»   »  ನಟ ರವಿಚಂದ್ರನ್ ಪ್ರಕಾರ 'ಬಿಗ್ ಬಾಸ್' ಯಾರು?

ನಟ ರವಿಚಂದ್ರನ್ ಪ್ರಕಾರ 'ಬಿಗ್ ಬಾಸ್' ಯಾರು?

Posted By:
Subscribe to Filmibeat Kannada

ಹಿರಿಯ ನಟ ರವಿಚಂದ್ರನ್ ಅವರ ಸ್ವಭಾವವೇ ಹಾಗೆ. ಹೃದಯ ಮತ್ತು ನಾಲಿಗೆಗೆ ಫಿಲ್ಟರ್ ಹಾಕಿಕೊಳ್ಳದೆ ಇದ್ದುದನ್ನು ಇರುವ ಹಾಗೇ ನೇರ, ದಿಟ್ಟ, ನಿರಂತರವಾಗಿ ಮಾತನಾಡುವ ಜಾಯಮಾನ ಅವರದು.

ನಿನ್ನೆ ಮಂಗಳವಾರ ಸುವರ್ಣ ನ್ಯೂಸ್ ಚಾನೆಲಿಗೆ ನೀಡಿದ ಸಂದರ್ಶನದಲ್ಲೂ ಹಾಗೆ ನಿರರ್ಗಳವಾಗಿ/ನಿರ್ಭೀತಿಯಿಂದ ತಮ್ಮ ಮನಸ್ಸಿಗೆ ಅನಿಸಿದ್ದನ್ನು ಹೇಳಿಬಿಟ್ಟಿದ್ದಾರೆ. ಯಾವುದರ ಬಗ್ಗೆ ಅಂದ್ಕೊಂಡಿರಾ? ಅದೇ ಈಗ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಟಿವಿ ಕನ್ನಡ ಚಾಲೆನ್ ನಡೆಸಿಕೊಟ್ಟ ಬಿಗ್ ಬಾಸ್ ರಿಯಾಲ್ಟಿ ಷೋದಲ್ಲಿ ವಿಜಯೀಭವ ಆದವರ ಬಗ್ಗೆ ಅವರ ಮಾತುಕತೆ ನಡೆಯಿತು.

ಖುದ್ದು ರವಿಚಂದ್ರನ್ ಅವರೇ ಬಿಗ್ ಬಾಸ್. ಆದರೂ ಚಿತ್ರರಂಗದವರನ್ನೇ ಹೆಚ್ಚಾಗಿ ಹೊಂದಿದ್ದ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ. ವಿವರಕ್ಕೆ ಸ್ಲೈಡ್ ಪ್ಲೀಸ್... 

ನಾನೇ ಬಿಗ್ ಬಾಸ್

ಅಸಲಿಗೆ ನಾನು ಬಿಗ್ ಬಾಸ್ ಆಂಕರ್ ಆಗುತ್ತಿರಲಿಲ್ಲ. ಏಕೆಂದರೆ ಯಾರೋ ಬರೆದುಕೊಟ್ಟ ಅವರ ಟಾಸ್ಕ್/ಅಜೆಂಡಾಗೆ ತಕ್ಕಂತೆ ಮಾತನಾಡುವುದಕ್ಕೆ ನನಗೆ ಒಗ್ಗುವುದಿಲ್ಲ. ನನಗೆ ಏನನ್ನಿಸಿತ್ತದೋ ಆ ಕ್ಷಣಕ್ಕೆ ಏನು ತೋಚುತ್ತದೋ ಅದನ್ನು ನೇರವಾಗಿ ಹೇಳಿಬಿಡುವ ಸ್ವಭಾವ ನನ್ನದು. ಹಾಗಾಗಿ ತೀರ್ಪು ಸಹ ನನ್ನದೇ ಆಗಿರುತ್ತದೆ. ಯಾರೋ ಹೇಳಿದರು ಅಂತ ವಿಜಯ್ ರಾಘವೇಂದ್ರನನ್ನು ಆರಿಸುವುದಿಲ್ಲ.

ನನ್ನ ಬಿಗ್ ಬಾಸ್ ಅವನೇ!

ನಾನೇನಾದರೂ ನಟ ಸುದೀಪ್ ಜಾಗದಲ್ಲಿ ಬಿಗ್ ಬಾಸ್ ತೀರ್ಪುಗಾರನಾಗಿದ್ದರೆ ಖಂಡಿತ ಅರುಣ್ ಸಾಗರನನ್ನೇ ಬಿಗ್ ಬಾಸ್ ಎಂದು ಘೋಷಿಸುತ್ತಿದೆ ಸ್ವಾಮಿ. ಅರುಣ್ ಸಾಗರನೂ ನನ್ನ ಹುಡುಗನೇ. ವಿಜಯ್ ರಾಘವೇಂದ್ರನೂ ನನಗೆ ಬೇಕಾದವನೆ. ಆದರೆ ಬಿಗ್ ಬಾಸ್ ನಲ್ಲಿ ಕೊಟ್ಟ ಟಾಸ್ಕ್ ಗಳನ್ನು ಸಮಯ ಸ್ಫೂರ್ತಿಯಿಂದ, ತತ್ ಕ್ಷಣಕ್ಕೆ ಸಮರ್ಥವಾಗಿ ನಿಭಾಯಿಸುತ್ತಾ ತನ್ನ ಪ್ರತಿಭೆಯನ್ನು ಹೊರಹಾಕಿದ್ದು ಅರುಣ್ ಸಾಗರ ಒಬ್ಬನೇ ಹಾಗಾಗಿ ಅವನೇ ನಿಸ್ಸಂಶವಾಗಿ ನನ್ನ ಬಿಗ್ ಬಾಸ್

ನಮ್ಮವರೇ ಎಂಬ ಅಭಿಮಾನದಿಂದ ಬಿಗ್ ಬಾಸ್ ನೋಡ್ತಿದ್ದೆ

ಆಗಾಗ ಬಿಗ್ ಬಾಸ್ ಎಪಿಸೋಡ್ ಗಳನ್ನು ನೋಡುತ್ತಿದೆ. ಚೆನ್ನಾಗಿ ಬರುತ್ತಿತ್ತು. ಎಲ್ಲಾ ನಮ್ಮವರೇ ಎಂಬ ಅಭಿಮಾನದಿಂದಲೂ ಕಾರ್ಯಕ್ರಮ ನೋಡುತ್ತಿದ್ದೆ. ಆದರೆ ಕೊನೆಗೆ ನಿರಾಶೆಯಾಯ್ತು. ವಿಜಯ್ ರಾಘವೇಂದ್ರಗೆ ಪ್ರಶಸ್ತಿ ಸಿಕ್ಕಿದ್ದು ಖಂಡಿತ ನನಗೆ ಇಷ್ಟವಾಗಲಿಲ್ಲ.

ನರೇಂದ್ರ ಶರ್ಮಾ ನನ್ನ ಹುಡುಗ

ನರೇಂದ್ರ ಶರ್ಮಾ ನನ್ನ ಹುಡುಗ. ಅವನು ಈವತ್ತಿನಂತೆ ಏನೋ ಆಗುವುದಕ್ಕೂ ಮೊದಲಿಂದಲೂ ಅವನನ್ನು ನೋಡ್ತಿದ್ದೀನಿ. ಅವನ-ನಾನು ಪರಸ್ಪರ ಹೋಗೋ ಬಾರೋ ಗೆಳೆಯರು. ಬಿಗ್ ಬಾಸ್ ನಲ್ಲಿಯೂ ಅವನು ಚೆನ್ನಾಗಿ ಆಕ್ಟ್ ಮಾಡುತ್ತಿದ್ದ. ಆದರೆ ಅವನನ್ನು 4 ನೆಯವನನ್ನಾಗಿ ಮಾಡಿದ್ದು ಶುದ್ಧ ತಪ್ಪು. ಪರದ್ದು ಪೆದ್ದಾಗಿಯಾದರೂ ನರೇಂದ್ರ ಚೆನ್ನಾಗಿಯೇ ಮಾಡುತ್ತಿದ್ದ. ಎಲ್ಲ ಎಪಿಸೋಡುಗಳೂ ಅವನ ಸುತ್ತಲೇ ಗಿರಕಿ ಹೊಡೆಯುತ್ತಿತ್ತು.

ಖಾಸಗಿ ವಿಷಯಗಳು ಬೇಡ್ವೇ ಬೇಡ

ಅನೇಕ ಎಪಿಸೋಡುಗಳಲ್ಲಿ ಸ್ಪರ್ಧಿಗಳು ತಮ್ಮ ಖಾಸಗಿ ವಿಷಯಗಳನ್ನು ಬಹಿರಂಗಪಡಿಸುತ್ತಿದ್ದರು. ಆದರೆ ನಾನು ಅದರ ಬಗ್ಗೆಯೆಲ್ಲಾ ಕಾಮೆಂಟ್ ಮಾಡುವುದಿಲ್ಲ. ಬಹುಶಃ ಅವರಿಗೆ ಹಾಗೆ ಮಾತನಾಡಲು ಉದ್ದೇಶಪೂರ್ವಕವಾಗಿಯೇ ಅವಕಾಶ ನೀಡಲಾಗಿತ್ತೋ ಏನೋ!? ಖಾಸಗಿ ವಿಷಯಗಳ ಬಗ್ಗೆ ಮಾತನಾಡಿದ್ದು ಅದು ಅವರವರ ಹೊಟ್ಟೆ ಪಾಡು ವಿಷಯವಿರಬಹುದು. ನಾನಂತೂ ಅಂತಹ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ.

English summary
Crazy Star Ravichandran on ETV Kannada reality show Bigg Boss in Suvarna News. According to Kannada Actor Ravichandran Arun Sagar should have been the Bigg Boss and not Vijay Raghavendra.
Please Wait while comments are loading...