Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಿಂದಿ ಬರದೆ ಇದ್ದ ಪ್ರಕಾಶ್ ಬೆಳವಾಡಿ ಬಾಲಿವುಡ್ ಚಿತ್ರಕ್ಕೆ ಆಯ್ಕೆ ಆಗಿದ್ದೆ ಇಂಟೆರೆಸ್ಟಿಂಗ್
ಪ್ರಕಾಶ್ ಬೆಳವಾಡಿ ರಂಗಭೂಮಿಯ ಹೆಮ್ಮೆಯ ಪ್ರತಿಭೆ. ಇವರ ಸಾಧನೆಯ ಹಾದಿಯ ವಿವರ ಇತ್ತೀಚಿಗಷ್ಟೆ 'ವಿಕೇಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ತಿಳಿದಿದೆ.
ಇಡೀ ಸಂಚಿಕೆ ತುಂಬ ಚೆನ್ನಾಗಿ ಮೂಡಿ ಬಂದಿದ್ದು, ಅದರಲ್ಲಿಯೂ ಪ್ರಕಾಶ್ ಬೆಳವಾಡಿ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡಿದ್ದು ಹೇಗೆ ಎನ್ನುವ ಇಂಟೆರೆಸ್ಟಿಂಗ್ ವಿಷಯ ಹೊರಬಂದಿದೆ. ಹಿಂದಿ ಮಾತನಾಡಲು ಬಾರದ ಬೆಳವಾಡಿ ಎರಡು ವಿಡಿಯೋ ಮೂಲಕ ಆ ಸಿನಿಮಾಗೆ ಆಯ್ಕೆ ಆಗಿದ್ದರು.
ಭಗವಾನ್ ವಿಷ್ಯದಲ್ಲಿ 'ವೀಕೆಂಡ್ ವಿತ್ ರಮೇಶ್' ಮಾಡುತ್ತಿರುವುದು ಎಷ್ಟು ಸರಿ?
'ಮದ್ರಾಸ್ ಕೆಫೆ' ಪ್ರಕಾಶ್ ಬೆಳವಾಡಿ ಅವರ ಮೊದಲ ಹಿಂದಿ ಸಿನಿಮಾ ಆಗಿತ್ತು. ಖ್ಯಾತ ನಿರ್ದೇಶಕ ಸೂಜಿತ್ ಸರ್ಕಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇಂತಹ ದೊಡ್ಡ ನಿರ್ದೇಶಕನ ಸಿನಿಮಾಗೆ ಅವಕಾಶ ಸಿಕ್ಕ ಸಂದರ್ಭವನ್ನು ಪ್ರಕಾಶ್ ಬೆಳವಾಡಿ ವಿವರಿಸಿದರು. ಮುಂದೆ ಓದಿ...

'ಗರ್ವ' ಧಾರಾವಾಹಿ ಮಾಡುತ್ತಿದ್ದ ಸಮಯ
ಪ್ರಕಾಶ್ ಬೆಳವಾಡಿ 'ಗರ್ವ' ಧಾರಾವಾಹಿಯನ್ನು ನಿರ್ದೇಶನ ಮಾಡುವಾಗ ಆ ಧಾರಾವಾಹಿ ಒಳ್ಳೆಯ ಹೆಸರು ನೀಡಿತ್ತು. ಬಹಳಷ್ಟು ಯುವಕ, ಯುವತಿಯರು ಆ ಧಾರಾವಾಹಿಯ ದೊಡ್ಡ ಅಭಿಮಾನಿಯಾಗಿದ್ದರು. ಈ ರೀತಿ ಆ ಧಾರಾವಾಹಿ ಇಷ್ಟಪಟ್ಟಿದ್ದ ಅರ್ಜುನ್ ಚಕ್ರವರ್ ಎಂಬವವರು ಬೆಳವಾಡಿ ಶಿಷ್ಯರಾದರು. ಅವರ ಜೊತೆಗೆ ಒಳ್ಳೆಯ ಸ್ನೇಹ ಮುಂದುವರೆಯಿತು.
'ವೀಕೆಂಡ್ ವಿತ್ ರಮೇಶ್ 4' - ಈ ವಾರದ ಅತಿಥಿಗಳ ಹೆಸರು ಬಹಿರಂಗ

'ಮದ್ರಾಸ್ ಕೆಫೆ' ಚಿತ್ರದ ಒಂದು ಪಾತ್ರಕ್ಕೆ ಹುಡುಕಾಟ
ಅರ್ಜುನ್ ಚಕ್ರವರ್, ನಿರ್ದೇಶಕ ಸೂಜಿತ್ ಸರ್ಕಾರ್ ಜೊತೆಗೆ ಕೆಲಸ ಮಾಡುತ್ತಿರುತ್ತಾರೆ. ಸೂಜಿತ್ ಸರ್ಕಾರ್ ತಮ್ಮ 'ಮದ್ರಾಸ್ ಕೆಫೆ' ಚಿತ್ರದ ಒಂದು ಪಾತ್ರಕ್ಕೆ ಹುಡುಕಾಟ ನಡೆಸುತ್ತಿರುತ್ತಾರೆ. ಒಮ್ಮೆ ಅರ್ಜುನ್ ಚಕ್ರವರ್ 'ನೀವು ಹಿಂದಿ ಸಿನಿಮಾ ಮಾಡುತ್ತೀರಾ' ಎಂದು ಪ್ರಕಾಶ್ ಬೆಳವಾಡಿಗೆ ಕೇಳುತ್ತಾರೆ. ಪ್ರಕಾಶ್ ಮೊದಲು ಅದನ್ನು ತಿರಸ್ಕಾರ ಮಾಡುತ್ತಾರೆ. ಆದರೂ 'ಮದ್ರಾಸ್ ಕೆಫೆ' ಚಿತ್ರದ ಪಾತ್ರದ ಕ್ಯಾರೆಕ್ಟರ್ ಸ್ಕೆಚ್, ಎರಡು ಸೀನ್ ಅನ್ನು ಅರ್ಜುನ್ ಕಳುಹಿಸುತ್ತಾನೆ.

ಈ ಪಾತ್ರಕ್ಕೆ ಇವರೇ ಬೇಕು ಎಂದ ಸೂಜಿತ್ ಸರ್ಕಾರ್
ಪ್ರಕಾಶ್ ಬೆಳವಾಡಿ ಎರಡು ಸೀನ್ ನಲ್ಲಿ ನಟಿಸಿ ಅದರ ವಿಡಿಯೋವನ್ನು ಅರ್ಜುನ್ ಚಕ್ರವರ್ ಗೆ ನೀಡುತ್ತಾರೆ. ಅರ್ಜುನ್ ಅದನ್ನು ಸೂಜಿತ್ ಸರ್ಕಾರ್ ಗೆ ತೋರಿಸುತ್ತಾರೆ. ವಿಡಿಯೋ ಆಡಿಷನ್ ನಲ್ಲಿ 52 ವಿಡಿಯೋಗಳ ಪೈಕಿ ಪ್ರಕಾಶ್ ರದ್ದು ಎರಡನೇ ವಿಡಿಯೋ ಆಗಿರುತ್ತದೆ. ಪ್ರಕಾಶ್ ನಟನೆ ನೋಡಿದ ಅವರು ಉಳಿದ ವಿಡಿಯೋ ನೋಡುವ ಮೊದಲೇ 'ಈ ಪಾತ್ರಕ್ಕೆ ಇವರೇ ಬೇಕು' ಎಂದು ಆಯ್ಕೆ ಮಾಡುತ್ತಾರೆ.

ಕಾರ್ಯಕ್ರಮದಲ್ಲಿ ಸೂಜಿತ್ ಸರ್ಕಾರ್ ಮಾತು
'ವೀಕೆಂಡ್ ವಿತ್ ರಮೇಶ್' ನಲ್ಲಿ ವಿಡಿಯೋ ಬೈಟ್ ಮೂಲಕ ಸೂಜಿತ್ ಸರ್ಕಾರ್ ಮಾತನಾಡಿದ್ದಾರೆ. ''ಮದ್ರಾಸ್ ಕೆಫೆ' ಆ ಪಾತ್ರ ನೀವು ಮಾತ್ರ ಮಾಡಲು ಸಾಧ್ಯ ಅಂತ ನನಗೆ ಅನಿಸಿತ್ತು. ನೀವು ಹಾಗೂ ನಾನು ಇಬ್ಬರು ರಂಗಭೂಮಿ ಹಿನ್ನಲೆಯಿಂದ ಬಂದವರು. ನಿಮ್ಮ ರಂಗಭೂಮಿ ಅನುಭವ ನಾನು ಕೂಡ ಕಲಿಯುವಂತದ್ದು. ನಾನು ನೀವು ಮತ್ತೆ ಒಟ್ಟಿಗೆ ಸೇರಿ ಕೆಲಸ ಮಾಡೋಣ.'' ಎಂದರು.

ರಾಷ್ಟ್ರ ಮಟ್ಟದಲ್ಲಿ ಹೆಸರು ನೀಡಿದ 'ಮದ್ರಾಸ್ ಕೆಫೆ'
'ಮದ್ರಾಸ್ ಕೆಫೆ' ಸಿನಿಮಾ ಪ್ರಕಾಶ್ ಬೆಳವಾಡಿ ಅಭಿನಯದ ಮೊದಲ ಹಿಂದಿ ಸಿನಿಮಾ ಆಗಿತ್ತು. ಈ ಚಿತ್ರ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ನೀಡಿತ್ತು. 'ಮದ್ರಾಸ್ ಕೆಫೆ' ಬಳಿಕ ಬೇರೆ ಬೇರೆ ಭಾಷೆಯಿಂದ ಹೆಚ್ಚು ಅವಕಾಶಗಳು ಬಂದವು. ಆರೇಳು ಭಾಷೆಗಳಲ್ಲಿ ಈವರೆಗೂ ಪ್ರಕಾಶ್ ಬೆಳವಾಡಿ ಅವರು ನಟನೆ ಮಾಡಿದ್ದಾರೆ.