For Quick Alerts
  ALLOW NOTIFICATIONS  
  For Daily Alerts

  ಹಿಂದಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟ ವಿವಾದಿತ ಸ್ಪರ್ಧಿ, ಆಕೆಗೆ ಅತಿ ಹೆಚ್ಚು ಸಂಭಾವನೆ!

  |

  ಹಿಂದಿ ಬಿಗ್ ಬಾಸ್ 14ನೇ ಆವೃತ್ತಿ ಈ ವಾರದಿಂದ ಆರಂಭವಾಗುತ್ತಿದೆ. ಅಕ್ಟೋಬರ್ 3 ರಂದು ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳುತ್ತಿದೆ. ಒಂದು ದಿನಕ್ಕೂ ಮುಂಚಿತವಾಗಿಯೇ ಬಿಗ್ ಬಾಸ್ ಸ್ಪರ್ಧಿಗಳ ಕುರಿತು ಮಾಹಿತಿ ಬಹಿರಂಗವಾಗಿದೆ. ವಾಹಿನಿಯವರೇ ಅಧಿಕೃತವಾಗಿ ಟ್ವಿಟ್ಟರ್‌ನಲ್ಲಿ ಕೆಲವರ ಬಗ್ಗೆ ಪ್ರಕಟಿಸಿದ್ದಾರೆ.

  ಇನ್ನು ಕೆಲವರ ಬಗ್ಗೆ ಸುಳಿವು ಮಾತ್ರ ನೀಡಿದ್ದಾರೆ. ಈ ಆವೃತ್ತಿಯಲ್ಲಿ ಸರ್ಪ್ರೈಸ್ ಹಾಗೂ ವಿವಾದಿತ ಮಹಿಳೆಯೊಬ್ಬರು ಬಿಗ್ ಬಾಸ್ ಮನೆಗೆ ಪ್ರವೇಶ ನೀಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಈ ಆವೃತ್ತಿ ಅತಿ ಹೆಚ್ಚು ಸಂಭಾವನೆ ತೆಗೆದುಕೊಂಡಿರುವುದು ಸಹ ಇವರೇ ಎಂದು ಹೇಳಲಾಗಿದೆ. ಯಾರದು? ಮುಂದೆ ಓದಿ...

  ದೇವಮಾನವ ರಾಧೇ ಮಾ!

  ದೇವಮಾನವ ರಾಧೇ ಮಾ!

  ಕಳೆದ ನಾಲ್ಕೈದು ಆವೃತ್ತಿಗಳಿಂದ ಸ್ವಯಂ ಘೋಷಿತ ದೇವ ಮಾನವ ರಾಧೇ ಮಾ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ. ಈವರೆಗೂ ಅದು ನಿಜ ಆಗಿರಲಿಲ್ಲ. 14ನೇ ಆವೃತ್ತಿಯಲ್ಲಿ ಈ ನಿರೀಕ್ಷೆ ನಿಜವಾಗಿದೆ. ರಾಧೇ ಮಾ ಬಿಗ್ ಮನೆಗೆ ಎಂಟ್ರಿ ಕೊಟ್ಟಿರುವ ಪ್ರೋಮೋ ಸಹ ಬಿಡುಗಡೆಯಾಗಿದೆ.

  ಬಿಗ್‌ಬಾಸ್ ಆಯೋಜಕರ ಮೇಲೆ ಗಂಭೀರ ಆರೋಪ ಮಾಡಿದ ಸ್ಪರ್ಧಿ

  ಅತಿ ಹೆಚ್ಚು ಸಂಭಾವನೆ!

  ಅತಿ ಹೆಚ್ಚು ಸಂಭಾವನೆ!

  ಅಂದ್ಹಾಗೆ, ಈ ಆವೃತ್ತಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ಸ್ಪರ್ಧಿ ಸಹ ರಾಧೇ ಮಾ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ರಾಧೇ ಮಾ ಬಿಗ್ ಬಾಸ್ ಎಂಟ್ರಿಗಾಗಿ 25 ಲಕ್ಷ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

  ತಮಿಳು ನಟಿ ಎಂಟ್ರಿ

  ತಮಿಳು ನಟಿ ಎಂಟ್ರಿ

  ಸಲ್ಮಾನ್ ಖಾನ್ ಶೋನಲ್ಲಿ ಈ ಸಲ ತಮಿಳು ನಟಿಯೊಬ್ಬರು ಅವಕಾಶ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಕಾಂಚನ 3 ಚಿತ್ರದಲ್ಲಿ ನಟಿಸಿರುವ ನಿಕ್ಕಿ ಟ್ಯಾಂಬೊಲಿ ಸಹ ಈ ಸೀಸನ್‌ನಲ್ಲಿ ಇರಲಿದ್ದಾರೆ. ಮುಂಬೈನ ಫೇಮಸ್ ಡಿಜೆ ಜೊತೆಯಲ್ಲಿ ಈಕೆ ಲವ್ವಲ್ಲಿ ಇದ್ದಾಳೆ ಎನ್ನಲಾಗಿದೆ.

  ತೆಲುಗು ಬಿಗ್‌ಬಾಸ್: ಸ್ಪರ್ಧಿಯೊಬ್ಬರ ಅಪಹರಣ, ಮನೆಯೊಳಗೆ ಸಖತ್ ಹೈಡ್ರಾಮಾ

  ಜೋಡಿ ಕಮಾಲ್!

  ಜೋಡಿ ಕಮಾಲ್!

  ಬಾಲಿವುಡ್ ಕಿರುತೆರೆಯ ಖ್ಯಾತ ಜೋಡಿ ರುಬಿನಾ ಡಿಲೈಕ್ ಮತ್ತು ಪತಿ ಅಭಿನವ್ ಶುಕ್ಲಾ ಸಹ ಬಿಗ್ ಬಾಸ್ ಎಂಟ್ರಿಯಾಗಿದ್ದಾರೆ. ಸುಮಾರು 40 ದಿನಗಳ ಅಗ್ರಿಮೆಂಟ್‌ಗಾಗಿ ಈ ಜೋಡಿಗೆ 5 ಲಕ್ಷ ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ.

  English summary
  Controversial Godwoman Radhe maa Enter to Bigg Boss season 14. she os the highest paid contestants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X