For Quick Alerts
  ALLOW NOTIFICATIONS  
  For Daily Alerts

  ಕನ್ನಡ ಕಿರುತೆರೆ ಇತಿಹಾಸದಲ್ಲಿ 'ಕುರುಕ್ಷೇತ್ರ' ಐತಿಹಾಸಿಕ ದಾಖಲೆ: ದರ್ಶನ್ ಗೆ ಫುಲ್ TRP.!

  |

  ಸ್ಯಾಂಡಲ್ ವುಡ್ ನಲ್ಲಿ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರ 'ಮುನಿರತ್ನ ಕುರುಕ್ಷೇತ್ರ'. ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್, ಶಶಿಕುಮಾರ್, ಅರ್ಜುನ್ ಸರ್ಜಾ, ಸೋನು ಸೂದ್, ಭಾರತಿ ವಿಷ್ಣುವರ್ಧನ್ ರಂತಹ ದೊಡ್ಡ ತಾರಾ ಬಳಗ ಹೊಂದಿದ್ದ 'ಮುನಿರತ್ನ ಕುರುಕ್ಷೇತ್ರ' ಚಿತ್ರಕ್ಕೆ ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ತು.

  ಮಹಾಭಾರತದ ಕಥೆ ಹೊಂದಿದ್ದ ಅಪ್ಪಟ ಪೌರಾಣಿಕ ಸಿನಿಮಾ 'ಮುನಿರತ್ನ ಕುರುಕ್ಷೇತ್ರ' ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ಡಬ್ ಆಗಿ ತೆರೆಗೆ ಅಪ್ಪಳಿಸಿತ್ತು. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ 'ಮುನಿರತ್ನ ಕುರುಕ್ಷೇತ್ರ' ಇದೀಗ ಹೊಸ ದಾಖಲೆ ಸೃಷ್ಟಿಸಿದೆ.

  ಅರೇ.. 'ಮುನಿರತ್ನ ಕುರುಕ್ಷೇತ್ರ' ಸಿನಿಮಾ ರಿಲೀಸ್ ಆಗಿ ತಿಂಗಳುಗಳೇ ಉರುಳಿವೆ. ಈಗ ಯಾವ ರೆಕಾರ್ಡ್ ಮಾಡಿದೆ ಅಂತ ಯೋಚನೆ ಮಾಡ್ತಿದ್ದೀರಾ.? ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

  ಕನ್ನಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದ 'ಮುನಿರತ್ನ ಕುರುಕ್ಷೇತ್ರ'

  ಕನ್ನಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದ 'ಮುನಿರತ್ನ ಕುರುಕ್ಷೇತ್ರ'

  ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ದುರ್ಯೋಧನನ ಪಾತ್ರದಲ್ಲಿ ದರ್ಶನ್ ಅಭಿನಯದ 'ಮುನಿರತ್ನ ಕುರುಕ್ಷೇತ್ರ' ಸಿನಿಮಾ ಪ್ರಸಾರ ಕಂಡಿತ್ತು. ಈಗ ಇದೇ 'ಮುನಿರತ್ನ ಕುರುಕ್ಷೇತ್ರ' ಕನ್ನಡ ಕಿರುತೆರೆಯಲ್ಲಿ ಇರುವ ಹಳೇ ದಾಖಲೆಗಳನ್ನೆಲ್ಲಾ ಪೀಸ್ ಪೀಸ್ ಮಾಡಿದೆ.

  ಕನ್ನಡ ಕಿರುತೆರೆಯ TRP ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ ಪುನೀತ್.!ಕನ್ನಡ ಕಿರುತೆರೆಯ TRP ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ ಪುನೀತ್.!

  ಇಂಪ್ರೆಶನ್ ನಲ್ಲಿ ನಂಬರ್ 1

  ಇಂಪ್ರೆಶನ್ ನಲ್ಲಿ ನಂಬರ್ 1

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಮುನಿರತ್ನ ಕುರುಕ್ಷೇತ್ರ' ಚಿತ್ರಕ್ಕೆ 12426 ಇಂಪ್ರೆಶನ್ ಗಳು ಲಭ್ಯವಾಗಿದೆ. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾದ ಸಿನಿಮಾಗಳ ಪೈಕಿ 'ಮುನಿರತ್ನ ಕುರುಕ್ಷೇತ್ರ' ಅತಿ ಹೆಚ್ಚು ಇಂಪ್ರೆಶನ್ ಗಳನ್ನು ಪಡೆದು ಇತಿಹಾಸ ಸೃಷ್ಟಿಸಿದೆ. ಆ ಮೂಲಕ ಇಂಪ್ರೆಶನ್ ಲೆಕ್ಕಾಚಾರದಲ್ಲಿ 'ಮುನಿರತ್ನ ಕುರುಕ್ಷೇತ್ರ' ನಂಬರ್ 1 ಸ್ಥಾನಕ್ಕೆ ಏರಿದೆ.

  TRPಯಲ್ಲಿ ದಾಖಲೆ ಬರೆದ ನಟಸಾರ್ವಭೌಮ: ಕಿರುತೆರೆಗೆ ಅಪ್ಪುನೇ ಬಾಸ್.!TRPಯಲ್ಲಿ ದಾಖಲೆ ಬರೆದ ನಟಸಾರ್ವಭೌಮ: ಕಿರುತೆರೆಗೆ ಅಪ್ಪುನೇ ಬಾಸ್.!

  ಫಸ್ಟು ದರ್ಶನ್, ನೆಕ್ಸ್ಟು ಪುನೀತ್.!

  ಫಸ್ಟು ದರ್ಶನ್, ನೆಕ್ಸ್ಟು ಪುನೀತ್.!

  ಇಂಪ್ರೆಶನ್ ಆಧಾರದಲ್ಲಿ ದರ್ಶನ್ ಅಭಿನಯದ 'ಮುನಿರತ್ನ ಕುರುಕ್ಷೇತ್ರ' 12426 ಪಡೆದುಕೊಂಡು ನಂಬರ್ 1 ಸ್ಥಾನಕ್ಕೆ ಏರಿದ್ದರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡ್ಗ' ಚಿತ್ರ 12161 ಇಂಪ್ರೆಶನ್ ಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಇನ್ನೂ ಮೂರನೇ ಸ್ಥಾನದಲ್ಲಿ ಇರುವುದು 9260 ಇಂಪ್ರೆಶನ್ ಗಳೊಂದಿಗೆ ಪುನೀತ್ ಅಭಿನಯದ 'ರಾಜಕುಮಾರ' ಚಿತ್ರ.

  ಕೇಕ್ ಮಾಡಿ ಸಂಭ್ರಮಿಸಿದ ದರ್ಶನ್

  ಕೇಕ್ ಮಾಡಿ ಸಂಭ್ರಮಿಸಿದ ದರ್ಶನ್

  12426 ಇಂಪ್ರೆಶನ್ ಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ 'ಮುನಿರತ್ನ ಕುರುಕ್ಷೇತ್ರ' ಪಾತ್ರವಾಗಿದೆ. ಈ ಖುಷಿಯನ್ನ ನಟ ದರ್ಶನ್, ಜೀ ಕನ್ನಡ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ನಟಿ ರಕ್ಷಿತಾ ಪ್ರೇಮ್, ನಟ ಜಗ್ಗೇಶ್ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

  ಟಿ.ವಿ.ಆರ್ ನಲ್ಲಿ ಅಪ್ಪು ನಂಬರ್ 1

  ಟಿ.ವಿ.ಆರ್ ನಲ್ಲಿ ಅಪ್ಪು ನಂಬರ್ 1

  ಇಂಪ್ರೆಶನ್ ಆಧಾರದಲ್ಲಿ ದರ್ಶನ್ ಅಭಿನಯದ 'ಮುನಿರತ್ನ ಕುರುಕ್ಷೇತ್ರ' ನಂಬರ್ 1 ಇರಬಹುದು. ಆದ್ರೆ, ಟಿ.ವಿ.ಆರ್ (ಟೆಲಿವಿಶನ್ ರೇಟಿಂಗ್) ಆಧಾರದಲ್ಲಿ 20.7 ಪಾಯಿಂಟ್ ಗಳನ್ನು ಪಡೆದು 'ದೊಡ್ಮನೆ ಹುಡ್ಗ' ಚಿತ್ರ ಈಗಲೂ ಮೊದಲ ಸ್ಥಾನದಲ್ಲಿ ಭದ್ರವಾಗಿದೆ. ಟಿ.ವಿ.ಆರ್ ಪ್ರಕಾರ 19.5 ಪಾಯಿಂಟ್ ಗಳನ್ನು ಪಡೆದು 'ಮುನಿರತ್ನ ಕುರುಕ್ಷೇತ್ರ' ದ್ವಿತೀಯ ಸ್ಥಾನಕ್ಕೆ ಬಂದಿದೆ.

  English summary
  Kannada Actor Darshan starrer Muniratna Kurukshetra creates history in Kannada premier rating.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X