Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟಿವಿಗೆ ಬರ್ತಿದೆ ಧನಂಜಯ್, ರಚಿತಾ ನಟನೆಯ ಮಾನ್ಸೂನ್ ರಾಗ; ದಿನಾಂಕ ಪ್ರಕಟ
ಕಳೆದ ವರ್ಷ ತೆರೆಕಂಡ ಧನಂಜಯ್ ನಟನೆಯ ಒಟ್ಟು ಆರು ಚಿತ್ರಗಳ ಪೈಕಿ ಒಂದಾಗಿದ್ದ ಮಾನ್ಸೂನ್ ರಾಗ ಇತ್ತೀಚೆಗಷ್ಟೆ ಜೀ ಫೈವ್ ಅಪ್ಲಿಕೇಶನ್‌ನಲ್ಲಿ ಪ್ರಸಾರವಾಗಿತ್ತು. ಓಟಿಟಿಯಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಈಗ ಟಿವಿ ಪರದೆಗೂ ಬರಲು ರೆಡಿಯಾಗಿದೆ. ಮಾನ್ಸೂನ್ ರಾಗ ಇದೇ ಭಾನುವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಧ್ಯಾಹ್ನ 12 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.
ಇನ್ನು ಚಿತ್ರದಲ್ಲಿ ಧನಂಜಯ್ ಹಾಗೂ ಅಚ್ಯುತ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದರೆ, ನಾಯಕಿಯಾಗಿ ರಚಿತಾ ರಾಮ್, ಯಶಾ ಶಿವ ಕುಮಾರ್ ಹಾಗೂ ಸುಹಾಸಿನಿ ಅಭಿನಯಿಸಿದ್ದಾರೆ. ಇನ್ನು ಮಾನ್ಸೂನ್ ರಾಗ 2018ರಲ್ಲಿ ಬಿಡುಗಡೆಗೊಂಡಿದ್ದ ತೆಲುಗಿನ ಕೇರ್ ಆಫ್ ಕಾಂಚೆರಪಾಲೆಂ ಚಿತ್ರದ ರಿಮೇಕ್ ಆಗಿದೆ. ರಿಮೇಕ್ ಎಂಬುದನ್ನು ಚಿತ್ರತಂಡ ಎಲ್ಲಿಯೂ ಹೇಳದೇ ಚಿತ್ರವನ್ನು ಬಿಡುಗಡೆಗೊಳಿಸಿದರೂ ಸಹ ಚಿತ್ರ ನಿರೀಕ್ಷಿಸಿದ ಗೆಲುವನ್ನು ಕಾಣಲಿಲ್ಲ.
ಚಿತ್ರಮಂದಿರದಲ್ಲಿ ಚೆನ್ನಾಗಿ ಪ್ರದರ್ಶನ ಕಾಣದೇ ಸೋತ ಮಾನ್ಸೂನ್ ರಾಗ ಚಿತ್ರವನ್ನು ವೀಕ್ಷಕರು ಟಿವಿ ಪರದೆ ಮೇಲೆ ವೀಕ್ಷಿಸಿ ಒಳ್ಳೆಯ ಟಿ ವಿ ರೇಟಿಂಗ್ ಪಾಯಿಂಟ್ ಅನ್ನು ಚಿತ್ರ ಪಡೆದುಕೊಳ್ಳಲಿದೆಯಾ ಕಾದು ನೋಡಬೇಕಿದೆ. ಒಂದೆಡೆ ಸಂಕ್ರಾಂತಿ ಪ್ರಯುಕ್ತ ಧನಂಜಯ್ ನಟನೆಯ ಮಾನ್ಸೂನ್ ರಾಗ ಜೀ ಕನ್ನಡ ವಾಹಿನಿಯಲ್ಲಿ ಬಿಡುಗಡೆಗೊಳ್ಳುತ್ತಿದ್ದರೆ, ಮತ್ತೊಂದೆಡೆ ಧನಂಜಯ್ ನಟನೆಯ ಮತ್ತೊಂದು ಚಿತ್ರ ಹೆಡ್ ಬುಷ್ ಜನವರಿ 13ರಿಂದ ಜೀ ಫೈವ್‌ನಲ್ಲಿ ಸ್ಟ್ರೀಮ್ ಆಗಲಿದೆ.