»   » 'ಬಿಗ್ ಬಾಸ್ ಸೀಸನ್ 2' ಹೈಲೈಟ್ಸ್ ತಮಾಷೆನೇ ಅಲ್ಲ

'ಬಿಗ್ ಬಾಸ್ ಸೀಸನ್ 2' ಹೈಲೈಟ್ಸ್ ತಮಾಷೆನೇ ಅಲ್ಲ

Posted By:
Subscribe to Filmibeat Kannada

ನೆದರ್ ಲ್ಯಾಂಡ್ ನಲ್ಲಿ 1999ರಲ್ಲಿ ಹುಟ್ಟಿದ 'ಬಿಗ್ ಬ್ರದರ್' ರಿಯಾಲಿಟಿ ಶೋ ಈಗ 50ಕ್ಕೂ ಹೆಚ್ಚು ದೇಶಗಳಲ್ಲಿ ನಾನಾ ಹೆಸರುಗಳಲ್ಲಿ ಪ್ರಸಾರ ಕಾಣುತ್ತಿದೆ. ಈ ರಿಯಾಲಿಟಿ ಶೋ ಕರ್ನಾಟಕಕ್ಕೂ ಅಡಿಯಿಟ್ಟು ಭರ್ಜರಿ ಯಶಸ್ಸೂ ಆಯಿತು. ಈಗ ಸುವರ್ಣ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 2 ಪ್ರಸಾರವಾಗಲು ಸಿದ್ಧವಾಗಿದೆ.

ಇದೇ ಜೂನ್. 29ರಿಂದ ಪ್ರತಿ ದಿನ ರಾತ್ರಿ ಸುವರ್ಣ ವಾಹಿನಿಯಲ್ಲಿ ಬಿಗ್ ಬಾಸ್ ಶೋ ಪ್ರಸಾರವಾಗಲಿದೆ. ಪ್ಯಾಟೆ ಹುಡುಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಅಡಿಯಿಟ್ಟ ಕಿಚ್ಚ ಸುದೀಪ್ ಇದೀಗ ಮತ್ತೊಮ್ಮೆ ಬಿಗ್ ಬಾಸ್ ಮೂಲಕ ಸುವರ್ಣ ಪರಿವಾರಕ್ಕೆ ಅಡಿಯಿಟ್ಟಿದ್ದಾರೆ. [ಮನರಂಜನೆಯ ಮಹಾಪೂರಕ್ಕೆ 'ಬಿಗ್ ಬಾಸ್' ರೆಡಿ]

ಹೋದ ಸಲ ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾದರೆ ಎಲ್ಲರೂ ಹತ್ತತ್ತು ಕೆಜಿ ತೂಕ ಕಡಿಮೆಯಾಗಿದ್ದರು. ಈ ಭಾರಿ ಸ್ಪರ್ಧಿಸುತ್ತಿರುವವರು ಮೆಂಟಲಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ. ನನ್ನ ಯಾವುದೇ ಸಿನಿಮಾ ಶುರುವಾದಾಗಲೂ ಈ ಮಟ್ಟದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಬಿಗ್ ಬಾಸ್ ಗೆ ಅಷ್ಟೊಂದು ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರುತ್ತಿದೆ ಎನ್ನುತ್ತಾರೆ ಸುದೀಪ್.

ಈ ಬಾರಿಯ ಬಿಗ್ ಬಾಸ್ ವಿಶೇಷಗಳು ಒಂದೆರಡಲ್ಲ. ಗುಣಮಟ್ಟದ ಫೋಟೋ ಶೂಟ್. ಹದಿನಾಲ್ಕು ಮಂದಿ ಸ್ಪರ್ಧಿಗಳು, ಹದಿನಾಲ್ಕು ಕೋಟಿ ಕಣ್ಣುಗಳಲ್ಲಿ ಹೊಸ ಹೊಳಪು ಮೂಡಿಸುವ ಕಾರ್ಯಕ್ರಮ ಇದಾಗಲಿದೆ ಎಂದು ಸುವರ್ಣ ವಾಹಿನಿ ಬಲವಾಗಿ ನಂಬಿದೆ. ಬನ್ನಿ ಹೈಲೈಟ್ಸ್ ಮೇಲೆ ಒಮ್ಮೆ ಕಣ್ಣಾಡಿಸೋಣ.

ಜೂ.29ರಿಂದ ರಾತ್ರಿ 8ಕ್ಕೆ ವಾರದಲ್ಲಿ ಏಳು ದಿನ

ರಾಜ್ಯಾದ್ಯಂತ ರಾರಾಜಿಸುತ್ತಿರುವ ಪಬ್ಲಿಸಿಟಿ ವಿನೈಲ್ ಗಳು, ಭರ್ಜರಿ ಪತ್ರಿಕಾ ಪ್ರಚಾರ ನೀಡಲಾಗುತ್ತಿದೆ. ಏಳು ಕೋಟಿ ಕನ್ನಡಿಗರ ನಿರೀಕ್ಷೆ ಕಾತುರಗಳಿಗೆ ತೆರೆ ಎಳೆಯಲು ಬರುತ್ತಿದೆ ಇದೇ ಜೂ.29ರಿಂದ ರಾತ್ರಿ 8ಕ್ಕೆ ವಾರದಲ್ಲಿ ಏಳು ದಿನ ಬಿಗ್ ಬಾಸ್ ಮೂಡಿಬರಲಿದೆ.

ಬುದ್ಧಿಯಿಂದ ಆಡೋರು ಜಗತ್ತನೇ ಗೆಲ್ತಾರೆ

ಜೀವನ ಒಂದು ಚದುರಂಗದಾಟ, ಎದುರಾಳಿ ಜೊತೆ ಪ್ರತಿ ಹೆಜ್ಜೆ ಎಚ್ಚರಿಕೆಯಿಂದ ಹಾಕಬೇಕು. ಹೃದಯದಿಂದ ಆಡೋವವರು ಹೃದಯ ಗೆಲ್ತಾರೆ. ಬುದ್ಧಿಯಿಂದ ಆಡೋರು ಜಗತ್ತನೇ ಗೆಲ್ತಾರೆ. ತೊಂಬತೊಬತ್ತು ದಿನ ಒಂದೇ ಮನೆಯಲ್ಲಿ ಹದಿನಾಲ್ಕು ಕಿಲಾಡಿಗಳು. ಬಿಗ್ ಬಾಸ್ ಅಸಲಿ ಆಟ ಈಗ ಶುರು ಎಂದು ಸುದೀಪ್ ತಮ್ಮದೇ ಶೈಲಿಯಲ್ಲಿ ಪ್ರೊಮೋದಲ್ಲಿ ಹೇಳುತ್ತಾರೆ.

ಈ ಬಾರಿಯೂ ರು.50 ಲಕ್ಷ ನಗದು ಬಹುಮಾನ

ಈ ಬಾರಿ 14 ಮಂದಿ ಸ್ಪರ್ಧಿಗಳಿರುತ್ತಾರೆ. ಶೂಟಿಂಗ್ ನಡೆಯುತ್ತಿರುವುದು ಕಳೆದ ಬಾರಿ ನಡೆದ ಲೋನಾವಾಲಾದಲ್ಲೇ ನಡೆಯುತ್ತಿದೆ. ಇದಕ್ಕಾಗಿ ಹೊಸ ಮನೆಯನ್ನೂ ನಿರ್ಮಿಸಲಾಗಿದೆ. ಈ ಬಾರಿಯೂ ರು.50 ಲಕ್ಷ ನಗದು ಬಹುಮಾನ.

ಸೋಮವಾರ ನಾಮಿನೇಷನ್, ಶನಿವಾರ ಎಲಿಮಿನೇಷನ್

ಪ್ರತಿ ದಿನ ರಾತ್ರಿ 8ಕ್ಕೆ ಸೋಮವಾರದಿಂದ ಭಾನುವಾರದ ತನಕ ಶೋ ಇರುತ್ತದೆ. ಈ ಸಲದ ವಿಶೇಷ ಎಂದರೆ ವಾರದಲ್ಲಿ ಏಳು ಎಪಿಸೋಡ್ ಗಳಿರುತ್ತವೆ. ಸೋಮವಾರ ನಾಮಿನೇಷನ್ಸ್ ಶುರುವಾಗುತ್ತದೆ. ಈ ಸಲ ಶನಿವಾರ ಎಲಿಮಿನೇಷನ್ಸ್ ರೌಂಡ್ ಇರುತ್ತದೆ.

ಪ್ರತಿ ಭಾನುವಾರ ವಿಶೇಷ ಸಂಚಿಕೆ

ಪ್ರತಿ ಭಾನುವಾರ ವಿಶೇಷ ಸಂಚಿಕೆಗಳಿರುತ್ತವೆ. ಅಂದರೆ ಸೆಲೆಬ್ರಿಟಿ ಗೆಸ್ಟ್ ಭಾಗವಹಿಸುತ್ತಾರೆ. ಸುದೀಪ್ ವಾರದಲ್ಲಿ ಎರಡು ದಿನ ಅಂದರೆ ಶನಿವಾರ ಮತ್ತು ಭಾನುವಾರ ಕಾಣಿಸಿಕೊಳ್ಳುತ್ತಾರೆ. ಎಲಿಮಿನೇಷನ್ ಎಪಿಸೋಡ್ ಹಾಗೂ ಭಾನುವಾರದ ವಿಶೇಷ ಎಪಿಸೋಡ್ ನಲ್ಲಿ ಅವರು ಇರುತ್ತಾರೆ.

ಮೊದಲ ಎಪಿಸೋಡ್ ಗಿಂತಲೂ ವಿಭಿನ್ನ ಲುಕ್

ಮನೆಯ ವಿನ್ಯಾಸ ಈ ಬಾರಿ ಸಂಪೂರ್ಣ ಬದಲಾಗಿದೆ. ಮೊದಲ ಎಪಿಸೋಡ್ ಗಿಂತಲೂ ವಿಭಿನ್ನ ಲುಕ್ ಇರುತ್ತದೆ. ಇನ್ನಷ್ಟು ಟ್ವಿಸ್ಟ್ಸ್ ಅಂಡ್ ಟರ್ನ್ಸ್ ಈ ಬಾರಿಯ ವಿಶೇಷ ಎನ್ನುತ್ತಾರೆ ಸುವರ್ಣ ವಾಹಿನಿ ನಾನ್ ಫಿಕ್ಷನ್ ಹೆಡ್ ತ್ಯಾಗರಾಜ್.

ಆನ್ ಲೈನ್ ನಲ್ಲೂ ಓಟಿಂಗ್ ಈ ಸಲದ ವಿಶೇಷ

ಓಟಿಂಗ್ ನಲ್ಲಿ ಇನ್ನೊಂದು ಬದಲಾವಣೆಯನ್ನೂ ಮಾಡಲಾಗಿದೆ. ಎಸ್ಎಂಎಸ್ ಓಟಿಂಗ್ ಜೊತೆಗೆ ಆನ್ ಲೈನ್ ಓಟಿಂಗ್ ಸಹ ಈ ಬಾರಿಯ ವಿಶೇಷಗಳಲ್ಲಿ ಒಂದು. ಈ ಬಾರಿಯ ಸ್ಪಾನ್ಸರ್ ಓಎಲ್ಎಕ್ಸ್.

ರಾಜ್ಯದಾದ್ಯಂತ 120 ಹೋರ್ಡಿಂಗ್ ಗಳು

ಈ ಬಾರಿ ದೊಡ್ಡ ಮಟ್ಟದಲ್ಲೇ ಬಿಗ್ ಬಾಸ್ ಮಾರ್ಕೆಂಟಿಂಗ್ ಮಾಡಲಾಗಿದೆ. ರಾಜ್ಯದಾದ್ಯಂತ ಸುಮಾರು 120 ಹೋರ್ಡಿಂಗ್ ಗಳನ್ನು ಹಾಕಲಾಗಿದೆ. ಮೊಬೈಲ್ ಗಳಲ್ಲಿ ಆಕ್ಟಿವ್ ಮಾಡಲಾಗುತ್ತದೆ. ಮೂರು ಎಫ್ಎಂ ರೇಡಿಯೋಗಳು ಬಿಗ್ ಬಾಸ್ ಪ್ರಚಾರಕ್ಕೆ ಕೈಜೋಡಿಸಿವೆ.

ಮಲ್ಟಿಫ್ಲೆಕ್ಸ್ ಗಳಲ್ಲೂ ಬಿಗ್ ಪ್ರಚಾರ

ಪ್ರೊಮೋಗಳು ಯೂಟ್ಯೂಬ್ ನಲ್ಲಿ ಸೇರಿದಂತೆ ಈ ಬಾರಿ ಪಿವಿಆರ್, ಐನಾಕ್ಸ್ ಮಲ್ಟಿಫ್ಲೆಕ್ಸ್ ಥಿಯೇಟರ್ ಗಳಲ್ಲೂ ಮೂಡಿಬರಲಿವೆ. ಬಸ್ ನಿಲ್ದಾಣ, ಬಸ್ ಶೆಲ್ಟರ್, ರೈಲ್ವೇ ನಿಲ್ದಾಣಗಳಲ್ಲಿ, ಮಾಲ್ ಗಳಲ್ಲಿ, ಎಲ್ಲಾ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಪ್ರಚಾರ ನೀಡಲಾಗುತ್ತಿದೆ.

ಈ ಬಾರಿಯ ಟ್ಯಾಗ್ ಲೈನ್ "ತಮಾಷೆನೇ ಅಲ್ಲ"

ಈ ಬಾರಿಯ ಟ್ಯಾಗ್ ಲೈನ್ "ತಮಷೆನೇ ಅಲ್ಲ" ಎಂಬುದು. ಇದನ್ನು ಸೂಚಿಸಿದವರು ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಅವರು. ಈ ಬಾರಿ ಶೀರ್ಷಿಕೆ ಗೀತೆ ಸಹ ಅವರದೇ. ಈ ಶೋ ಮೇಲ್ಮೋಟಕ್ಕೆ ತಮಾಷೆಯಾಗಿ ಕಂಡರೂ ಯೋಚಿಸಿದಾಗ ತಮಾಷೇನೆ ಅಲ್ಲ ಎಂಬಂತಿರುತ್ತದೆ. ಅದಕ್ಕಾಗಿ ಈ ಬಾರಿಯ ಟ್ಯಾಗ್ ಲೈನ್ ಅದಕ್ಕೆ ತಕ್ಕಂತೆ ಇದೆ.

ಸುದೀಪ್ ಅವರು ಹೇಳಿದ್ದೇನೆಂದರೆ...

ಈ ಬಾರಿಯ ಟೀಂ ರಿಯಲಿ ಗುಡ್ ಎನ್ನುವ ಸುದೀಪ್ ಯಾರು ಯಾರು ಇರುತ್ತಾರೆ ಎಂಬ ಬಗ್ಗೆ ಮಾತ್ರ ಸುಳಿವು ಬಿಟ್ಟುಕೊಡಲಿಲ್ಲ. ಮೊದಲ ಸೀಸನ್ ಬಳಿಕ ಎರಡನೇ ಸೀಸನ್ ಬೇಡ ಎಂದುಕೊಂಡಿದ್ದೆ. ಆದರೆ ಇಲ್ಲಿರುವ ಗೆಳೆಯರು, ಕೆಲವರ ಪ್ರೀತಿಗೆ ಮಣಿದು ಬಿಗ್ ಬಾಸ್ ಸೀಸನ್ 2 ಸಹ ಒಪ್ಪಿಕೊಂಡೆ. ಮನೆಯಿಂದ 99 ದಿನ ದೂರವಾಗಿರುವುದು ನಿಜಕ್ಕೂ ಸವಾಲಿನ ಕೆಲಸ. ಈ ಬಾರಿಯೂ ಭಿನ್ನವಾಗಿ ನೀಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಸುಮಾರು 45 ಕ್ಯಾಮೆರಾಗಳು 850 ಮಂದಿ ತಂತ್ರಜ್ಞರು

ಈ ಬಾರಿ ಮನೆಯಲ್ಲಿ 45ರಿಂದ 50 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಸರಿಸುಮಾರು 850 ಮಂದಿ ತಂತ್ರಜ್ಞರು ಶಿಫ್ಟ್ ಗಳಲ್ಲಿ ಕೆಲಸ ಮಾಡಲಿದ್ದಾರೆ. ರವಿಚಂದ್ರನ್, ಶಿವಣ್ಣ, ರಮ್ಯಾ ಮುಂತಾದವರು ಭಾನುವಾರದ ವಿಶೇಷ ಸಂಚಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

English summary
Here is the highlights of Bigg Boss season 2, a Kannada reality show will be aired from 29th June 2014, Sunday with an intriguing mix of house-mates that is set to make the season more exciting! This time using 45 to 50 cameras and 850 technicians are working in shifts.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada