For Quick Alerts
  ALLOW NOTIFICATIONS  
  For Daily Alerts

  ಹಂಸಲೇಖ, ರವಿಚಂದ್ರನ್ ಮನಸ್ತಾಪದ ಕಾರಣ ಬಹಿರಂಗ

  |

  ಜೀಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ರಮೇಶ್ ಅರವಿಂದ್ ಅರ್ಪಿಸುವ 'ವೀಕೆಂಡ್ ವಿತ್ ರಮೇಶ್' ಟಿವಿ ಶೋನ ಎರಡನೇ ಎಪಿಸೋಡ್ ನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಭಾಗವಹಿಸಿದ್ದರು.

  ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ, ಸಂಗೀತ ನಿರ್ದೇಶಕ ಮತ್ತು ಒಂದು ಕಾಲದ ತನ್ನ ಪರಮಾಪ್ತ ಹಂಸಲೇಖ ಜೊತೆ ತನ್ನ ಹಳಸಿದ ಸಂಬಂಧದ ಬಗ್ಗೆ ರಮೇಶ್ ಕೇಳಿದ ಪ್ರಶ್ನೆಗೆ ರವಿಚಂದ್ರನ್ ಮನಬಿಚ್ಚಿ ಮಾತನಾಡಿದ್ದಾರೆ.

  ಸುಮಾರು ಇಪ್ಪತ್ತೈದು ವರ್ಷಗಳಿಂದ ನಾನು ಹಂಸಲೇಖ ಅವರನ್ನು ಬಲ್ಲೆ. ಹಂಸಲೇಖ ಇಲ್ಲದ ರವಿಚಂದ್ರನ್ ಚಿತ್ರಗಳು ಇರುತ್ತಿರಲಿಲ್ಲ. ಸಂಗೀತದಿಂದಲೇ ನನ್ನ ಚಿತ್ರ ಯಶಸ್ವಿಯಾದ ಉದಾಹರಣೆಗಳು ಇವೆ. ಪ್ರೇಮಲೋಕ ಚಿತ್ರದಿಂದ ನನ್ನ ಮತ್ತು ಹಂಸಲೇಖ ಹೊಂದಾಣಿಕೆಯ ಚಿತ್ರಗಳು ಆರಂಭವಾದವು. (ರವಿಚಂದ್ರನ್ ಕಾರ್ಯಕ್ರಮದ ವಿಡಿಯೋ)

  ನಾನು ಮತ್ತು ಹಂಸಲೇಖ ಪರಮ ಸ್ನೇಹಿತರಂತೆ ಇದ್ದೆವು. ಅವರ ಮೇಲೆ ನಾನು ಬಹಳಷ್ಟು ವಿಶ್ವಾಸ ಇಟ್ಟುಕೊಂಡಿದ್ದೆ. ಆದರೆ 'ಯಾರೇ ನೀನು ಚೆಲುವೆ' ಚಿತ್ರದ ಸಮಯದಲ್ಲಿ ಹಂಸಲೇಖ ನನ್ನ ಮೇಲೆ ವಿಶ್ವಾಸವಿಡಲಿಲ್ಲ ಎಂದು ರವಿಚಂದ್ರನ್ ಕಾರ್ಯಕ್ರಮದಲ್ಲಿ ಬೇಸರದ ಮಾತನ್ನಾಡಿದ್ದಾರೆ.

  ಹಂಸಲೇಖ ಜೊತೆ ವಿರಸಕ್ಕೆ ಕಾರಣ, ಕಾರ್ಯಕ್ರಮದಲ್ಲಿ ಕನ್ನಡ ಅಭಿಮಾನಿಗಳ ಮತ್ತು ಪತ್ನಿಯ ಕ್ಷಮೆಯಾಚಿಸಿದ ರವಿಚಂದ್ರನ್. ಮುಂದೆ ಓದಿ..

  ಯಾರೇ ನೀನು ಚೆಲುವೆ ಚಿತ್ರದ ಸಮಯದಲ್ಲಿ ಏನಾಯಿತು?

  ಯಾರೇ ನೀನು ಚೆಲುವೆ ಚಿತ್ರದ ಸಮಯದಲ್ಲಿ ಏನಾಯಿತು?

  ಈ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಿಸಿದ್ದರು. ಡಿ ರಾಜೇಂದ್ರ ಬಾಬು ನಿರ್ದೇಶನದ ಈ ಚಿತ್ರಕ್ಕೆ ರಾಕ್ಲೈನ್, ವಿ ಮನೋಹರ್ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡಲು ಬಯುಸಿದ್ದರು. ಆದರೆ ನನ್ನ ಚಿತ್ರಕ್ಕೆ ಹಂಸಲೇಖ ಅವರೇ ಸಂಗೀತ ನೀಡಬೇಕೆಂದು ಪಟ್ಟು ಹಿಡಿದೆ. ಅದಕ್ಕೆ ನಿರ್ಮಾಪಕರು ಮತ್ತು ನಿರ್ದೇಶಕರು ಒಪ್ಪಿಕೊಂಡರು.

  ಚಿತ್ರದ ಆಡಿಯೋ ಕ್ಯಾಸೆಟ್ ನಲ್ಲಿ ಪ್ರಿಂಟ್ ಇರಲಿಲ್ಲ

  ಚಿತ್ರದ ಆಡಿಯೋ ಕ್ಯಾಸೆಟ್ ನಲ್ಲಿ ಪ್ರಿಂಟ್ ಇರಲಿಲ್ಲ

  ಯಾರೇ ನೀನು ಚೆಲುವೆ ಚಿತ್ರದ ಆಲ್ಬಂಗೆ ನಾನು ಡಿಸೈನ್ ಮಾತ್ರ ಮಾಡಿ ಕಳುಹಿಸಿದ್ದೆ. ಚಿತ್ರದ ತಾರಾಗಣ, ತಂತ್ರಜ್ಞರ ಹೆಸರನ್ನು ಕ್ಯಾಸೆಟ್ ನಲ್ಲಿ ಪ್ರಿಂಟ್ ಮಾಡಿಸುವ ಜವಾಬ್ದಾರಿ ಪ್ರೊಡಕ್ಷನ್ ಟೀಮ್ ನದ್ದಾಗಿತ್ತು. ಅವರು ಆಕಸ್ಮಿಕವಾಗಿ ಅದರಲ್ಲಿ ಹಂಸಲೇಖ ಅವರ ಹೆಸರನ್ನು ಹಾಕುವುದನ್ನು ಮರೆತಿದ್ದರು. ಇದಕ್ಕೆ ನಾನೇ ಕಾರಣವೆಂದು ಹಂಸಲೇಖ ನನ್ನ ಮೇಲೆ ಬೇಸರ ವ್ಯಕ್ತ ಪಡಿಸಿದರು.

  ಆ ಘಟನೆಯಲ್ಲಿ ನನಗೆ ಬಹಳ ನೋವಾಯಿತು

  ಆ ಘಟನೆಯಲ್ಲಿ ನನಗೆ ಬಹಳ ನೋವಾಯಿತು

  25ವರ್ಷಗಳಿಂದ ಬಲ್ಲ, ಜೊತೆಯಾಗಿ ಕೆಲಸ ಮಾಡಿದ ನಿಮ್ಮ ಹೆಸರನ್ನು ನಾನು ಹೇಗೆ ಮರೆಯುತ್ತೇನೆ ಎಂದು ನಾನು ಸ್ಪಷ್ಟೀಕರಣ ನೀಡಿದರೂ ಅವರು ನನ್ನ ಮಾತನ್ನು ಕೇಳಲಿಲ್ಲ. ನನ್ನ ಮೇಲೆ ನಂಬಿಕೆಯಿಲ್ಲದ ಅವರ ಜೊತೆ ಮುಂದೆ ಕೆಲಸ ಮಾಡಲು ನನ್ನ ಮನಸ್ಸು ಕೇಳಲಿಲ್ಲ.

  ನಾನೇ ಸಂಗೀತ ನಿರ್ದೇಶಕನಾದೆ

  ನಾನೇ ಸಂಗೀತ ನಿರ್ದೇಶಕನಾದೆ

  ಆ ಚಿತ್ರದ ನಂತರ ಬಿಡುಗಡೆಯಾದ (1999) ನಂತರ 'ನಾನು ನನ್ನ ಹೆಂಡ್ತೀರು' ಚಿತ್ರದ ಮೂಲಕ ನಾನೂ ಸಂಗೀತ ನಿರ್ದೇಶಕನಾದೆ. ಈ ಘಟನೆಯ ನಂತರವೂ ನನ್ನ ಎರಡು ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ ಎಂದು ರವಿಚಂದ್ರನ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

  ಜೀವನದುದ್ದಕ್ಕೂ ನನ್ನದೇ ಶೈಲಿಯ ಚಿತ್ರದಲ್ಲಿ ನಟಿಸಿದ್ದೆ

  ಜೀವನದುದ್ದಕ್ಕೂ ನನ್ನದೇ ಶೈಲಿಯ ಚಿತ್ರದಲ್ಲಿ ನಟಿಸಿದ್ದೆ

  ನನ್ನ ಸಿನಿಮಾ ಜೀವನದಲ್ಲಿ ನನ್ನದೇ ಶೈಲಿಯ ಚಿತ್ರದಲ್ಲಿ ನಾನು ನಟಿಸಿದ್ದು. ಆದರೆ ಕೆಲವೊಂದು ಪರಿಸ್ಥಿತಿಯಿಂದಾಗಿ ಕೆಲವೊಂದು ಕೆಟ್ಟ ಸಿನಿಮಾಗಳನ್ನು ನಟಿಸಬೇಕಾಯಿತು. ನನ್ನ ಅಂದಿನ ಬದುಕಿಗೆ ಸಿನಿಮಾ ಒಪ್ಪಿಕೊಳ್ಳುವ ಅನಿವಾರ್ಯತೆ ಇತ್ತು. ನನ್ನ ಜೀವನ, ಭದ್ರತೆ, ಕುಟುಂಬಕ್ಕಾಗಿ ಅಂತಹ ಚಿತ್ರಗಳನ್ನು ಮಾಡಿದ್ದೆ. ಅದಕ್ಕಾಗಿ ನನ್ನ ಅಭಿಮಾನಿಗಳ ಕ್ಷಮೆಯಾಚಿಸುತ್ತೇನೆ.

  ನನ್ನ ಹೆಂಡತಿಗೆ ಕಷ್ಟಕೊಟ್ಟೆ

  ನನ್ನ ಹೆಂಡತಿಗೆ ಕಷ್ಟಕೊಟ್ಟೆ

  ನನ್ನ ಹೆಂಡತಿಗೆ ನಾನು ಕಷ್ಟಕೊಟ್ಟಿರಬಹುದು. ನಾನು ಯಾವಾಗಲೂ ನನ್ನದೇ ಲೋಕದಲ್ಲಿ ಇರುತ್ತದೆ. ಕೆಲಸ, ಸಿನಿಮಾ ಒತ್ತಡ ಇದ್ದುದ್ದರಿಂದ ನನ್ನ ಜೀವನದ ಬಗ್ಗೆ ಹೆಚ್ಚಿನ ಮಹತ್ವ ಕೊಡಲಾಗಲಿಲ್ಲ, ಅದಕ್ಕಾಗಿ ನನ್ನ ಪತ್ನಿಯಲ್ಲಿ ಸಾರಿ ಕೇಳುತ್ತೇನೆ. ನನ್ನ ಮಗನ ಚಿತ್ರ ಬರುವ ಜನವರಿಯಲ್ಲಿ ತೆರೆ ಕಾಣಲಿದೆ. ನನ್ನ ಹೆಂಡತಿ ಮತ್ತು ನನ್ನ ಮಕ್ಕಳು ನನಗೆ ಪ್ರಾಣ. ನನ್ನ ಮಗನ ಚಿತ್ರ ತೆರೆಗೆ ತರುವ ಮೂಲಕ ನನ್ನ ಹೆಂಡತಿಯ ಕನಸನ್ನು ನನಸು ಮಾಡುತ್ತೇನೆ.

  ವೇಲು ನೀಡಿದ ಭರವಸೆ

  ವೇಲು ನೀಡಿದ ಭರವಸೆ

  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲಹರಿ ರೆಕಾರ್ಡಿಂಗ್ ಕಂಪೆನಿಯ ಮಾಲೀಕ ವೇಲು, ಪ್ರೇಮಲೋಕ ಚಿತ್ರದ ಕ್ಯಾಸೆಟ್ ಆ ಕಾಲದಲ್ಲಿ 38 ಲಕ್ಷ ಕ್ಯಾಸೆಟ್ ಬಿಕರಿಯಾಯಿತು. ಆ ದಾಖಲೆಯನ್ನು ದಕ್ಷಿಣಭಾರತದ ಯಾವುದೇ ಭಾಷೆಯ ಚಿತ್ರಗಳೂ ಈವರೆಗೂ ಮುರಿಯಲಾಗಲಿಲ್ಲ. ನಿಮ್ಮ ಮುಂದಿನ ಚಿತ್ರಕ್ಕೆ ಮತ್ತು ನಿಮ್ಮ ಮಗನ ಚಿತ್ರಕ್ಕೆ ಯಾವುದೇ ಸಹಕಾರ ನೀಡಲ ನಾನು ಸಿದ್ದ ಎಂದು ವೇಲು ಹೇಳಿದ್ದಾರೆ.

  ನಾಯಕಿಯರ ಬಗ್ಗೆ ಬೇರೆ ಕಲ್ಪನೆ ಬೇಡ

  ನಾಯಕಿಯರ ಬಗ್ಗೆ ಬೇರೆ ಕಲ್ಪನೆ ಬೇಡ

  ನನಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ನಾನು ಚಿತ್ರವನ್ನು ಪ್ರೀತಿಯಿಂದ ಮಾಡುತ್ತೇನೆ. ಚಿತ್ರದ ಪ್ರತೀ ದೃಶ್ಯಗಳು ನನ್ನ ಕಲ್ಪನೆಯಂತೆಯೇ ಬರಬೇಕೆಂದು ಬಯಸುವವನು ನಾನು. ಅದರಂತೆ ನಾಯಕಿಯೂ ಕೂಡಾ. ಹೀಗಾಗಿ ನಾಯಕಿಯ ಬಗ್ಗೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ.

  English summary
  Crazy Star V Ravichandan in 'Weekend with Ramesh' programme in Zee Kannada channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X