ಸಿದ್ದು 'ನಿದ್ದೆ' ಬಗ್ಗೆ ಲೇವಡಿ ಮಾಡುವ ಮುನ್ನ ಈ ವಿಷ್ಯ ನೆನಪಿರಲಿ.!
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ, ಬದಲಾಗಿ 'ನಿದ್ದರಾಮಯ್ಯ' ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕೇಳಿ ಬರುತ್ತವೆ. ಕಾರಣ, ವಿಧಾನ ಮಂಡಲ ಅಧಿವೇಶನ ಸೇರಿದಂತೆ ಅನೇಕ ಸಭೆ, ಸಮಾರಂಭಗಳಲ್ಲಿ ಸಿದ್ದರಾಮಯ್ಯ ನಿದ್ದೆ ಮಾಡಿ ಮಾಧ್ಯಮಗಳ ಕ್ಯಾಮೆರಾಗಳಿಗೆ ಸಿಕ್ಕಿಬಿದ್ದಿದ್ದಾರೆ.
ಅಷ್ಟಕ್ಕೂ, ಸಿದ್ದರಾಮಯ್ಯ ಸಾಹೇಬ್ರು ಆಗಾಗ ನಿದ್ದೆಗೆ ಜಾರಲು ಕಾರಣ 'ಸ್ಲೀಪ್ ಆಪ್ನಿಯಾ'. ಹಾಗಂತ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹೇಳಿದವರು ಸಿದ್ದರಾಮಯ್ಯ ರವರಿಗೆ ಟ್ರೀಟ್ ಮೆಂಟ್ ಕೊಡುತ್ತಿರುವ ವೈದ್ಯ ಡಾ.ರವಿ ಕುಮಾರ್.

''ನಾಡಿನ ಜನತೆ ಹಾಗೂ ದೇಶದ ಉದ್ದಗಲಕ್ಕೂ ಸಿದ್ದರಾಮಯ್ಯ ಯಾವಾಗಲೂ ನಿದ್ದೆ ಮಾಡುತ್ತಿರುತ್ತಾರೆ ಎಂಬ ಆಪಾದನೆಯನ್ನು ಕೇಳಿದ್ದೇವೆ. ಇದಕ್ಕೆ ಮೂಲ ಸಮಸ್ಯೆ ಸ್ಲೀಪ್ ಆಪ್ನಿಯಾ'' ಎನ್ನುತ್ತಾರೆ ಡಾ.ರವಿ ಕುಮಾರ್.
''ನಿದ್ದೆ ಮಾಡುವಾಗ ನಾಲಿಗೆ ಹಿಂದಕ್ಕೆ ಹೋಗಿ ತುಂಬಾ ದಣಿವಾದಾಗ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಬ್ರೇನ್ ಗೆ ಹೋಗಬೇಕಾದ ಆಕ್ಸಿಜನ್ ಪ್ರಮಾಣ ಕಡಿಮೆ ಆಗಿ
ಬೆಳಗ್ಗೆ ಎದ್ದಾಗ ಲವಲವಿಕೆ ಕಾಣಿಸುವುದಿಲ್ಲ. ನಿದ್ದೆ ಸಾಲದೆ, ಇನ್ನೂ ನಿದ್ದೆ ಮಾಡಬೇಕು ಎಂದು ಅನಿಸುತ್ತದೆ. ಆ ಸಮಸ್ಯೆಯಿಂದ ಸಿದ್ದರಾಮಯ್ಯ ಬಳಲುತ್ತಿದ್ದಾರೆ. ಈ ಸಮಸ್ಯೆ ಹೋಗಲಾಡಿಸಲು ಯೋಗಾ ಥೆರಪಿ ಪ್ರಾರಂಭ ಮಾಡಿದ್ದೇವೆ. ಇದರಿಂದ ಅವರಿಗೆ ತುಂಬಾ ಸಹಕಾರಿ ಆಗಿದೆ ಎಂದು ನಾನು ಭಾವಿಸುತ್ತೇನೆ'' ಎನ್ನುತ್ತಾರೆ ಡಾ.ರವಿ ಕುಮಾರ್.
ಹೀಗಾಗಿ, ಸಿದ್ದರಾಮಯ್ಯ ರವರ ನಿದ್ದೆ ಬಗ್ಗೆ ಇನ್ಮುಂದೆ ಲೇವಡಿ ಮಾಡುವ ಮೊದಲು ಸ್ವಲ್ಪ ಯೋಚಿಸಿ...


Click it and Unblock the Notifications











