twitter
    For Quick Alerts
    ALLOW NOTIFICATIONS  
    For Daily Alerts

    ತೆರೆಗೆ ಬರಲಿದೆ ಚಾಮರಾಜನಗರ ಆಮ್ಲಜನಕ ದುರಂತ: ಚಿತ್ರೀಕರಣ ಚಾಲ್ತಿಯಲ್ಲಿ

    |

    ದೇಶವನ್ನೇ ದಿಗ್ಬ್ರಮೆಗೊಳಿಸಿದ್ದ ಚಾಮರಾಜನಗರ ಆಮ್ಲಜನಕ ದುರಂತ ಈಗ ಸಿನಿಮಾ ಆಗುತ್ತಿದೆ. ಅಪರೂಪಕ್ಕೆ ಕನ್ನಡಿಗರೇ ತಮ್ಮ ರಾಜ್ಯದ ಘಟನೆಯೊಂದನ್ನು ತೆರೆಗೆ ತರುವ ಧೈರ್ಯ ಪ್ರದರ್ಶಿಸುತ್ತಿದ್ದಾರೆ.

    2021 ರಲ್ಲಿ ಅಪ್ಪಳಿದ ಎರಡನೇ ಕೋವಿಡ್ ಅಲೆಯ ಭೀಕರತೆಯ ಮಧ್ಯದ ದಿನಗಳಲ್ಲಿ ಚಾಮರಾಜನಗರದಲ್ಲಿ ದುರಂತ ಘಟನೆಯೊಂದು ಸಂಭವಿಸಿತು. ಆಮ್ಲಜನಕದ ಕೊರತೆಯಿಂದಾಗಿ ಒಂದೇ ದಿನ 36 ಮಂದಿ ಅಸುನೀಗಿದರು!

    ಸರ್ಕಾರ, ಜಿಲ್ಲಾಡಳಿತ, ಅಧಿಕಾರಿ ವರ್ಗದ ನಿರ್ಲಕ್ಷತೆಯಿಂದ 36 ಮಂದಿ ನಾಗರೀಕರು ಜೀವ ಕಳೆದುಕೊಂಡರು ಈ ದುರಂತ ಘಟನೆಯನ್ನು ಸಿನಿಮಾ ಮಾಡುವ ಸಾಹಸಕ್ಕೆ ಅಜಯ್ ಕುಮಾರ್ ಕೈಹಾಕಿದ್ದು ಸಿನಿಮಾಕ್ಕೆ 'ಲಾಕ್‌ಡೌನ್' ಎಂದು ಹೆಸರಿಟ್ಟಿದ್ದಾರೆ. ಈ ಹಿಂದೆ ಬೆಳಕಿನ ನಡೆಗೆ ಎಂಬ ಮಕ್ಕಳ ಚಿತ್ರವನ್ನು ನಿರ್ದೇಶಿಸಿದ್ದ ಯುವ ನಿರ್ಮಾಪಕ ಅಜಯ್‌ಕುಮಾರ್ ಸಿನಿಮಾದ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

    Director Anil Kumar Making Movie Based On Chamarajnagara Oxygen Incident

    ಈಗಾಗಲೇ ಚಾಮರಾಜನಗರ ಆಸ್ಪತ್ರೆಯಲ್ಲಿ ಶೇ.70ಕ್ಕೂ ಹೆಚ್ಚು ಚಿತ್ರೀಕರಣ ನಡೆಸಿರುವ ಚಿತ್ರತಂಡ ಸಂತ್ರಸ್ತರ ಕುಟುಂಬಗಳೊಂದಿಗೆ ಸಂವಾದ ನಡೆಸಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ನ 30% ಹಣವನ್ನು ದುರಂತದಿಂದ ಸಂಕಷ್ಟಕ್ಕೆ ಸಿಲುಕಿದ 36 ಕುಟುಂಬಗಳಿಗೆ ಸಹಾಯ ಹಸ್ತವಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ.

    ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬದ ಜೊತೆಗೆ ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿದ್ದು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ ಪತ್ರಿಕಾ ವರದಿಗಳು, ನ್ಯಾಯಾಲಯದ ವಿಚಾರಣೆ, ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳ, ಅಧಿಕಾರಿಗಳ ಹೇಳಿಕೆಗಳು, ರಾಜಕೀಯ ನಾಯಕರುಗಳ ಹೇಳಿಕೆಗಳನ್ನು ಸಂಗ್ರಹಿಸಿರುವ ನಿರ್ದೇಶಕರು, ಅದರ ಆಧಾರದಲ್ಲಿಯೇ ಸಿನಿಮಾದ ಚಿತ್ರಕತೆ ರೆಡಿ ಮಾಡಿಕೊಂಡಿದ್ದಾರೆ.

    ಮೇ 2ರಂದು 2021ರಂದು ಚಾಮರಾಜನಗರ ಜಿಲ್ಲೆಯ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಾಗಬೇಕಿತ್ತು. ಆದರೆ ಮೈಸೂರಿಂದ ಆಕ್ಸಿಜನ್ ಬರಲೇ ಇಲ್ಲ, ಮೈಸೂರಿನಿಂದ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೇ ರಾತ್ರಿ 10:30ರಿಂದ ಬೆಳಗಿನ ಜಾವ 2:30ರ ವರೆಗೆ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ವೆಂಟಿಲೇಟರ್‌, ಐಸಿಯು ಹಾಗೂ ಉಸಿರಾಟ ತೊಂದರೆಯಿಂದ ಆಮ್ಲಜನಕದ ನೆರವಿನಲ್ಲಿದ್ದ ರೋಗಿಗಳು ಸಾವನ್ನಪ್ಪಿದ್ದರು. ಈ ಘಟನೆ ದೇಶದ ಗಮನ ಸೆಳೆದಿತ್ತು, ಚಾಮರಾಜನಗರ ಡಿಸಿ ಆಗಿದ್ದ ಡಾ.ಎಂ.ಆರ್.ರವಿ ಹಾಗೂ ಮೈಸೂರು ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ದುರಂತದ ತಪ್ಪನ್ನು ಒಬ್ಬರಿಗೊಬ್ಬರ ಮೇಲೆ ಹೊರೆಸಿ ಕೆಸರು ಎರಚಾಡಿಕೊಂಡಿದ್ದರು.‌ ಸರಕಾರದ ನಡೆಗೆ ಕೋರ್ಟ್ ಕೂಡ ಛೀಮಾರಿ ಹಾಕಿ ನ್ಯಾಯಾಂಗ ತನಿಖೆಗೆ ಆದೇಶಿಸಿ ತಂಡ ರಚಿಸಿತ್ತು.‌

    English summary
    Director Anil Kumar making movie based on Chamarajnagara oxygen incident in which 36 people died.
    Wednesday, September 28, 2022, 22:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X