»   » ಇಬ್ಬರಲ್ಲಿ ಕಾಲು ಎಳ್ದೋರ್ ಯಾರು? ಎಳ್ಸ್ಕೊಂಡೋರು ಯಾರು?

ಇಬ್ಬರಲ್ಲಿ ಕಾಲು ಎಳ್ದೋರ್ ಯಾರು? ಎಳ್ಸ್ಕೊಂಡೋರು ಯಾರು?

Posted By:
Subscribe to Filmibeat Kannada

ಕಿಚ್ಚ ಸುದೀಪ್ ನಿರೂಪಣೆ ಇರುವ 'ಬಿಗ್ ಬಾಸ್' ವೇದಿಕೆಯ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ನಿನ್ನೆ ರಿಯಲ್ ಸ್ಟಾರ್ ಉಪೇಂದ್ರ ಭಾಗವಹಿಸಿದ್ರು.

'ಬಿಗ್ ಬಾಸ್' ಸ್ಟೇಜ್ ಮೇಲೆ ಉಪೇಂದ್ರ ಎಂಟ್ರಿ ಕೊಡುತ್ತಿದ್ದಂತೆಯೇ ಪ್ರೇಕ್ಷಕರು ಜೋರಾಗಿ ಶಿಳ್ಳೆ-ಚಪ್ಪಾಳೆ ತಟ್ಟುವುದಕ್ಕೆ ಶುರು ಮಾಡಿದರು. ಇದನ್ನು ಕಂಡ ಸುದೀಪ್, ''ನೋಡಿ ನನಗೂ ಚಪ್ಪಾಳೆ ತಟ್ಟಲ್ಲ ಇವರು ಹಿಂಗೆ. ಡೈಲಿ ಸಿಗ್ಬಾರ್ದು ಅನ್ನೋದು ಇದಕ್ಕೆ ನೋಡಿ'' ಅಂತ ಹೇಳಿದ್ರು. ['ಬಿಗ್ ಬಾಸ್' ವೇದಿಕೆಯಲ್ಲಿ ಉಪೇಂದ್ರ 'ರಿಯಲ್ ಸ್ಟಾರ್' ಆದ ಜರ್ನಿ]

sudeep-upendra

ಅದಕ್ಕೆ ಥಟ್ ಅಂತ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದು ಹೀಗೆ - ''ಇವರಿಗೆ (ಸುದೀಪ್ ರತ್ತ ಬೆಟ್ಟು ಮಾಡಿ ತೋರಿಸುತ್ತಾ) ಕರ್ನಾಟಕ, ಆಂಧ್ರ, ತಮಿಳುನಾಡು ಎಲ್ಲಾ ಕಡೆ ಚಪ್ಪಾಳೆ ತಟ್ಟಾಯ್ತು. ಇನ್ನೇನು...'' [ರಾಜಕೀಯಕ್ಕೆ ಧುಮುಕಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ!?]

ಉಪೇಂದ್ರ ರಿಯಾಕ್ಷನ್ ಕೇಳಿದ ಸುದೀಪ್, ''ಅವರು ಹೇಳಿದ್ದು ಆಂಧ್ರ, ತಮಿಳುನಾಡು, ಕರ್ನಾಟಕ ಎಲ್ಲಾ ಚಪ್ಪಾಳೆ ತಟ್ಟಿದ್ದಾರೆ ಅಂತಲ್ಲ. ಮೂರು ಜನನೂ ತಟ್ಟಾಯ್ತು. ಇನ್ನೇನಿದೆ ತಟ್ಟಕ್ಕೆ ಅಂತ. ಅಯ್ಯಾ...ಅರ್ಥನೇ ಮಾಡಿಕೊಳ್ಳಲಿಲ್ಲ ನೀವು(ಪ್ರೇಕ್ಷಕರು)'' ಅಂದರು.

ಇಡೀ ಕಾರ್ಯಕ್ರಮದಲ್ಲಿ ಉಪೇಂದ್ರ ಮತ್ತು ಸುದೀಪ್ ರವರ ಸಂವಾದ ಆಲ್ಮೋಸ್ಟ್ ಹೀಗೆ ಇತ್ತು.

ಇದರಲ್ಲಿ ಯಾರು ಯಾರಿಗೆ ಕಾಲು ಎಳೆದರು ಅನ್ನೋಕ್ಕಿಂತ ಇಬ್ಬರ ಕಾಮಿಡಿ ಸೆನ್ಸ್ ನೋಡಿ ಪ್ರೇಕ್ಷಕರು ನಕ್ಕು-ನಲಿದದ್ದು ಮಾತ್ರ ಸುಳ್ಳಲ್ಲ.

English summary
Kannada Actor Real Star Upendra and Kiccha Sudeep had a humorous conversation in Super Sunday with Sudeep (Bigg Boss Kannada-3) show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada