ಉದಯ ಸಿಂಗರ್ ವೇದಿಕೆಯಲ್ಲಿ ಚೇತನ್: ಭಾವುಕರಾದ LN ಶಾಸ್ತ್ರಿ ಪತ್ನಿ

By Bharath Kumar

'ಉದಯ ಸಿಂಗರ್ ಜೂನಿಯರ್ಸ್' ವಾರದಿಂದ ವಾರಕ್ಕೆ ಸಂಗೀತದ ಕಂಪು ನೀಡುತ್ತಿದೆ. ಅಂತೆಯೇ ಚಿತ್ರರಂಗದ ಸ್ಟಾರ್ ಕಲಾವಿದರು ಆಗಮಿಸಿ ಮಕ್ಕಳಿಗೆ ಹಾರೈಸುತ್ತಿದ್ದಾರೆ. ಈ ವಾರದ ಸಂಚಿಕೆಯಲ್ಲಿ 'ಆ ದಿನಗಳು' ಖ್ಯಾತಿಯ ನಟ ಚೇತನ್ ಆಗಮಿಸಿ ವೇದಿಕೆಯನ್ನ ಮತ್ತಷ್ಟು ರಂಗೇರಿಸಿದರು.

'ಅತಿರಥ' ಚಿತ್ರದ ಪ್ರಮೋಶನ್ ಗಾಗಿ ಬಂದಿದ್ದ ಚೇತನ್ ಮತ್ತು ನಿರ್ದೇಶಕ ಮಹೇಶಬಾಬು ಕಾರ್ಯಕ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಇದೇ ವೇಳೆ ಉದಯ ಸಿಂಗರ್ ಜೂನಿಯರ್ಸ್ ಕಾರ್ಯಕ್ರಮದಲ್ಲಿರುವ 5 ವರ್ಷದ ಮೈಸೂರಿನ ಪುಟ್ಟ ಪ್ರತಿಭೆ ಶಿಖಾ ಜೊತೆ ನಟ ಚೇತನ್ ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದ್ದಾರೆ.

Chetan as special guest in Udaya Singer Juniors reality show

ಇಷ್ಟೆಲ್ಲಾ ಮನರಂಜನೆಯ ಮದ್ಧೆ ಸುಮಾ ಶಾಸ್ತ್ರಿಯವರು ಭಾವುಕರಾದ ಘಟನೆ ನಡೆದಿದೆ. ಸುಮಾ ಶಾಸ್ತ್ರಿ ದಿವಂಗತ ಎಲ್.ಎನ್ ಶಾಸ್ತ್ರಿಯವರ ಪತ್ನಿ. ಉದಯ ಸಿಂಗರ್ ಜೂನಿಯರ್ಸ್ ನಲ್ಲಿ ಮಕ್ಕಳಿಗೆ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಕ್ಷೀತ್ ಭಟ್ ಎಂಬ ಸ್ಪರ್ಧಿ 'ಲವ್ ಇನ್ ಮಂಡ್ಯಾ' ಚಿತ್ರದ ಹಾಡನ್ನು ಹಾಡಿದ. ಆ ಹಾಡು ಮೂಲತವಾಗಿ ದಿವಂಗತ ಎಲ್ ಎನ್ ಶಾಸ್ತ್ರಿಯವರು ಹಾಡಿದ್ದು.

Chetan as special guest in Udaya Singer Juniors reality show

ಇದೇ ಸಂದರ್ಭದಲ್ಲಿ ಸುಮಾ ಶಾಸ್ತ್ರಿಯವರು ವೇದಿಕೆಗೆ ಆಗಮಿಸಿ ತಮ್ಮ ಪತಿಯ ಬಗೆಗೆ ಮಾತನಾಡುತ್ತಾ ಈ ಹಾಡಿನ ಕೊನೆಯ ಸಾಲಾದ "ನಿಂತು ಹೋಯಿತೆ ಜೀವಗಾನ" ಕೇಳಿ ಭಾವುಕರಾದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ ಶಾಸ್ತ್ರಿಯವರಿಗೆ ತಾವು ಈ ಹಾಡನ್ನು ಹಾಡ ಬೇಡಿ ಎಂದು ಎಷ್ಟೇ ಹೇಳಿದರು "ಇಲ್ಲಾ ಇದು ನಂದೆ ಹಾಡು" ಎಂದು ಹೇಳಿದ್ದರು. ಹಾಗೆ ಅದೇ ಅವರ ಕೊನೆಯ ಹಾಡು ಆಗಿ ಹೋಯಿತು ಎಂದು ಸುಮಾ ಶಾಸ್ತ್ರಿಯವರು ಭಾವುಕರಾಗಿ ಕಣ್ಣಿರನ್ನು ಹಾಕಿದರು.

Chetan as special guest in Udaya Singer Juniors reality show

ಈ ವಿಶೇಷ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

More from Filmibeat

English summary
Kannada Actor 'A Dinagalu' Chethan as special guest in Udaya Singer Juniors reality show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X