For Quick Alerts
ALLOW NOTIFICATIONS  
For Daily Alerts

  ಬಿಗ್ ಬಾಸ್ ಮುಂದೆ ಗಳಗಳ ಕಣ್ಣೀರಿಟ್ಟ ಗುರು ಪ್ರಸಾದ್

  By ಉದಯರವಿ
  |

  ಗುರುಪ್ರಸಾದ್ ತಾನು ಕಥೆ ಹೇಳುವ ವಿಚಾರವಾಗಿ ಮಾತನಾಡುತ್ತಾ, ಅವನು (ರೋಹಿತ್) ಕ್ಯಾಪ್ಟನ್ ಹೆಣದ ತರಹ ಮಲಗಿರುತ್ತಾನಂತೆ ಅವನ ಹತ್ತಿರ ನಾನೇನು ಕಥೆ ಹೇಳೋದು ಎಂದರು. ಕಡೆಗೆ ಹತ್ತಡಿ ಎತ್ತರದ ಗೋಡೆ ಹಾರುವ ಬಗ್ಗೆನೇ ಅವರು ಯೋಚಿಸಿದರು. ರೂಲ್ ಬ್ರೇಕ್ ಮಾಡಿ ಇಲ್ಲಿಂದ ಹೋಗುತ್ತೇನೆ. ಇಲ್ಲಿರುವ ಕೆಟ್ಟ ಎಥಿಕ್ಸ್ ಬಗ್ಗೆ ನನಗೆ ನಂಬಿಕೆ ಇಲ್ಲ.

  ನಾನು ಮರ ಹತ್ತುವುದರಲ್ಲಿ ಎಕ್ಸ್ ಪರ್ಟ್. ನಾನು ಇಲ್ಲಿಂದ ಹತ್ತಿ ಇಳಿದು ಹೋದರೆ ಯಾರೂ ತಡೆಯಬಾರದು. ನನ್ನ ಮೈಮೇಲೆ ಒಂದೇ ಒಂದು ಗೀಟು ಬಿದ್ದರೂ ಕರ್ನಾಟಕದಲ್ಲಿ ದೊಡ್ಡ ನ್ಯೂಸ್ ಆಗುತ್ತದೆ ರಂಪಾಟ ಶುರು ಹಚ್ಚಿಕೊಂಡರು.

  ಟ್ರಬಲ್ ಸ್ಟಾರ್ ಆಗಿ ಮನೆಗೆ ಎಂಟ್ರಿ ಕೊಟ್ಟ ಗುರು ಪ್ರಸಾದ್ ಬರುಬರುತ್ತಾ ಸೆಂಟಿಮೆಂಟ್ ಸ್ಟಾರ್ ಆದರು. ಇದೆಲ್ಲವನ್ನೂ ಮೌನವಾಗಿ ರಹಸ್ಯ ಕೋಣೆಯಲ್ಲಿ ನೋಡುತ್ತಾ ಸಾಧ್ಯವಾದರೆ ಒಂದೆರಡು ಹನಿ ಕಣ್ಣೀರು ಹರಿಸುತ್ತಾ ನೋಡುವ ಅಸಹಾಯಕ ಪರಿಸ್ಥಿತಿ ನೀತೂ ಅವರದು. ಅವರ ಬದಲು ಬೇರೆ ಯಾರಿಗಾದರೂ ಶಿಕ್ಷೆ ಕೊಡಿ. ಅವರು ಅದನ್ನು ಸ್ಪೋಫೋರ್ಟೀವ್ ಆಗಿ ತೆಗೆದುಕೊಂಡಿಲ್ಲ ಎಂದು ಬಿಗ್ ಬಾಸ್ ಬಳಿ ವಿನಂತಿಸಿಕೊಂಡರು.

  ಸಂಕಷ್ಟಗಳನ್ನು ನೆನೆದು ಕಣ್ಣೀರಿಟ್ಟ ಗುರು

  ಗುರು ಅವರ ಭಾವೋದ್ವೇಗವನ್ನು ನೋಡಿದ ಬಿಗ್ ಬಾಸ್ ಅವರನ್ನು ಕನ್ಫೆಷನ್ ರೂಮಿಗೆ ಆಹ್ವಾನಿಸಿದರು. ನೀವು ಉದ್ವೇಗಗೊಂಡಕ್ಕೆ ಕಾಣುತ್ತಿದೆ. ಅದಕ್ಕೆ ಕಾರಣ ಏನು ಎಂದು ಕೇಳಿದರು. ತನ್ನ ಜೀವನದ ಸಂಕಷ್ಟಗಳನ್ನು ನೆನೆದು ಕಣ್ಣೀರಿಟ್ಟರು. ಇದುವರೆಗೂ ಒಳ್ಳೆ ಕಥೆಗಳಿಲ್ಲ ಎಂದು ಕೊರಗುತ್ತಿದ್ದವರಿಗೆ ಇಪ್ಪತ್ತೈದು ವರ್ಷ ಸ್ಟಡಿ ಮಾಡಿ ಅತ್ಯುತ್ತಮ ಕಥೆಗಳನ್ನು ಕೊಟ್ಟಿದ್ದೇನೆ.

  ಚಿಕ್ಕ ಮಗುವಿನಂತೆ ಬಿಕ್ಕಿಬಿಕ್ಕಿ ಅತ್ತ ಗುರುಗಳು

  ಪ್ರತಿ ಕ್ಷಣ ತಾಯಿ ಶಾರದೆ ಕೊಡುತ್ತಿದ್ದಾರೆ. ಕಥೆ, ಸಂಭಾಷಣೆ ಎಂದು ಏನೋ ಹೇಳಲು ಹೊರಟಾಗ ಇದ್ದಕ್ಕಿದ್ದಂತೆ ಅವರು ಚಿಕ್ಕ ಮಗುವಿನಂತೆ ಬಿಕ್ಕಿಬಿಕ್ಕಿ ಅಳಲು ಶುರು ಮಾಡಿದರು. ಅವರ ಕಣ್ಣಾಲಿಗಳು ತುಂಬಿ ಬಂದವು. ಕಣ್ಣೀರಿನ ಕೋಡಿಯೇ ಸ್ವಲ್ಪ ಸಮಯ ಅವರ ಉತ್ತರವಾಗಿತ್ತು.

  ಹಣ ಕಳೆದುಕೊಂಡಿದ್ದಾಗಿ ಹೇಳಿದ ಗುರು ಪ್ರಸಾದ್

  ನನ್ನ ಜೀವನದಲ್ಲಿ ಒಂದೇ ಒಂದು ಕೆಟ್ಟ ಕಥೆ ಮಾಡಬಾರದು, ಕಡಿಮೆ ಚಿತ್ರಗಳು ಮಾಡಿದರೂ ಪರ್ವಾಗಿಲ್ಲ ಎಂದು ಬಹಳಷ್ಟು ಹಣ ಕಳೆದುಕೊಂಡು. ಒಂದೇ ಒಂದು ಅಕ್ಷರ ಕದಿಯಬಾರದು ಎಂದು ನಿಯಮಗಳನ್ನು ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

  ಎಲ್ಲವನ್ನೂ ಬಿಟ್ಟು ಇಲ್ಲಿ ಬಂದಿದ್ದೇನೆ

  ಇಂತಹ ನನಗೆ ಅನ್ ಪ್ರಾಡೆಕ್ಟೀವ್ ಆಗಿ ಇಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆ ರೋಹಿತ್ ಹೆಣ ಮಲಗಿದಂತೆ ಮಲಗಿರುತ್ತಾನೆ. ಅವನ ಮುಂದೆ ನಾನು ಕಥೆ ಹೇಳಬೇಕೆ? ಇಷ್ಟು ಒಳ್ಳೊಳ್ಳೆಯ ಕಥೆಗಳನ್ನು ಕಷ್ಟಪಟ್ಟು ಬರೆದರೂ ಇಲ್ಲಿ ಕೇಳಿವವರಿಲ್ಲವಲ್ಲಾ ಎಂಬ ದುಃಖ ತಮಗೆ ಎಂದರು. ನಾನು ನನ್ನ ಹೆಂಡತಿ, ಮಗಳು, ನಾಯಿ ಮರಿಗಳನ್ನು ಮರೆತು ಬಂದಿದ್ದೇನೆ ಎಂದರು.

  ಗುರು ಧಾರಾಕಾರ ಕಣ್ಣೀರಿಗೆ ಕರವಸ್ತ್ರ ಒದ್ದೆಮುದ್ದೆ

  ಬಳಿಕ ಸಮಾಧಾನ ಮಾಡಿದ ಬಿಗ್ ಬಾಸ್. ಒಟ್ಟಾರೆಯಾಗಿ ಅವರ ಧಾರಾಕಾರ ಕಣ್ಣೀರಿಗೆ ಒಂದು ಕರವಸ್ತ್ರ ಸಂಪೂರ್ಣ ಒದ್ದೆಮುದ್ದೆಯಾಯಿತು. ಉದ್ವೇಗವನ್ನು ತಡೆದುಕೊಳ್ಳಲು ಆಗದೆ ಈ ರೀತಿ ಮಾಡಿದೆ ಕ್ಷಮಿಸಿ. ನನಗೆ ಯಾರಿಗೂ ನೋವು ಕೋಡಲು ಇಷ್ಟವಾಗಲ್ಲ, ಅದೇ ರೀತಿ ನೋವನ್ನು ತಡೆದುಕೊಳ್ಳಲೂ ಸಾಧ್ಯವಿಲ್ಲ ಎಂದರು. ನಾನು ಬೆಸ್ಟ್ ಫರ್ಮಾಮೆನ್ಸ್ ಕೊಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ ಎಂದು ಅಲ್ಲಿಂದ ಎದ್ದುಬಂದರು.

  ಎಷ್ಟೋ ವರ್ಷಗಳ ಬಳಿಕ ಗುರು ಕಣ್ಣಲ್ಲಿ ನೀರು

  ಅಲ್ಲಿಂದ ಬಂದ ಮೇಲೂ ಮತ್ತೆ ಮನೆಯ ಸದಸ್ಯರ ಮುಂದೆ ಗೊಳೋ ಎಂದು ಅತ್ತರು. ಎಷ್ಟೋ ವರ್ಷಗಳ ಬಳಿಕ ನನ್ನ ಕಣ್ಣಲ್ಲಿ ನೀರು ಬಂತು ಇಂದು ಎಂದು ಹೇಳುತ್ತಾ ಉಳಿದ ಸದಸ್ಯರ ನಡುವೆಯೂ ಗೊಳೋ ಎಂದು ಅತ್ತರು. ಅವರನ್ನು ಸಮಾಧಾನ ಮಾಡಲು ಎಲ್ಲರೂ ಪ್ರಯತ್ನಿಸಿದರು.

  ಯಾರೂ ಕಥೆ ಕೇಳಲಿಲ್ಲ ರಗ್ಗು ಹೊದ್ದು ಮಲಗಿದ ಗುರು

  ಒಂದು ಕಥೆಗೆ ಮಿನಿಮಮ್ ಗ್ರಾಮರ್ ಇರುತ್ತದೆ. ಅದು ಪಾಲಿಸಿದರೆ ಚೆನ್ನಾಗಿರುತ್ತದೆ ಎಂದರು. ಮೂರು ಗಂಟೆ ಕಥೆ ಹೇಳಿ ಇನ್ನೂ ಯಾರೂ ನನ್ನ ಕಥೆ ಕೇಳುತ್ತಿಲ್ಲ ಎಂದು ಗುರು ಪ್ರಸಾದ್ ರಗ್ಗು ಹೊದ್ದು ನಿದ್ದೆಗೆ ಜಾರಿದರು. ಬಿಗ್ ಬಾಸ್ ಸಹ ಸೈರನ್ ಹಾಕಿ ಕಮಕ್ ಕಿಮಕ್ ಎನ್ನಲಿಲ್ಲ.

  English summary
  Trouble star Guruprasad becomes sentiment star in Bigg Boss Kannada 2 show. He shed tears in front of cameras. He didn't let his emotions control him. Day 35th and 36th highlights.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more