For Quick Alerts
  ALLOW NOTIFICATIONS  
  For Daily Alerts

  ಎಮ್ಮಿ 2021 ಗೆದ್ದವರ ಪಟ್ಟಿ: ಭಾರತಕ್ಕೆ ನಿರಾಸೆ

  |

  ಸಿನಿಮಾಕ್ಕೆ ಆಸ್ಕರ್, ಸಂಗೀತಕ್ಕೆ ಗ್ರ್ಯಾಮಿ, ನಾಟಕಕ್ಕೆ ಟೋನಿ ಹಾಗೂ ಕಿರುತೆರೆಗೆ ಗ್ರ್ಯಾಮಿ ಪ್ರಶಸ್ತಿಗಳು ಪರಮೋಚ್ಛ ಪ್ರಶಸ್ತಿಗಳು ಎಂದು ನಂಬಲಾಗಿದೆ. 2021ನೇ ಸಾಲಿನ ಎಮ್ಮಿ ಪ್ರಶಸ್ತಿ ಪಟ್ಟಿ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಭಾರತದ ಕೆಲವು ಶೋಗಳು, ವೆಬ್ ಸರಣಿಗಳು ಈ ಬಾರಿ ಎಮ್ಮಿ ಸ್ಪರ್ಧೆಯಲ್ಲಿದ್ದವು ಆದರೆ ಯಾವುದಕ್ಕೂ ಪ್ರಶಸ್ತಿ ಸಿಕ್ಕಿಲ್ಲ.

  ಭಾರತದಿಂದ ಸುಷ್ಮಿತಾ ಸೇನ್ ನಟನೆಯ 'ಆರ್ಯಾ' ಅತ್ಯುತ್ತಮ ಡ್ರಾಮಾ ಸೀರೀಸ್ ವಿಭಾಗದಲ್ಲಿ ಸ್ಪರ್ಧೆ ಮಾಡಿತ್ತು. ನವಾಜುದ್ದೀನ್ ಸಿದ್ಧಿಕಿ ಅತ್ಯುತ್ತಮ ನಟ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದರು. ಇತ್ತೀಚೆಗಷ್ಟೆ ವಿವಾದ ಎಬ್ಬಿಸಿರುವ ಕಮಿಡಿಯನ್ ವೀರ್ ದಾಸ್ ಅವರ 'ವೀರ್ ದಾಸ್: ಫಾರ್ ಇಂಡಿಯಾ' ಶೋ ಕಾಮಿಡಿ ವಿಭಾಗದಲ್ಲಿ ಸ್ಪರ್ಧೆ ಮಾಡಿತ್ತು. ಆದರೆ ಯಾವೊಂದಕ್ಕೂ ಪ್ರಶಸ್ತಿ ಲಭಿಸಿಲ್ಲ. ವೀರ್ ದಾಸ್ ಹಾಗೂ ನವಾಜುದ್ದೀನ್ ಸಿದ್ಧಿಕಿ ಎಮ್ಮಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದರು ಆದರೆ ಬರಿಗೈಲಿ ವಾಪಸ್ಸಾಗಿದ್ದಾರೆ.

  2021 ರ ಎಮ್ಮಿ ಪ್ರಶಸ್ತಿ ಪಟ್ಟಿ ಇಂತಿದೆ

  ಅತ್ಯುತ್ತಮ ಡ್ರಾಮಾ ಸೀರೀಸ್: 'ತೆಹ್ರೇನ್'

  ಅತ್ಯುತ್ತಮ ಕಾಮಿಡಿ ಸೀರೀಸ್: 'ಕಾಲ್ ಮೈ ಏಜೆಂಟ್' ಸೀಸನ್ 4

  ಅತ್ಯುತ್ತಮ ಡಾಕ್ಯುಮೆಂಟರಿ: ಹೋಪ್ ಫ್ರೋಜನ್: ಎ ಕ್ವಿಸ್ಟ್‌ ಟು ಲಿವ್ ಟ್ವೈಸ್

  ಅತ್ಯುತ್ತಮ ನಟಿ: ಹೈಲೇ ಸ್ಕ್ವೈರ್ಸ್‌ (ಅಡಲ್ಟ್ ಮಟಿರಿಯಲ್)

  ಅತ್ಯುತ್ತಮ ನಟ: ಡೇವಿಡ್ ಟೆನಂಟ್ (ಡೆಸ್)

  ಚಿತ್ರಕತೆ ರಹಿತ ಮನೊರಂಜನಾ ಕಾರ್ಯಕ್ರಮ: ದಿ ಮಾಸ್ಕಡ್ ಸಿಂಗರ್

  ಕಿರು ಸರಣಿ: ಇನ್‌ಸೈಡ್

  ಟಿವಿ ಸಿನಿಮಾ: ಅಟ್ಲಾಂಟಿಕ್ ಕ್ರಾಸಿಂಗ್

  ಆರ್ಟ್ಸ್‌ ಪ್ರೋಗ್ರಾಮಿಂಗ್: ಕ್ಯುಬ್ರಿಕ್ ಬೈ ಕ್ಯುಬ್ರಿಕ್

  English summary
  Emmy 2021 winners list: Indian nominees fail to win award. Nawazuddin Siddiqui nominated for best actor, Vir Das's show nominated in comedy section.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X