»   » 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಕೂತ ನಟ ಗಣೇಶ್.!

'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಕೂತ ನಟ ಗಣೇಶ್.!

Posted By:
Subscribe to Filmibeat Kannada

ಕಡೆಗೂ ಗೋಲ್ಡನ್ ಸ್ಟಾರ್ ಅಭಿಮಾನಿಗಳ ಕನವರಿಕೆ ಈಡೇರಿದೆ. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ 'ಮಳೆ ಹುಡುಗ' ಭಾಗವಹಿಸಿದ್ದಾರೆ. ಸಾಧಕರ ಸೀಟ್ ಮೇಲೆ ಗಣೇಶ್ ಆಸೀನರಾಗಿದ್ದಾರೆ.

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಗಣೇಶ್ ಪಾಲ್ಗೊಳ್ಳಬೇಕು ಎಂದು ಮೊದಲ ಆವೃತ್ತಿಯಿಂದಲೂ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಆದ್ರೆ, ಹಲವು ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಇದೀಗ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಕಾಲ ಕೂಡಿ ಬಂದಿದೆ. ಮುಂದೆ ಓದಿರಿ...

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಗಣೇಶ್

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಗಣೇಶ್ ಭಾಗವಹಿಸಿದ್ದಾರೆ. ಅದಕ್ಕೆ ಸಾಕ್ಷಿ 'ಫಿಲ್ಮಿಬೀಟ್ ಕನ್ನಡ'ಗೆ ಸಿಕ್ಕಿರುವ ಈ ಫೋಟೋ.

ಇಂದು ನಡೆಯುತ್ತಿದೆ ಚಿತ್ರೀಕರಣ

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಗಣೇಶ್ ಭಾಗವಹಿಸಿರುವ ಸಂಚಿಕೆಯ ಚಿತ್ರೀಕರಣ ಇಂದು ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿದೆ.

ಗೋಲ್ಡನ್ ಸ್ಟಾರ್ ಜೊತೆ 'ವೀಕೆಂಡ್ ಫಿನಾಲೆ' ಹಂಚಿಕೊಳ್ಳುವ ಸುವರ್ಣವಾಕಾಶ.!

ಫೇಸ್ ಬುಕ್ ಲೈವ್

ಗಣೇಶ್ ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಸಂಚಿಕೆಯ ಚಿತ್ರೀಕರಣವನ್ನ ಅಬ್ಬಯ್ಯ ನಾಯ್ಡು ಸ್ಟುಡಿಯೋದಿಂದಲೇ ಜೀ ಕನ್ನಡ ವಾಹಿನಿ ಇಂದು ಫೇಸ್ ಬುಕ್ ಲೈವ್ ಮಾಡಿದೆ.

ಪ್ರಸಾರ ಯಾವಾಗ.?

ಗಣೇಶ್ ರವರ 'ವೀಕೆಂಡ್ ವಿತ್ ರಮೇಶ್' ಸಂಚಿಕೆ ಜುಲೈ 1 ಹಾಗೂ 2 ರಂದು, ಗಣೇಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಒಂದ್ಕಡೆ ಪವರ್ ಸ್ಟಾರ್, ಮತ್ತೊಂದೆಡೆ ಗೋಲ್ಡನ್ ಸ್ಟಾರ್: ಫುಲ್ ಧಮಾಕ.!

ಗ್ರ್ಯಾಂಡ್ ಫಿನಾಲೆ ಸಂಚಿಕೆ

ಗಣೇಶ್ ಸಂಚಿಕೆ ಮೂಲಕ 'ವೀಕೆಂಡ್ ವಿತ್ ರಮೇಶ್-3' ಮುಕ್ತಾಯವಾಗಲಿದೆ.

English summary
Golden Star Ganesh takes part in Zee Kannada Channel's popular show 'Weekend With Ramesh 3'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada