»   » 'ಬಿಗ್ ಬಾಸ್' ಕಾರ್ಯಕ್ರಮದ 'ಬಿಗ್ ಡೀಲ್': ಅಸಲಿ ಸಂಗತಿ ಬಹಿರಂಗ.!

'ಬಿಗ್ ಬಾಸ್' ಕಾರ್ಯಕ್ರಮದ 'ಬಿಗ್ ಡೀಲ್': ಅಸಲಿ ಸಂಗತಿ ಬಹಿರಂಗ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಶುರು ಆಗುವ ಮುನ್ನವೇ 'ಬಿಗ್ ಡೀಲ್' ನಡೆದಿದೆ ಎಂಬ ಗುಸುಗುಸು ಪಿಸುಪಿಸು 'ಬಿಗ್ ಬಾಸ್' ಮನೆಯಲ್ಲಿಯೇ ಕೇಳಿಬಂದಿತ್ತು.

'ಒಳ್ಳೆ ಹುಡುಗ' ಅಂತ ಹೇಳಿಕೊಳ್ಳುವ ಪ್ರಥಮ್ ಕೂಡ, ''ಕೀರ್ತಿ, ನಿರಂಜನ್ ಹಾಗೂ ಶಾಲಿನಿ ಫಿಕ್ಸ್ ಮಾಡಿಕೊಂಡು ಆಟವಾಡುತ್ತಿದ್ದಾರೆ'' ಅಂತ ಆಗಾಗ ಆರೋಪ ಮಾಡುತ್ತಿದ್ದರು.

ಅಲ್ಲದೇ... ಶಾಲಿನಿ, ನಿರಂಜನ್, ಕೀರ್ತಿ ಮತ್ತು ಶೀತಲ್ ಶೆಟ್ಟಿ... ಇವರು ಒಂದು 'ಗ್ಯಾಂಗ್' ಎಂಬ ಸತ್ಯ 'ಬಿಗ್ ಬಾಸ್' ಮನೆಯ ಎಲ್ಲ ಸದಸ್ಯರಿಗೂ ಗೊತ್ತು. 'ಬಿಗ್ ಬಾಸ್ ಮನೆಯಲ್ಲಿ ಈ 'ಗ್ಯಾಂಗ್ ಮೆಂಬರ್ಸ್' ನಡವಳಿಕೆ, ಪ್ರಥಮ್ ಮಾಡುತ್ತಿರುವ ಆರೋಪಕ್ಕೆ ಇಂಬು ಕೊಡುತ್ತಿರುವುದು ಕೂಡ ಅಷ್ಟೇ ಸತ್ಯ.

ಹಾಗಾದ್ರೆ, ಇವರೆಲ್ಲ ಹೊರಗೆ 'ಫಿಕ್ಸ್' ಮಾಡಿಕೊಂಡು ಬಂದು ಆಟವಾಡುತ್ತಿದ್ದಾರಾ.? ವೀಕ್ಷಕರಿಗೆ ಈ ಡೌಟ್ ಗಾಢವಾಗಿ ಕಾಡುತ್ತಿರುವ ಪರಿಣಾಮ, 'ಕಾಲರ್ ಆಫ್ ದಿ ವೀಕ್' ಮೂಲಕ 'ಬಿಗ್ ಡೀಲ್' ವಿವಾದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದರು 'ಬಿಗ್ ಬಾಸ್'. ಮುಂದೆ ಓದಿ....

'ಕಾಲರ್ ಆಫ್ ದಿ ವೀಕ್' ಮುಖಾಂತರ ಡೌಟ್ ಕ್ಲಿಯರ್

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ವೀಕ್ಷಕರೊಬ್ಬರು ಕರೆ ಮಾಡಿ, ನಿರಂಜನ್ ದೇಶಪಾಂಡೆ ರವರಿಗೆ 'ಬಿಗ್ ಡೀಲ್' ಕುರಿತು ನೇರವಾಗಿ ಪ್ರಶ್ನೆ ಕೇಳಿದರು. [ಎಲ್ಲರೂ ಅಂದುಕೊಂಡ್ಹಾಗೆ ಆಗಿಲ್ಲ: ಡೌಟ್ ಕ್ಲಿಯರ್ ಮಾಡಿದ 'ಬಿಗ್ ಬಾಸ್'!]

'ಕಾಲರ್ ಆಫ್ ದಿ ವೀಕ್' ಕೇಳಿದ ಪ್ರಶ್ನೆ ಏನು.?

''ಬಿಗ್ ಬಾಸ್' ಮನೆಯಲ್ಲಿರುವ ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿರುವ ಪ್ರಕಾರ, ನೀವು (ನಿರಂಜನ್), ಶಾಲಿನಿ ಮತ್ತು ಕೀರ್ತಿ... ಮೊದಲೇ ಮಾತನಾಡಿಕೊಂಡು ಬಂದಿದ್ದೀರಾ. ಫಿಕ್ಸ್ ಆಗಿದೆ ಎನ್ನುವ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಅದನ್ನ ನೋಡಿ ಇದು ಇರಬಹುದಾ ಎಂಬ ಕನ್ ಫ್ಯೂಶನ್ ನಮಗೂ ಸ್ಟಾರ್ಟ್ ಆಗಿದೆ. ಅದಕ್ಕೆ ಈ ಬಗ್ಗೆ ಕ್ಲಾರಿಫಿಕೇಷನ್ ಕೊಡುತ್ತೀರಾ.?'' ಅಂತ ನಿರಂಜನ್ ದೇಶಪಾಂಡೆ ರವರಿಗೆ ವೀಕ್ಷಕರೊಬ್ಬರು ಪ್ರಶ್ನೆ ಕೇಳಿದರು. ['ಬಿಗ್ ಬಾಸ್' ಶುರುವಾಗುವ ಮುನ್ನವೇ ನಡೆದಿತ್ತು 'ಬಿಗ್ ಡೀಲ್'? ಯಾರು ಆ ಮೂವರು?]

ನಿರಂಜನ್ ಕೊಟ್ಟ ಉತ್ತರವೇನು.?

''ನನಗೆ, ಶಾಲಿನಿಗೆ, ಕೀರ್ತಿಗೆ, ಶೀತಲ್ ಗೆ ಒಬ್ಬರಿಗೊಬ್ಬರು ಪರಿಚಯ ಇರುವುದು ನಿಜ. ಆದ್ರೆ ನಾವು ನಿಷ್ಟಾವಂತರಾಗಿ ನಡೆದುಕೊಳ್ಳುತ್ತಿದ್ದೇವೆ. 'ಬಿಗ್ ಬಾಸ್' ಮನೆಯೊಳಗೆ ಬರುವ ಮೂರು ದಿನಗಳ ಹಿಂದೆ ನಾನು-ಕೀರ್ತಿ ಮೀಟ್ ಆಗಿದ್ವಿ. ನಾವು ಒಳಗೆ ಹೋಗುತ್ತಿರುವುದನ್ನ ಒಬ್ಬರಿಗೊಬ್ಬರು ಹೇಳಿಕೊಳ್ಳಲಿಲ್ಲ'' ಎಂದರು ನಿರಂಜನ್ ದೇಶಪಾಂಡೆ.

ನಮ್ಮ ಕೈಯಲ್ಲಿ ಏನೂ ಇಲ್ಲ

''ಯಾವುದೇ ಕಾರಣಕ್ಕೂ ಡಿಸೈಡ್ ಮಾಡಿಕೊಂಡು ಬಂದಿಲ್ಲ. ನಾವು ಡಿಸೈಡ್ ಮಾಡಿಕೊಂಡು ಬರೋಕೆ ನಮ್ಮ ಕೈಯಲ್ಲಿ ಏನೂ ಇಲ್ಲ. ಎಲ್ಲವೂ 'ಬಿಗ್ ಬಾಸ್' ಕೈಯಲ್ಲಿ ಇದೆ'' - ನಿರಂಜನ್ ದೇಶಪಾಂಡೆ

ನಮಗೆ ಏನೂ ಗೊತ್ತಿಲ್ಲ

''ನಮ್ಮ ನಾಲ್ಕು ಜನರಲ್ಲಿ ಈಗಾಗಲೇ ಶಾಲಿನಿ ಮತ್ತು ಶೀತಲ್ ಶೆಟ್ಟಿ ಹೊರಗೆ ಹೋಗಿ ಬಂದರು. ಅದು ನಮಗೇ ಬಿಗ್ ಶಾಕ್. ಹೇಗೆ ಹೊರಗೆ ಹೋದರು ಅಂತಲೂ ಗೊತ್ತಿಲ್ಲ. ಹೇಗೆ ಒಳಗೆ ಬಂದರೂ ಅಂತಲೂ ಗೊತ್ತಿಲ್ಲ. ನಾವು ಯಾವತ್ತು ಹೊರಗೆ ಹೋಗ್ತೀವಿ ಅನ್ನೋದೂ ಗೊತ್ತಿಲ್ಲ'' ಅಂತ ಕ್ಲಾರಿಟಿ ನೀಡಿದರು ನಿರಂಜನ್ ದೇಶಪಾಂಡೆ

ಕೀರ್ತಿ ಕೂಡ ಕ್ಲಾರಿಟಿ ಕೊಟ್ಟರು

''ನನಗೆ ಏಳು ವರ್ಷದ ಹಿಂದೆ ಒಂದು ಕಂಪನಿಯಲ್ಲಿ ಕೆಲಸ ಕೊಟ್ಟಿದ್ದು ಶಾಲಿನಿ. ಆ ಸಂಸ್ಥೆಯಲ್ಲಿ ನಿರಂಜನ್ ಕೂಡ ಕೆಲಸ ಮಾಡುತ್ತಿದ್ದ. ಕಳೆದ ಏಳು ವರ್ಷಗಳಿಂದ ನಾವು ಒಳ್ಳೆಯ ಸ್ನೇಹಿತರು. ಹೊರಗಡೆ ಫಿಕ್ಸ್ ಮಾಡಿಕೊಂಡು ಬಂದು ಇಲ್ಲಿ ಆಡಬೇಕು ಎಂಬ ಉದ್ದೇಶ ನಮಗೆ ಇಲ್ಲ'' ಅಂತ 'ಕಿರಿಕ್' ಕೀರ್ತಿ ಕೂಡ ಸ್ಪಷ್ಟನೆ ಕೊಟ್ಟರು. ['ಬಿಗ್ ಬಾಸ್' ಬಗ್ಗೆ ತಪ್ಪು ಕಲ್ಪನೆ: ಕೈ ಮುಗಿದು ಕ್ಷಮೆ ಕೇಳಿದ 'ಕಿರಿಕ್' ಕೀರ್ತಿ]

ಮಧ್ಯ ಪ್ರವೇಶಿಸಿದ ಶೀತಲ್ ಶೆಟ್ಟಿ

''ಪ್ರಥಮ್ ಡೈರೆಕ್ಟ್ ಆಗಿ ಹೇಳ್ತಾರೆ, ''ನನ್ನ ಹತ್ತರ ಆಡಿಯೋ ಇದೆ. ಆಡಿಯೋ ರೆಕಾರ್ಡ್ ಆಗಿದೆ. ಫಿಕ್ಸ್ ಮಾಡಿಕೊಳ್ಳುವುದಕ್ಕೆ ನನ್ನನ್ನ ಕರೆದಿದ್ದಾರೆ'' ಅಂತ. ಜನರಿಗೆ ರಾಂಗ್ ಮೆಸೇಜ್ ಹೋಗಬಾರದು ಎಂಬ ಕಾರಣಕ್ಕೆ ನೀವು (ಸುದೀಪ್) ಅವರ (ಪ್ರಥಮ್) ಬಳಿ ಕೇಳಬೇಕು ಎಂಬುದು ಒಂದು ರಿಕ್ವೆಸ್ಟ್'' ಅಂತ ಸುದೀಪ್ ಬಳಿ ಶೀತಲ್ ಶೆಟ್ಟಿ ಮನವಿ ಮಾಡಿಕೊಂಡರು. [ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ ಗ್ಯಾಂಗ್.!]

ಫೋನ್ ಬಂದಿದ್ದ ಕುರಿತು ಮಾತನಾಡಿದ್ದು ಯಾಕೆ.?

''ನಾಲ್ಕನೇ ದಿನ ಕೀರ್ತಿ ಬಂದು ನನಗೆ ಕೇಳ್ತಾರೆ, ''ನಿಮಗೆ ಒಂದು ಫೋನ್ ಬಂದಿತ್ತು ನೆನಪಿದ್ಯಾ.?'' ಅಂತ. ಹೊರಗಡೆ ಒಬ್ಬರು ನನಗೂ ಮತ್ತು ಕೀರ್ತಿ ಅವರಿಗೂ mutual ಫ್ರೆಂಡ್. ಅವರು ನನಗೆ ಫೋನ್ ಮಾಡಿ ಕೀರ್ತಿ ಬಗ್ಗೆ ಮಾತನಾಡಿದ್ದರು. ಇದರ ಅರ್ಥ ಏನು.?'' ಎಂದು 'ಫಿಕ್ಸಿಂಗ್' ಕುರಿತು ಪ್ರಥಮ್ ಪ್ರಶ್ನೆ ಕೇಳಿದರು. [ಕಿಚ್ಚ ಸುದೀಪ್ ಮುಂದೆ ಅಳಲು ತೋಡಿಕೊಂಡ 'ಪ್ರಕೃತಿ ವಿಕೋಪ' ಪ್ರಥಮ್.!]

ಪ್ರತಿ ಬಾರಿ ಕೀರ್ತಿ ಯಾಕೆ ಮೂಗು ತೂರಿಸಬೇಕು.?

''ನಾನು-ನಿರಂಜನ್ ಜಗಳ ಆಗುವಾಗ ಪ್ರತಿ ಬಾರಿ ಕೀರ್ತಿ ಮಧ್ಯೆ ಬರ್ತಾರೆ. ಯಾಕೆ ಬರಬೇಕು. ಇದನ್ನೆಲ್ಲ ನೋಡಿದಾಗ ಫಿಕ್ಸ್ ಆಗಿದ್ದಾರೆ ಅಂತ ಅನ್ಸಲ್ವಾ.? ಈ ವಿಚಾರಕ್ಕೆ ಶೀತಲ್ ಯಾಕೆ ಮಧ್ಯೆ ಬರಬೇಕು.?'' ಎಂದರೂ ಪ್ರಥಮ್ ಬೆಟ್ಟು ಮಾಡಿ ತೋರಿಸಿದರು

ಪ್ರ'ಪ್ರಥಮ' ಬಾರಿಗೆ ನಡೆದದ್ದು ಏನು.?

''ಪ್ರಪ್ರಥಮ ಬಾರಿಗೆ ಪ್ರಥಮ್ ರನ್ನ ಭೇಟಿ ಆದಾಗ, ''ಅಕ್ಟೋಬರ್ ನಲ್ಲಿ ನಿಮಗೆ 'ಬಿಗ್ ಬಾಸ್' ಕಡೆಯಿಂದ ಫೋನ್ ಬರುತ್ತೆ. ನನಗೆ ಕಲರ್ಸ್ ಕನ್ನಡದಲ್ಲಿ ಪರಿಚಯ ಇದ್ದಾರೆ'' ಅಂತ ಪ್ರಥಮ್ ನನಗೆ ಹೇಳಿದ್ದರು. ಆಗ ನಾನು ಇಗ್ನೋರ್ ಮಾಡಿದ್ದೆ'' ಅಂತ ಕೀರ್ತಿ ಕುಮಾರ್ ಉತ್ತರ ನೀಡಿದರು.

ಫಿಕ್ಸ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ

''ನಾಲ್ಕನೇ ದಿನ ಇವರು ಪ್ರತಿಭಟನೆ ಮಾಡುತ್ತಿದ್ದಾಗ, ಹಳೇ ಟಾಪಿಕ್ ಬಂದಿತ್ತು ಅಷ್ಟೆ. ಅಷ್ಟು ಬಿಟ್ಟರೆ ಇವರ ಬಳಿ ಫಿಕ್ಸ್ ಮಾಡಿಕೊಳ್ಳುವ ಅವಶ್ಯಕತೆ ನನಗೆ ಇಲ್ಲ'' ಅಂತ 'ಕಿರಿಕ್' ಕೀರ್ತಿ ಕ್ಲಾರಿಟಿ ಕೊಟ್ಟರು.

ಫಿಕ್ಸಿಂಗ್ ನಡೆದಿಲ್ಲ ಎಂದ ಸುದೀಪ್

''ನಿಮ್ಮಲ್ಲಿ ಡೈರೆಕ್ಷನ್ ಮಾಡುವುದನ್ನು ನಿಲ್ಲಿಸಿ. ಇದು ಆಟ. ಹೊರಗಡೆ ನಮ್ಮ ತನಿಖೆ ಹೇಳುವ ಪ್ರಕಾರ, ಈ ತರಹ ಗ್ರೂಪಿಸಂ ನಡೆದಿಲ್ಲ. ಒಳಗಡೆ ಹೋದ ಮೇಲೆ ಗ್ರೂಪ್ ಆಗಿದ್ರೆ, ಅದಕ್ಕೂ ನಮಗೂ ಸಂಬಂಧ ಇಲ್ಲ'' ಅಂತ ಸ್ಪಷ್ಟನೆ ನೀಡಿದರು ಕಿಚ್ಚ ಸುದೀಪ್

ಇದು ನೆನಪಿರಲಿ

''ಶಾಲಿನಿ, ನಿರಂಜನ್, ಕೀರ್ತಿ ಒಬ್ಬರಿಗೊಬ್ಬರು ನಾಮಿನೇಟ್ ಮಾಡಿಕೊಳ್ಳಲ್ಲ. ಆದ್ರೆ, ಹಾಗೆ ಮಾಡುವ ಮೂಲಕ ಉಳಿದ 9 ಜನರ ಕೆಂಗಣ್ಣಿಗೆ ಗುರಿಯಾಗುತ್ತಾರೆ'' ಅಂತ ಸುದೀಪ್ ಎಚ್ಚರಿಸಿದರು ಕೂಡ.!

English summary
Bigg Boss Kannada 4: Week 6: Niranjan Deshpande and Kirik Keerthi has given clarification regarding Fixing in BBK4.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada