»   » ಸುವರ್ಣದಲ್ಲಿ ಕ್ರೇಜಿಸ್ಟಾರ್ ಬ್ಲಾಕ್ ಬಸ್ಟರ್ ಚಿತ್ರ 'ದೃಶ್ಯ'

ಸುವರ್ಣದಲ್ಲಿ ಕ್ರೇಜಿಸ್ಟಾರ್ ಬ್ಲಾಕ್ ಬಸ್ಟರ್ ಚಿತ್ರ 'ದೃಶ್ಯ'

Posted By:
Subscribe to Filmibeat Kannada

2014ರ ಕೆಲವೇ ಕೆಲವು ಬ್ಲಾಕ್ ಬಸ್ಟರ್ ಮೂವಿಗಳಲ್ಲೊಂದಾದ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನವ್ಯಾನಾಯರ್ ಅಭಿನಯದ ಕನ್ನಡ ಚಲನಚಿತ್ರ 'ದೃಶ್ಯ', "ನೋಡುವುದೆಲ್ಲಾ ನಿಜವಲ್ಲ" ಎಂಬ ಅಡಿಬರಹದೊಂದಿಗೆ ಮೂಡಿಬಂದ ಈ ಸಿನಿಮಾ ಮಕರ ಸಂಕ್ರಾಂತಿಯ ಪ್ರಯುಕ್ತ ಇದೇ ಜನವರಿ 11 ರ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ಸುವರ್ಣ ವಾಹಿನಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರವಾಗುತ್ತಿದೆ. [ದೃಶ್ಯ ಚಿತ್ರ ವಿಮರ್ಶೆ]

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸಿನಿಮಾಗಳೇ ವಿಭಿನ್ನ ಎನ್ನುವುದನ್ನು ಮತ್ತೊಮ್ಮೆ 'ದೃಶ್ಯ' ಸಿನಿಮಾದ ಮೂಲಕ ಸಾಬೀತು ಪಡಿಸಿದ್ದಾರೆ. 4ನೇ ತರಗತಿಯವರೆಗೆ ಓದಿದ ಒಬ್ಬ ಸಾಮಾನ್ಯ ವ್ಯಕ್ತಿಯು ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು ಸಿನಿಮಾ ನೋಡುತ್ತಲೇ ಬದುಕಿನಲ್ಲಿ ಬಂದಿರುವ ಸಮಸ್ಯೆಯನ್ನು ವೀಕ್ಷಕರ ಕಣ್ಣಿಗೆ ಕಲ್ಪನೆಯ ಮೂಲಕವೇ ಕಟ್ಟುವ ಹಾಗೆ ಮಾಡುವುದೇ ದೃಶ್ಯ!

Drushya

ಈ ಸಿನಿಮಾದ ಮೂಲ ಕಥೆಯು ಮಲಯಾಳಂನ 'ದೃಶ್ಯಂ' ಚಿತ್ರದ ಕಥೆಯಾಗಿದ್ದರೂ ಸಹ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತ ನಿರ್ದೇಶಕ ಪಿ.ವಾಸು ಕನ್ನಡಿಗರಿಗೆ ತಮ್ಮ ನಿರ್ದೇಶನದ ಮೂಲಕ ಸಿನೆಮಾದ ಕ್ಲೈಮ್ಯಾಕ್ಸ್ ವರೆಗೂ ಕುತೂಹಲವನ್ನು ಕೆರಳಿಸುವ ಹಾಗೆ ಮಾಡಿದ್ದಾರೆ.

ರವಿಚಂದ್ರನ್ ಈ ಸಿನೆಮಾದಲ್ಲಿ ಜವಾಬ್ದಾರಿಯುತ ಅಪ್ಪನಾಗಿ ಅಭಿನಯ ಅತ್ಯದ್ಭುತ. ಹಾಗೆಯೇ ನಾಯಕಿಯಾದ ನವ್ಯನಾಯರ್ ಕೂಡಾ ಸೈ ಎನಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಂಗೀತ ಮಾಂತ್ರಿಕ ಇಳಯರಾಜ ಸಂಗೀತವು ವೀಕ್ಷಕರನ್ನು ಮನ ಉಲ್ಲಾಸಗೊಳಿಸಿದ್ದರಲ್ಲಿ ಎರಡು ಮಾತಿಲ್ಲ.

Drushya2

ಹಾಗೆಯೇ ದೃಶ್ಯದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಛಾಯಾಗ್ರಾಹಕ ಮಧು ನೀಲಕಂಠನ್ ವೀಕ್ಷಕರ ಕಣ್ಣಿಗೆ ಹಬ್ಬದ ಊಟವನ್ನೇ ಬಡಿಸಿದ್ದಾರೆ ಎಂದರೆ ತಪ್ಪಾಗಲಾರದು.

ಇಂತಹ ಅತ್ಯುತ್ತಮ ಚಲನಚಿತ್ರವನ್ನು ಮಕರ ಸಂಕ್ರಾಂತಿಯ ಪ್ರಯುಕ್ತ ಸುವರ್ಣ ವಾಹಿನಿಯು ಮೊಟ್ಟ ಮೊದಲ ಬಾರಿಗೆ ಇದೇ 11ರ ಭಾನುವಾರ ಸಂಜೆ 6:00 ಗಂಟೆಗೆ 'ದೃಶ್ಯ' ಸಿನಿಮಾವನ್ನು ಪ್ರಸಾರ ಮಾಡುತ್ತಿದೆ. ನೀವೆಲ್ಲರೂ ಮಿಸ್ ಮಾಡದೇ ನೋಡಿ. (ಫಿಲ್ಮಿಬೀಟ್ ಕನ್ನಡ)

English summary
Suvarna TV Premier Movie 'Drushya' which will telecast on 11 th January 2015 Sunday 6Pm. The Kannada drama thriller film directed by P. Vasu and starring V. Ravichandran and Navya Nair in the lead roles. It is the remake of the 2013 Malayalam film Drishyam.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada