Don't Miss!
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಈತನೇ ಸೂಕ್ತ ಎಂದ ಆಕಾಶ್ ಚೋಪ್ರ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಶನಿ' ಧಾರಾವಾಹಿ ನೋಡುಗರಿಗೆ ಇದು ಬೇಸರದ ಸುದ್ದಿ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಶನಿ' ಧಾರಾವಾಹಿ ಸಾಕಷ್ಟು ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ . ಪ್ರತಿಯೊಬ್ಬರೂ ಒಂದು ದಿನವೂ ತಪ್ಪಿಸದೇ ನೋಡುವಂತಹ ಧಾರಾವಾಹಿ 'ಶನಿ' ಆಗಿದ್ದು ಟಿ ಆರ್ ಪಿ ವಿಚಾರದಲ್ಲಿಯೂ ಕೂಡಾ ತುಂಬಾ ಚೆನ್ನಾಗಿ ರೇಟಿಂಗ್ ಪಡೆಯುತ್ತಿದೆ .
'ಶನಿ' ಧಾರಾವಾಹಿ ಪ್ರೀತಿಯಿಂದ ಪ್ರತಿನಿತ್ಯ ನೋಡುವ ವೀಕ್ಷಕರಿಗೆ ಇಲ್ಲೊಂದು ಬೇಸರದ ಸುದ್ದಿ ಇದೆ. 'ಶನಿ' ಧಾರಾವಾಹಿಯ ಕಥೆಯಲ್ಲಿ ಮಹತ್ತರವಾದ ಬದಲಾವಣೆಗಳು ಆಗುತ್ತಿದೆ . ವೀಕ್ಷಕರು ಸದ್ಯದ ಮಟ್ಟಿಗೆ ನಿರೀಕ್ಷೆ ಮಾಡದಂತಹ ಬದಲಾವಣೆಗಳು ಮಾಡಲು ಧಾರಾವಾಹಿ ತಂಡ ಮುಂದಾಗಿದೆ.
ಇಷ್ಟು ದಿನಗಳ ಕಾಲ 'ಶನಿ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಬಾಲ ಕಲಾವಿದರು ಇನ್ನು ಮುಂದೆ ಕಣ್ಮರೆಯಾಗಲಿದ್ದಾರೆ ಇಂಥದ್ದೊಂದು ಸಣ್ಣ ಸುಳಿವು 'ಶನಿ' ಧಾರಾವಾಹಿಯ ತಂಡ ಬಿಟ್ಟುಕೊಟ್ಟಿದೆ . ಹಾಗಾದರೆ ಇನ್ನು ಮುಂದೆ 'ಶನಿ' ಧಾರಾವಾಹಿ ಪ್ರಸಾರವಾಗುವುದಿಲ್ಲವೇ? 'ಶನಿ' ಧಾರಾವಾಹಿಯ ಮುಂದಿನ ದಿನಗಳಲ್ಲಿ ಹೇಗಿರಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

'ಶನಿ' ಧಾರಾವಾಹಿಯಲ್ಲಿ ಬದಲಾವಣೆ
'ಶನಿ' ಧಾರಾವಾಹಿಯಲ್ಲಿ ಇನ್ನು ಮುಂದೆ ಬಾಲ ಕಲಾವಿದರು ಯಾರು ಕಾಣಿಸಿಕೊಳ್ಳುವುದಿಲ್ಲ ಎನ್ನುವ ಸುಳಿವು ಧಾರಾವಾಹಿ ತಂಡದಿಂದ ಸಿಕ್ಕಿದೆ . ಶನಿ ಪಾತ್ರಧಾರಿ, ಕಾಕ ರಾಜ, ಹನುಮ, ಯಮ, ಯಮಿ ಹೀಗೆ ಇನ್ನೂ ಸಾಕಷ್ಟು ಬಾಲ ಕಲಾವಿದರು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಇನ್ನು ಮುಂದೆ ಈ ಕಲಾವಿದರುಗಳು ಜಾಗಕ್ಕೆ ಬೇರೆ ಕಲಾವಿದರು ಬರಲಿದ್ದಾರೆ.

ಸೂರ್ಯದೇವಾ ನೀಡಿದ ಸುಳಿವು
'ಶನಿ' ಧಾರಾವಾಹಿಯಲ್ಲಿ ಸೂರ್ಯದೇವಾನ ಪಾತ್ರ ನಿರ್ವಹಿಸುತ್ತಿರುವ ರಂಜಿತ್ ಕುಮಾರ್ ಈ ಒಂದು ಸುಳಿವನ್ನು ನೀಡಿದ್ದಾರೆ. ಶನಿ ಧಾರಾವಾಹಿಯ ಬಾಲ ಕಲಾವಿದರ ಜೊತೆ ಫೋಟೊ ಶೂಟ್ ಮಾಡಿಸಿಕೊಂಡಿರುವ ಚಿತ್ರತಂಡ ಹಾಗೆ ಫೇಸ್ ಬುಕ್ ನಲ್ಲಿ ಮಕ್ಕಳ ಕೊನೆಯ ದಿನದ ಚಿತ್ರೀಕರಣ ಎಂದು ಅಪ್ಡೇಟ್ ಮಾಡಿದೆ .ಇದನ್ನು ನೋಡಿರುವ ವೀಕ್ಷಕರು ಸಾಕಷ್ಟು ಕಮೆಂಟ್ ಮಾಡುವ ಮೂಲಕ ಶನಿ ಧಾರಾವಾಹಿ ಬಗ್ಗೆ ವಿಚಾರಣೆ ಮಾಡಿದ್ದಾರೆ.

'ಶನಿ'ಯನ್ನು ನೋಡಲು ಇಷ್ಟಪಡುವ ವೀಕ್ಷಕರು
'ಶನಿ' ಧಾರಾವಾಹಿ ಕಥೆ, ಮೇಕಿಂಗ್ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿರುವ ರೀತಿಯಲ್ಲಿ ಪಾತ್ರಧಾರಿಗಳನ್ನು ನೋಡಿ ವೀಕ್ಷಕರು ಇಷ್ಟಪಟ್ಟಿದ್ದರು. ಅದರಲ್ಲಿ ಮುಖ್ಯವಾಗಿ ಶನಿ ಪಾತ್ರವನ್ನು ನಿರ್ವಹಿಸುತ್ತಿರುವ ಕಲಾವಿದನಿಗೆ ಹೆಚ್ಚಿನ ಬೇಡಿಕೆ ಮತ್ತು ಅಭಿಮಾನಿಗಳಿದ್ದರು. ಆದರೆ ಈಗ ಶನಿ ಬಾಲ್ಯದ ಕಥೆ ಮುಗಿಯುತ್ತಾ ಬಂದಿದೆ ಹಾಗಾಗಿ ಯುವಕನಾಗಿ ಶನಿ ಪ್ರೇಕ್ಷಕರ ಮುಂದೆ ಬರಲೇ ಬೇಕಾಗಿದೆ.

ಮುಂದುವರಿಯಲಿದೆ 'ಶನಿ' ಕಥೆ
'ಶನಿ' ಧಾರಾವಾಹಿಯಲ್ಲಿ ಬಾಲಕಲಾವಿದರ ಕಥೆ ಮುಗಿಯುತ್ತಾ ಬಂದಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಶನಿ ಯುವಕನಾಗಿದ್ದಾಗ ನಡೆದಂತಹ ಕಥೆಗಳು ಪ್ರಸಾರವಾಗಲಿದೆ ಅದೇ ರೀತಿಯಲ್ಲಿ ಈ ಹಿಂದೆ ಇದ್ದಂತಹ ಪಾತ್ರಗಳು ಯಮ. ಯಮಿ, ಕಾಕರಾಜ, ಹನುಮನ ಪಾತ್ರಗಳು ಮುಂದುವರೆಯಲಿದ್ದು, ಪಾತ್ರಧಾರಿಗಳು ಮಾತ್ರ ಬದಲಾಗಲಿದ್ದಾರೆ.

ಅಧಿಕೃತವಾಗಿ ಧಾರಾವಾಹಿ ತಂಡ ತಿಳಿಸಿಲ್ಲ
ಧಾರಾವಾಹಿಯ ಪಾತ್ರಧಾರಿಗಳು ಬದಲಾಗುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಅಧಿಕೃತವಾಗಿ ಕಲರ್ಸ್ ಕನ್ನಡ ವಾಹಿನಿಯಿಂದ ಆಗಲಿ, 'ಶನಿ' ಧಾರಾವಾಹಿ ತಂಡದಿಂದಾಗಲಿ ಇನ್ನೂ ಮಾಹಿತಿ ಸಿಕ್ಕಿಲ್ಲ. ಅಧಿಕೃತವಾಗಿ ಮಾಹಿತಿ ಹೊರಬಿದ್ದ ನಂತರ ಯಾರು ಯಾವೆಲ್ಲ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ತಿಳಿಯುತ್ತದೆ.