»   » ಪ್ರೇಮ್ ಬಾಯಿಗೆ ಲಡ್ಡು ತುರುಕಿದ ಶಿವಣ್ಣ-ದೀಪಣ್ಣ

ಪ್ರೇಮ್ ಬಾಯಿಗೆ ಲಡ್ಡು ತುರುಕಿದ ಶಿವಣ್ಣ-ದೀಪಣ್ಣ

Posted By:
Subscribe to Filmibeat Kannada

ಸ್ಟಾರ್ ನಟರಿಬ್ಬರು ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ನಾವು ಈ ಮೊದಲೇ ನಿಮಗೆ ಕ್ಲ್ಯೂ ಕೊಟ್ಟಿದ್ದೆವಲ್ಲಾ, ಇದೀಗ ಆ ವಿಷಯ ಎಲ್ಲೆಡೆ ಜಗಜ್ಜಾಹೀರಾಗಿದೆ.

ಹೌದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂದಾಗಿ ಸಿನಿಮಾ ಮಾಡುತ್ತಿರುವುದು ಪಕ್ಕಾ ಆಗಿದೆ. ಅದಕ್ಕಾಗಿ ಈ ಇಬ್ಬರು ಸ್ಟಾರ್ ನಟರು ಬಿಗ್ ವೇದಿಕೆಯಲ್ಲಿ ಕಾಲ್ ಶೀಟ್ ಕೊಟ್ಟಿದ್ದು, ಆಗಿದೆ.[ಬಿಗ್ ಬಾಸ್ ವೇದಿಕೆಯಲ್ಲಿ ಶಿವರಾಜ್-ಸುದೀಪ್ ಅಪೂರ್ವ ಮಿಲನ ]

ನಟ ಶಿವಣ್ಣ, 'ಶಿವಲಿಂಗ' ನಿರ್ದೇಶಕ ಪಿ.ವಾಸು, ನಿರ್ಮಾಪಕ ಸುರೇಶ್, ದಿನಕರ್ ತೂಗುದೀಪ್ ಮಾತ್ರವಲ್ಲದೇ ಅವರ ಜೊತೆ ಇನ್ನೊಬ್ಬರು ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಶಿವಣ್ಣ ಆಪ್ತ ಗೆಳೆಯನಾಗಿರುವ ಅವರ ಯಾರು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಹ್ಯಾಟ್ರಿಕ್ ಹೀರೋ ಜೊತೆ ಹ್ಯಾಟ್ರಿಕ್ ನಿರ್ದೇಶಕ

ನಿರ್ದೇಶಕ 'ಜೋಗಿ' ಪ್ರೇಮ್ ಕೂಡ ಬಿಗ್ ಬಾಸ್ ವೇದಿಕೆಗೆ ಆಗಮಿಸಿದ್ದು, ಸ್ಟಾರ್ ನಟರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡರು.[ಶಿವರಾಜ್ ಕಲ್ಪನೆಯಲ್ಲಿ ಬಿಗ್ ಬಾಸ್ ಶೋ ಅಂದ್ರೆ ಹೀಗಿರಬೇಕು.!]

ನಿರ್ದೇಶಕ 'ಜೋಗಿ' ಪ್ರೇಮ್

'ಇಬ್ಬರು ಒಂದೇ ವೇದಿಕೆಯಲ್ಲಿ ಒಂದಾಗ್ತಿದ್ದಾರೆ. ಅಂತ ಸುದ್ದಿ ಕೇಳಿದ ತಕ್ಷಣ ನಾನು ಓಡೋಡಿ ಬಂದೆ. ಇಬ್ಬರು ಒಟ್ಟಾಗಿ ಇಲ್ಲಿ ಸೇರಿರೋದು ನೋಡಿದರೆ ನನಗೆ ತುಂಬಾ ಖುಷಿ ಆಗ್ತಾ ಇದೆ. ಅರೆ ಶಿವಣ್ಣ ಅವರು ಬಿಗ್ ಬಾಸ್ ಗೆ ಹೋಗಿದ್ದಾರೆ ಅದು ಕೂಡ ಸುದೀಪ್ ಜೊತೆಗೆ ಇದ್ದಾರೆ ಅಂತ ಗೊತ್ತಾದಾಗ ನಾನು ಬರಲೇಬೇಕು ಅಂತ ನಿರ್ಧರಿಸಿದೆ ಬಂದೆ' ಎಂದು ನಿರ್ದೇಶಕ ಪ್ರೇಮ್ ನುಡಿದರು.

ಲೆಜೆಂಡರಿ ನಟರೊಂದಿಗೆ ಪ್ರೇಮ್

'ನಿಮ್ಮಿಬ್ಬರನ್ನು ಸೇರಿಸಿಕೊಂಡು ಏನಾದ್ರೂ ಮಾಡಬೇಕು ಅಂತ ಅಂದುಕೊಂಡಿದ್ದೇನೆ, ಇಬ್ಬರು ಸ್ಯಾಂಡಲ್ ವುಡ್ ನ ಲೆಜೆಂಡರಿಗಳು ಅಂತ ಪ್ರೇಮ್ ನುಡಿದಾಗ ಮಧ್ಯದಲ್ಲಿ ಕಿಚ್ಚ ಸುದೀಪ್ ಅವರ ಬಾಯಿ ಹಾಕಿ, ಇಬ್ಬರನ್ನು ಸೇರಿಸಿ ಏನಾದರೂ ಮಾಡಬೇಕು ಅಂದ್ರೆ, ಏನು ಮಾಡಬೇಕು ಅನ್ಕೊಂಡಿದ್ದೀರಾ. ಅದನ್ನು ಇಲ್ಲೇನು ಮಾಡೋದು ಮನೆಗೆ ಹೋಗು ಅಂತ ಸುದೀಪ್ ಅವರು ಪ್ರೇಮ್ ಅವರನ್ನು ಸಖತ್ ಆಗಿ ಕಿಚಾಯಿಸಿದರು.

ಯಾವ ಮಟ್ಟದಲ್ಲಿ ಸಿನಿಮಾ ಮಾಡ್ತೀರಾ ?-ಸುದೀಪ್

ಪ್ರೇಮ್ ಅವರು ಸಿನಿಮಾ ಮಾಡ್ಬೇಕು ಅಂದಾಗ ತಟ್ಟನೆ ಸುದೀಪ್ ಅವರು ನೀವು ನಮ್ಮಿಬ್ಬರನ್ನು ಸೇರಿಸಿಕೊಂಡು ಸಿನಿಮಾ ಮಾಡಬೇಕು ಅಂತಿದ್ದೀರಲ್ವಾ ಅದೇ ಯಾವ ಮಟ್ಟದಲ್ಲಿ ಸಿನಿಮಾ ಮಾಡ್ಬೇಕು ಅಂದುಕೊಂಡಿದ್ದೀರಾ? ಎಂದು ಕಿಚ್ಚ ಪ್ರಶ್ನೆ ಹಾಕಿದರು. ಆವಾಗ ಪ್ರೇಮ್ ಅವರು ನಿಮ್ಮಿಬ್ಬರನ್ನು ಒಂದೇ ಸಿನಿಮಾದಲ್ಲಿ ಒಟ್ಟಿಗೆ ಸೇರಿಸಿದ್ರೆ, ಜನ ಇಷ್ಟ ಪಡ್ತಾರೆ ಹೆಚ್ಚಾಗಿ ಅಭಿಮಾನಿಗಳು ಇಷ್ಟಪಟ್ಟಂಗೆ ಒಂದು ಸಿನಿಮಾ ನೀಡಬೇಕು ಅನ್ನೋದು ನನ್ನ ಆಸೆ ಎಂದು ಪ್ರೇಮ್ ನುಡಿದರು.

ಸೆಂಚುರಿ ಸ್ಟಾರ್-ಸ್ಟೈಲಿಷ್ ಸ್ಟಾರ್ ಗೆ ಸಿನಿಮಾ

ನಾನು ಸೆಂಚುರಿ ಸ್ಟಾರ್ ಮತ್ತು ಸ್ಟೈಲಿಷ್ ಸ್ಟಾರ್ ಗೆ ಒಂದು ಸಿನಿಮಾ ಮಾಡಬೇಕು ಅಂತ ತುಂಬಾ ದಿನಗಳಿಂದ ಅಂದುಕೊಂಡಿದ್ದೇನೆ. ಅಂತ ಪ್ರೇಮ್ ಅಂದಾಗ ಸುದೀಪ್ ಅವರು ಶಿವಣ್ಣ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಗುಟ್ಟಾಗಿ ಮಾತನಾಡಿದರು. ಮತ್ತೆ ಬರೀ ಓಳು ಅಂತ ಹಾಡು ಹಾಡಿ ಪ್ರೇಮ್ ಅವರ ಕಾಲನ್ನು ಎಳೆದು ಮಜಾ ತೆಗೆದುಕೊಂಡರು. ಆವಾಗ ಪ್ರೇಮ್ ಅವರು ನೀವೀಬ್ಬರೂ ಪಕ್ಕಕ್ಕೆ ಹೋಗಿ ಏನು ಮಾತಾಡಿಕೊಂಡ್ರಿ ಎಂದಾಗ ನಮ್ಮಿಬ್ಬರ ಸಿನಿಮಾಕ್ಕೆ ಹಿರೋಯಿನ್ ಯಾರು ಆಗಬಹುದು ಅಂತ ಚರ್ಚೆ ಮಾಡ್ತಾ ಇದ್ವಿ ಎಂದು ಕಿಚ್ಚ ಮತ್ತೆ ಪ್ರೇಮ್ ಕಾಲೆಳೆದರು.

ನಾವಿಬ್ಬರು ಸೇರಿ ಸಿನಿಮಾ ಮಾಡಬೇಕು ಅಂತ ಯಾಕೆ?-ಸುದೀಪ್

ನಾವಿಬ್ಬರು ಸೇರಿ ಸಿನಿಮಾ ಮಾಡಬೇಕು ಅಂತ ಯಾಕೆ? ನಿಮಗೆ ಆಸೆ ಎಂದು ಕಿಚ್ಚ ಸುದೀಪ್ ಅವರ ಪ್ರಶ್ನೆಗೆ ಪ್ರತಿಯಾಗಿ ಪ್ರೇಮ್ ಅವರು ನಾನು ಕಥೆ ಬರೀತಾ ಬರೀತಾ ನಿಮ್ಮಿಬ್ಬರನ್ನು ಯೋಚನೆ ಮಾಡಿದೆ. ಆಮೇಲೆ ಈ ಕಥೆ ಇಡೀ ಭಾರತದಾದ್ಯಂತ ರೀಚ್ ಆಗಬೇಕು ಅಂದ್ರೆ ನೀವಿಬ್ಬರು ಲೆಜೆಂಡರಿಗಳು ಸೇರಲೇಬೇಕು. ನೀವೀಬ್ಬರು ನನಗೆ ಎರಡು ಕಣ್ಣುಗಳಿದ್ದಂತೆ. ಎಂದು ಪ್ರೇಮ್ ಅವರು ಅಭಿಮಾನದಿಂದ ನುಡಿದರು.

ಒಪ್ಪಿಕೊಂಡು, ಕಾಲ್ ಶೀಟ್ ಕೊಟ್ಟ ಸ್ಟಾರ್ ನಟರು

ಒಟ್ನಲ್ಲಿ ಸಖತ್ ಕಾಲೆಳೆದು ತಮಾಷೆ ಮಾಡಿದ ನಂತರ ಕೊನೆಯದಾಗಿ ಇಬ್ಬರು ಸ್ಟಾರ್ ನಟರು ಪ್ರೇಮ್ ಅವರ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು. ಅದಕ್ಕೆ ಪ್ರೇಮ್ ಅವರು ಫುಲ್ ಖುಷ್ ಆಗಿ ತುಂಬಾ ಖುಷಿ ಆಯ್ತು, ನನ್ನ ಅದ್ಭುತ ಕಲ್ಪನೆಗೆ ನೀವಿಬ್ಬರೂ ಸಾಥ್ ಕೊಡ್ತಾ ಇದ್ದೀರಾ, ನಿಮ್ಮಿಬ್ಬರನ್ನು ವಿಭಿನ್ನವಾಗಿ ತೋರಿಸಬೇಕು ಅಂತ ಆಸೆ. ಯಾರು ಇಲ್ಲಿಯವರೆಗೆ ತೋರಿಸಿರಬಾರದು ಆ ಥರ ತೋರಿಸಬೇಕೆಂದಿದ್ದೇನೆ ಎಂದು ಪ್ರೇಮ್ ನುಡಿದರು.

English summary
Director Prem confirmed about his next mutli-starrer with Hatrick Hero and Abhinaya Chakravarthy. In the Sunday episode of 'Super Sunday With Sudeep', Shivarajkumar and team promoted their next movie 'Shivalinga'. Along with Shivanna directed P Vasu and others also came to witness Sudeep's show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada