For Quick Alerts
  ALLOW NOTIFICATIONS  
  For Daily Alerts

  ಸೆಲೆಬ್ರಿಟಿ ಆಗಿದ್ದವ ಇಂದು ಹುಚ್ಚಾಸ್ಪತ್ರೆಯಲ್ಲಿ! 'ಸ್ಟಾರ್' ಗೆಳೆಯರಿಂದ ಸಿಕ್ಕಿಲ್ಲ ಸಹಾಯ

  By ಫಿಲ್ಮೀಬೀಟ್ ಡೆಸ್ಕ್‌
  |

  ಸ್ಟಾರ್ ಆಗಿ ಮೆರೆದವರು ಬೀದಿ ಪಾಲಾದ ಕತೆಗಳು ಚಿತ್ರರಂಗದಲ್ಲಿ, ಟಿವಿರಂಗದಲ್ಲಿ ಹೊಸದೇನೂ ಅಲ್ಲ. ಅಂಥಹಾ ಸರಣಿ ಕತೆಗಳಿಗೆ ಹೊಸ ಸೇರ್ಪಡೆ ನಟ, ಕಮಿಡಿಯನ್ ಸಿದ್ಧಾರ್ಥ್ ಸಾಗರ್.

  2009ರಿಂದಲೂ ಹಲವು ಟಿವಿ ಶೋಗಳಲ್ಲಿ, ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡು ಜನರನ್ನು ರಂಜಿಸಿದ್ದ ದೊಡ್ಡ ಜನಪ್ರಿಯತೆ ಗಳಿಸಿದ್ದ ನಟ ಸಿದ್ಧಾರ್ಥ್ ಸಾಗರ್ ಇದೀಗ ತೀರ ದಯನೀಯ ಸ್ಥಿತಿಯಲ್ಲಿದ್ದಾರೆ. ಆರ್ಥಿಕವಾಗಿ ದಿವಾಳಿ ಆಗಿರುವ ಜೊತೆಗೆ ಕೆಲವು ಖಾಯಿಲೆಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

  ಆಗಸ್ಟ್ 27ರಂದು ಬಹಳ ಕೆಟ್ಟ ಪರಿಸ್ಥಿತಿಯಲ್ಲಿ ಸಿದ್ಧಾರ್ಥ್ ಸಾಗರ್ ಮುಂಬೈ ಪೊಲೀಸರ ಕೈಗೆ ದೊರೆತಿದ್ದಾರೆ. ಅವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಅವರು ತಮ್ಮ ತಾಯಿಯ ಮೊಬೈಲ್ ಸಂಖ್ಯೆ ನೀಡಿದ್ದಾರೆ. ವಿಷಯ ತಿಳಿದ ಸಿದ್ಧಾರ್ಥ್ ಸಾಗರ್ ತಾಯಿ ದೆಹಲಿಯಿಂದ ಮುಂಬೈಗೆ ಬಂದು ಸಿದ್ಧಾರ್ಥ್ ಅನ್ನು ರಿಹೆಬಿಲಿಟೇಶನ್‌ ಸೆಂಟರ್‌ಗೆ ಸೇರಿಸಿದ್ದಾರೆ.

  2019ರ ವರೆಗೆ ಟಿವಿ ಶೋಗಳಲ್ಲಿ ಸ್ಟಾರ್ ಆಗಿದ್ದ ಸಿದ್ಧಾರ್ಥ್ ಸಾಗರ್ ಆ ನಂತರ ಅವಕಾಶಗಳು ಕಡಿಮೆ ಆಗಿ ಖಿನ್ನತೆಗೆ ಜಾರಿದ್ದರು. ಮದ್ಯಪಾನ, ಮಾದಕ ದ್ರವ್ಯದ ವ್ಯಸನ ಅಂಟಿಸಿಕೊಂಡ ಸಿದ್ಧಾರ್ಥ್‌ಗೆ ಖಿನ್ನತೆಯಿಂದಾಗಿ ಬೈಪೋಲಾರ್ ಡಿಸಾರ್ಡರ್‌ಗೆ ಒಳಗಾಗಿದ್ದಾರೆ. ಸಿದ್ಧಾರ್ಥ್‌ಗೆ ಈಗ ತನ್ನ ತಾಯಿಯ ಹೆಸರು ಮತ್ತು ಮೊಬೈಲ್ ಸಂಖ್ಯೆ ಹೊರತಾಗಿ ಇನ್ಯಾವುದೂ ನೆನಪಿಲ್ಲ.

  ''ನಾನು ಸಿದ್ಧಾರ್ಥ್‌ ಜೊತೆ ಮುಂಬೈನಲ್ಲಿದ್ದೆ. ಆದರೆ ದೆಹಲಿಯಲ್ಲಿ ನನ್ನ ಸಾಕುನಾಯಿಗೆ ಹುಷಾರಿಲ್ಲದೆ ಆಯಿತು. ಹಾಗಾಗಿ ನಾನು ದೆಹಲಿಗೆ ಹೋಗಲೇ ಬೇಕಾಯಿತು. ಅಷ್ಟರಲ್ಲಿ ಹೀಗೆ ಆಗಿದೆ. ಸಿದ್ಧಾರ್ಥ್‌ ಪರಿಸ್ಥಿತಿ ಹದಗೆಟ್ಟ ಬಳಿಕ ಅವನ ಗೆಳೆಯರು ಯಾರೊಬ್ಬರೂ ಅವನಿಗೆ ಸಹಾಯ ಮಾಡಲಿಲ್ಲ. ಅವನ ಕುಟುಂಬವಷ್ಟೆ ಅವನ ಬೆನ್ನಿಗೆ ನಿಂತಿದೆ. ಆದರೆ ಸಿದ್ಧಾರ್ಥ್ ಎಂದೂ ಕುಟುಂಬ ಮೌಲ್ಯವನ್ನು ಗುರುತಿಸಲಿಲ್ಲ'' ಎಂದಿದ್ದಾರೆ.

  ಮಗನ ಪರಿಸ್ಥಿತಿ ಬಗ್ಗೆ ಮಾತನಾಡಿರುವ ತಾಯಿ, ''ಅವನಿಗೆ ಬೈಪೋಲಾರ್ ಡಿಸಾರ್ಡರ್ ಆಗಿದೆ. ಅದಕ್ಕೆ ಆತ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದ ಆದರೆ ಅವನ್ನು ನಿಲ್ಲಿಸಿದ ಕಾರಣ ಮತ್ತೆ ಖಾಯಿಲೆ ಕಾಣಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಯಾರೊ ಕೆಲವು ಕಿಡಿಗೇಡಿಗಳು ಸಿದ್ಧಾರ್ಥ್ ಜೊತೆ ಜಗಳ ಮಾಡಿ ಅವನ ಬಟ್ಟೆಯನ್ನು ಸಹ ಹರಿದು ಹಾಕಿದ್ದರು'' ಎಂದಿದ್ದಾರೆ.

  ಈ ಹಿಂದೆ ಸಿದ್ಧಾರ್ಥ್ ತನ್ನ ತಾಯಿಯ ವಿರುದ್ಧ ದೂರು ನೀಡಿದ್ದರು. ''ನನ್ನ ತಾಯಿ ನನ್ನನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ನನ್ನ ಖಾತೆಯಿಂದ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನನ್ನು ಬಲವಂತದಿಂದ ಬಂಧಿಸಿದ್ದಾರೆ'' ಎಂದಿದ್ದರು.

  ಕೆಲವು ತಿಂಗಳ ಬಳಿಕ ಮತ್ತೊಂದು ಸುದ್ದಿಗೋಷ್ಠಿಯಲ್ಲಿ, ''ನನ್ನ ತಾಯಿ ನನ್ನನ್ನು ಬಹಳ ಕೇರ್ ಮಾಡುತ್ತಾರೆ, ಬಹಳ ಬೆಂಬಲ ನೀಡುತ್ತಾರೆ. ನಾನೀಗ ಹೊಸ ಮನುಷ್ಯನಾಗಿದ್ದೇನೆ. ಮಾದಕ ವಸ್ತುವಿನ ಚಟ ಬಿಟ್ಟುಬಿಟ್ಟಿದ್ದೇನೆ'' ಎಂದಿದ್ದರು.

  ಈಗ ಟಿವಿಯ ಜನಪ್ರಿಯ ಸ್ಟಾರ್ ಆಗಿರುವ ಕಪಿಲ್ ಶರ್ಮಾ, ಕೃಷ್ಣಾ, ಸುದೇಶ್, ಭಾರತಿ ಇನ್ನೂ ಹಲವರಿಗೆ ಸಿದ್ಧಾರ್ಥ್ ಸಾಗರ್ ಗೆಳೆಯ ಮತ್ತು ಸಹೋದ್ಯೋಗಿ ಆಗಿದ್ದರು. ಹಲವು ವರ್ಷಗಳ ಕಾಲ ಕಾಮಿಡಿ ಕಾರ್ಯಕ್ರಮದಲ್ಲಿ ಸಿದ್ಧಾರ್ಥ್, ಕಪಿಲ್, ಕೃಷ್ಣ, ಸುದೇಶ್ ಹಾಗೂ ಇನ್ನೂ ಇತರರೊಟ್ಟಿಗೆ ಕೆಲಸ ಮಾಡಿದ್ದರು. 2017ರಲ್ಲಿ ಕಪಿಲ್ ಶರ್ಮಾ ಶೋನಲ್ಲಿ ಸಹ ಸಿದ್ಧಾರ್ಥ್ ಸಾಗರ್ ಭಾಗವಹಿಸಿದ್ದರು.

  English summary
  Famous comedian, actor Siddharth Sagar found in a very bad state to Mumbai police. Now he is admitted to rehabilitation center.
  Friday, September 3, 2021, 21:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X