»   » ಕವಿರಾಜ್ ಕಂಡ್ರೆ ಕಿಚ್ಚ ಸುದೀಪ್ ಗೆ ಹೊಟ್ಟೆಕಿಚ್ಚು ಯಾಕೆ?

ಕವಿರಾಜ್ ಕಂಡ್ರೆ ಕಿಚ್ಚ ಸುದೀಪ್ ಗೆ ಹೊಟ್ಟೆಕಿಚ್ಚು ಯಾಕೆ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ಬರೆದು ಇದೀಗ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ನಿರ್ದೇಶಕ ಕವಿರಾಜ್ ಕಂಡ್ರೆ ನಟ, ನಿರ್ಮಾಪಕ, ನಿರ್ದೇಶಕ ಕಿಚ್ಚ ಸುದೀಪ್ ಗೆ ಹೊಟ್ಟೆಕಿಚ್ಚು.!

ಹೀಗಂತ ಹೇಳಿದವರು ಖುದ್ದು ಕಿಚ್ಚ ಸುದೀಪ್. ಅದು 'ಬಿಗ್ ಬಾಸ್-3' ಕಾರ್ಯಕ್ರಮದ ವೇದಿಕೆಯಲ್ಲಿ. ಅಮೂಲ್ಯ ಮತ್ತು ಸೂರಜ್ ಅಭಿನಯದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಪ್ರಮೋಷನ್ 'Super Sunday with Sudeep' ಕಾರ್ಯಕ್ರಮದಲ್ಲಿ ನಡೆಯಿತು. [ಕಿಚ್ಚನಿಗೆ 'ಮದುವೆಯ ಕರೆಯೋಲೆ' ನೀಡಲು ಅರಮನೆಗೆ ಬಂದ ಅಮೂಲ್ಯ]

Do you know why Kiccha Sudeep is jealous of Kaviraj?

'ಮದುವೆಯ ಮಮತೆಯ ಕರೆಯೋಲೆ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಅನಂತ್ ನಾಗ್, ಕಿಚ್ಚ ಸುದೀಪ್ ಜೊತೆ ಮಾತಿಗಿಳಿದರು. ''ಈ ಚಿತ್ರದಲ್ಲಿ ನನಗೆ ಉತ್ತಮ ಪಾತ್ರ ಸಿಕ್ಕಿದೆ. ಕವಿರಾಜ್ ತುಂಬಾ ಚೆನ್ನಾಗಿ ನನ್ನ ಪಾತ್ರವನ್ನ ಎಕ್ಸ್ ಪ್ಲೇನ್ ಮಾಡಿದ್ರು'' ಅಂತ ನಿರ್ದೇಶಕ ಕವಿರಾಜ್ ರನ್ನ ಅನಂತ್ ನಾಗ್ ಹೊಗಳುತ್ತಿದ್ದರು.

ಅದಕ್ಕೆ ಸುದೀಪ್, ಕವಿರಾಜ್ ರತ್ತ ತಿರುಗಿ ''ಕವಿರಾಜ್ ಅವರೇ...I'm very jealous. ಯಾಕೆ ಅಂತ ಕೇಳಿ... Because, You got to direct this Gentleman. I still have not.''

Do you know why Kiccha Sudeep is jealous of Kaviraj?

''ನನಗೆ ಭವಿಷ್ಯದಲ್ಲಿ ಅವಕಾಶ ಸಿಕ್ಕರೆ, ನಿಮಗೆ (ಅನಂತ್ ನಾಗ್) ಒಂದು ಫ್ರೇಮ್ ಇಟ್ಟು ನಿಮ್ಮಿಂದ ಪ್ರಶಂಸೆ ಗಿಟ್ಟಿಸಿಕೊಳ್ಳಬೇಕು. ನೀವು (ಕವಿರಾಜ್) ಆಗಲೇ ಮಾಡಿದ್ದಾಯ್ತು. ನಮ್ಮದಿನ್ನೂ ಬಾಕಿ ಇದೆ.'' ಅಂತ ಕಿಚ್ಚ ಸುದೀಪ್ ಹೇಳಿದರು.

ಅನಂತ್ ನಾಗ್ ಗೆ ಕಿಚ್ಚ ಸುದೀಪ್ ದೊಡ್ಡ ಫ್ಯಾನ್ ಅಂತೆ. ಅನಂತ್ ನಾಗ್ ಪತ್ನಿ ಗಾಯತ್ರಿ ಜೊತೆ ಕೂತು ಚರ್ಚಿಸಿ ಪ್ರೀಪೇರ್ ಆದ ಬಳಿಕ ಸುದೀಪ್, ಅನಂತ್ ನಾಗ್ ರವರ ಸಂದರ್ಶನ ಮಾಡಿದ್ರಂತೆ.

Do you know why Kiccha Sudeep is jealous of Kaviraj?

''ಸುಮ್ಸುಮ್ನೆ ಏನೇನೋ ಬೈಸ್ಕೋಬಾರ್ದು ಅನ್ನೋ ಕಾರಣಕ್ಕೆ'' ಅಂತ ಹೇಳ್ತಾ ಸುದೀಪ್ ಲವಲವಿಕೆಯಿಂದ ಅನಂತ್ ನಾಗ್ ರವರ ಸಂದರ್ಶನ ನಡೆಸಿದರು.

English summary
Kannada Actor Kiccha Sudeep is jealous of Lyricist turned Director Kaviraj. Read the article to know what is the reason.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada