For Quick Alerts
  ALLOW NOTIFICATIONS  
  For Daily Alerts

  'ಮಜಾ ಟಾಕೀಸ್'ನಲ್ಲಿ 'ರಾಜಕುಮಾರ'ನ ಗೆಲುವು ಸಂಭ್ರಮಿಸಿದ ಪುನೀತ್

  By Bharath Kumar
  |

  ಸೃಜನ್ ಲೋಕೇಶ್ ಸಾರಥ್ಯದಲ್ಲಿ ಪ್ರಸಾರವಾಗುವ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಇದುವರೆಗೂ ಬಾರದ ಅತಿಥಿಯೊಬ್ಬರು ಈಗ ಆಗಮಿಸಿದ್ದಾರೆ.

  ಹೌದು, ದರ್ಶನ್, ಸುದೀಪ್, ಶಿವರಾಜ್ ಕುಮಾರ್ ಅಂತಹ ಸ್ಟಾರ್ ನಟರು ಈಗಾಗಲೇ ಈ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಆದ್ರೆ, ಇದುವರೆಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಮಜಾ ಟಾಕೀಸ್' ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ, ಸೃಜನ್ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಪುನೀತ್ ಭಾಗಿಯಾಗಿದ್ದಾರೆ. ಈ ವೇಳೆ 'ರಾಜಕುಮಾರ' ಚಿತ್ರದ 50 ದಿನಗಳ ಯಶಸ್ಸನ್ನ ಸಂಭ್ರಮಿಸಿದ್ದಾರೆ.[ನಟಿ ಪ್ರಿಯಾಮಣಿ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಏನಂದ್ರು.?]

  ಪುನೀತ್ ರಾಜ್ ಕುಮಾರ್ 'ಮಜಾ ಟಾಕೀಸ್'ಗೆ ಬಂದಿರುವುದನ್ನ ಚಿತ್ರಗಳ ಸಮೇತ ಮುಂದೆ ನೋಡಿ....

  ಮೊದಲ ಬಾರಿಗೆ 'ಮಜಾ ಟಾಕೀಸ್'ಗೆ ಬಂದ ಅಪ್ಪು

  ಮೊದಲ ಬಾರಿಗೆ 'ಮಜಾ ಟಾಕೀಸ್'ಗೆ ಬಂದ ಅಪ್ಪು

  ಇದೇ ಮೊದಲ ಬಾರಿಗೆ ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದಾರೆ.['ರಾಜಕುಮಾರ' ಕಲೆಕ್ಷನ್ ಬಗ್ಗೆ ಅವರಿವರ ಮಾತು ನಂಬಬೇಡಿ: ನಿರ್ದೇಶಕರು ಕೊಟ್ರು ಪಕ್ಕಾ ಲೆಕ್ಕ]

  ಅಪ್ಪುನ ಬರಮಾಡಿಕೊಂಡ ಸೃಜನ್

  ಅಪ್ಪುನ ಬರಮಾಡಿಕೊಂಡ ಸೃಜನ್

  ಕಂಠೀರವ ಸ್ಟುಡಿಯೋದಲ್ಲಿ ಇತ್ತಿಚೆಗಷ್ಟೇ 'ಮಜಾ ಟಾಕೀಸ್' ಕಾರ್ಯಕ್ರಮದ ರೆಕಾರ್ಡಿಂಗ್ ನಡೆಯಿತು. ಈ ವಿಶೇಷ ಸಂಚಿಕೆಗೆ ಅತಿಥಿ ಆಗಿ ಆಗಮಿಸಿದ್ದ ಪುನೀತ್ ರಾಜ್ ಕುಮಾರ್ ಅವರನ್ನ ನಿರೂಪಕ ಕಮ್ ನಟ ಸೃಜನ್ ಲೋಕೇಶ್ ಸ್ವಾಗತಿಸಿಕೊಂಡರು.[ಗಲ್ಫ್ ನಾಡಿನಲ್ಲಿ 'ರಾಜಕುಮಾರ'ನ ರಾಜ್ಯಭಾರ]

  ಕುರಿ ಪ್ರತಾಪ್ ಫುಲ್ ಖುಷ್

  ಕುರಿ ಪ್ರತಾಪ್ ಫುಲ್ ಖುಷ್

  ಇನ್ನು 'ಮಜಾ ಟಾಕೀಸ್' ಕಾರ್ಯಕ್ರಮದ ಸದಸ್ಯನಾಗಿರುವ ಕುರಿ ಪ್ರತಾಪ್, ಪುನೀತ್ ರಾಜ್ ಕುಮಾರ್ ಅವರನ್ನ ಸಖತ್ ಖುಷಿಯಿಂದ ಬರಮಾಡಿಕೊಂಡರು.['ದೊಡ್ಮನೆ ಹುಡ್ಗ' ಚಿತ್ರವನ್ನ ಮತ್ತೊಮ್ಮೆ ನೋಡುವ ಅವಕಾಶ]

  'ರಾಜಕುಮಾರ' 50ರ ಸಂಭ್ರಮ

  'ರಾಜಕುಮಾರ' 50ರ ಸಂಭ್ರಮ

  ಅಂದ್ಹಾಗೆ, ಪುನೀತ್ ಅಭಿನಯದ 'ರಾಜಕುಮಾರ' ಚಿತ್ರ ರಾಜ್ಯಾದ್ಯಂತ ಯಶಸ್ವಿ 50 ದಿನಗಳನ್ನ ಪೂರೈಸಿದೆ. ಹೀಗಾಗಿ, 'ಮಜಾ ಟಾಕೀಸ್'ನಲ್ಲಿ 'ರಾಜಕುಮಾರ'ನ 50 ದಿನಗಳ ಸಂಭ್ರಮವನ್ನ ಅದ್ದೂರಿಯಾಗಿ ಆಚರಿಸಿಲಾಗಿದೆ. ಈ ವಿಶೇಷ ಸಂಚಿಕೆಯಲ್ಲಿ ಅಭಿಮಾನಿಗಳು ಮನರಂಜನೆ ಕಾರ್ಯಕ್ರಮವನ್ನ ಕೂಡ ನೀಡಿದ್ದಾರೆ.

  ಯಾವಾಗ ಪ್ರಸಾರ?

  ಯಾವಾಗ ಪ್ರಸಾರ?

  ಈಗಾಗಲೇ ಪುನೀತ್ ರಾಜ್ ಕುಮಾರ್ ಅವರ ಎಪಿಸೋಡ್ ಶೂಟಿಂಗ್ ಕಂಪ್ಲೀಟ್ ಆಗಿದೆ. ಮುಂದಿನ ವಾರಗಳಲ್ಲಿ 'ರಾಜಕುಮಾರ'ನ ಶೋ 'ಮಜಾ ಟಾಕೀಸ್' ನಲ್ಲಿ ಮೂಡಿ ಬರಲಿದೆ.

  English summary
  Now Latest News, Power Star Puneeth Rajkumar is came to Maaja talkies and Celebrated “Rajakumara” Movie 50 days celebration. Check out in pics...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X