬಿಗ್ ಬಾಸ್ ಸೀಸನ್ 1 ರ ಭವಿಷ್ಯದ ಮುನ್ನೋಟ.

English summary
The unexpected turn of events in the Kannada reality television show Bigg Boss took everyone by surprise last day(Jun.15). Chandrika was eliminated and Arun Sagar reached the finals. But, Later in the day Chandrika made re entry into Bigg Boss House due to reverse nomination
Please Wait while comments are loading...