»   » 'ಮಜಾ ಟಾಕೀಸ್' ಪುನೀತ್ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ ಏಕೆ? ಕಾರಣ ಇಲ್ಲಿದೆ..

'ಮಜಾ ಟಾಕೀಸ್' ಪುನೀತ್ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ ಏಕೆ? ಕಾರಣ ಇಲ್ಲಿದೆ..

Posted By:
Subscribe to Filmibeat Kannada

ಪ್ರತೀ ಶನಿವಾರ ಮತ್ತು ಭಾನುವಾರ ಬಂತಂದ್ರೆ ಬಹು ಸಂಖ್ಯಾತ ಕನ್ನಡ ಕಲಾರಸಿಕರು ಮನೆಯಲ್ಲೇ ಕುಳಿತು ಎಂಜಾಯ್ ಮಾಡುವ ಟಿವಿ ಕಾರ್ಯಕ್ರಮ 'ಮಜಾ ಟಾಕೀಸ್'. ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬರುವ ಕಲರ್ಸ್ ಕನ್ನಡ ವಾಹಿನಿಯಲ್ಲಿನ ಈ ಕಾರ್ಯಕ್ರಮವನ್ನು ಮನೆಯಲ್ಲಿ ಕುಳಿತ ಪ್ರತಿಯೊಬ್ಬರು ಮಿಸ್ ಮಾಡದೇ ನೋಡುತ್ತಾರೆ.

200 ಎಪಿಸೋಡ್ ಗಳನ್ನು ಪೂರೈಸಿದರು ಅವುಗಳಲ್ಲಿ ಒಮ್ಮೆಯೂ ಹಾಜರಾಗದಿದ್ದ ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಇತ್ತೀಚೆಗೆ 'ಮಜಾ ಟಾಕೀಸ್' ಗೆ ಅತಿಥಿಯಾಗಿ ಆಗಮಿಸಿದ್ದರು. ಈ ಬಗ್ಗೆ ನಾವೇ ನಿಮಗೆ ಮೇ 11 ನೇ ತಾರೀಖು ತಿಳಿಸಿದ್ವಿ. ಆದರೆ ಪುನೀತ್ 'ಮಜಾ ಟಾಕೀಸ್'ಗೆ ಗೆಸ್ಟ್ ಆಗಿ ಬಂದಿದ್ದ ಎಪಿಸೋಡ್ ಈ ವರೆಗೂ ಸಹ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿಲ್ಲ.['ಮಜಾ ಟಾಕೀಸ್'ನಲ್ಲಿ 'ರಾಜಕುಮಾರ'ನ ಗೆಲುವು ಸಂಭ್ರಮಿಸಿದ ಪುನೀತ್]

ಅದಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆ ಪುನೀತ್ ಅಭಿಮಾನಿಗಳಲ್ಲಿ ಕಾಡುತ್ತಿದೆ. ಆದ್ದರಿಂದ ಪುನೀತ್ 'ಮಜಾ ಟಾಕೀಸ್' ಅತಿಥಿಯಾಗಿ ಬಂದಿದ್ದ ಸಂಚಿಕೆ ಇನ್ನೂ ಪ್ರಸಾರವಾಗದಿರಲು ಕಾರಣ ಏನು ಎಂಬುದನ್ನು ನಾವು ನಿಮಗೆ ಇಂದಿನ ಲೇಖನದಲ್ಲಿ ತಿಳಿಸುತ್ತೇವೆ. ಮುಂದೆ ಓದಿರಿ..

ನಿರೀಕ್ಷೆ ಪ್ರಕಾರ ಇಷ್ಟೊತ್ತಿಗೆ ಪ್ರಸಾರವಾಗಬೇಕಿತ್ತು..

ಕಲರ್ಸ್ ಕನ್ನಡ ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ 'ಮಜಾ ಟಾಕೀಸ್'ನ ಯಾವುದೇ ಒಂದು ಎಪಿಸೋಡ್ ಗೆ ಚಿತ್ರೀಕರಣ ನಡೆದ ನಂತರ ಫೋಟೋ ಮತ್ತು ಪ್ರೋಮೋ ಬಿಡುಗಡೆ ಮಾಡಲಾಗುತ್ತದೆ. ಅಂತೆಯೇ ಪುನೀತ್ ರಾಜ್ ಕುಮಾರ್ 'ಮಜಾ ಟಾಕೀಸ್'ಗೆ ಆಗಮಿಸಿದ್ದ ಫೋಟೋಗಳನ್ನು ಅಪ್‌ ಲೋಡ್ ಮಾಡಲಾಗಿತ್ತು.. ಈ ಹಿನ್ನೆಲೆಯಲ್ಲಿ ಪುನೀತ್ ಎಪಿಸೋಡ್ ಮೇ 13-14 ನೇ ತಾರೀಖು ಅಥವಾ ಆ ದಿನಾಂಕದ ಮುಂದಿನ ವಾರದಲ್ಲಿ ಪ್ರಸಾರವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ..

ಈವರೆಗೂ ಪುನೀತ್ ಎಪಿಸೋಡ್ ಪ್ರಸಾರವಾಗಿಲ್ಲ

'ರಾಜಕುಮಾರ' ಚಿತ್ರ 50 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಮಜಾ ಟಾಕೀಸ್'ಗೆ ಆಗಮಿಸಿದ್ದರು. ಈ ಸಂಚಿಕೆ ಇನ್ನೂ ಟೆಲಿಕಾಸ್ಟ್ ಆಗದ ಕಾರಣ ಪುನೀತ್ ರನ್ನು ಕಿರುತೆರೆ ಕಾರ್ಯಕ್ರಮದಲ್ಲಿ ನೋಡಬೇಕು ಎಂದು ತುದಿಗಾಲಲ್ಲಿ ಕಾದು ಕುಳಿತಿದ್ದವರಿಗೆ ಬೇಸರ ಕಾಡುತ್ತಿತ್ತು. ಅದಕ್ಕೆ ಅಸಲಿ ಕಾರಣ ಏನು ಎಂಬುದು ಈಗ ತಿಳಿದಿದೆ. ಅದೇನಂದ್ರೆ...

ಪುನೀತ್ ಎಪಿಸೋಡ್ 250 ನೇ ಸಂಚಿಕೆಯಾಗಿ ಪ್ರಸಾರವಾಗಲಿದೆ

'ಮಜಾ ಟಾಕೀಸ್' ಈಗಾಗಲೇ 200 ಸಂಚಿಕೆಗಳನ್ನು ಮುಗಿಸಿ ಮಹಾ ಮೈಲಿಗಲ್ಲು ಸಾಧಿಸಿದೆ. ಈಗ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಅತಿಥಿಯಾಗಿ ಬಂದಿರುವ ಕಾರಣ ಅವರ ಸಂಚಿಕೆಯನ್ನು 'ಮಜಾ ಟಾಕೀಸ್'ನ ಮತ್ತೊಂದು ಮೈಲಿಗಲ್ಲು 250 ನೇ ಮಹಾ ಸಂಚಿಕೆಯಾಗಿ ಟೆಲಿಕಾಸ್ಟ್ ಮಾಡಲು ನಿರ್ಧರಿಸಲಾಗಿದೆಯಂತೆ.

ಹಾಗಿದ್ರೆ ಅಪ್ಪು ಎಪಿಸೋಡ್ ಯಾವಾಗ?

'ಮಜಾ ಟಾಕೀಸ್' ಈಗಾಗಲೇ 230 ಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಪೂರೈಸಿದ್ದು, ಸದ್ಯದಲ್ಲೇ ಪುನೀತ್ ರಾಜ್ ಕುಮಾರ್ ಎಪಿಸೋಡ್ ಪ್ರಸಾರವಾಗಲಿದೆ.

ಸುವರ್ಣ ಮಹೋತ್ಸವ ಎಪಿಸೋಡ್ ನಲ್ಲಿ ದರ್ಶನ್

'ಮಜಾ ಟಾಕೀಸ್' ಕಾರ್ಯಕ್ರಮದ ಪ್ರತಿಯೊಂದು ಮೈಲಿಗಲ್ಲಿನ ಎಪಿಸೋಡ್ ಗಳನ್ನು ಸ್ಯಾಂಡಲ್ ವುಡ್ ನ ಪ್ರಮುಖ ಸ್ಟಾರ್ ಗಳನ್ನು ಅತಿಥಿಗಳಾಗಿ ಕರೆಸಿ ಸೆಲೆಬ್ರೇಟ್ ಮಾಡಲಾಗುತ್ತಿದೆ. ಈ ಹಿಂದೆ 'ಮಜಾ ಟಾಕೀಸ್' ಸುವರ್ಣ ಮಹೋತ್ಸವ(Golden Jubilee) ಎಪಿಸೋಡ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಗೆಸ್ಟ್ ಆಗಿ ಕರೆಸಿ ಕಾರ್ಯಕ್ರಮ ಮಾಡಲಾಗಿತ್ತು.

100ನೇ ಎಪಿಸೋಡ್ ನಲ್ಲಿ ಶಿವಣ್ಣ

ಸೆಂಚುರಿ ಸ್ಟಾರ್ ಶಿವಣ್ಣ ಅವರನ್ನು 'ಮಜಾ ಟಾಕೀಸ್' 100 ನೇ ಎಪಿಸೋಡ್ ಗೆಸ್ಟ್ ಆಗಿ ಕರೆಸಲಾಗಿತ್ತು.

English summary
Power Star Puneeth Rajkumar participated 'Majaa Talkies' episode still not telecasted. Because this episode will be telecast as 'Majaa Talkies' 250th special episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada