»   » ಸ್ಯಾಂಡಲ್ ವುಡ್ ದಿಗ್ಗಜರ ಸಮಾಗಮದಲ್ಲಿ ಡ್ಯಾನ್ಸ್ ಡ್ಯಾನ್ಸ್

ಸ್ಯಾಂಡಲ್ ವುಡ್ ದಿಗ್ಗಜರ ಸಮಾಗಮದಲ್ಲಿ ಡ್ಯಾನ್ಸ್ ಡ್ಯಾನ್ಸ್

Posted By:
Subscribe to Filmibeat Kannada

ಕನ್ನಡದ ಖ್ಯಾತ ಖಾಸಗಿ ಚಾನಲ್ ಸುವರ್ಣ ವಾಹಿನಿಯಯಲ್ಲಿ ಪ್ರಸಾರವಾಗುವ "ಡ್ಯಾನ್ಸ್ ಡ್ಯಾನ್ಸ್" ರಿಯಾಲಿಟಿ ಶೋನಲ್ಲಿ ಇಲ್ಲಿಯವರೆಗೆ ಹಲವಾರು ಮಹಾನ್ ನಟರನ್ನು ಕರೆತಂದು ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಾ ಬಂದಿದೆ.

ಅಂದಹಾಗೆ ಈ ವಾರದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರನ್ನು ಈ ವೇದಿಕೆ ಅದ್ದೂರಿಯಾಗಿ ಬರಮಾಡಿಕೊಂಡಿದೆ. ಕನ್ನಡ ಚಿತ್ರರಂಗದ ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರು ಈ ವಾರದ "ಡ್ಯಾನ್ಸ್ ಡ್ಯಾನ್ಸ್" ಶೋನ ವಿಶೇಷ ನಿರ್ಣಾಯಕರಾಗಿ ಆಗಮಿಸಿದ್ದಾರೆ.[ಕನ್ನಡ ಕಿರುತೆರೆಗೆ ಬೆಳದಿಂಗಳಾಗಿ ಬಂದ ನಟಿ ಜಯಪ್ರದ]

'Dance Dance' reality show celebrity Judge Raghavendra Rajkumar

ಸುವರ್ಣ ಸ್ಪರ್ಧಿಗಳಿಗೆ ಉತ್ತೇಜನ ನೀಡಿದ ರಾಘಣ್ಣ ಅವರು ಸ್ಪರ್ಧಿಗಳ ಅದ್ಭುತ ನೃತ್ಯ ಪ್ರದರ್ಶನ ನೋಡಿ ಮನಸಾರೆ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಮಗ ವಿನಯ್ ರಾಜ್ ಕುಮಾರ ನಟನೆಯ "ರನ್ ಆಂಟನಿ" ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ಅಭಿಪ್ರಾಯವನ್ನು ಹಂಚಿಕೊಂಡರು.

'ರನ್ ಆಂಟನಿ' ನಾಯಕ ನಟ ವಿನಯ್ ರಾಜ್ ಕುಮಾರ ಅವರು ತಮ್ಮ ಎರಡನೇ ಚಿತ್ರದ ಬಗ್ಗೆ ಅನಿಸಿಕೆಯನ್ನು ಹಂಚಿಕೊಳ್ಳುವ ಜೊತೆಗೆ "ಡ್ಯಾನ್ಸ್ ಡ್ಯಾನ್ಸ್" ಶೋನಲ್ಲಿ ಸ್ಪರ್ಧಿಗಳ ಜೊತೆ ಒಂದಿಷ್ಟು ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದರು.[ಚಿತ್ರಪುಟ; ತಾಜ್ ಮಹಲ್ ಮುಂದೆ ಹೆಜ್ಜೆ ಹಾಕಿದ 'ಸುವರ್ಣ' ಸ್ಪರ್ಧಿಗಳು]

ಈ ಕಾರ್ಯಕ್ರಮಕ್ಕೆ ಇನ್ನೋರ್ವ ವಿಶೇಷ ನಿರ್ಣಾಯಕಿಯಾಗಿ ನಟಿ ರಾಗಿಣಿ ದ್ವಿವೇದಿ ಅವರು ಆಗಮಿಸಿದ್ದಾರೆ. ಸಖತ್ ಡ್ಯಾನ್ಸ್ ನೊಂದಿಗೆ ಎಂಟ್ರಿ ಕೊಟ್ಟ ರಾಗಿಣಿ ಎಲ್ಲರನ್ನು ರಂಜಿಸಿದ್ದಾರೆ.

ಇಂತಹ ನಟ-ನಟಿಯರ ಜೊತೆ ವಿಶೇಷ ಅತಿಥಿಯಾಗಿ ನಟಿ ಹರ್ಷಿಕಾ ಪೂನಚ್ಚಾ ಆಗಮಿಸಿದ್ದು, ತಮ್ಮ 'ಬೀಟ್' ಚಿತ್ರದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.[ಚಿತ್ರಪಟ: ಸುವರ್ಣ ಪರಿವಾರ ಅವಾರ್ಡ್ಸ್ ನಲ್ಲಿ ತಾರೆಗಳ ದರ್ಬಾರ್]

ಒಟ್ನಲ್ಲಿ ಇಡೀ ಕನ್ನಡ ಚಲನಚಿತ್ರರಂಗದ ದಿಗ್ಗಜರು ಭಾಗವಹಿಸಿರುವ ವಿಶೇಷ "ಡ್ಯಾನ್ಸ್ ಡ್ಯಾನ್ಸ್" ರಿಯಾಲಿಟಿ ಶೋ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ನೋಡಿ.

ಸ್ಯಾಂಡಲ್ ವುಡ್ ದಿಗ್ಗಜರ ಸಮಾಗಮದಲ್ಲಿ ಡ್ಯಾನ್ಸ್ ಡ್ಯಾನ್ಸ್

ಸ್ಯಾಂಡಲ್ ವುಡ್ ದಿಗ್ಗಜರ ಸಮಾಗಮದಲ್ಲಿ ಡ್ಯಾನ್ಸ್ ಡ್ಯಾನ್ಸ್

-
-
-
-
-
-
-
-
-
-
-
English summary
Kannada Actor-Producer Raghavendra Rajkumar as celebrity judge in Suvarna Channels 'Dance Dance' reality show. The show will be air on Monday To Friday at 7.30 PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada