»   » ತನ್ನ ಎರಡನೇ ಮದುವೆ ಬಗ್ಗೆ ಹೇಳಿಕೊಂಡ ದ್ವಾರಕೀಶ್

ತನ್ನ ಎರಡನೇ ಮದುವೆ ಬಗ್ಗೆ ಹೇಳಿಕೊಂಡ ದ್ವಾರಕೀಶ್

Posted By:
Subscribe to Filmibeat Kannada

ಈ ಹೊತ್ತಿಗೂ ನಾನು ಬರೆದ ಪ್ರೇಮಪತ್ರಗಳನ್ನು ಅಂಬುಜಾ ಇಟ್ಟಿದ್ದಾರೆ. ಎಲ್ಲರಿಗೂ ಜೀವನದಲ್ಲಿ ಒಂದು ಸಲ ಲವ್ ಮಾಡಲು ಮದುವೆಯಾಗಲು ದೇವರು ಅವಕಾಶ ಕೊಡ್ತಾನೆ. ಆದರೆ ದ್ವಾರಕೀಶ ಜೀವನದಲ್ಲಿ ಹಾಗಾಗಲಿಲ್ಲ. ದೇವರು ಬೇರೆಯದೇ ಕಥೆ ಬರೆದಿದ್ದಾನೆ ನನಗೆ. ನಾನು ಒಂದ್ಸಲ್ ಮದುವೆಯಾಗಲಿಲ್ಲ. ನನ್ನ ಜೀವನದಲ್ಲಿ ಎರಡು ಸಲ ಲವ್ ಮಾಡ್ದೆ, ಎರಡು ಸಾರಿ ಮದುವೆಯಾದೆ. ದಟ್ ಈಸ್ ಹ್ಯಾಪನ್ಡ್ ಇನ್ ಮೈ ಲೈಫ್ ಎಂದರು.

ಐವತ್ತೊಂದು ವರ್ಷದಲ್ಲಿದ್ದಾಗ ಒಂದ ಹೆಣ್ಣನ್ನು ಭೇಟಿಯಾದೆ. ಶೈಲಾಜಾರನ್ನು ಕಲೆತೆ. ಆಕೆಯನ್ನೂ ಕೈಹಿಡಿದೆ. ಅಂಬುಜಾ ಅದನ್ನೂ ಸ್ಫೋರ್ಟೀವ್ ಆಗಿ ತೆಗೆದುಕೊಂಡರು. ಅಂಜುಜಾ ಐ ಹ್ಯಾವ್ ಲವ್ ವಿತ್ ಒನ್ ಲೇಡಿ ಎಂದು ನನ್ನ ಹೆಂಡತಿ ಜೊತೆಗೆ ಹೇಳಿದೆ.

ದ್ವಾರ್ಕಿ ನೀನು ಯಾವುದನ್ನು ಇಷ್ಟಪಡ್ತೀಯಾ ಅದನ್ನು ನಾನು ಇಷ್ಟಪಡ್ತೀನಿ. ಅಂಬುಜಾ ಹಾಗೂ ಶೈಲಾಜಾ ಜೊತೆಜೊತೆಗೆ ಇದ್ದೇನೆ. ನನ್ನ ಜೀವನ ಹೀಗೆ ಸಾಗುತ್ತಿದೆ ಎಂದು ದ್ವಾರಕೀಶ್ ತಮ್ಮ ಎರಡನೇ ಮದುವೆ ಪತ್ನಿಯ ಬಗ್ಗೆ ಯಾವುದೇ ಅಳುಕಿಲ್ಲದೆ ಹೇಳಿಕೊಂಡರು.

Dwarakish second marriage Shailaja Weekend with Ramesh

ಪ್ರೀತಿಗಾಗಿ ಹಂಬಲಿಸುತ್ತಿದ್ದೆ ಆಗ ನನ್ನ ಲೈಫ್ ನಲ್ಲಿ ನೀವು ಬಂದಿರಿ. ಈಗ ನಮ್ಮ ಪ್ರೀತಿಗೆ ಇಪ್ಪತ್ತೈದು ವರ್ಷಗಳು ಎಂದರು ದ್ವಾರಕೀಶ್ ಅವರ ಎರಡನೇ ಹೆಂಡತಿ ಶೈಲಜಾ. ಇಂದು ನಾನು ಥ್ಯಾಂಕ್ಸ್ ಹೇಳಬೇಕು ಎಂದರೆ ಮೊದಲನೆಯದು ಅಂಬುಜಕ್ಕನಿಗೆ ಎರಡನೆಯದು ಮಕ್ಕಳಿಗೆ ಎಂದರು. ಜೀವನದಲ್ಲಿ ನನಗೆ ತುಂಬಾ ಪ್ರೀತಿಯನ್ನು ಕೊಟ್ಟಿದ್ದೀರಿ ಎಂದರು.

ಮನುಷ್ಯನಿಗೆ ಒಳ್ಳೆಯ ಆಸೆಗಳಿರಬೇಕು. ನಲವತ್ತು ದಿನ ಲೊಕೇಷನ್ ನೋಡಿಕೊಂಡು ಬಂದೆವು. ಸಿಂಗಪುರ್ ನಲ್ಲಿ ಲೊಕೇಷನ್ ಗಳನ್ನು ನೋಡಿದ ಮೇಲೆ ಕಥೆ ಬರೆದವು. ಲೋಕೇಷನ್ ಗೆ ತಕ್ಕಂತೆ ಕಥೆ ಬರೆದೆವು. ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಅವರು ಮಾಡಯ್ಯ ಕುಳ್ಳ ನೀನು ಮಾಡ್ತೀಯ ಎಂದರು, ಆಗ "ಸಿಂಗಾಪುರದಲ್ಲಿ ರಾಜಾ ಕುಳ್ಳ" ಚಿತ್ರ ಮಾಡಿದ್ದು ಎಂದರು.[ನನ್ನ ಪಾಲಿನ ಅಲ್ಲಾಹ್ ಜಾಫರ್ ಷರೀಫ್: ದ್ವಾರಕೀಶ್]

"ಆಫ್ರೀಕಾದಲ್ಲಿ ಶೀಲಾ" ಚಿತ್ರದ ಮರೆಯಲಾಗದ ಘಟನೆಯನ್ನು ದ್ವಾರಕೀಶ್ ನೆನಪಿಸಿಕೊಂಡರು. ಬ್ರಿಸ್ಟೋ ಎಂಬುವವರು ಪ್ರಾಣಿಗಳನ್ನು ಹಾಲಿವುಡ್ ಗೆ ಸಪ್ಲೈ ಮಾಡಿದ್ದ, ಅವನೇ ಕನ್ನಡಕ್ಕೂ ಪ್ರಾಣಿಗಳನ್ನು ಕೊಟ್ಟಿದ್ದ. ವಾರ್ನಲ್ ಬ್ರದರ್ಸ್ ಗೆ, ಎಂಜಿಎಂ ಚಿತ್ರಗಳಿಗೆ ಅವನೇ ಪ್ರಾಣಿಗಳನ್ನು ಸಪ್ಲೈ ಮಾಡುತ್ತಿದ್ದದ್ದು. ಅವನ ಹತ್ತಿರ ಒಂದು ವೈಟ್ ಹಾರ್ಸ್ ಇತ್ತು. ಅದಕ್ಕೆ ನಾವು ಕಪ್ಪುಪಟ್ಟಿ ಬಳಿದು ಕುದುರೆಯನ್ನು ಜೀಬ್ರಾ ಮಾಡಿದ್ದೆವು.

ಪೈಂಟ್ ಹಾಕಿದ ಮಾರನೆ ದಿನವೆ ಅದಕ್ಕೆ ಜ್ವರ ಬಂದುಬಿಡ್ತು. ಸಿಕ್ಕಾಪಟ್ಟೆ ಜ್ವರ ಬಂತು. ಒಂದು ಗಂಟೆ ಮೇಲೆ ಅದನ್ನು ಬಳಸುವಂತಿಲ್ಲ ಎಂದು ಹೇಳಿದ. ಕಾಡಿನ ಮಧ್ಯೆ ಚಿತ್ರೀಕರಣ ಮಾಡುತ್ತಿದ್ದೆವು. ಆಗ ಅದು ತಪ್ಪಿಸಿಕೊಂಡು ಹೊರಟು ಹೋಯಿತು. ಬ್ರಿಸ್ಟೋಗೆ ಏನು ಉತ್ತರ ಕೊಡುವುದು ಎಂಬುದೇ ಗೊತ್ತಾಗಲಿಲ್ಲ. ಆಗ ರಾಘವೇಂದ್ರ ಸ್ವಾಮಿಗಳಲ್ಲಿ ನಾನು ಎಷ್ಟು ಬೇಡಿಕೊಂಡಿದ್ದೀನಿ ಎಂದರೆ ಆ ದೇವರಿಗೇ ಗೊತ್ತು.

ಕ್ಲಬ್ಬಲ್ಲಿ ಹೋಗಿ ಹೇಳಿಬಿಡೋಣ ಎಂದು ಅಲ್ಲಿಗೆ ಹೋದೆ ಅವನು ಇಸ್ಪೀಟ್ ಆಡುತ್ತಿದ್ದ. ಮಿಸ್ಟರ್ ಬ್ರಿಸ್ಟೋ ಎಂದೆ ಕಮ್ ಕಮ್ ವಾಟ್ ಈಸ್ ಪ್ರಾಬ್ಲಂ ಎಂದ. ಅವನಿಗೆ ಹೆಂಗೆ ಹೇಳುವುದು ಎಂದೇ ಗೊತ್ತಾಗಲಿಲ್ಲ. ಒಂದು ನೂರು ಸಲ ದೇವರನ್ನು ಕೇಳಿಕೊಂಡೆ ಬ್ರಿಸ್ಟೋ ದೇರ್ ಈಸ್ ಎ ಬ್ಯಾಡ್ ನ್ಯೂಸ್ ಎಂದೆ. ವಾಟ್ ಈಸ್ ಇಟ್ ಎಂದ. ಐ ಲಾಸ್ಟ್ ಯುವರ್ ಹಾರ್ಸ್ ಎಂದೆ. ಅವನು ನಕ್ಕು ಬಿಟ್ಟ. ಡೋಂಟ್ ವರಿ ಲೆಟ್ ಇಟ್ ಬಿ ಎ ಫುಡ್ ಫರ್ ಲಯನ್ಸ್ ಎಂದುಬಿಟ್ಟ.

ಅವನು ಎಷ್ಟು ದುಡ್ಡು ಕೇಳುತ್ತಾನೆ ಇನ್ನು ಏನೇನೋ ಯೋಚನೆಗಳನ್ನು ತಲೆಯಲ್ಲಿದ್ದವು ಆದರೆ ಅವನು ನನ್ನ ಬಳಿ ನಯಾ ಪೈಸೆ ಕೇಳದೆ ಜಿಂಬಾಬ್ವೆಯಿಂದ ಕಳುಹಿಸಿದ ಎಂದು ಆ ಘಟನೆಯನ್ನು ನೆನೆದು ಅವರು ಮತ್ತೆ ಕಾಲಚಕ್ರದಲ್ಲಿ ಹಿಂದಕ್ಕೆ ಸರಿದರು.

ಆಪ್ತಮಿತ್ರ ಎಂದು ಅವರು ಒಂದು ಚಿತ್ರ ತೆಗೆದರು ಆ ಚಿತ್ರದಂತೆಯೇ ನಾನು ಅವರು ಒಳ್ಳೆಯ ಆತ್ಮೀಯರು. ಒಮ್ಮೆ ಅವರಿಗೆ ಹೃದಯ ಸಮಸ್ಯೆಯಾಗಿದ್ದಾಗ ಅವರನ್ನು ಚೆನ್ನೈಯ ವೈದ್ಯರ ಬಳಿ ತೋರಿಸಿದೆ. ಅವರು ನಮ್ಮ ಚಿತ್ರದುರ್ಗದ ಅಳಿಯ. ಅವರ ಜೀವನದಲ್ಲಿ ಯಾರ್ಯಾರು ಸಮೀಪ ಬಂದಿದ್ದಾರೋ ಅವರೆಲ್ಲಾ ಅವರಿಗೆ ಆಪ್ತಮಿತ್ರರು ಎಂದರು ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್.

English summary
Veteran actor, director and producer Dwarakish shares his golden moments in Weekend with Ramesh chat show airs on Zee Kannada. Dwarakish college days, cinema career, his love, marriage, second marrige all episodes are brought out on the programme.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada