»   » 'ವೀಕೆಂಡ್..' ಕಾರ್ಯಕ್ರಮಕ್ಕೆ ಸಿ.ಎಂ ಸಿದ್ಧರಾಮಯ್ಯ ಪತ್ನಿ ಬರ್ಲಿಲ್ಲ.! ಯಾಕೆ.?

'ವೀಕೆಂಡ್..' ಕಾರ್ಯಕ್ರಮಕ್ಕೆ ಸಿ.ಎಂ ಸಿದ್ಧರಾಮಯ್ಯ ಪತ್ನಿ ಬರ್ಲಿಲ್ಲ.! ಯಾಕೆ.?

Posted By:
Subscribe to Filmibeat Kannada

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಪತ್ನಿ ಹೆಸರೇನು ಅಂತ ನಿಮಗೆ ಗೊತ್ತಾ.? ಹೋಗಲಿ, ಸಿದ್ದರಾಮಯ್ಯ ರವರ ಪತ್ನಿಯನ್ನ ನೀವು ಎಲ್ಲಾದರೂ ನೋಡಿದ್ದೀರಾ.?

ಯಾವುದೇ ಸಮಾರಂಭ ಆಗಲಿ, ಕಾರ್ಯಕ್ರಮ ಆಗಲಿ... ಸಿ.ಎಂ ಸಿದ್ದರಾಮಯ್ಯ ಒಂಟಿಯಾಗಿ ಬರುತ್ತಾರೆ ವಿನಃ ಪತ್ನಿ ಸಮೇತ ಯಾವತ್ತೂ ಕಾಣಿಸಿಕೊಂಡಿಲ್ಲ. ಯಾಕೆ.?

ಮೊನ್ನೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲೂ ಸಿದ್ದರಾಮಯ್ಯ ಪತ್ನಿ ಭಾಗವಹಿಸಲಿಲ್ಲ. ಕನಿಷ್ಠ ವಿಡಿಯೋ ಬೈಟ್ ನಲ್ಲಿ ಒಂದು ಮಾತು ಕೂಡ ಆಡಲಿಲ್ಲ. ಇದರ ಹಿಂದಿರುವ ಕಾರಣ ಒಂದೇ. ಆ ಕಾರಣವನ್ನ ಸ್ವತಃ ಸಿದ್ದರಾಮಯ್ಯ ರವರೇ ಬಹಿರಂಗ ಪಡಿಸಿದರು. ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಂಕೋಚದ ಸ್ವಭಾವದವರು

ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಪತ್ನಿ ಪಾರ್ವತಿ ಸಂಕೋಚದ ಸ್ವಭಾವದವರು. ಹೀಗಾಗಿ ಸಮಾರಂಭ, ಕಾರ್ಯಕ್ರಮಗಳಲ್ಲಿ ಅವರು ಅಷ್ಟಾಗಿ ಭಾಗವಹಿಸುವುದಿಲ್ಲ.

'ವೀಕೆಂಡ್ ವಿತ್ ರಮೇಶ್' ಬಳಿಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದೇನು?

ರಮೇಶ್ ಅರವಿಂದ್ ಹೇಳಿದ್ದೂ ಅದನ್ನೇ.!

''ನಮ್ಮ ಶೋಗೆ ನಿಮ್ಮ ಪತ್ನಿಯವರನ್ನ ಕರೆಯಿಸಬೇಕು ಅಂತ ತುಂಬಾ ಪ್ರಯತ್ನ ಪಟ್ವಿ. ಆದ್ರೆ, ಅವರು ಬರಲಿಲ್ಲ. ತುಂಬಾ shy ಆಗಿದ್ದಾರೆ'' ಎಂದು ಸಿದ್ದರಾಮಯ್ಯ ರವರಿಗೆ ರಮೇಶ್ ಅರವಿಂದ್ ಹೇಳಿದರು.

ಸಿದ್ದರಾಮಯ್ಯ ಏನಂತಾರೆ.?

''ಮೊದಲಿನಿಂದಲೂ, ಅವಳು shy ನೇಚರ್. ಮುಖ್ಯಮಂತ್ರಿ ಆದವರು ಸಾಮಾನ್ಯವಾಗಿ ಪ್ರಮುಖ ಫಂಕ್ಷನ್ ಗಳಿಗೆ ಪತ್ನಿ ಸಮೇತ ಬರುತ್ತಾರೆ. ಆದರೆ, ನಾನು ಎಷ್ಟೋ ಸಮಾರಂಭಗಳಿಗೆ ನನ್ನ ಪತ್ನಿಯನ್ನ ಕರೆದರೂ ಬರಲಿಲ್ಲ'' ಎನ್ನುತ್ತಾರೆ ಸಿ.ಎಂ ಸಿದ್ದರಾಮಯ್ಯ

ಬ್ರೇಕಿಂಗ್ ನ್ಯೂಸ್: ಸಾಧಕರ ಸೀಟ್ ಮೇಲೆ ಕುಳಿತ ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಬರ್ಲಿಲ್ಲ

''ನಾನು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಮಾರಂಭಕ್ಕೂ ನನ್ನ ಪತ್ನಿ ಬರಲಿಲ್ಲ. ನನ್ನ ಜೊತೆ ಬರುವುದು ಬೇಡ. ಕುಟುಂಬದ ಜೊತೆ ಬಂದು ಕೂತ್ಕೋ ಅಂದರೂ ಬರಲಿಲ್ಲ'' - ಸಿ.ಎಂ ಸಿದ್ದರಾಮಯ್ಯ

ಒತ್ತಾಯ ಮಾಡಲ್ಲ

''ಇವತ್ತಿನವರೆಗೂ ವಿಧಾನ ಸೌಧ ಕಡೆ ನನ್ನ ಪತ್ನಿ ಕಾಲಿಟ್ಟಿಲ್ಲ. ಅವಳು ಎಲ್ಲೂ ಬರುವುದಿಲ್ಲ. ಮನೆಯಲ್ಲಿಯೇ ಇರುತ್ತಾಳೆ. ಅವಳ ಸ್ವಭಾವ ಹಾಗೆ ಇರುವುದರಿಂದ ನಾನು ಕೂಡ ಒತ್ತಾಯ ಮಾಡುವುದಿಲ್ಲ'' - ಸಿ.ಎಂ ಸಿದ್ದರಾಮಯ್ಯ

ಮಕ್ಕಳೂ ಕೂಡ ಹಾಗೇ.!

''ನಾವು ಕೂಡ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗಲಿಲ್ಲ. ಅಪ್ಪ ಮುಖ್ಯಮಂತ್ರಿ ಆದ್ಮೇಲೆ ವಿಧಾನ ಸೌಧಕ್ಕೆ ಒಮ್ಮೆ ಕೂಡ ಹೋಗಿಲ್ಲ. ಅವರ ಆಫೀಸ್ ಕೂಡ ನೋಡಿಲ್ಲ ನಾವು'' - ಯತೀಂದ್ರ, ಸಿದ್ದರಾಮಯ್ಯ ಪುತ್ರ.

English summary
Karnataka Chief Minister Siddaramaiah's wife Parvathi dint take part in Zee Kannada Channel's popular show 'Weekend With Ramesh 3'. What is the reason.? Read the article to know.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada