»   » ಎಚ್.ಡಿ.ದೇವೇಗೌಡ ರವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಅಂತ ಗೊತ್ತಾದ್ರೆ, ನೀವೇ ಕಣ್ಣರಳಿಸುತ್ತೀರಾ.!

ಎಚ್.ಡಿ.ದೇವೇಗೌಡ ರವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಅಂತ ಗೊತ್ತಾದ್ರೆ, ನೀವೇ ಕಣ್ಣರಳಿಸುತ್ತೀರಾ.!

Posted By:
Subscribe to Filmibeat Kannada

''ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರಿಗೆ ಏನ್ ಕಮ್ಮಿ.? ಬೆಂಗಳೂರಿನ ಪ್ರತಿಷ್ಟಿತ ಏರಿಯಾಗಳಲ್ಲಿ ಸ್ವಂತ ಮನೆಗಳಿವೆ. ಕೋಟಿ ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇದೆ. ಊರಲ್ಲಿ ಎಕರೆಗಟ್ಟಲೆ ಜಮೀನಿದೆ. ಇನ್ನೂ ಮೂರು ತಲೆಮೂರು ಕೂತು ತಿಂದರೂ ಕರಗದಷ್ಟು ಆಸ್ತಿ ಮಾಡಿಟ್ಟಿದ್ದಾರೆ'' ಎಂದು ಅನೇಕರು ಮಾತನಾಡಿಕೊಳ್ಳಬಹುದು.

'ದೂರದ ಬೆಟ್ಟ ನುಣ್ಣಗೆ' ಎನ್ನುವ ಹಾಗೆ... ರಾಜಕಾರಣಿಗಳೆಲ್ಲಾ ಶ್ರೀಮಂತರು ಎಂಬ ಭಾವ ಜನಸಾಮಾನ್ಯರಿಗೆ.! ಆದ್ರೆ, ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿಯೊಂದನ್ನ ಎಚ್.ಡಿ.ದೇವೇಗೌಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಾಯ್ಬಿಟ್ಟಿದ್ದಾರೆ.

ದೇಶದ ಅತ್ಯುನ್ನತ ಹುದ್ದೆ 'ಪ್ರಧಾನ ಮಂತ್ರಿ' ಗದ್ದುಗೆಗೆ ಏರಿದಾಗಲೂ, ಬೆಂಗಳೂರಿನಲ್ಲಿ ವಾಸ ಮಾಡಲು ಎಚ್.ಡಿ.ದೇವೇಗೌಡ ಬಾಡಿಗೆ ಮನೆ ಹುಡುಕುತ್ತಿದ್ದರಂತೆ.! ಇನ್ನೂ ಸದ್ಯ ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಅಂತ ಕೇಳಿದ್ರೆ, ನೀವೇ ಕಣ್ಣು-ಬಾಯಿ ಅರಳಿಸುತ್ತೀರಾ.! ಮುಂದೆ ಓದಿರಿ...

ಎಚ್.ಡಿ.ದೇವೇಗೌಡ ಶಪಥ ಮಾಡಿದ್ದಾರಂತೆ.!

''ಜೀವನದಲ್ಲಿ ನಾನು ಬೇರೆಯವರ ದುಡ್ಡು ಮುಟ್ಟಲ್ಲ ಎಂದು ಶಪಥ ಮಾಡಿದ್ದೇನೆ. ಲೆಕ್ಕ ತೆಗೆದುಕೊಳ್ಳಬೇಕು ಅಂದ್ರೆ ನನ್ನ ಆಸ್ತಿ ಏನಿಲ್ಲ'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹೇಳುತ್ತಾರೆ ಎಚ್.ಡಿ.ದೇವೇಗೌಡ.

ಜೀವನದಲ್ಲಿ ಎಚ್.ಡಿ.ದೇವೇಗೌಡ ಮಾಡಿರುವ ಮಹಾನ್ ಶಪಥ ಏನ್ಗೊತ್ತಾ.?

ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ.?

''ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಿದ್ದಾರೆ. ನನ್ನ ಬ್ಯಾಂಕ್ ಅಕೌಂಟ್ ನಲ್ಲಿ ಹದಿನೆಂಟು ಲಕ್ಷ ರೂಪಾಯಿ ಇದೆ. 1962 ರಲ್ಲಿ ನಾನು ಎಂ.ಎಲ್.ಎ ಆದೆ. ಅವತ್ತಿಂದ ನನಗೆ ಸಂಬಳ ಬರುತ್ತದೆ. ಮೋದಿಯವರು ಬೇಕಾದ್ರೆ ವೆರಿಫೈ ಮಾಡಿಕೊಳ್ಳಬಹುದು. ಮಾಜಿ ಪ್ರಧಾನ ಮಂತ್ರಿಗಳ ಪೈಕಿ ನಾನೊಬ್ಬನೇ ಆಕ್ಟಿವ್ ಆಗಿ ಇರುವುದು'' ಎಂದು ಗರ್ವದಿಂದ ನುಡಿಯುತ್ತಾರೆ ಎಚ್.ಡಿ.ದೇವೇಗೌಡ.

ಇನ್ನೂರು ರೂಪಾಯಿಗೆ ಬಾಡಿಗೆ ಮನೆ

''ವಿರೋಧ ಪಕ್ಷದ ನಾಯಕ ಆಗಿದ್ದಾಗ, ಬೆಂಗಳೂರಿನಲ್ಲಿ ಇರಲು ಬಾಡಿಗೆ ಮನೆ ಬೇಕಿತ್ತು. ಇನ್ನೂರು ರೂಪಾಯಿ ಬಾಡಿಗೆ ತೆಗೆದುಕೊಳ್ಳುತ್ತಿದ್ದರು. ಆದ್ರೆ, ಅನೇಕರಿಗೆ ತಪ್ಪು ಕಲ್ಪನೆ. ನನ್ನ ಬಳಿ ಮೂವತ್ತು ಮನೆಗಳಿವೆ ಎಂದು ಅಪಪ್ರಚಾರ ಮಾಡುತ್ತಿದ್ದರು'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಪತ್ನಿ-ಸೊಸೆ ಮೇಲೆ ಆಸಿಡ್ ದಾಳಿ: ದೇಶದ ಜನತೆಗೆ ಗೊತ್ತಿಲ್ಲದ ಸತ್ಯ ಹೇಳಿದ ದೇವೇಗೌಡ.!

ಜೆನೆರಲ್ ಹಾಸ್ಟೆಲ್ ನಲ್ಲಿ ಇದ್ದೆ

''ನಾನು ಮೊದಲ ಬಾರಿ ಚುನಾವಣೆಗೆ ನಿಂತಾಗ, ಜೆನರಲ್ ಹಾಸ್ಟಲ್ ನಲ್ಲಿ ಇದ್ದೆ. ಎರಡನೇ ಬಾರಿಗೆ ಚುನಾವಣೆಗೆ ನಿಂತಾಗಲೂ ಜೆನೆರಲ್ ಹಾಸ್ಟಲ್ ನಲ್ಲಿಯೇ ಇದ್ದೆ. ರೂಮ್ ನಂಬರ್ 6'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಎಲ್ಲವೂ ಬೋಗಸ್

''ಎರಡನೇ ಬಾರಿಗೆ ಚುನಾವಣೆಗೆ ನಿಲ್ಲುವಾಗ, ನನ್ನ ಬಳಿ ಆರು ಮನೆ ಇದೆ ಅಂತ್ಹೇಳಿ ಚುನಾವಣೆಗೆ ವೋಟ್ ಮಾಡಲು ನಲವತ್ತು ಗಂಟೆ ಮುನ್ನ ನಮ್ಮ ಹೊಳೆನರಸೀಪುರದಲ್ಲಿ ಹ್ಯಾಂಡ್ ಬಿಲ್ ಹಾಕಿ ಹಂಚಿದರು. ಅದೆಲ್ಲವೂ ಬೋಗಸ್'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಪ್ರಧಾನಿ ಮಂತ್ರಿ ಆಗಿದ್ದರೂ ಬಾಡಿಗೆ ಮನೆಯಲ್ಲಿ ವಾಸ

''ಪ್ರಧಾನ ಮಂತ್ರಿ ಆಗಿ ಬೆಂಗಳೂರಿಗೆ ಬಂದಾಗಲೂ, ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಿದ್ದೆ. ನನ್ನ ತಂಗಿಯರಿಗೂ ನಾನು ಅಂಥದ್ದೇನು ಮಾಡಿಕೊಟ್ಟಿಲ್ಲ'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ಹೇಳಿದರು.

ಹಾಗಾದ್ರೆ, ಈಗಿನ ಆಸ್ತಿ.?

ಪ್ರಸ್ತುತ ಎಚ್.ಡಿ.ದೇವೇಗೌಡ ರವರ ಹೆಸರಿನಲ್ಲಿ ಇರುವ ಆಸ್ತಿಯ ವಿವರವನ್ನ ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೀಡಲಿಲ್ಲ.

English summary
EX Prime Minister, Politician, JDS Leader, HD Devegowda revealed his Bank Balance in Zee Kannada Channel's popular show 'Weekend With Ramesh 3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada