For Quick Alerts
  ALLOW NOTIFICATIONS  
  For Daily Alerts

  'ಡ್ಯಾನ್ಸಿಂಗ್ ಸ್ಟಾರ್' ಮಗದೊಮ್ಮೆ ಶುರು: ಈ ಬಾರಿ ಸ್ಪರ್ಧಿಗಳು ಯಾರು?

  By Harshitha
  |

  ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಡ್ಯಾನ್ಸಿಂಗ್ ಸ್ಟಾರ್' ಮೂರನೇ ಆವೃತ್ತಿ ಇದೇ ವಾರದಿಂದ ಶುರುವಾಗಲಿದೆ. ಜುಲೈ 9 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ 'ಡ್ಯಾನ್ಸಿಂಗ್ ಸ್ಟಾರ್ 3' ಪ್ರಸಾರವಾಗಲಿದೆ.

  ಹಿಂದಿನ 'ಡ್ಯಾನ್ಸಿಂಗ್ ಸ್ಟಾರ್' (ಜ್ಯೂನಿಯರ್) ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿ ಪ್ರಿಯಾಮಣಿ ಹಾಗೂ ಮಯೂರಿ ಉಪಾಧ್ಯ 'ಡ್ಯಾನ್ಸಿಂಗ್ ಸ್ಟಾರ್ 3' ಶೋಗೂ ನಿರ್ಣಾಯಕರಾಗಿರಲಿದ್ದಾರೆ.

  ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ ಬಿಜಿಯಾಗಿರುವುದರಿಂದ 'ಡ್ಯಾನ್ಸಿಂಗ್ ಸ್ಟಾರ್ 3' ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ ಹೆಗಲ ಮೇಲೇರಿದೆ.

  ಹಾಗಾದ್ರೆ, ಈ ಬಾರಿ 'ಡ್ಯಾನ್ಸಿಂಗ್ ಸ್ಟಾರ್' ಪಟ್ಟ ಪಡೆಯಲು ಯಾರೆಲ್ಲಾ ಸೆಣಸಾಡಲಿದ್ದಾರೆ ಅಂತ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ಯಾ? ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ...12 ಸ್ಪರ್ಧಿಗಳ ಪರಿಚಯ ನಿಮಗೆ ಮಾಡಿಕೊಡ್ತೀವಿ.

  ನಟಿ ಚಾಂದಿನಿ

  ನಟಿ ಚಾಂದಿನಿ

  ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಎ' ಸಿನಿಮಾದಲ್ಲಿ ನಟಿಸಿದ್ದ ನಟಿ ಚಾಂದಿನಿ 'ಡ್ಯಾನ್ಸಿಂಗ್ ಸ್ಟಾರ್' ಪಟ್ಟ ಪಡೆಯಲು ಅಖಾಡಕ್ಕೆ ಇಳಿದಿದ್ದಾರೆ.

  ವಿನಾಯಕ್ ಜೋಶಿ

  ವಿನಾಯಕ್ ಜೋಶಿ

  ನಟನೆ, ಆಂಕರಿಂಗ್ ಜೊತೆ ಆರ್.ಜೆ ಕೂಡ ಆಗಿದ್ದ ವಿನಾಯಕ್ ಜೋಶಿ ಈ ಬಾರಿ ಸೊಂಟ ಬಳುಕಿಸಲು ನಿಮ್ಮ ಮುಂದೆ ಬರ್ತಿದ್ದಾರೆ.

  ನಟಿ ಶಾಲಿನಿ

  ನಟಿ ಶಾಲಿನಿ

  'ಪಾಪಾ ಪಾಂಡು' ಧಾರಾವಾಹಿ ಖ್ಯಾತಿಯ ನಟಿ ಶಾಲಿನಿ ಕೂಡ ಈ ಬಾರಿ 'ಡ್ಯಾನ್ಸಿಂಗ್ ಸ್ಟಾರ್-3' ವೇದಿಕೆಗೆ ಕಿಚ್ಚು ಹಚ್ಚಿಸಲಿದ್ದಾರೆ.

  ರಕ್ಷಿತ್ ಅಲಿಯಾಸ್ ಮಹೇಶ್

  ರಕ್ಷಿತ್ ಅಲಿಯಾಸ್ ಮಹೇಶ್

  'ಪುಟ್ಟಗೌರಿ ಮದುವೆ' ಖ್ಯಾತಿಯ ಮಹೇಶ್ ಅಲಿಯಾಸ್ ರಕ್ಷಿತ್ ತಮ್ಮ ನೃತ್ಯ ಪ್ರತಿಭೆ ತೋರಿಸಲು ಸಜ್ಜಾಗಿದ್ದಾರೆ.

  ಹಿತಾ ಚಂದ್ರಶೇಖರ್

  ಹಿತಾ ಚಂದ್ರಶೇಖರ್

  ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿರುವ ಸಿಹಿಕಹಿ ಚಂದ್ರಶೇಖರ್ ಪುತ್ರಿ ಹಿತಾ ಚಂದ್ರಶೇಖರ್ 'ಡ್ಯಾನ್ಸಿಂಗ್ ಸ್ಟಾರ್' ಪಟ್ಟ ಪಡೆಯಲು ತಯಾರಿ ಮಾಡಿಕೊಂಡಿದ್ದಾರೆ.

  ಆರ್.ಜೆ ಪ್ರದೀಪ

  ಆರ್.ಜೆ ಪ್ರದೀಪ

  ಎಫ್.ಎಂ ನಲ್ಲಿ ಜನಪ್ರಿಯತೆ ಪಡೆದಿರುವ ಆರ್.ಜೆ ಪ್ರದೀಪ ಕೂಡ 'ಡ್ಯಾನ್ಸಿಂಗ್ ಸ್ಟಾರ್-3' ಸ್ಪರ್ಧಿ

  ನಟಿ ಶ್ವೇತಾ ಪ್ರಸಾದ್

  ನಟಿ ಶ್ವೇತಾ ಪ್ರಸಾದ್

  'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ಕೂಡ 'ಡ್ಯಾನ್ಸಿಂಗ್ ಸ್ಟಾರ್-3' ಸ್ಪರ್ಧಿ.

  ನಟಿ ಸ್ನೇಹಾ ಆಚಾರ್ಯ

  ನಟಿ ಸ್ನೇಹಾ ಆಚಾರ್ಯ

  ನಟಿ ಸ್ನೇಹಾ ಆಚಾರ್ಯ ಕೂಡ 'ಡ್ಯಾನ್ಸಿಂಗ್ ಸ್ಟಾರ್-3' ಸ್ಪರ್ಧಿ

  ಗಾಯಕಿ ಸಂಗೀತಾ

  ಗಾಯಕಿ ಸಂಗೀತಾ

  'ಡ್ಯಾನ್ಸಿಂಗ್ ಸ್ಟಾರ್-3' ಸ್ಪರ್ಧಿಗಳ ಲಿಸ್ಟ್ ನಲ್ಲಿ ಗಾಯಕಿ ಸಂಗೀತಾ ಕೂಡ ಇದ್ದಾರೆ.

  ನೇಹಾ ಗೌಡ

  ನೇಹಾ ಗೌಡ

  'ಬಿಗ್ ಬಾಸ್ ಕನ್ನಡ -3' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಗನಸಖಿ ನೇಹಾ ಗೌಡ 'ಡ್ಯಾನ್ಸಿಂಗ್ ಸ್ಟಾರ್-3' ಶೋಗೂ ಕಾಲಿಟ್ಟಿದ್ದಾರೆ.

  ನಟ ತೇಜ್

  ನಟ ತೇಜ್

  'ಡ್ಯಾನ್ಸಿಂಗ್ ಸ್ಟಾರ್-3' ಕನ್ಟೆಸ್ಟೆಂಟ್ ಲಿಸ್ಟ್ ನಲ್ಲಿ ನಟ ತೇಜ್ ಕೂಡ ಇದ್ದಾರೆ.

  ನಟಿ ಗೌತಮಿ ಗೌಡ

  ನಟಿ ಗೌತಮಿ ಗೌಡ

  'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ನಟಿ ಗೌತಮಿ ಗೌಡ 'ಡ್ಯಾನ್ಸಿಂಗ್ ಸ್ಟಾರ್-3' ನಲ್ಲಿ ಸೊಂಟ ಬಳುಕಿಸಲು ತುದಿಗಾಲಲ್ಲಿ ನಿಂತಿದ್ದಾರೆ.

  English summary
  Kannada Actress Chandini, Hita Chandrashekar, RJ Pradeepa and others are participating as Contestants in 'Dancing Star 3'. The show will be aired in Colors Kannada Channel and will be judged by V.Ravichandran, Priyamani and Mayuri Upadhya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X