»   » ಈಟಿವಿ 'ಬಿಗ್ ಬಾಸ್' ಸ್ಥಾನಕ್ಕೆ ಮತ್ತೊಂದು ಬಿಗ್ ಶೋ

ಈಟಿವಿ 'ಬಿಗ್ ಬಾಸ್' ಸ್ಥಾನಕ್ಕೆ ಮತ್ತೊಂದು ಬಿಗ್ ಶೋ

Posted By:
Subscribe to Filmibeat Kannada
Etv Kannada
ಈಟಿವಿ ಕನ್ನಡ ವಾಹಿನಿ ಮತ್ತೊಂದು ಬಿಗ್ ರಿಯಾಲಿಟಿ ಶೋಗೆ ಸನ್ನದ್ಧವಾಗಿದೆ. ಈಗ ತೆರವಾಗಿರುವ ಕಿಚ್ಚ ಸುದೀಪ್ ನಿರೂಪಿಸಿದ 'ಬಿಗ್ ಬಾಸ್ ಕನ್ನಡ' ರಿಯಾಲಿಟಿ ಶೋ ಸ್ಲಾಟನ್ನು ಈ ಹೊಸ ರಿಯಾಲಿಟಿ ಶೋ ತುಂಬಲಿದೆ. ಈ ಮೂಲಕ ರೇಟಿಂಗ್ ನಲ್ಲಿ ಉಳಿದ ಮನರಂಜನಾ ವಾಹಿನಿಗಳಿಗೆ ಮತ್ತೊಂದು ಸುತ್ತಿನ ತೀವ್ರ ಪೈಪೋಟಿ ಎದುರಾಗುತ್ತಿದೆ.

'ಬಿಗ್ ಬಾಸ್ ಕನ್ನಡ' ರಿಯಾಲಿಟಿ ಶೋ ಮೂಲಕ ಈಟಿವಿ ಕನ್ನಡ ವಾಹಿನಿ ಟಿ ಆರ್ ಪಿಯಲ್ಲಿ ಹೊಸ ಮೈಲಿಗಲ್ಲು ಹುಟ್ಟುಹಾಕಿತು. ಈ ಬಾರಿಯ ರಿಯಾಲಿಟಿ ಶೋ ಹೆಸರು 'ಇಂಡಿಯನ್'. ಈಗಾಗಲೆ ಈ ಶೋನ ಟ್ರೇಲರ್ ಬಿಡುಗಡೆಯಾಗಿದ್ದು ವಾಹಿನಿಯಲ್ಲಿ ಮೂಡಿಬರುತ್ತಿದ್ದು ಕುತೂಹಲ ಮೂಡಿಸಿದೆ.

ಈ ಹಿಂದೆ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಿಸಿರುವ ಅಕುಲ್ ಬಾಲಾಜಿ ಅವರು 'ಇಂಡಿಯನ್' ಶೋ ನಿರೂಪಕರು. ಇನ್ನು 'ಇಂಡಿಯನ್' ವಿಚಾರಕ್ಕೆ ಬಂದರೆ ಇದೊಂದು ಸಾಹಸ ಪ್ರಧಾನ ರಿಯಾಲಿಟಿ ಶೋ. ಇಲ್ಲಿ ಹೆಜ್ಜೆ ಹೆಜ್ಜೆಗೂ ಸಾಹಸವನ್ನು ಕಾಣಬಹುದು. ಭಾರತದ ಮೂಲೆ ಮೂಲೆಯಲ್ಲಿರುವ ಸಾಹಸಿಗರನ್ನು ಪರಿಚಯಿಸಲಿದೆ.

'ಎಂಟಿವಿಯ ರೌಡೀಸ್' ಎಂಬ ಶೋನ ಕನ್ನಡ ಅವತರಣಿಕೆಯೇ 'ಇಂಡಿಯನ್'. ಈ ಟ್ರಾವೆಲ್ ಶೋನಲ್ಲಿ ಏಳು ರಾಜ್ಯಗಳ ಹೊಸಹೊಸ ವಿಚಾರಗಳ ಅನ್ವೇಷಣೆಯನ್ನು 14 ಮಂದಿ ಸ್ಪರ್ಧಿಗಳ ಮೂಲಕ ಮಾಡಲಾಗುತ್ತದೆ. ಏಳು ಮಂದಿ ಮಹಿಳೆಯರು ಏಳು ಮಂದಿ ಪುರುಷ ಅಭ್ಯರ್ಥಿಗಳಿರುತ್ತಾರೆ.

ಸ್ಪರ್ಧಿಗಳಿಗೆ ಪ್ರತಿವಾರವೂ ಒಂದೊಂದು ಟಾಸ್ಕ್ ನೀಡಲಾಗುತ್ತದೆ. ಸ್ಪರ್ಧಿಗಳ ಶಕ್ತಿ ಸಾಮರ್ಥ್ಯಳನ್ನು ಅವಲಂಬಿಸಿ ಪ್ರತಿವಾರವೂ ಎಲಿಮಿನೇಷನ್ ಇರುತ್ತದೆ. ಕರ್ನಾಟಕದ ರುಚಿಕರ ಸ್ವಾದಿಷ್ಟ ತಿಂಡಿಯನ್ನು ತಯಾರಿಸುವ ಹಾಗೂ ರಾಜಸ್ತಾನದ ಮುಂಡಾಸು ಧರಿಸುವವರೆಗೂ ಟಾಸ್ಕ್ ಗಳಿರುತ್ತವೆ.

ಲಡಾಕ್ ನಲ್ಲಿ ಆರಂಭವಾಗುವ ಶೋ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುತ್ತದೆ. ಸ್ಪರ್ಧಿಗಳು ಹತ್ತು ದಿಗಳ ಕಾಲ ಒಂದೊಂದು ರಾಜ್ಯದಲ್ಲಿ ನೆಲೆಸಬೇಕಾಗುತ್ತದೆ. ಮೂಲ ರಿಯಾಲಿಟಿ ಶೋನಲ್ಲಿ ಬೈಕ್ ಗಳನ್ನು ಬಳಸಿಕೊಳ್ಳಲಾಗಿತ್ತು. ಆದರೆ ಇಲ್ಲಿ ಬಸ್ ನಲ್ಲಿ ರಾಜ್ಯದಿಂದ ರಾಜ್ಯಕ್ಕೆ ಪಯಣ ಸಾಗಲಿದೆ. ಶೀಘ್ರದಲ್ಲೇ ಸ್ಪರ್ಧಿಗಳ ವಿವರಗಳನ್ನು ಪ್ರಕಟಿಸಲಾಗುತ್ತದೆ. (ಏಜೆನ್ಸೀಸ್)

English summary
Etv Kannada is all set to host another new reality show, Indian. Akul Balaji to host the show, is an adventure-reality show that discovers the true colours of different parts of India. The show is Kannada version of MTV's Roadies.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada