Just In
Don't Miss!
- News
ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯ ಸಂಜಾತೆ
- Automobiles
ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು
- Finance
50 ಸಾವಿರ ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್; ನಿಫ್ಟಿ 14700 ಪಾಯಿಂಟ್ ಆಚೆಗೆ
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- Sports
ಐಎಸ್ಎಲ್: ಚೆನ್ನೈಯಿನ್ ವಿರುದ್ಧ ಒತ್ತಡವೇ ಇಲ್ಲವೆಂದ ಬಾಗನ್ ಕೋಚ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಭಾವನೆ ವಿಚಾರಕ್ಕೆ ಯಶ್ ಸಿನಿಮಾ ನಿರಾಕರಿಸಿದ್ದ ಚಿಕ್ಕಣ್ಣ

ನಾವು ನಮ್ಮ ಪಾಡಿಗೆ, ಕೆಲಸ ಮಾಡುತ್ತಿದ್ದರೆ ಒಂದಲ್ಲ ಒಂದು ದಿನ ಅವಕಾಶಗಳು ತಾವೇ ಹುಡುಕಿಕೊಂಡು ಬರುತ್ತದೆ. ಈ ವಿಷಯ ನಟ ಚಿಕ್ಕಣ್ಣ ಅವರ ಬದುಕಿನಲ್ಲಿಯೂ ನಿಜ ಆಗಿದೆ.
ಹಾಸ್ಯ ನಟ ಚಿಕ್ಕಣ್ಣನಿಗೆ ಮೊದಲ ಅವಕಾಶ ಸಿಕ್ಕ ಕಥೆ ಬಲು ರೋಚಕವಾಗಿದೆ. ನಟ ಯಶ್ ಒಂದು ಕಾರ್ಯಕ್ರಮದಲ್ಲಿ ಅವರ ನಟನೆ ನೋಡಿ ಇಷ್ಟ ಪಟ್ಟು, 'ಕಿರಾತಕ' ಸಿನಿಮಾಗೆ ಆಫರ್ ನೀಡುತ್ತಾರೆ.
ಚಿಕ್ಕಣ್ಣನನ್ನು ಹೀರೋ ಮಾಡ್ತಿದ್ದಾರೆ 'ಮಾಸ್ಟರ್ ಪೀಸ್' ಡೈರೆಕ್ಟರ್
ಆದರೆ, ಇನ್ನು ಚಿತ್ರರಂಗಕ್ಕೆ ಕಾಲಿಡದ ಚಿಕ್ಕಣ್ಣಗೆ ಸಂಭಾವನೆ ಬಗ್ಗೆ ಏನು ಗೊತ್ತಿರಲಿಲ್ಲ. ಎಷ್ಟು ಸಂಭಾವನೆ ಕೇಳಬೇಕು ಎಂದು ತಿಳಿಯದೆ, ಹೆಚ್ಚು ಹಣ ಕೇಳಿ ಕೊನೆಗೆ ಆ ಸಿನಿಮಾವನ್ನೇ ನಿರಾಕರಿಸಿದ್ದರಂತೆ.
ಹೀಗೆ ಮೊದಲ ಸಿನಿಮಾದ ಅವಕಾಶದ ಬಗ್ಗೆ ತಮ್ಮದೆ ಕಾಮಿಡಿ ಸ್ಟೈಲ್ ನಲ್ಲಿ ಚಿಕ್ಕಣ್ಣ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಮುಂದೆ ಓದಿ...

'ಕಿರಾತಕ' ಚಿತ್ರಕ್ಕೆ ಆಫರ್ ನೀಡಿದ ಯಶ್
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹಾಗೂ ಕುರಿ ಪ್ರತಾಪ್ ಒಂದು ಸಣ್ಣ ಸ್ಕಿಟ್ ಮಾಡಿದ್ದರು. ಆ ಕಾರ್ಯಕ್ರಮದಲ್ಲಿಯೇ ಮೊದಲ ಬಾರಿಗೆ ಚಿಕ್ಕಣ್ಣರನ್ನು ಯಶ್ ನೋಡಿದ್ದು. ಚಿಕ್ಕಣ್ಣ ತುಂಬ ನ್ಯಾಚುಲರ್ ಆಗಿ ನಟನೆ ಮಾಡುತ್ತಾರೆ ಎಂದು ಇಷ್ಟ ಪಟ್ಟು ಅವರಿಗೆ 'ಕಿರಾತಕ' ಸಿನಿಮಾಗೆ ಆಫರ್ ನೀಡಿದರು.

ಸಂಭಾವನೆ ಎಷ್ಟು ಕೇಳಬೇಕು ಗೊತ್ತಿಲ್ಲ
ಆ ಸಮಯಕ್ಕೆ ಚಿಕ್ಕಣ್ಣಗೆ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಕೇಳಬೇಕು ಎನ್ನುವ ಜ್ಞಾನ ಇರಲಿಲ್ಲ. ನಿರ್ದೇಶಕರ ಬಳಿ ದೊಡ್ಡ ಮೊತ್ತ ಕೇಳಿದ ಚಿಕ್ಕಣ್ಣ ಅದನ್ನು ನಿರಾಕರಿಸಿದ್ದಕ್ಕೆ ಸಿನಿಮಾ ಮಾಡಲ್ಲ ಎಂದಿದ್ದರಂತೆ. ಹೀಗೆ ತಮ್ಮ ಮೊದಲ ಎಡವಟ್ಟಿನ ಬಗ್ಗೆ ಫನ್ನಿಯಾಗಿ ಹೇಳಿಕೊಂಡರು ಚಿಕ್ಕಣ್ಣ.
'ವೀಕೆಂಡ್ ವಿತ್ ರಮೇಶ್'ನಲ್ಲಿ ಹಾಸ್ಯ ನಟ ಚಿಕ್ಕಣ್ಣ

ನಾನೇ ದುಡ್ಡು ನೀಡುತ್ತೇನೆ ಎಂದ ಯಶ್
ಸಂಭಾವನೆ ಬಗ್ಗೆ ಮಾತನಾಡಿದ ಚಿಕ್ಕಣ್ಣಗೆ ಯಶ್ ಸಮಾಧಾನ ಮಾಡಿದರು. ನೀನು ಸಿನಿಮಾದಲ್ಲಿ ಮಾಡು, ಉಳಿದ ಸಂಭಾವನೆ ನಾನೇ ನೀಡುತ್ತೇನೆ ಎಂದರಂತೆ. ಒಬ್ಬ ನಟನೇ ಈ ರೀತಿ ಹೇಳುವುದು ಕೇಳಿ ಚಿಕ್ಕಣ್ಣ ಸಿನಿಮಾದಲ್ಲಿ ನಟಿಸಲು ಓಕೆ ಎಂದರಂತೆ. ಇದನ್ನು ಈಗ ನೆನೆಪು ಮಾಡಿಕೊಂಡರೆ ನಗು ಬರುತ್ತದೆ ಎಂದರು ಚಿಕ್ಕಣ್ಣ.

ಕೆಲವರು ಚಿಕ್ಕಣ್ಣ ಐರನ್ ಲೆಗ್ ಎಂದಿದ್ದರು
'ಕಿರಾತಕ' ಸಿನಿಮಾಗೆ ಚಿಕ್ಕಣ್ಣರನ್ನು ಆಯ್ಕೆ ಮಾಡಿದಾಗ, ಕೆಲವರು ಅವನನ್ನು ಹಾಕಿಕೊಳ್ಳಬೇಡಿ, ಅವನು ಐರನ್ ಲೆಗ್ ಎಂದಿದ್ದರಂತೆ. ಆದರೆ, ಯಶ್ ಯಾವುದೇ ಮಾತಿಗೂ ತಲೆ ಕೆಡಿಸಿಕೊಳ್ಳದೆ ಚಿಕ್ಕಣ್ಣರನ್ನೇ ಸಿನಿಮಾದಲ್ಲಿ ಮುಂದುವರೆಸಿದರಂತೆ. ಸಿನಿಮಾ ನೂರು ದಿನ ಓಡಿ, ಹಿಟ್ ಆದ ಮೇಲೆ ಅವರಿಗೆ ಫೋನ್ ಮಾಡಿ ನಾನು ಐರಾನ್ ಲೆಗ್ ಅಲ್ಲ ಎಂದು ಹೇಳು ಎಂದಿದ್ದರಂತೆ.

ಕಾರ್ಯಕ್ರಮದಲ್ಲಿ ಫೋನ್ ಮಾಡಿದ ಯಶ್
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಚಿಕ್ಕಣ್ಣಗೆ ಯಸ್ ಕರೆ ಮಾಡಿದ್ದು, ಅವರಿಗೆ ಅಚ್ಚರಿ ಆಗುವಂತೆ ಮಾಡಿತು. ಚಿಕ್ಕಣ್ಣ ಒಳ್ಳೆಯ ಹುಡುಗ. ನನಗೆ ಬಹಳ ಇಷ್ಟ. ಎಲ್ಲ ಸಂಬಂಧಗಳಿಗೆ ಬೆಲೆ ನೀಡುತ್ತಾನೆ. ಚಿಕ್ಕ ಇದ್ದರೆ ಆ ಜಾಗದ ಕಳೆ ಬದಲಾಗುತ್ತದೆ.'' ಎಂದು ರಾಕಿ ಬಾಯ್ ಹೊಗಳಿದರು. ಯಶ್ ಮಾಡಿದ ಸಹಾಯವನ್ನು ಚಿಕ್ಕಣ್ಣ ನೆನೆದರು.